ಬೆಂಗಳೂರು, ಏ.25: ಲೋಕಸಭಾ ಚುನಾವಣೆಯ(Lok Sabha Election) ಕಾವು ಜೋರಾಗಿದ್ದು, ರಾಜ್ಯದಲ್ಲಿ ನಾಳೆ(ಏ.26)ಮೊದಲ ಹಂತದಲ್ಲಿ ಹದಿನಾಲ್ಕು ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಈ ಹಿನ್ನಲೆ ಎಲೆಕ್ಷನ್ ಡ್ಯೂಟಿಗಾಗಿ ಕೆಎಸ್ಆರ್ಟಿಸಿ ಯಿಂದ 2100 ಬಸ್ಗಳನ್ನು ನೀಡಲಾಗಿದೆ. ಹೀಗಾಗಿ ಬಸ್ಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಇತ್ತ ಮತದಾರರು ತಮ್ಮೂರಿನತ್ತ ಪ್ರಯಾಣ ಬೆಳಸಿದ್ದು, ಮೆಜೆಸ್ಟಿಕ್(Majestic) ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ.
ಚಿತ್ರದುರ್ಗ, ತುಮಕೂರು , ಹಾಸನ ಕಡೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದ್ದು, ಬಸ್ಗಾಗಿ ಮೆಜೆಸ್ಟಿಕ್ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಾರೆ. ಇನ್ನು 2,100 ಕೆಎಸ್ಆರ್ಟಿಸಿ ಮತ್ತು 1,700 ಬಿಎಂಟಿಸಿ ಬಸ್ಗಳನ್ನು ಆಯೋಗ ಬಳಕೆ ಮಾಡಿಕೊಂಡ ಹಿನ್ನಲೆ ಸರ್ಕಾರಿ ಬಸ್ಗಳಿಗೆ ಕಿ.ಮೀ.ಗೆ 57 ರೂ. ದರ ನಿಗದಿ ಮಾಡಲಾಗಿದೆ. ಹೀಗಾಗಿ ಎರಡು ದಿನ ಸರ್ಕಾರಿ ಬಸ್ಗಳ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ ಇದೆ.
ಇದನ್ನೂ ಓದಿ:ಲೋಕಸಭಾ ಚುನಾವಣೆ 2024: ಮೈಸೂರಿನ ಪುಟ್ಟ ಮಗುವಿನ ತೊದಲ ನುಡಿಯಲ್ಲಿ ಮತದಾನ ಜಾಗೃತಿ; ಇಲ್ಲಿದೆ ವಿಡಿಯೋ
ಇನ್ನು ಚುನಾವಣಾ ಕಾರ್ಯಕ್ಕೆ ಖಾಸಗಿ ವಾಹನಗಳನ್ನು ಕೂಡ ಬಳಸಿಕೊಳ್ಳಲಾಗಿದೆ. ಅದರಂತೆ ಪ್ರತಿ ವಾಹನಕ್ಕೂ ಪ್ರತ್ಯೇಕ ದರ ಫಿಕ್ಸ್ ಮಾಡಲಾಗಿದ್ದು, ಮುಂಗಡ ಹಣ ಕೂಡ ಪಾವತಿ ಮಾಡಲಾಗಿದೆ. ಈ ಹಿನ್ನಲೆ ಮತದಾನ ಮಾಡಲು ತೆರಳುವ ಪ್ರಯಾಣಿಕರು ಬಸ್ಗಾಗಿ ಪರದಾಡುವಂತಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:47 pm, Thu, 25 April 24