ಅನುಮಾನಕ್ಕೆ ಅಮಾಯಕ ಜೀವ ಬಲಿ: ಕುಕ್ಕರ್​ನಿಂದ ಹೊಡೆದು ಪ್ರಿಯತಮೆಯನ್ನೇ ಕೊಂದ ಪ್ರಿಯಕರ

| Updated By: ಆಯೇಷಾ ಬಾನು

Updated on: Aug 28, 2023 | 10:32 AM

ಕೇರಳ ಮೂಲದ ವೈಷ್ಣವ್-ದೇವಿ ಇಬ್ಬರೂ ಕೆಲ ವರ್ಷಗಳಿಂದ ಲೀವಿಂಗ್ ಟುಗೇದರ್​ನಲ್ಲಿದ್ದರು. ಕಾಲೇಜು ದಿನಗಳಿಂದ ಒಟ್ಟಿಗೆ ವಿದ್ಯಾಭ್ಯಾಸ ‌ಮಾಡಿದ್ದ ಈ ಜೋಡಿ ಕೆಲಸ ಸಿಕ್ಕ ಹಿನ್ನೆಲೆ ಕಳೆದ ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಬೇಗೂರಿನ ನ್ಯೂಮೈಕೋ ಲೇಔಟ್​ನಲ್ಲಿ ನೆಲೆಸಿದ್ದರು. ತಡರಾತ್ರಿ ಇಬ್ಬರ ನಡುವೆ ಜಗಳವಾಗಿ ಹತ್ಯೆ ನಡೆದಿದೆ.

ಅನುಮಾನಕ್ಕೆ ಅಮಾಯಕ ಜೀವ ಬಲಿ: ಕುಕ್ಕರ್​ನಿಂದ ಹೊಡೆದು ಪ್ರಿಯತಮೆಯನ್ನೇ ಕೊಂದ ಪ್ರಿಯಕರ
ವೈಷ್ಣವ್-ದೇವಿ
Follow us on

ಬೆಂಗಳೂರು, ಆ.27: ಅನುಮಾನ ಅನ್ನೋದು ಎಂತಹ ಪ್ರೀತಿಯನ್ನು(Love) ಬೇಕಾದ್ರು ಕೊಂದುಬಿಡುತ್ತೆ ಎಂಬುವುದಕ್ಕೆ ಇದೇ ಸಾಕ್ಷಿ. ಕಾಲೇಜು ದಿನಗಳಿಂದಲೂ ಒಟ್ಟಾಗಿ ಓದುತ್ತ, ಕೆಲಸ ಪಡೆದು ಬೆಂಗಳೂರಿನಲ್ಲಿ ನೆಲೆಸಿದ್ದ ಕೇರಳ ಮೂಲದ ಯುವಕ-ಯುವತಿಯ ಪ್ರೇಮಕ್ಕೆ ಅನುಮಾನ ಎಂಬ ಭೂತ ಕೊಳ್ಳಿ ಇಟ್ಟಿದೆ. ಕುಕ್ಕರ್​​ನಿಂದ ಹೊಡೆದು ಪ್ರಿಯಕರನೇ ಪ್ರಿಯತಮೆಯ ಬರ್ಬರ ಹತ್ಯೆ(Murder) ಮಾಡಿರುವ ಭೀಕರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವೈಷ್ಣವ್ ಎಂಬ ಯುವಕ ದೇವಿ(24) ಎಂಬ ಯುವತಿಯನ್ನು ಕುಕ್ಕರ್​ನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ.

ಕೇರಳ ಮೂಲದ ವೈಷ್ಣವ್-ದೇವಿ ಇಬ್ಬರೂ ಕೆಲ ವರ್ಷಗಳಿಂದ ಲೀವಿಂಗ್ ಟುಗೇದರ್​ನಲ್ಲಿದ್ದರು. ಕಾಲೇಜು ದಿನಗಳಿಂದ ಒಟ್ಟಿಗೆ ವಿದ್ಯಾಭ್ಯಾಸ ‌ಮಾಡಿದ್ದ ಈ ಜೋಡಿ ಕೆಲಸ ಸಿಕ್ಕ ಹಿನ್ನೆಲೆ ಕಳೆದ ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಬೇಗೂರಿನ ನ್ಯೂಮೈಕೋ ಲೇಔಟ್​ನಲ್ಲಿ ನೆಲೆಸಿದ್ದರು. ತಡರಾತ್ರಿ ಇಬ್ಬರ ನಡುವೆ ಜಗಳವಾಗಿ ಹತ್ಯೆ ನಡೆದಿದೆ. ಬೇಗೂರು ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದ್ದು ಆರೋಪಿಯನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ನೈತಿಕ ಪೊಲೀಸಗಿರಿ: ಯುವತಿ ಜೊತೆ ಹೋಗಿದ್ದಕ್ಕೆ ಹಲ್ಲೆ, 6 ಜನರ ಬಂಧನ

