ನಗರತ್ ಪೇಟೆ ಹಲ್ಲೆ ಪ್ರಕರಣ: ಆರೋಪಿಗಳ ಮತಾಂಧಂತೆಯ ಎಕ್ಸ್​​ಕ್ಲೂಸಿವ್ ಮಾಹಿತಿ ಇಲ್ಲಿದೆ

ಬೆಂಗಳೂರಿನ ನಗರತ್​ಪೇಟೆಯಲ್ಲಿರುವ ಮೊಬೈಲ್​ ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಹಾಡು ಹಾಕಿದ್ದಕ್ಕೆ ಯುವಕರ ತಂಡವೊಂದು ಹಲ್ಲೆ ನಡೆಸಿರುವ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಸದ್ಯ, ಆರೋಪಿಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದು, ಈ ವೇಳೆ ಬಹಿರಂಗಗೊಂಡ ಎಕ್ಸ್​​ಕ್ಲೂಸಿವ್ ಮಾಹಿತಿ ಇಲ್ಲಿದೆ ನೋಡಿ.

ನಗರತ್ ಪೇಟೆ ಹಲ್ಲೆ ಪ್ರಕರಣ: ಆರೋಪಿಗಳ ಮತಾಂಧಂತೆಯ ಎಕ್ಸ್​​ಕ್ಲೂಸಿವ್ ಮಾಹಿತಿ ಇಲ್ಲಿದೆ
ಮೊಬೈಲ್ ಅಂಗಡಿಯಲ್ಲಿ ಭಕ್ತಿಗೀತೆ ಹಾಕಿದ್ದಕ್ಕೆ ಹಲ್ಲೆ ನಡೆಸಿದ ದುಷ್ಕರ್ಮಿಗಳ ಗುಂಪು
Follow us
TV9 Web
| Updated By: Ganapathi Sharma

Updated on:Mar 20, 2024 | 12:35 PM

ಬೆಂಗಳೂರು, ಮಾ.19: ನಗರ್ತಪೇಟೆಯಲ್ಲಿರುವ (Nagarathpete) ಮೊಬೈಲ್​ ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಹಾಡು ಹಾಕಿದ್ದಕ್ಕೆ ಯುವಕರ ತಂಡವೊಂದು ಹಲ್ಲೆ (Assault) ನಡೆಸಿರುವ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ತನಿಖೆ ವೇಳೆ ಆರೋಪಿಗಳ ಮತಾಂಧತೆ ಹೊರಬಿದ್ದಿದೆ. ಅಷ್ಟಕ್ಕೂ ಭಾನುವಾರ ಸಂಜೆ ಸಿದ್ದಣ್ಣ ಗಲ್ಲಿಯಲ್ಲಿ ನಡೆದಿದ್ದೇನು? ಈ ಬಗ್ಗೆ ತನಿಖೆಯಿಂದ ಹೊರಬಿದ್ದ ಎಕ್ಸ್​ಕ್ಲೂಸಿವ್ ಮಾಹಿತಿ ಟಿವಿ9 ಬಿಚ್ಚಿಟ್ಟಿದೆ.

ಭಾನುವಾರ ಸಂಜೆ 6.20 ರ ಸುಮಾರಿಗೆ ಏರಿಯಾದಲ್ಲಿ ಅಂಗಡಿ ಮುಂದೆ ನಿಂತಿದ್ದ ಆರು ಯುವಕರು, ಸತೀಶ್ ಟೀ ಸ್ಟಾಲ್ ಕಡೆಯಿಂದ ಮಸೀದಿ ಕಡೆಗೆ ಹೋಗಿದ್ದಾರೆ. ದಾರಿ ಮಧ್ಯೆ ಕೃಷ್ಣಾ ಟೆಲಿಕಾಂ ಮುಂದೆ ಹಾದು ಹೋಗಿದ್ದಾರೆ. ಈ ವೇಳೆ ಮುಖೇಶ್ ಎಂಬ ಯುವಕ ತನ್ನ ಮೊಬೈಲ್ ಅಂಗಡಿಯಲ್ಲಿ ಭಕ್ತಿಗೀತೆ ಹಾಕಿಕೊಂಡು ಕುಳಿತಿದ್ದನು.

