Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಬೇರ ತಹಶೀಲ್ದಾರ್ ಮನೆಯಲ್ಲಿ ಮೊಕ್ಕಾಂ ಹೂಡಿರುವ ಲೋಕಾಯುಕ್ತ ಪೊಲೀಸರು; ಅಜಿತ್ ರೈ ಬಳಿ ಏನೆಲ್ಲಾ ಇವೆ ಗೊತ್ತಾ?

ತಹಶೀಲ್ದಾರ್​ ಅಜಿತ್ ರೈ ಮನೆ ಮೇಲೆ ನಿನ್ನೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಲಭ್ಯವಾದ ದಾಖಲೆಗಳ ಪರಿಶೀಲನೆಯನ್ನು ಇಂದು (ಜೂನ್ 29) ಕೂಡ ಮುಂದುವರಿಸಿದ್ದಾರೆ.

ಕುಬೇರ ತಹಶೀಲ್ದಾರ್ ಮನೆಯಲ್ಲಿ ಮೊಕ್ಕಾಂ ಹೂಡಿರುವ ಲೋಕಾಯುಕ್ತ ಪೊಲೀಸರು; ಅಜಿತ್ ರೈ ಬಳಿ ಏನೆಲ್ಲಾ ಇವೆ ಗೊತ್ತಾ?
ಕೆ.ಆರ್​.ಪುರಂ ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Rakesh Nayak Manchi

Updated on: Jun 29, 2023 | 8:40 AM

ಬೆಂಗಳೂರು: ಕೆ.ಆರ್​.ಪುರಂ ತಹಶೀಲ್ದಾರ್ (Tahsildar)​ ಅಜಿತ್ ರೈ ಅವರಿಗೆ ಸೇರಿದ ಸಹಕಾರ ನಗರದಲ್ಲಿರುವ ಮನೆಯಲ್ಲಿ ಲೋಕಾಯುಕ್ತ ಪೊಲೀಸರು (Lokayukta Police) ಶೋಧ ಕಾರ್ಯ ಮುಂದುವರಿಸಿದ್ದು, ಲಭ್ಯವಾದ ದಾಖಲೆಗಳ ಪರಿಶೀಲನೆಯನ್ನು ಇಂದು (ಜೂನ್ 29) ಕೂಡ ಮುಂದುವರಿಸಿದ್ದಾರೆ. ನಿನ್ನೆ ಬೆಳಗ್ಗೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು, ರಾತ್ರಿ ಅಜಿತ್ ರೈ ಮನೆಯಲ್ಲೇ ಮೊಕ್ಕಾಂ ಹೂಡಿದ್ದರು.

ಅಜಿತ್​ ರೈಗೆ ಸಂಬಂಧಿಸಿದ 10 ಕಡೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು 40 ಲಕ್ಷ ನಗದು, 1.90 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದರು. ದಾಳಿ ವೇಳೆ ಅಜಿತ್ ರೈಗೆ ಸೇರಿದ 100 ಎಕರೆಗೂ ಅಧಿಕ ವಿವಿಧ ಆಸ್ತಿ ಪತ್ರಗಳು ಲಭ್ಯವಾಗಿದ್ದು, ಅಜಿತ್ ರೈ ಸಂಬಂಧಿಕರು, ಸ್ನೇಹಿತರ ಹೆಸರಲ್ಲೂ ಆಸ್ತಿ ಪತ್ರಗಳು ಪತ್ತೆಯಾಗಿವೆ. ಬೇನಾಮಿ ಹೆಸರಿನಲ್ಲಿ ಅಜಿತ್​ ರೈ ಆಸ್ತಿ ಮಾಡಿರುವ ಶಂಕೆ ಹಿನ್ನೆಲೆ ಅಜಿತ್​ ಮನೆಯಲ್ಲಿ ಶೋಧ ಕಾರ್ಯ ಹಾಗೂ ದಾಖಲೆಗಳ ಪರಿಶೀಲನೆ ಮುಂದುವರಿದಿದೆ. ಅಲ್ಲದೆ, ಬೇನಾಮಿ ಆ್ಯಕ್ಟ್ ಅಡಿ ಕೇಸ್ ದಾಖಲಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ಕಾರು, ಬೈಕ್ ನೋಡಿ ಲೋಕಾಯುಕ್ತ ಪೊಲೀಸರು ಶಾಕ್!

