Electric bike scooters problems: ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ತಾಂತ್ರಿಕ ಸಮಸ್ಯೆಗಳು ದೊಡ್ಡದಾಗಿಯೇ ಇವೆ, ಅದರ ವಿವರ ಇಲ್ಲಿದೆ

ಭಾರತದಾದ್ಯಂತ ಎಲೆಕ್ಟ್ರಿಕ್ ಸ್ಕೂಟರುಗಳ ಖರೀದಿಸಿದ ಗ್ರಾಹಕರು ಅಷ್ಟೇ ವೇಗವಾಗಿ ರಿವರ್ಸ್​​ ಗೇರ್​​​ನಲ್ಲಿ ಈ ಷೋರೂಮ್​​ಗಳಿಗೆ ವಾಪಸಾಗುತ್ತಿದ್ದಾರೆ. ನಮ್ಮ ಈ ಸ್ಕೂಟರಿನಲ್ಲಿ ಏನೋ ಪ್ರಾಬ್ಲಂ ಇದೆ ನೋಡಿ ಎಂದು ಅಲವತ್ತುಕೊಳ್ಳುತ್ತಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ತಾಂತ್ರಿಕ ಸಮಸ್ಯೆಗಳು ದೊಡ್ಡದಾಗಿಯೇ ಇವೆ, ಅವುಗಳ ಕಿರು ಪರಿಚಯ ಇಲ್ಲಿದೆ ನೋಡಿ.

Electric bike scooters problems: ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ತಾಂತ್ರಿಕ ಸಮಸ್ಯೆಗಳು ದೊಡ್ಡದಾಗಿಯೇ ಇವೆ, ಅದರ ವಿವರ ಇಲ್ಲಿದೆ
ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ತಾಂತ್ರಿಕ ಸಮಸ್ಯೆಗಳು ದೊಡ್ಡದಾಗಿಯೇ ಇವೆ
Follow us
ಸಾಧು ಶ್ರೀನಾಥ್​
|

Updated on:Sep 13, 2023 | 1:07 PM

ಭಾರತದಾದ್ಯಂತ ಎಲೆಕ್ಟ್ರಿಕ್ ಸ್ಕೂಟರುಗಳ ಖರೀದಿಸಿದ ಗ್ರಾಹಕರು ಅಷ್ಟೇ ವೇಗವಾಗಿ ರಿವರ್ಸ್​​ ಗೇರ್​​​ನಲ್ಲಿ ಈ ಷೋರೂಮ್​​ಗಳಿಗೆ ವಾಪಸಾಗುತ್ತಿದ್ದಾರೆ. ನಮ್ಮ ಈ ಸ್ಕೂಟರಿನಲ್ಲಿ ಏನೋ ಪ್ರಾಬ್ಲಂ ಇದೆ ನೋಡಿ ಎಂದು ಅಲವತ್ತುಕೊಳ್ಳುತ್ತಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ತಾಂತ್ರಿಕ ಸಮಸ್ಯೆಗಳು ದೊಡ್ಡದಾಗಿಯೇ ಇವೆ, ಅವುಗಳ ಕಿರು ಪರಿಚಯ ಇಲ್ಲಿದೆ ನೋಡಿ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬ್ಯಾಟರಿ ಸಮಸ್ಯೆಗಳು (Electric Scooter Battery Issues)

* ಬ್ಯಾಟರಿ ಬಿಸಿಯಾಗುವಿಕೆ ಸಮಸ್ಯೆ. ವೇಗವಾಗಿ ಬ್ಯಾಟರಿ ಶಕ್ತಿ ಬರಿದಾಗುತ್ತದೆ. * ಬ್ಯಾಟರಿ ಚಾರ್ಜ್​ ಮಾಡುವ ಸಮಯ ದೀರ್ಘವಾಗಿದೆ. * ವಾರಂಟಿ ನಂತರ ಬ್ಯಾಟರಿ ಬದಲಾಯಿಸಲು ಹೆಚ್ಚು ಬೆಲೆ ತೆರಬೇಕಾಗುತ್ತದೆ. * ಬ್ಯಾಟರಿ ತೂಕ ಜಾಸ್ತಿಯಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮೋಟಾರ್ ಬಿಸಿಯಾಗುವಿಕೆ ಸಮಸ್ಯೆಗಳು (Electric Scooter Motor heating issues):

