ಹಣಕ್ಕಾಗಿ ಜೊತೆಗಿದ್ದ ಜೋಡಿಯೇ ಪ್ರೇಮಿಗಳಿಬ್ಬರ ಖಾಸಗಿ ವಿಡಿಯೋ ಚಿತ್ರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ರು! ಮುಂದೇನಾಯ್ತು?

ಆರೋಪಿಗಳಾದ ಉಷಾ ಮತ್ತು ಸುರೇಶ್ ಸಹ ಪ್ರೇಮಿಗಳು. ಅಲ್ಲದೆ ನೊಂದ ಮಹಿಳೆಯ ಹತ್ತಿರದ ಸಂಬಂಧಿ ಸಹ. ಆದ್ರೆ ಸಂಬಂಧಿಯಾಗಿದ್ದೇ ಇಂತಹ ಕೃತ್ಯಕ್ಕೆ ಇಳಿದು ಬ್ಲ್ಯಾಕ್ ಮೇಲ್ ಮಾಡಿದ್ದಾರೆ.

ಹಣಕ್ಕಾಗಿ ಜೊತೆಗಿದ್ದ ಜೋಡಿಯೇ ಪ್ರೇಮಿಗಳಿಬ್ಬರ ಖಾಸಗಿ ವಿಡಿಯೋ ಚಿತ್ರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ರು! ಮುಂದೇನಾಯ್ತು?
ಉಷಾ ಮತ್ತು ಸುರೇಶ್ ಬಾಬು
Follow us
TV9 Web
| Updated By: ಆಯೇಷಾ ಬಾನು

Updated on: Jul 18, 2022 | 2:43 PM

ಬಾಗಲೂರು: ಪ್ರೇಮಿಗಳಿಬ್ಬರ ಖಾಸಗಿ ವಿಡಿಯೋ ಸೆರೆ ಹಿಡಿದು ಬೆದರಿಸಿದ್ದ ಇಬ್ಬರು ಆರೋಪಿಗಳನ್ನು ಬಾಗಲೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಉಷಾ ಮತ್ತು ಸುರೇಶ್ ಬಾಬು ಬಂಧಿತ ಆರೋಪಿಗಳು. ಸದ್ಯ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಮತ್ತು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಯಲಹಂಕ ಬಳಿಯ ಖಾಸಗಿ ಹೋಟೆಲ್ ಗೆ ಹೋಗಿದ್ದ ಇಬ್ಬರು ಪ್ರೇಮಿಗಳು, ಒಂದೇ ರೂಮ್ ನಲ್ಲಿ ಎರಡು ಬಾರಿ ಭೇಟಿ ಆಗಿದ್ರು. ಈ ವೇಳೆ ಯಾರಿಗೂ ಗೊತ್ತಾಗದ ರೀತಿ ಆರೋಪಿಗಳು ಕ್ಯಾಮರಾ ಇಟ್ಟು ವಿಡಿಯೋ ಚಿತ್ರಿಕರಿಸಿದ್ದರು. ಆರೋಪಿಗಳಾದ ಉಷಾ ಮತ್ತು ಸುರೇಶ್ ಸಹ ಪ್ರೇಮಿಗಳು. ಅಲ್ಲದೆ ನೊಂದ ಮಹಿಳೆಯ ಹತ್ತಿರದ ಸಂಬಂಧಿ ಸಹ. ಆದ್ರೆ ಸಂಬಂಧಿಯಾಗಿದ್ದೇ ಇಂತಹ ಕೃತ್ಯಕ್ಕೆ ಇಳಿದು ಬ್ಲ್ಯಾಕ್ ಮೇಲ್ ಮಾಡಿದ್ದಾರೆ.

ಆರೋಪಿಗಳು ಯಾರಿಗೂ ಇಳಿಯದಂತೆ ರೂಮ್ನಲ್ಲಿ ಕ್ಯಾಮರಾ ಇಟ್ಟು ವಿಡಿಯೋ ಮಾಡಿ ಬಳಿಕ ಕೆಲ ದಿನಗಳ ನಂತರ ನೊಂದ ಮಹಿಳೆಗೆ ವಾಟ್ಸಪ್ ಮೂಲಕ ವಿಡಿಯೋ ಕಳಿಸಿದ್ದಾರೆ. ವಿಡಿಯೋ ನೋಡಿ ಮಹಿಳೆ ಶಾಕ್ ಆಗಿದ್ದಾರೆ. ಬಳಿಕ ಅದೇ ನಂಬರ್ ನಿಂದ ಇಪತ್ತೈದು ಲಕ್ಷ ಹಣ ಕೊಡಿ ಇಲ್ಲಾವಾದ್ರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಬಂದಿದೆ. ನೊಂದ ಮಹಿಳೆ ಹಣ ನೀಡಲು ತಡಮಾಡಿದಾಗ ಆರೋಪಿ ಉಷಾ ಹೊಸ ನಾಟಕ ಶುರು ಮಾಡಿದ್ದಾರೆ. ತನ್ನ ಮೊಬೈಲ್ ಗೂ ಯಾರೊ ನಿಮ್ಮ ವಿಡಿಯೋ ಕಳಿಸಿದ್ದಾರೆ ಎಂದು ಮತ್ತಷ್ಟು ಬೆದರಿಸಲು ಮುಂದಾಗಿದ್ದಾರೆ. ಜೊತೆಗೆ ಸಿಡಿ ಮಾಡಿ ಮನೆಯವರು ಹಾಗೂ ಕುಟುಂಬದ ಎಲ್ಲರಿಗೂ ಕಳಿಸುವುದಾಗಿ ಹೆದರಿಸಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಬಾಗಲೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