ಮಹಾರಾಣಿ ಕಾಲೇಜ್​ ಅಂಡರ್​ ಪಾಸ್ ಬಂದ್: ಸಿಲುಕಿದ ಲಾರಿ, ಮಾರ್ಗ ಬದಲಾವಣೆ ಇಲ್ಲಿದೆ

ಮಹಾರಾಣಿ ಕಾಲೇಜ್​ ಬಳಿ ಇರುವ​ ಅಂಡರ್​ ಪಾಸ್​​ನಲ್ಲಿ ಲಾರಿಯೊಂದು ಸಿಲುಕಿದ್ದು, ಸದ್ಯ ಸಂಚಾರಿ ಪೊಲೀಸರು ಅಂಡರ್ ಪಾಸ್ ಬಂದ್ ಮಾಡಿ ಟ್ರಾಫಿಕ್ ಡೈವರ್ಶನ್​​​ ನೀಡಿದ್ದಾರೆ.

ಮಹಾರಾಣಿ ಕಾಲೇಜ್​ ಅಂಡರ್​ ಪಾಸ್ ಬಂದ್: ಸಿಲುಕಿದ ಲಾರಿ, ಮಾರ್ಗ ಬದಲಾವಣೆ ಇಲ್ಲಿದೆ
ಅಂಡರ್​​ ಪಾಸ್​​ನಲ್ಲಿ ಸಿಲುಕಿರುವ ಲಾರಿ
Follow us
ವಿವೇಕ ಬಿರಾದಾರ
|

Updated on:Jun 07, 2023 | 9:01 AM

ಬೆಂಗಳೂರು: ಇತ್ತಿಚಿಗೆ ನಗರದ ಕೆ.ಆರ್​.ಸರ್ಕಲ್ ಅಂಡರ್ ಪಾಸ್​ನಲ್ಲಿ (KR Circle Underpass) ಮಳೆ ನೀರಿಗೆ ಕಾರು ಸಿಲುಕಿ ಇನ್ಫೋಸಿಸ್ ಉದ್ಯೋಗಿ ಭಾನುರೇಖಾ ಸಾವನ್ನಪ್ಪಿದ್ದರು. ಈ ಪ್ರಕರಣದ ಬೆನ್ನಲ್ಲೇ ನಗರದ ಮತ್ತೊಂದು ಅಂಡರ್ ಪಾಸ್​​​ನಲ್ಲಿ (Underpass) ಲಾರಿ (Lorry) ಸಿಲುಕಿದೆ. ಹೌದು ಮೈಸೂರು ಬ್ಯಾಂಕ್ (Mysore Bank) ಕಡೆಯಿಂದ ಬಂದ ಲಾರಿಯೊಂದು ಮಹಾರಾಣಿ ಕಾಲೇಜ್​ (Maharani College) ಬಳಿ ಇರುವ​ ಅಂಡರ್​ ಪಾಸ್​​ನಲ್ಲಿ ಸಿಲುಕಿಕೊಂಡಿದೆ. ಈ ಹಿನ್ನೆಲೆ ಉಪ್ಪಾರಪೇಟೆ ಸಂಚಾರಿ ಪೊಲೀಸರು ಲಾರಿ ಹೊರ ತೆಗೆಯಲು ಜೆಸಿಬಿ ತರಿಸಿ ಹರಸಾಹಸ ಪಡುತ್ತಿದ್ದಾರೆ. ಸದ್ಯ ಸಂಚಾರಿ ಪೊಲೀಸರು ಅಂಡರ್ ಪಾಸ್ ಬಂದ್ ಮಾಡಿ ಟ್ರಾಫಿಕ್ ಡೈವರ್ಶನ್​​​ ನೀಡಿದ್ದಾರೆ.

ಚಾಲುಕ್ಯ ಸರ್ಕಲ್​​ಗೆ ಬರಲು ಫ್ರೀಡಂ ಪಾರ್ಕ್ ಕಡೆಯಿಂದ ಬರಲು ಸಂಚಾರಿ ಪೊಲೀಸರ ಸೂಚನೆ ನೀಡಿದ್ದಾರೆ. ಅಂಡರ್ ಪಾಸ್​​ನಲ್ಲಿ ಲಾರಿ ತೆರಳಲು ಸಾಧ್ಯವಿಲ್ಲ. ಆದರೂ ಲಾರಿ ಬಂದಿರುವುದು ವಿಪರ್ಯಾಸ.

ಇದನ್ನೂ ಓದಿ: ಬೆಂಗಳೂರಿನಲ್ಲೆಷ್ಟಿವೆ ಅಂಡರ್​ಪಾಸ್​ಗಳು? ಇಲ್ಲಿದೆ ವಿವರ

ಚಿತ್ರದುರ್ಗ: ಆಕಸ್ಮಿಕ ಬೆಂಕಿಯಿಂದ ಲಾರಿ ಹೊತ್ತಿ ಉರಿದ ಘಟನೆ ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಲಾರಿ ಚಾಲಕ, ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬೆಂಗಳೂರಿನಲ್ಲಿವೆ ಯಮರೂಪಿ ಅಂಡರ್ ಪಾಸ್​ಗಳು

ಶಿವಾನಂದ ರೈಲ್ವೆ ಅಂಡರ್ ಪಾಸ್ ಅತ್ಯಂತ ಡೇಂಜರೆಸ್. ಕೆ‌.ಆರ್. ಸರ್ಕಲ್ ಅಂಡರ್ ಪಾಸ್, ಪ್ಯಾಲೇಸ್ ರೋಡ್ ಗಾಲ್ಫ್ ಅಂಡರ್ ಪಾಸ್, ಮಾಗಡಿ ರೋಡ್ ನ ಹೌಸಿಂಗ್ ಬೋಡ್೯ ಅಂಡರ್ ಪಾಸ್, ಟೋಲ್ ಗೇಟ್ ಅಂಡರ್ ಪಾಸ್, ನಾಯಂಡಹಳ್ಳಿ, ಅಂಡರ್ ಪಾಸ್​ಗಳು ತುಂಬಾ ಡೇಂಜರ್. ಮಳೆ ಬಂದ 10 ನಿಮಿಷಕ್ಕೆ ಈ ಅಂಡರ್ ಪಾಸ್​ಗಳು ಕೆರೆಯಂತಾಗುತ್ತವೆ. ಮಳೆ ನೀರು ಹರಿದು ಹೋಗುವ ವ್ಯವಸ್ಥೆ ಇಲ್ಲದೆ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿರುವುದೇ ಇದಕ್ಕೆ ಮುಖ್ಯ ಕಾರಣ. ಹೀಗಾಗಿ ಅಂಡರ್ ಪಾಸ್​ಗಳನ್ನು ದಾಟಿ ಮನೆಗೆ ಹೋಗುವಾಗ ಎಚ್ಚರ ವಹಿಸಿ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:44 am, Wed, 7 June 23

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್