ನಗರ್ತ ​ಪೇಟೆ ಹಲ್ಲೆ ಪ್ರಕರಣದ ಬೆನ್ನಿಗೆ ಆನೇಕಲ್​​ನಲ್ಲೂ ಅನ್ಯಕೋಮಿನ ಯುವಕರಿಂದ ಅಂಗಡಿ ಮಾಲೀಕನ ಮೇಲೆ ಹಲ್ಲೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ರಾಜಧಾನಿಯ ಜನನಿಬಿಡ ವಾಣಿಜ್ಯ ಪ್ರದೇಶವಾದ ನಗರ್ತ ​ಪೇಟೆಯಲ್ಲಿ ಮೊಬೈಲ್ ಅಂಗಡಿಯಲ್ಲಿ ಹನುಮಾನ್ ಚಾಲಿಸಾ ಹಾಡು ಹಾಕಿದ್ದಕ್ಕೆ ಯುವಕನ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿರುವ ಪ್ರಕರಣ ನಡೆದಿರುವ ಬೆನ್ನಿಗೇ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಬೆಟ್ಟದಾಸನಪುರದಲ್ಲಿಯೂ ಅಂತಹುದೇ ಘಟನೆ ನಡೆದಿದೆ.

ನಗರ್ತ ​ಪೇಟೆ ಹಲ್ಲೆ ಪ್ರಕರಣದ ಬೆನ್ನಿಗೆ ಆನೇಕಲ್​​ನಲ್ಲೂ ಅನ್ಯಕೋಮಿನ ಯುವಕರಿಂದ ಅಂಗಡಿ ಮಾಲೀಕನ ಮೇಲೆ ಹಲ್ಲೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಆನೇಕಲ್​​ನಲ್ಲೂ ಅನ್ಯಕೋಮಿನ ಯುವಕರಿಂದ ಅಂಗಡಿ ಮಾಲೀಕನ ಮೇಲೆ ಹಲ್ಲೆ
Edited By:

Updated on: Mar 21, 2024 | 10:31 AM

ಬೆಂಗಳೂರು, ಮಾರ್ಚ್​​ 21: ರಾಜಧಾನಿಯ ಜನನಿಬಿಡ ವಾಣಿಜ್ಯ ಪ್ರದೇಶವಾದ ನಗರ್ತ ​ಪೇಟೆಯಲ್ಲಿ ಮೊಬೈಲ್ ಅಂಗಡಿಯಲ್ಲಿ ಹನುಮಾನ್ ಚಾಲಿಸಾ (Hanuman Chalisa) ಹಾಡು ಹಾಕಿದ್ದಕ್ಕೆ ಯುವಕನ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ (Assault) ನಡೆಸಿರುವ ಪ್ರಕರಣ ನಡೆದಿರುವ ಬೆನ್ನಿಗೇ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಬೆಟ್ಟದಾಸನಪುರದಲ್ಲಿಯೂ ಅಂತಹುದೇ ಘಟನೆ ನಡೆದಿದೆ.

ಪ್ರಕರಣ ಹೀಗಿದೆ… ಆತ ಅದೊಂದು ಕಾರ್ಟ್​​​​ನಲ್ಲಿ ತನ್ನ ಪ್ರಾವಿಷನ್ ಸ್ಟೋರ್ ಗಾಗಿ ತೆಂಗಿನ ಕಾಯಿ ಆರ್ಡರ್ ಮಾಡಿದ್ದ. ಆದ್ರೆ‌ ಆರ್ಡರ್ ತಂದ ಡೆಲಿವರಿ ಬಾಯ್ ಅದೊಂದು ಕಾರಣಕ್ಕೆ ಕಿರಿಕ್ ತೆಗೆದಿದ್ದು ಮಾತ್ರವಲ್ಲದೆ ಹುಡುಗರನ್ನು ಕರೆಸಿ ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾನೆ.

ಅಷ್ಟಕ್ಕೂ ಆ ಅಂಗಡಿ ಮಾಲೀಕನ ಮೇಲೆ ಆ ಡೆಲಿವರಿ ಬಾಯ್ ಹಲ್ಲೆ (attack) ಮಾಡಿದ್ದಾದರೂ ಯಾಕೇ ಅಂತೀರಾ ಈ ಸ್ಟೋರಿ ನೋಡಿ. ಹೌದು ಕೇವಲ 30 ರೂಪಾಯಿಗೊಸ್ಕರ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿರುವ ಸಿಸಿ ಕ್ಯಾಮರಾ ದೃಶ್ಯಗಳು (CCTV) ಕಂಡು ಬಂದಿರುವುದು ಬೆಂಗಳೂರು ಹೊರವಲಯ ಆನೇಕಲ್ (Anekal) ತಾಲ್ಲೂಕಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಬೆಟ್ಟದಾಸನಪುರದಲ್ಲಿ.

