AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೀಕೆಂಡ್​ನಲ್ಲೇ ಮದ್ಯ ಪ್ರಿಯರಿಗೆ ಶಾಕ್: ಜೂ.1ರಿಂದ ಬೆಂಗಳೂರಿನಲ್ಲಿ 5 ದಿನ ಬಾರ್​ಗಳು ಕ್ಲೋಸ್!

ವೀಕೆಂಡ್​ನಲ್ಲೇ ಮದ್ಯ ಪ್ರಿಯರಿಗೆ ಬರ ಎದುರಾಗಿದೆ. ಶನಿವಾರ, ಭಾನುವಾರ ನಶೆ ಏರಿಸುತ್ತಾ ಎಂಜಾಯ್ ಮಾಡಲು ಪ್ಲ್ಯಾನ್ ಮಾಡುತ್ತಿದ್ದವರಿಗೆ ಡ್ರೈ ಡೇ ಎದುರಾಗಿದೆ. ಹೌದು...ನಾಳೆಯಿಂದ ಅಂದರೆ ಜೂನ್ 1ರಿಂದ (ಜುನ್ 5 ಒಂದು ದಿನ ಹೊರತುಪಡಿಸಿ) ಜೂನ್ 6ರ ವರೆಗೆ ಬಾರ್​ಗಳು ಬಂದ್ ಆಗಲಿವೆ.

ವೀಕೆಂಡ್​ನಲ್ಲೇ ಮದ್ಯ ಪ್ರಿಯರಿಗೆ ಶಾಕ್: ಜೂ.1ರಿಂದ ಬೆಂಗಳೂರಿನಲ್ಲಿ 5 ದಿನ ಬಾರ್​ಗಳು ಕ್ಲೋಸ್!
ಸಾಂದರ್ಭಿಕ ಚಿತ್ರ
Vinayak Hanamant Gurav
| Updated By: ರಮೇಶ್ ಬಿ. ಜವಳಗೇರಾ|

Updated on: May 31, 2024 | 10:44 PM

Share

ಬೆಂಗಳೂರು, (ಮೇ 31): ಪಾರ್ಟಿ ಪ್ರಿಯರು, ಮದ್ಯ (liquor) ಪ್ರಿಯರಿಗೆ ಇದು ಅಕ್ಷರಶಃ ಕಹಿ ಸುದ್ದಿ. ಯಾಕಂದ್ರೆ ನಾಳೆ (ಜೂನ್ 01) ಸಂಜೆ 4 ಗಂಟೆಯಿಂದಲೇ ಬಾರ್​ಗಳು (Bar) ಬಂದ್​ ಆಗಲಿವೆ. .ಎಂಎಲ್‌ಸಿ ಚುನಾವಣೆ ಹಾಗೂ ಲೋಕಸಭಾ ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ  ಬೆಂಗಳೂರು (Bengaluru) ನಗರದಲ್ಲಿ ಜೂನ್ 1ರಿಂದ ಸಂಜೆಯಿಂದ ಜೂನ್ 6ರವರೆಗೆ ಬಾರ್​ಗಳು ಬಂದ್ ಆಗಲಿವೆ. ವೀಕೆಂಡ್​ನಲ್ಲೇ ಬಾರ್​ ಅಂಗಡಿಗಳು ಬಾಗಿಲು ಹಾಕುತ್ತಿರುವುದರಿಂದ ಮದ್ಯ ಪ್ರಿಯರಿಗೆ ಬರ ಎದುರಾಗಿದೆ.

ಜೂನ್‌ 3ರಂದು ಪದವೀಧರರ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಹೀಗಾಗಿ ಜೂನ್‌ 1ರ ಸಂಜೆ 4 ಗಂಟೆಯಿಂದ ಜೂನ್‌ 3ರವರೆಗೆ ಬಾರ್‌ಗಳು ಕ್ಲೋಸ್‌ ಇರಲಿವೆ. ಜೂನ್ 4ರಂದು ಲೋಕಸಭಾ ಚುನಾವಣೆಯ ಮತ ಎಣಿಕೆ ಇದ್ದು, ಅಂದು ಸಹಾ ಎಣ್ಣೆ ಸಿಗಲ್ಲ.. ಕಿಕ್ ಏರಿಸುವಂತಿಲ್ಲ.. ಇನ್ನು ಜೂನ್‌ 5ಅಂದ್ರೆ.. ಬುಧವಾರ ಬಾರ್‌ಗಳು ಎಂದಿನಂತೆ ಓಪನ್‌ ಇರುತ್ತವೆ. ಆದ್ರೆ ಜೂನ್‌ 6 ರಂದು ಎಂಎಲ್‌ಸಿ ಮತ ಎಣಿಕೆ ಇರೋದ್ರಿಂದ ಅಂದು ಮತ್ತೆ ಬಾರ್ ಕ್ಲೋಸ್ ಆಗಲಿವೆ.

ಬೆಂಗಳೂರಿನಲ್ಲಿ ಪದವಿ ಕ್ಷೇತ್ರ ಚುನಾವಣೆಗೆ 36 ಸಾವಿರದಷ್ಟು ಮಾತ್ರ ಮತದಾರರಿದ್ದಾರೆ. ಆದ್ರೆ 5 ದಿನ ಬಾರ್ ಬಂದ್ ಮಾಡುವುದರಿಂದ ಹೊಡೆತ ಬೀಳಲಿದೆ ಎಂದು ಬಾರ್ ಮಾಲೀಕರು ಆಕ್ರೋಶ ಹೊರ ಹಾಕಿದ್ದಾರೆ. 5 ದಿನ ಎಣ್ಣೆ ಸಿಗಲ್ಲ ಎನ್ನುವ ನೋವು ಒಂದ್ಕಡೆ ಆದ್ರೆ, ಬಾರ್ ಮಾಲೀಕರು ಕದ್ದು ಮುಚ್ಚಿ ದುಪ್ಪಟ್ಟು ಹಣಕ್ಕೆ ಮದ್ಯ ಮಾರಾಟ ಮಾಡುತ್ತಾರೆ ಎನ್ನುವ ನೋವು ಮದ್ಯ ಪ್ರಿಯರದ್ದು.

ಅದೇನೆ ಇರಲಿ ವೀಕೆಂಡ್​ನಲ್ಲೇ ಡ್ರೈ ಡೇ ಶಾಕ್ ಎದುರಾಗಿದೆ. ಹೀಗಾಗಿ ನಾಳೆ ಬಾರ್​ಗಳ ಮುಂದೆ ಎಣ್ಣೆ ಪ್ರಿಯರು ಕ್ಯೂ ನಿಂತರೂ ಅಚ್ಚರಿ ಇಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