* ಮೋಟಾರ್ ಬಿಸಿಯಾಗುವಿಕೆ ಸಮಸ್ಯೆಗಳು ತೀವ್ರವಾಗಿವೆ. (ಸ್ವಯಂಚಾಲಿತವಾಗಿ ಪರಿಸರ ಮೋಡ್‌ಗೆ ಬದಲಾಗುತ್ತದೆ). * ವಾಹನದ ಕಾರ್ಯಕ್ಷಮತೆ ಮತ್ತು ರೇಂಜ್​​, ಬೈಕ್‌ನ ತೂಕವನ್ನು ಅವಲಂಬಿಸಿ ಭಿನ್ನವಾಗಿರುತ್ತದೆ. * ಬ್ಯಾಟರಿ ಚಾರ್ಜ್‌ಗೆ ಹೊಂದಿಕೊಂಡಂತೆ ಮೋಟಾರ್‌ನ ಕಾರ್ಯಕ್ಷಮತೆ ಕುಸಿಯುತ್ತದೆ. (ಮಾಹಿತಿ ಮೂಲ: ಹೈಪರ್​​​ಒನ್​ಎನರ್ಜಿ hyperoneenergy)

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ವೇಗವರ್ಧನೆ/ಥ್ರಾಟಲ್ ಸ್ಪಂದನೆ ಸಮಸ್ಯೆ (Electric Scooter Acceleration / throttle response problem):

* ವೇಗವರ್ಧಕ ಸಮಸ್ಯೆ -ಕಡಿಮೆ ಸ್ಪೀಡ್​​ ಮೋಡ್‌ಗೆ ಬದಲಾಗಿಬಿಡುತ್ತದೆ. * ಅಗತ್ಯವೇ ಇಲ್ಲದಿದ್ದರೂ ರಿವರ್ಸ್ ಮೋಡ್ ಸಕ್ರಿಯಗೊಳ್ಳುತ್ತದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ನಿರ್ಮಾಣ ಕಳಪೆ ಗುಣಮಟ್ಟದ್ದಾಗಿದೆ (Electric Scooter Poor built quality):

* ವಾಹನಕ್ಕೆ ಅಳವಡಿಸಿರುವ ಪ್ಯಾನೆಲ್​​ಗಳಲ್ಲಿ ಕಂಪನಗಳು. * ಕೆಲವು ವಾಹನಗಳಲ್ಲಿ ಪ್ಯಾನಲ್​​ಗಳ ನಡುವಣ ಅಂತರಗಳು ದೊಡ್ಡದಾಗಿವೆ. * ಚಾಸಿಸ್ ಮತ್ತು ಸಸ್ಪೆನ್ಷನ್​​ಗಳಲ್ಲಿ ಕಳಪೆ ಸಾಮರ್ಥ್ಯ. * ಸಣ್ಣ ಭಾಗಗಳನ್ನು ನಿರ್ಲಕ್ಷಿಸುವುದು (ಬ್ರೇಕ್ ಲಿವರ್, ಚಾರ್ಜಿಂಗ್ ಪೋರ್ಟ್‌ಗಳು ಜಾಮ್​ ಆಗಿರುವುದು, ಡಿಸ್ಕ್ ಬ್ರೇಕ್‌ಗಳು, ಇಂಡಿಕೇಟರ್ ಸ್ವಿಚ್‌ಗಳು ಮುಂತಾದ ಘಟಕಗಳು).