ಇನ್ನು ವೈಷ್ಣವ್-ದೇವಿ ಇಬ್ಬರೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದರು. ಈ ಹಿಂದೆ ಕೂಡ ಇವರಿಬ್ಬರಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ಆಗಿತ್ತು. ಆಗ ಕುಟುಂಬದವರೇ ಕೂತು ಸರಿಪಡಿಸಿದ್ದರು. ಆದರೆ ಆರೋಪಿ ವೈಷ್ಣವ್​ಗೆ ಕೆಲ ದಿನಗಳಿಂದ ಯುವತಿ ಮೇಲೆ ಅನುಮಾನ ಹುಟ್ಟಿಕೊಂಡಿತ್ತು. ಈ ಹಿನ್ನೆಲೆ ನಿನ್ನೆ(ಆ.26) ಸಂಜೆ ಜಗಳ ಶುರುವಾಗಿದೆ. ಈ ವೇಳೆ ವೈಷ್ಣವ್ ಕುಕ್ಕರ್ ನಿಂದ ದೇವಿ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಹಿಂದೆಲೆಗೆ ಹೊಡೆದ ಪರಿಣಾಮ ದೇವಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ತಾಳಿ ಕಟ್ಟುವ ವೇಳೆ ಈ ಮದ್ವೆ ಬೇಡ ಎಂದು ಹಸೆಮಣೆಯಿಂದ ಮೇಲೆದ್ದ ವಧು

ತುಮಕೂರು, (ಆಗಸ್ಟ್ 27): ಅದ್ಧೂರಿಯಾಗಿ ಆರತಕ್ಷತೆ ಮುಗೀತು. ಇನ್ನೇನು ತಾಳಿ ಕಟ್ಟುವ ಸಂದರ್ಭದಲ್ಲಿ ವಧು ಹಸೆಮಣೆಯಿಂದ ಎದ್ದುಹೋದ ಅಪರೂಪ ಪ್ರಕಣ ತುಮಕೂರು ಜಿಲ್ಲೆ‌ ಕೊರಟಗೆರೆ ತಾಲೂಕಿನ ಕೊಳಾಲದಲ್ಲಿ ಬೆಳಕಿಗೆ ಬಂದಿದೆ. ನಾನು ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಈ ಮದುವೆ ಬೇಡ ಎಂದ ವಧು ಹಸೆಮಣೆಯಿಂದ ಮೇಲೆದ್ದಿದ್ದಾಳೆ. ರಿಸೆಪ್ಷನ್​ನಲ್ಲಿ ನಗುನಗುತ್ತಲೇ ಫೋಟೋಗೆ ಫೋಸ್ ಕೊಟ್ಟಿದ್ದ ಇದೀಗ ತಾಳಿ ಕಟ್ಟುವ ಮುಹೂರ್ತ ಸಮೀಪಿಸುತ್ತಿದ್ದಂತೆಯೇ ಯುವತಿ ಈ ಮದ್ವೆಯೇ ಬೇಡ ಎಂದು ಹಸೆಮಣೆಯಿಂದ ಮೇಲೆದ್ದಾಳೆ. ವಧು ಹೀಗೆ ಹೇಳುತ್ತಿದ್ದಂತೆಯೇ ಕೊಳಾಲದ ಕೆಸಿಎನ್​ ಕನ್ವೆನ್ಷನ್ ಹಾಲ್​ನಲ್ಲಿ ಮದುವೆ ಸಂಭ್ರಮದಲ್ಲಿ ನೆಂಟರು ಕ್ಷಣ ಹೌಹಾರಿದ್ದಾರೆ. ಅಲ್ಲೇ ಮದುವೆ ಮಂಟಪದಲ್ಲಿ ವಧು ಹಾಗೂ ವರನ ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಇದೀಗ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:24 pm, Sun, 27 August 23