ಶಿವರಾಮ ಕಾರಂತ ಬಡಾವಣೆಯಲ್ಲಿ ಸದ್ಯಕ್ಕಿಲ್ಲ ನಿವೇಶನ ಹಂಚಿಕೆ: ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಆದೇಶ
ಶಿವರಾಮ ಕಾರಂತ ಬಡಾವಣೆಯಲ್ಲಿ ಸದ್ಯಕ್ಕೆ ನಿವೇಶನ ಹಂಚಿಕೆ ಇಲ್ಲ. ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಆದೇಶ ಹೊರಡಿಸಿದೆ. ನಿವೇಶನ ಹಂಚಿಕೆಗೆ ಅರ್ಜಿ ಕೋರಿ ಅಧಿಸೂಚನೆ ಹೊರಡಿಸದಂತೆ ನಿರ್ಬಂಧ ಹೇರಲಾಗಿದೆ. ನ್ಯಾ. ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾ.ನಾಗಪ್ರಸನ್ನ ಅವರಿದ್ದ ಪೀಠ ಆದೇಶಿಸಲಾಗಿದೆ.
ಬೆಂಗಳೂರು, ಜನವರಿ 18: ಶಿವರಾಮ ಕಾರಂತ (shivaram karantha) ಬಡಾವಣೆಯಲ್ಲಿ ಸದ್ಯಕ್ಕೆ ನಿವೇಶನ ಹಂಚಿಕೆ ಇಲ್ಲ. ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಆದೇಶ ಹೊರಡಿಸಿದೆ. ನಿವೇಶನ ಹಂಚಿಕೆಗೆ ಅರ್ಜಿ ಕೋರಿ ಅಧಿಸೂಚನೆ ಹೊರಡಿಸದಂತೆ ನಿರ್ಬಂಧ ಹೇರಲಾಗಿದೆ. ನ್ಯಾ. ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾ.ನಾಗಪ್ರಸನ್ನ ಅವರಿದ್ದ ಪೀಠ ಆದೇಶಿಸಲಾಗಿದೆ. ಶಿವರಾಮ ಕಾರಂತ ಬಡಾವಣೆ ಅಭಿವೃದ್ಧಿ ಕಾಮಗಾರಿ ಮುಂದುವರಿಸಲು ಅಸ್ತು ಎನ್ನಲಾಗಿದೆ. ಸಮಸ್ಯೆಗಳನ್ನು ಪರಿಹರಿಸದೆ ಬಿಡಿಎಯಿಂದ ನಿವೇಶನ ಹಂಚಿಕೆ ಆರೋಪ ಮಾಡಿದ್ದು, ಹಲವರು ಸುಪ್ರೀಂಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ಅರ್ಜಿಗಳನ್ನು ಹೈಕೋರ್ಟ್ಗೆ ವರ್ಗಾಯಿಸಿತ್ತು.
ಶಿವರಾಮ ಕಾರಂತ ಬಡಾವಣೆಯ ದಾಖಲೆ ಸಮಿತಿ ಬಳಿ ಇರುವ ಹಿನ್ನೆಲೆ ಸಮಿತಿ ದಾಖಲೆಗಳನ್ನು ಬಿಡಿಎಗೆ ಹಸ್ತಾಂತರಿಸದೇ ಇಟ್ಟುಕೊಂಡಿದೆ. ದಾಖಲೆಯಿರುವ ಕೊಠಡಿ ಬೀಗದ ಕೀ ಸಮಿತಿಯ ಬಳಿ ಇದೆ ಎಂದು ಬಿಡಿಎ ವಾದ ಮಂಡಿಸಿದೆ. ದಾಖಲೆಯಿರುವ ಕೊಠಡಿಗೆ ಮತ್ತೊಂದು ಬೀಗ ಹಾಕಿ ಕೀ ನೀಡುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ಗೆ ಪೀಠ ಸೂಚನೆ ನೀಡಿದೆ.
2008 ರಲ್ಲಿ 3456 ಎಕರೆ ಜಮೀನನ್ನ ಬಿಡಿಎ ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನ ಪಡಿಸಿಕೊಂಡಿತ್ತು. ಆದರೆ 2008 ರ ಆಧಾರದ ಮೇಲೆ ಪರಿಹಾರ ನೀಡುವುದಕ್ಕೆ ಮಾಡಿದ್ದ ನಿರ್ಧಾರದ ವಿರುದ್ಧ ಭೂಮಿ ನೀಡಿದ ರೈತರು ಅಸಮಧಾನ ವ್ಯಕ್ತಪಡಿಸಿದ್ದರು. ಹಾಗೆನೇ ನೊಟಿಫಿಕೇಷನ್‌ಗೂ ಮೊದಲೆ ಕಟ್ಟಡ ನಿರ್ಮಿಸಿದ್ದವರು ಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನ ಪರಿಗಣಿಸಿದ ಸುಪ್ರೀಂ ನ್ಯಾ. ಚಂದ್ರಶೇಖರ್ ಸಮಿತಿ ರಚನೆ ಮಾಡಿ ವಿವಾದ ಇತ್ಯರ್ಥ ಪಡಿಸುವಂತೆ ಸೂಚನೆ ಕೊಟ್ಟಿತ್ತು. ಅದರಂತೆ ಸತತ ಮೂರು ವರ್ಷ ಪರಿಶೀಲನೆ ನಡೆಸಿದ ಸಮಿತಿ ಲೇಔಟ್ ವಿಚಾರದಲ್ಲಿ ಎದ್ದಿದ್ದ ಎಲ್ಲಾ ಗೊಂದಲಗಳನ್ನೂ ನಿವಾರಣೆ ಮಾಡಲಾಗಿತ್ತು.
ಇದನ್ನೂ ಓದಿ: ಶಿವರಾಮಕಾರಂತ ಬಡಾವಣೆ ಸೈಟ್ ಹಂಚಿಕೆ ವಿವಾದ; ಫಲಾನುಭವಿಗಳಿಗೆ ಬಿಡಿಎಯಿಂದ ಗುಡ್ ನ್ಯೂಸ್
ಕೆಲ ರಾಜಕಾರಣಿಗಳ ಜಮೀನು ಶಿವರಾಮ ಕಾರಂತ ಲೇಔಟ್ನಲ್ಲಿದ್ದು, ಕೆಲವರು ನಿವೇಶನಗಳನ್ನ ಮಾಡ್ತಿದ್ದಾರಂತೆ. ಅಂತವರ ಮೇಲೆ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸುತ್ತಿಲ್ಲವಂತೆ. ಅದರಲ್ಲೂ ಪ್ರಭಾವಿ ಸಚಿವರು ಸೇರಿದಂತೆ ಕೆಲವರು ಬೇನಾಮಿ ಹೆಸರಲ್ಲಿ ನಿವೇಶನ ಮಾಡಿ ಮಾರಾಟ ಮಾಡುತ್ತಿದ್ದಾರಂತೆ. ಆದರೆ ಅವರಿಗೆ ನೋಟಿಸ್ ಕೊಡದೇ ಕೇವಲ ಅರ್ಧ ಎಕರೆ ಜಮೀನು ಇರುವ ಬಡಪಾಯಿಗಳನ್ನ ಟಾರ್ಗೆಟ್ ಮಾಡಿತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:20 pm, Thu, 18 January 24