ಅಜಿತ್ ರೈ 50 ಲಕ್ಷಕ್ಕೆ ಲೀಸ್ ಪಡೆದ ಫ್ಲಾಟ್​ನಲ್ಲಿ ವಾಸವಿದ್ದು, 1368 ಸೀರಿಸ್​ನ ಐಷಾರಾಮಿ ಕಾರ್ ಮತ್ತು ಬೈಕ್​ಗಳನ್ನು ಹೊಂದಿದ್ದಾರೆ. ತಹಶೀಲ್ದಾರ್ ಅವರ ಐಷಾರಾಮಿ ಜೀವನ ನೋಡಿ ಅಚ್ಚರಿಕಗೊಂಡ ಲೋಕಾಯುಕ್ತ ಪೊಲೀಸರು, ಅಜಿತ್ ಮನೆಯಲ್ಲಿ ಇದ್ದ ಕಾರ್, ಬೈಕ್ ನೋಡಿ ಶಾಕ್ ಆಗಿದ್ದಾರೆ. ಅಷ್ಟೇ ಅಲ್ಲದೆ, ಇವರ ಆಪ್ತರ ಮನೆಯಲ್ಲಿ ನಾಲ್ಕು ಥಾರ್ ಹಾಗೂ ನಾಲ್ಕು ಫಾರ್ಚೂನರ್ ಕಾರುಗಳು ಪತ್ತೆಯಾಗಿವೆ.

ಇದನ್ನೂ ಓದಿ: Lokayukta raids: ತಹಶೀಲ್ದಾರ್ ಮನೆಯಲ್ಲಿ ಕಂತೆ-ಕಂತೆ ನಗದು ಹಣ ಪತ್ತೆ, ವಿಡಿಯೋನಲ್ಲಿ ನೋಡಿ

ನಾಲ್ಕೂ ಕಡೆ ಮನೆ ಮುಂದೆ ಫಾರ್ಚೂನರ್ ಹಾಗೂ ಹಿಂದೆ ಥಾರ್ ಕಾರ್ ಪಾರ್ಕಿಂಗ್ ಪ್ಯಾಟ್ರನ್ ಪತ್ತೆಯಾಗಿದ್ದು, ಮೂರು ಐಷಾರಾಮಿ ಬೈಕ್​ಗಳು ಕೂಡ ಪತ್ತೆಯಾಗಿವೆ. ಇವುಗಳಿಗೂ 1368 ನಂಬರ್​ನ ಸಿರೀಸ್ ಪಡೆದಿದ್ದಾರೆ. ಅಜಿತ್ ಸ್ನೇಹಿತ ಬಸವೇಶ್ವರನಗರದ ಗೌರವ್ ಮನೆಯಲ್ಲೂ 1368 ನಂಬರಿನ ಫಾರ್ಚೂನರ್ ಹಾಗೂ ಥಾರ್ ಜೀಪ್ ಪತ್ತೆಯಾಗಿದ್ದು, ಚಂದ್ರ ಲೇಔಟ್​ನಲ್ಲಿರುವ ಸಹೋದರ ಆಶಿತ್ ರೈ ಮನೆಯಲ್ಲೂ 1368 ಸೀರಿಸ್​ನ ಫಾರ್ಚೂನರ್ ಹಾಗೂ ಥಾರ್ ಪತ್ತೆಯಾಗಿದೆ.

ಒಟ್ಟು ನಾಲ್ಕು ಕಡೆ ಹೀಗೆ ಒಂದೇ ರೀತಿಯ ನಂಬರಿನ ಕಾರ್​ಗಳು ಒಂದೇ ಪ್ಯಾಟ್ರನ್​ನಲ್ಲಿ ನಿಲುಗಡೆ ಮಾಡಲಾಗಿದೆ. ಈ ಎಲ್ಲಾ ವಾಹನಗಳ ಜೊತೆ ಮನೆಯಲ್ಲಿ ಸಿಕ್ಕ 700 ಗ್ರಾಂ ಚಿನ್ನವನ್ನೂ ವಶಕ್ಕೆ ಪಡೆಯಲಾಗಿದೆ. ಅಜಿತ್ ರೈ ಸಹಕಾರದ ಮನೆಯ ಲೀಸ್ ಮೊತ್ತವೇ ಬರೋಬ್ಬರಿ 50 ಲಕ್ಷವಾಗಿದೆ. ಇದಲ್ಲದೆ, ಗೌರವ್ ಹೆಸರಲ್ಲಿ ದೇವನಹಳ್ಳಿ ಬಳಿಯಲ್ಲಿ 96 ಎಕರೆ ರೇಸ್ ಕ್ಲಬ್ ಪತ್ತೆಯಾಗಿದ್ದು, ದೇವನಹಳ್ಳಿಯಲ್ಲಿ ಮತ್ತೊಂದು ಕಡೆ 44 ಎಕರೆ ಫಾರ್ಮ್ ಹೌಸ್ ಪತ್ತೆಯಾಗಿದೆ.