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ಡಿಸ್​ಪ್ಲೆ ಸಮಸ್ಯೆಗಳು (Electric Scooter Display problems):

* ಡಿಸ್​ಪ್ಲೆ ತನ್ನಷ್ಟಕ್ಕೆ ತಾನೇ ಸ್ಟಾಪ್​ ಅಗಿಬಿಡುತ್ತದೆ. * ಟಚ್ ಸೆನ್ಸಿಟಿವಿಟಿ ತುಂಬಾ ಕಡಿಮೆಯಾಗಿದೆ ಮತ್ತು ಕೆಲವೊಮ್ಮೆ ಕೆಲಸ ಮಾಡುವುದಿಲ್ಲ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ರಿವರ್ಸ್ ಮೋಡ್ ಸಮಸ್ಯೆ (Electric Scooter Reverse mode problem):

* ಅನಪೇಕ್ಷಿತ ರಿವರ್ಸ್ ಮೋಡ್ ಸಕ್ರಿಯಗೊಳಿಸುವಿಕೆ. * ಇದ್ದಕ್ಕಿದ್ದಂತೆ ನಿಗದಿತ ವೇಗದ ಮಿತಿಗಿಂತ ಹೆಚ್ಚಿನ ವೇಗ ಬಂದುಬಿಡುತ್ತದೆ. * ಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ಸವಾರಿ ಜಾಗ ಕಳಪೆಯಾಗಿದೆ (Electric Scooter Poor riding position)

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ಮಾರಾಟ ನಂತರದ ಸೇವಾ ಸಮಸ್ಯೆಗಳು (Electric Scooter After sales services issues):

* ಬಿಡಿ ಭಾಗಗಳು ಲಭ್ಯವಿರುವುದಿಲ್ಲ. * ಸಮಯಕ್ಕೆ ಸರಿಯಾಗಿ ಯಾವುದೇ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. * ಗ್ರಾಹಕರ ಸಮಸ್ಯೆಯನ್ನು ಸರಿಪಡಿಸುವಲ್ಲಿ ವಿಳಂಬವಾಗುವುದು (ವಿದ್ಯುತ್ ಸಮಸ್ಯೆಗಳು, ಸ್ವಿಚ್‌ಗಳು, ಇನ್ನಿತರೆ ಸೇವೆಗಳನ್ನು ತಕ್ಷಣವೇ ಸರಿಪಡಿಸುವುದಿಲ್ಲ). * ಸಮಸ್ಯೆಯನ್ನೇ ಪರಿಹರಿಸದೆ ಸರ್ವಿಸ್ ಆಯ್ತು ಅಂತಾ ಗ್ರಾಹಕರಿಗೆ ಬೈಕನ್ನು ಹಿಂತಿರುಗಿಸುವುದು.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ಬಿಸಿಯಾಗುವಿಕೆ ಸಮಸ್ಯೆಗಳು (Electric Scooter Temperature issues).

* ಬೈಕ್​ಗಳು ಹೆಚ್ಚು ಬಿಸಿಯಾಗುವುದರಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗುತ್ತದೆ. * ಥರ್ಮಲ್​​ ಸ್ಥಿರತೆ ಕಡಿಮೆಯಾಗಿರುವುದು. * ತೀವ್ರತರ ಹವಾಮಾನ ಪರಿಸ್ಥಿತಿಗಳಲ್ಲಿ ಕಾರ್ಯಕ್ಷಮತೆ ಅಸ್ಥಿರವಾಗಿಬಿಡುತ್ತದೆ. * ಎಲೆಕ್ಟ್ರಿಕ್ ಬೈಕ್-ಸ್ಕೂಟರ್​​ಗಳಿಗಾಗಿ ಚಾರ್ಜಿಂಗ್ ಸೌಕರ್ಯ ಲಭ್ಯವಿಲ್ಲದೆ ಇರುವುದು (Electric Scooter Lack of charging infrastructure) (ಮಾಹಿತಿ ಮೂಲ: ಹೈಪರ್​​​ಒನ್​ಎನರ್ಜಿ hyperoneenergy)

Published On - 1:05 pm, Wed, 13 September 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