ಹಲ್ಲೆಗೊಳಗಾದ ಇಲ್ಲಿನ ಬಾಲಾಜಿ ಪ್ರಾವಿಷನ್ ಸ್ಟೋರ್ ಮಾಲೀಕ ಲಲಿತ್ ನಿನ್ನೆ ನಿಂಜಾ ಕಾರ್ಟ್ ನಲ್ಲಿ ತೆಂಗಿನಕಾಯಿ ಈರುಳ್ಳಿ ಸೇರಿದಂತೆ ತರಕಾರಿಗಳನ್ನು ಆರ್ಡರ್ ಮಾಡಿದ್ದಾನೆ. ಆದ್ರೆ ಇಂದು ಡೆಲಿವರಿ ಬಾಯ್ ತಂದ ತೆಂಗಿನಕಾಯಿ ತೂಕದಲ್ಲಿ 700 ಗ್ರಾಂ ವ್ಯತ್ಯಾಸ ಕಂಡಿದೆ. 700 ಗ್ರಾಂ ತೆಂಗಿನಕಾಯಿಗೆ 30 ರೂಪಾಯಿ ಬೆಲೆ ಇದ್ದು, ಅದನ್ನು ಕಡಿತಗೊಳಿಸುವುದಾಗಿ ತಿಳಿಸಿದ್ದಾನೆ. ಆಗ ಡೆಲಿವರಿ ಬಾಯ್ ಮತ್ತು ಅಂಗಡಿ ಮಾಲೀಕನ ನಡುವೆ ವಾಗ್ವಾದ ನಡೆದಿದ್ದು, ಚಾಕೊಲೇಟ್ ಡಬ್ಬಿ ಮತ್ತು ಪೊರಕೆ ಸ್ಟಿಕ್ ನಿಂದ ಹಲ್ಲೆ ನಡೆಸಿದ್ದಾನೆ.

ಇದನ್ನೂ ಓದಿ:  ನಗರತ್ ಪೇಟೆ ಹಲ್ಲೆ ಪ್ರಕರಣ: ಆರೋಪಿಗಳ ಮತಾಂಧಂತೆಯ ಎಕ್ಸ್​​ಕ್ಲೂಸಿವ್ ಮಾಹಿತಿ ಇಲ್ಲಿದೆ

ಇನ್ನು ಹಲ್ಲೆ ನಡೆಸಿದ ಡೆಲಿವರಿ ಬಾಯ್​​ ಅಷ್ಟಕ್ಕೇ ಸುಮ್ಮನಾಗದೆ ತನ್ನ ಸ್ನೇಹಿತರನ್ನು ‌ಕರೆಸಿಕೊಂಡು ಪುನಃ ಹಲ್ಲೆಗೆ ಯತ್ನಿಸಿದ್ದಾನೆ. ಪೂರ್ಣ ಬಿಲ್ ಪಾವತಿ ಮಾಡುವಂತೆ ಅವಾಜ್ ಹಾಕಿದ್ದು, ಇಲ್ಲವಾದರೆ ಅಂಗಡಿ ಪುಡಿ ಪುಡಿ ಮಾಡುವುದಾಗಿ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾನೆ.

ಇದನ್ನೂ ಓದಿ: ಕುಡಿಯಲು ನೀರು ಕೇಳಿ ಯುವತಿ ಜೊತೆ ಫುಡ್ ಡೆಲಿವರಿ ಬಾಯ್​​ ದುರ್ವರ್ತನೆ, FIR ದಾಖಲು

ಭಯಗೊಂಡ ಅಂಗಡಿ ಮಾಲೀಕ 112 ಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾನೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಡೆಲಿವರಿ ಬಾಯ್ ಸೇರಿದಂತೆ ಐದು ಮಂದಿಯನ್ನು ವಶಕ್ಕೆ ಪಡೆದಿದ್ದು, ಸಿಸಿ ಕ್ಯಾಮರಾಗಳ ದೃಶ್ಯಗಳ ಆಧಾರದ ಮೇಲೆ ತನಿಖೆ ಮುಂದುವರಿಸಿದ್ದಾರೆ.

ಇನ್ನು ಹಲ್ಲೆಗೊಳಗಾದ ಅಂಗಡಿ ಮಾಲೀಕ ಲಲಿತ್ ಹಿಂದೂ ಆಗಿದ್ದು, ಹಲ್ಲೆ ನಡೆಸಿದ ಡೆಲಿವರಿ ಬಾಯ್ ಮತ್ತು ಗ್ಯಾಂಗ್​ನ ಬಹುತೇಕರು ಮುಸ್ಲಿಂ ಯುವಕರಾಗಿದ್ದು, ಹಿಂದೂ ಸಂಘಟನೆ ಕಾರ್ಯಕರ್ತರು ಠಾಣೆ ಬಳಿ ಜಮಾಯಿಸಿ ಆರೋಪಿಗಳ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದು, ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಈಗಾಗಲೇ FIR ದಾಖಲಿಸಿ ತನಿಖೆ ಮುಂದುವರಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:31 am, Thu, 21 March 24