ತಹಶೀಲ್ದಾರ್ ಅಜಿತ್ ರೈ ದೊಡ್ಡ ದೊಡ್ಡ ಕಂಪನಿಗಳ ಜೊತೆ ಡೀಲ್ ಹೊಂದಿರುವ ಶಂಕೆ ವ್ಯಕ್ತವಾಗಿದೆ. ಅಜಿತ್ ರೈ ಮತ್ತು ಅವರ ಸಹೋದರ ಹಾಗೂ ಸ್ನೇಹಿತ ಗೌರವ್ ಹೆಸರಿನಲ್ಲೂ ಆಸ್ತಿಗಳು ಪತ್ತೆಯಾಗಿದ್ದು, ಇವುಗಳ ಒಟ್ಟು ಮೊತ್ತ 1000 ಕೋಟಿಗೂ ಅಧಿಕ ಎಂದು ಲೋಕಾಯುಕ್ತ ಪೊಲೀಸರು ಅಂದಾಜಿಸಿದ್ದಾರೆ. ತಹಶೀಲ್ದಾರ್

ತಹಶೀಲ್ದಾರ್ ಮನೆಯಲ್ಲಿ ಪತ್ತೆಯಾಗಿರುವುದೇನೇನು?

  • ಸಾಕಷ್ಟು ಬೇನಾಮಿ ಆಸ್ತಿ ಪಾಸ್ತಿಗಳು ಪತ್ತೆ
  • ಅಜಿತ್ ನಿವಾಸದಲ್ಲಿ 1.9 ಕೋಟಿ ಮೌಲ್ಯದ ವಸ್ತುಗಳು ಮತ್ತು 40 ಲಕ್ಷ ನಗದು, 700 ಗ್ರಾಂ ಚಿನ್ನ ಪತ್ತೆ
  • ದೊಡ್ಡಬಳ್ಳಾಪುರದ ಬಳಿಯ 98 ಎಕ್ಕರೆ ಭೂಮಿ ಪತ್ರ ಲಭ್ಯ, ಇದರ ಅಂದಾಜು ಮೌಲ್ಯ 300 ಕೋಟಿ
  • ಬೆಂಗಳೂರು ಗ್ರಾಮಾಂತರದ ಕಲ್ಲೂರು ಬಳಿ ಹೊಂದಿರುವ 30 ಎಕ್ಕರೆ ಜಮೀನು ಪತ್ರ ಪತ್ತೆ
  • ಲ್ಯಾಂಡ್ ಕ್ರೂಜರ್, ಇನ್ನೋವಾ, ಫಾರ್ಚುನಾರ್, ಮಿನಿ ಕೂಪರ್ ಕಾರು, ಡುಕಾಟಿ ಸೇರಿ ಐಷಾರಾಮಿ ಬೈಕ್​ಗಳು ಪತ್ತೆ

ಹಾರ್ಸ್ ರೈಡಿಂಗ್ ಸ್ಕೂಲ್ ಮಾಡಲು ತಯಾರಿ ನಡೆಸುತ್ತಿದ್ದ ಅಜಿತ್ ರೈ ವರ್ಷಕ್ಕೆ ಒಂದು ಕೋಟಿಗೂ ಅಧಿಕ ಆದಾಯ ಹೊಂದಿದ್ದಾರೆ. ಆದರೂ ಆದಾಯ ಮತ್ತು ದೊರೆತಿರುವ ಆಸ್ತಿಗಳು ಹಾಗೂ ಐಶಾರಾಮಿ ವಸ್ತುಗಳಿಗೆ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ. ಹೀಗಾಗಿ ಲೋಕಾಯುಕ್ತ ಪೊಲೀಸರು ದಾಖಲೆಗಳನ್ನು ಬಹಳ ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