ಶಾಸಕ ಹ್ಯಾರಿಸ್ ಸ್ಟಿಕ್ಕರ್‌ ಇರುವ ಕಾರು ಬಳಸಿದ ವಂಚಕ ಪತ್ತೆ: ಜಾರಿ ನಿರ್ದೇಶನಾಲಯ

ಶಾಂತಿನಗರ ಶಾಸಕ ಎನ್‌ಎ ಹ್ಯಾರೀಸ್‌ ಅವರ ಅಧಿಕೃತ ಪ್ರೋಟೋಕಾಲ್‌ ಸ್ಟಿಕ್ಕರ್‌ ಇರುವ ಕಾರನ್ನು ಬಳಸಿ ವಂಚಿಸಿದ ಆರೋಪಿ ಕೊಚ್ಚಿ ನಿವಾಸಿಯೊಬ್ಬರು ಪತ್ತೆಯಾಗಿದ್ದಾರೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕ ವಿಧಾನಸಭೆಯ ಪ್ರೋಟೋಕಾಲ್ ವಿಭಾಗವು ಕಾಂಗ್ರೆಸ್ ಶಾಸಕರಿಗೆ ಸ್ಟಿಕ್ಕರ್ ಅನ್ನು ನೀಡಿತ್ತು. ಇಡಿ ಪ್ರಕಾರ, ಕಾರ್ ಅನ್ನು ಮೊಹಮ್ಮದ್ ನಲಪಾಡ್ ಖರೀದಿಸಿ ಶಾಸಕರ ನಿಕಟ ಸಂಬಂಧಿ ನಫೀಹ್ ಮುಹಮ್ಮದ್ ನಾಸರ್ ಹೆಸರಿನಲ್ಲಿ ನೋಂದಾಯಿಸಲಾಗಿದೆ.

ಶಾಸಕ ಹ್ಯಾರಿಸ್ ಸ್ಟಿಕ್ಕರ್‌ ಇರುವ ಕಾರು ಬಳಸಿದ ವಂಚಕ ಪತ್ತೆ: ಜಾರಿ ನಿರ್ದೇಶನಾಲಯ
ಶಾಸಕ ಹ್ಯಾರಿಸ್ ಸ್ಟಿಕ್ಕರ್‌ ಇರುವ ಕಾರು ಬಳಸಿದ ವಂಚಕ ಪತ್ತೆ
Follow us
Rakesh Nayak Manchi
|

Updated on: Mar 21, 2024 | 10:05 AM

ಬೆಂಗಳೂರು, ಮಾ.21: ಶಾಂತಿನಗರದ ಕಾಂಗ್ರೆಸ್ ಶಾಸಕ ಎನ್‌ಎ ಹ್ಯಾರೀಸ್‌ (NA Haris) ಅವರ ಅಧಿಕೃತ ಪ್ರೋಟೋಕಾಲ್‌ ಸ್ಟಿಕ್ಕರ್‌ ಇರುವ ಕಾರನ್ನು ಬಳಸಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ವಂಚಿಸಿದ ಆರೋಪಿ ಕೊಚ್ಚಿ ನಿವಾಸಿ ಎಂದು ಜಾರಿ ನಿರ್ದೇಶನಾಲಯ (Enforcement Directorate-ED) ಬುಧವಾರ ತಿಳಿಸಿದೆ. ಕರ್ನಾಟಕ ವಿಧಾನಸಭೆಯ ಪ್ರೋಟೋಕಾಲ್ ವಿಭಾಗವು ಕಾಂಗ್ರೆಸ್ ಶಾಸಕರಿಗೆ ಸ್ಟಿಕ್ಕರ್ ನೀಡಿತ್ತು.

ಇಡಿ ಪ್ರಕಾರ, ಹ್ಯಾರೀಸ್ ಅವರ ಮಗ ಮತ್ತು ಕರ್ನಾಟಕ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾರಿಸ್ ನಲಪಾಡ್ ಕಾರ್ ಖರೀದಿಸಿದ್ದಾರೆ. ಆದರೆ ಈ ಕಾರನ್ನು ಶಾಸಕರ ನಿಕಟ ಸಂಬಂಧಿ ಮತ್ತು ಅವರ ರಾಜಕೀಯ ಸಹಾಯಕ ನಫೀಹ್ ಮುಹಮ್ಮದ್ ನಾಸರ್ ಹೆಸರಿನಲ್ಲಿ ನೋಂದಾಯಿಸಲಾಗಿದೆ.

ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ, 2002 ರ ಅಡಿ ಇಡಿ ಕೊಚ್ಚಿ ವಲಯದ ಅಧಿಕಾರಿಗಳು ಮಾರ್ಚ್ 14, 15 ಮತ್ತು 16 ರಂದು ಇಡಿ ಕೊಚ್ಚಿ ವಲಯದ ಅಧಿಕಾರಿಗಳು ಕೊಚ್ಚಿ ನಿವಾಸಿ ಮುಹಮ್ಮದ್ ಹಫೀಜ್ ಮತ್ತು ಇತರರಿಗೆ ಸೇರಿದ ಕರ್ನಾಟಕ, ಕೇರಳ ಮತ್ತು ಗೋವಾದ ಒಂಬತ್ತು ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಿತ್ತು.

ಇದನ್ನೂ ಓದಿ: ಅಬಕಾರಿ ನೀತಿ ಪ್ರಕರಣದಲ್ಲಿ ಇಡಿ ಸಮನ್ಸ್‌ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ಮೊರೆ ಹೋದ ಕೇಜ್ರಿವಾಲ್

ಹಣ ದುರುಪಯೋಗ, ನಕಲಿ ದಾಖಲೆಗಳ ಸೃಷ್ಟಿಸಿ ವಂಚನೆ ಎಸಗುವಿಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಕರ್ನಾಟಕ, ಕೇರಳ ಮತ್ತು ಗೋವಾದಲ್ಲಿ ಪೊಲೀಸರು ದಾಖಲಿಸಿದ ಎಫ್‌ಐಆರ್‌ಗಳಲ್ಲಿ ಹಫೀಜ್ ಮತ್ತು ಅವನ ಸಹಚರರು ಹೆಸರಿದೆ. ಹಫೀಜ್ ತನ್ನ ಅತ್ತೆಯಂದಿರಿಂದ 108.73 ಕೋಟಿ ರೂಪಾಯಿ ಮೌಲ್ಯದ ವರದಕ್ಷಿಣೆ ಪಡೆದಿದ್ದಾನೆ ಎಂದು ಇಡಿ ಹೇಳಿದೆ.

ದಾಳಿ ವೇಳೆ ಇಡಿ ಅಧಿಕಾರಿಗಳು 1,672.8 ಗ್ರಾಂ ಚಿನ್ನಾಭರಣಗಳು, 12.5 ಲಕ್ಷ ರೂ., ಏಳು ಮೊಬೈಲ್ ಫೋನ್‌ಗಳು ಮತ್ತು ವಿವಿಧ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ, ಆರೋಪಿಗಳಿಗೆ ಸೇರಿದ 4.4 ಕೋಟಿ ರೂಪಾಯಿ ಮೌಲ್ಯದ ಬ್ಯಾಂಕ್ ಬ್ಯಾಲೆನ್ಸ್/ನಿಶ್ಚಿತ ಠೇವಣಿಗಳನ್ನು ಸ್ಥಗಿತಗೊಳಿಸಲು ಇಡಿ ಆದೇಶ ಹೊರಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