ಇದನ್ನು ಕೇಳಿದ ಆರೋಪಿಗಳು ಅಂಗಡಿಯ ಮುಂದೆ ಹೋಗಿದ್ದರೂ ವಾಪಸ್ ಆಗಮಿಸಿ ಸೌಂಡ್ ಕಡಿಮೆ ಮಾಡುವಂತೆ ಹೇಳಿದ್ದಾರೆ. ಈ ವೇಳೆ ನಾನು ಯಾಕೆ ಸೌಂಡ್ ಕಡಿಮೆ ಮಾಡಲಿ? ನಮ್ಮ ಅಂಗಡಿಯಲ್ಲಿ ನಾನು ಸೌಂಡ್ ಕೊಡುತ್ತೇನೆ ಎಂದು ಮುಖೇಶ್ ಹೇಳಿದ್ದಾನೆ. ಅವಾಗ ರಂಜಾನ್ ಸಮಯ ಹಬ್ಬ ಇದೇ ಮಸೀದಿಯಲ್ಲಿ ಆಜಾನ್ ಕೂಗುತ್ತಾರೆ ಎಂದು ಆರೋಪಿಗಳು ಮತಾಂಧತೆಯ ಮಾತುಗಳೊಂದಿಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮೊಬೈಲ್ ಶಾಪ್​ನಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ ಮಾಡಿದ್ದ ಐವರು ಅರೆಸ್ಟ್​

ಆಗ ತಾನು ಕಡಿಮೆ ಮಾಡಲ್ಲ ಸ್ಪೀಕರ್ ಸೌಂಡ್ ಜೋರಾಗಿ ಇದ್ದರೆ ಜನಕ್ಕೆ ಗೊತ್ತಾಗುವುದು ಎಂದು ಮುಖೇಶ್ ಹೇಳಿದ್ದಾನೆ. ಆಗ ಮಾತಿಗೆ ಮಾತು ಮುಂದುವರೆದಿದೆ. ಅದರಂತೆ ಆರೋಪಿಗಳಲ್ಲಿ ಒಬ್ಬ ಮುಖೇಶ್ ಕೊರಳ ಪಟ್ಟಿಗೆ ಕೈ ಹಾಕಿದ್ದಾನೆ. ಈ ವೇಳೆ ಮುಖೇಶ್ ಆತನಿಗೆ ಒಂದೇಟು ಹೊಡೆದಿದ್ದಾನೆ. ನಂತರ ಆರೋಪಿಗಳ ಗುಂಪು ಮುಖೇಶ್​ನನ್ನು ಹೊರಗೆ ಏಳೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ.

ಚಾರ್ಜರ್ ವಿಚಾರಕ್ಕೆ ಮುಖೇಶ್ ಜೊತೆ ಜಗಳ

ಮುಖೇಶ್ ಮೊಬೈಲ್ ಅಂಗಡಿ ತೆರೆದು ಮೂರು ತಿಂಗಳಾಗಿವೆ ಅಷ್ಟೆ. ಆದರೆ, ನಡೆಯಬಾರದ ಎರಡು ಘಟನೆಗಳು ನಡೆದಿವೆ. ಈ ಹಿಂದೆ ಒಂದು ಚಾರ್ಜರ್ ಕೊಡು ಎನ್ನುವ ವಿಚಾರಕ್ಕೆ ಇದೇ ಹುಡುಗರು ಮತ್ತು ಮುಖೇಶ್ ನಗುವೆ ವಾಗ್ವಾದ ನಡೆದಿತ್ತು ಎನ್ನುವ ವಿಚಾರ ಇದೀಗ ತಿಳಿದುಬಂದಿದೆ. ಈ ಕುರಿತು ಪೊಲೀಸ್ ಠಾಣೆಗೆ ಯಾವುದೇ ದೂರು ನೀಡಿಲ್ಲ.

ಆರೋಪಿಯ ಅಪ್ರಾಪ್ತ ಸಹೋದರನಿಂದ ಸ್ಟೇಟಸ್

ಹಲ್ಲೆ ಮಾಡಿದ ಅಣ್ಣ ಸುಲೇಮಾನ್ ಜೈಲು ಪಾಲಾದರೂ ಮನೆಯಲ್ಲಿರುವ ಅಪ್ರಾಪ್ತ ಸಹೋದರ ಮೊಂಡುತನ ತೋರಿದ್ದಾನೆ. “ಇವತ್ತು ಜೈಲ್, ನಾಳೆ ಬೇಲ್, ಮತ್ತೆ ಅದೆ ಪುರಾಣ” ಅಂತಾ ನಿನ್ನೆ ಬೆಳಗ್ಗೆ ಸ್ಟೇಟಸ್ ಹಾಕಿದ್ದಾನೆ.

ಇದನ್ನೂ ಓದಿ: ಬೆಂಗಳೂರು: ಹನುಮಾನ್ ಚಾಲಿಸಾ ಹಾಕಿದ್ದಕ್ಕೆ ಹಲ್ಲೆ: ಹಿಂದೂ ಕಾರ್ಯಕರ್ತರ ರ್‍ಯಾಲಿ, ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಭಕ್ತಿಗೆ ನಮಾಜ್​ಗೆ ತೊಂದರೆ ಆಗುತ್ತಿರಲಿಲ್ಲ: ಅಬು ತಾಲೀಬ್

ಘಟನೆಯನ್ನು ಖಂಡಿಸಿದ ಅಬು ತಾಲೀಬ್ ಎಂಬವರು ಟಿವಿ9 ಜೊತೆ ಮಾತನಾಡಿದ್ದು, 60 ವರ್ಷಗಳಿಂದ ನಾವು ಇಲ್ಲಿ ವಾಸಿಸುತ್ತಿದ್ದೇವೆ. ಯಾವತ್ತು ಇಂತಹ ಘಟನೆ ನಡೆದಿರಲಿಲ್ಲ. ಮೊನ್ನೆ ಸಂಜೆ ರಂಜಾನ್ ಉಪವಾಸ ಬಿಡುವ ಸಮಯದಲ್ಲಿ ಆ ಅಂಗಡಿ ಮಾಲೀಕ ಹಾಡು ಹಾಕಿಕೊಂಡಿದ್ದನಂತೆ. ಕೆಲ ಯುವಕರು ಅಲ್ಲಿಂದ ಬರುವಾಗ ಹಾಡು ಆಫ್ ಮಾಡು ಅಂತ ಹೇಳಿದ್ದಾರೆ. ಅದಕ್ಕೆ ಜಗಳ ಆಗಿದೆ. ಆದರೆ ಅವನು ಹಾಕಿದ್ದ ಹಾಡು ನಮಾಜ್ ಗೆ ತೊಂದರೆ ಆಗುತ್ತಿರಲಿಲ್ಲ. ನಮಗೆ ಇದರಿಂದ ತುಂಬಾ ನೋವಾಗಿದೆ. ಸುತ್ತಮುತ್ತಲಿನ ಜನರು ನಮ್ಮ ಮಸೀದಿಗೆ ಮಕ್ಕಳನ್ನು ಕರೆದುಕೊಂಡು ಬರುತ್ತಾರೆ. ಆದರೆ ಈ ಘಟನೆಯಿಂದ ತಪ್ಪು ಭಾವನೆ ಬರುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಆರೋಪಿಗಳ ವಿವರ ಮತ್ತು ಹಿನ್ನೆಲೆ

ಸುಲೇಮಾನ್: ಕಬ್ಬನ್ ಪೇಟೆ ನಿವಾಸಿ, ಈ ಹಿಂದೆ 2018, 2023 ರಲ್ಲಿ ಕಿಡ್ನಾಪ್ ಮತ್ತು ಸುಲಿಗೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ. ಮೊಬೈಲ್ ಅಂಗಡಿ ಮಾಲೀಕನ ಮೇಲಿನ ಹಲ್ಲೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದಾನೆ. ಕಬ್ಬನ್ ಪೇಟೆ ನಿವಾಸಿ ಶಹನವಾಜ್, ಪಿಜ್ಜಾ ಡೆಲಿವರಿ ಕೆಲಸ ಮಾಡುತ್ತಿದ್ದ ರೋಹಿತ್, ಕಬ್ಬನ್ ಪೇಟೆಯ ಕೆಎಎಸ್​ಲೈನ್ ನಿವಾಸಿ ಜಾಹಿದ್, ಮೆಡಿಕಲ್ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದ ತರಣ್ ಅಲಿಯಾಸ್ ದಡಿಯಾ ಪ್ರಕರಣದಲ್ಲಿ ಭಾಗಿಯಾದವರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:59 pm, Tue, 19 March 24

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್