AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲಿನ ಮೇಲೆ ಜಿಎಸ್​ಟಿ ಹಾಕಿಲ್ಲ: ಕೇಂದ್ರದ ನಿರ್ಧಾರ ಸಮರ್ಥಿಸಿಕೊಂಡ ಸಿಎಂ ಬೊಮ್ಮಾಯಿ

ಕೊರೊನಾದಿಂದ ಜನ ಕಷ್ಟದಲ್ಲಿದ್ದಾರೆ. ಈ ಸಮಯದಲ್ಲಿ ಮತ್ತೆ ಬೆಲೆ ಏರಿಕೆ ಜನರಿಗೆ ಸಮಸ್ಯೆ ಆಗಲಿದೆ. ಇದು ಟ್ಯಾಕ್ಸ್ ಟೆರರಿಸಂ ಅನ್ನ ಜನರ ಮೇಲೆ ಕೇಂದ್ರ ಸರ್ಕಾರ ಹಾಕುತ್ತಿದೆ.

ಹಾಲಿನ ಮೇಲೆ ಜಿಎಸ್​ಟಿ ಹಾಕಿಲ್ಲ: ಕೇಂದ್ರದ ನಿರ್ಧಾರ ಸಮರ್ಥಿಸಿಕೊಂಡ ಸಿಎಂ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
TV9 Web
| Edited By: |

Updated on:Jul 18, 2022 | 1:02 PM

Share

ಬೆಂಗಳೂರು: ನಾವು ಹಾಲು,‌ ಮೊಸರು ನಾರ್ಮಲ್ ಆಗಿ ಸೇಲ್‌ ಮಾಡಿದವರಿಗೆ ಜಿಎಸ್ಟಿ (GST)  ಹಾಕಿಲ್ಲ. ಯಾರು ಪ್ಯಾಕ್ ಮಾಡಿ ಸೇಲ್ ಮಾಡುತ್ತಾರೆ ಅವರಿಗೆ ಜೆಎಸ್ಟಿ ಹಾಕಿದ್ದೇವೆ. ಬ್ರಾಂಡೆಡ್ ಇದೆ ಅವರಿಗೆ ಮಾತ್ರ 5 % ಜಿಎಸ್ಟಿ ಹಾಕಿದ್ದೇವೆ. ಅದನ್ನು ಕ್ಲೇಮ್ ಮಾಡಲು ಅವಕಾಶವಿದೆ‌ ಎಂದು ನಗರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಇದನ್ನು ಮಾಡದೇ ಇದ್ದರೇ ಟ್ಯಾಕ್ಸ್ ಗ್ರಾಹಕರಿಗೆ ಬೀಳುತ್ತಿತ್ತು. ಮರುಪಾವತಿ ಮಾಡುವ ಸಾಧ್ಯತೆಯಿದೆ. ಇದನ್ನು ಮರುಪಾವತಿ ಮಾಡಿದ್ರೆ ಈಗಿರುವ ದರ ಹೆಚ್ಚಳ ಆಗಲ್ಲ. ಇದರ ಬಗ್ಗೆ ನಾವು ಗಮನ ಕೊಡ್ತೇವೆ. ಮರುಪಾವತಿ ಮಾಡುವ ಅವಕಾಶ ಪಡೆದುಕೊಳ್ಳಬೇಕು. ಜೊತೆಗೆ ಗ್ರಾಹಕರಿಗೆ ಪಾಸ್ ಆನ್ ಮಾಡಬಾರದು. ಇದನ್ನು ಜೆಎಸ್ಟಿ ಕೌನ್ಸಿಲ್​ನಲ್ಲಿ ಮಾತಾಡುತ್ತೇವೆ. ದರ ಹೆಚ್ಚಳ‌ ಮಾಡಿದ್ದರೆ ಅದನ್ನು ಮಾಡುವ ಅವಶ್ಯಕತೆಯಿಲ್ಲ. 5% ಟ್ಯಾಕ್ಸ್ ಮರುಪಾವತಿ ಮಾಡಿಕೊಳ್ಳುವ ಸಾಧ್ಯತೆಯಿದೆ. ಅದನ್ನು ತೊಗೊಂಡರೇ ಹೆಚ್ಚಳ ಮಾಡುವ ಅವಶ್ಯಕತೆಯಿಲ್ಲ. ಇದನ್ನು ಜೆಎಸ್ಟಿ ಕೌನ್ಸಿಲ್ ಮೂಲಕ ನಿರ್ದೇಶನ ಕೊಡಿಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ  ಹೇಳಿದರು.

ಇದನ್ನೂ ಓದಿ: ಇಂದಿನಿಂದ GST ಬರೆ: ಯಾವ ವಸ್ತುಗಳ ಮೇಲೆ ಹೆಚ್ಚಾಗಲಿದೆ ತೆರಿಗೆ? ಸಂಪೂರ್ಣ ಮಾಹಿತಿ ಇಲ್ಲಿದೆ

ನಾನು ಜಿಎಸ್‌ಟಿ ಬೇಕು ಅಂತ ಮಾತಾಡಲ್ಲ: ಡಿ.ಕೆ.ಶಿವಕುಮಾರ್​ 

ವಿಧಾನಸೌಧದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿಕೆ ನೀಡಿದ್ದು, ರಾಷ್ಟ್ರಪತಿ ಚುನಾವಣೆ ನಡೆಯುತ್ತಿದೆ, ಅದೆಲ್ಲವೂ ಮುಗಿಯಲಿ. ಎಷ್ಟು ಕತ್ತರಿ ಹಾಕ್ತಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಾಗಲಿ. ಜನರ ಜೇಬಿಗೆ ಎಷ್ಟೆಷ್ಟು ಕತ್ತರಿ‌ ಹಾಕ್ತಿದ್ದಾರೆ ಜನರಿಗೂ ಗೊತ್ತಾಗಲಿ ಎಂದು ಹೇಳಿಕೆ ನೀಡಿದರು.

ಇದು ಟ್ಯಾಕ್ಸ್ ಟೆರರಿಸಂ: ಪ್ರಿಯಾಂಕ್ ಖರ್ಗೆ

ಇನ್ನೂ ಇದೇ ವಿಚಾರವಾಗಿ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, 8 ವರ್ಷ ಮೋದಿ ಸರ್ಕಾರ ಬಂದಾಗಿನಿಂದ ಅನೇಕ ಕುಟುಂಬಗಳು ಬಡತನ ರೇಖೆಗಿಂತ ಕೆಳಗೆ ಹೋಗಿದೆ. ಕೊರೊನಾದಿಂದ ಜನ ಕಷ್ಟದಲ್ಲಿದ್ದಾರೆ. ಈ ಸಮಯದಲ್ಲಿ ಮತ್ತೆ ಬೆಲೆ ಏರಿಕೆ ಜನರಿಗೆ ಸಮಸ್ಯೆ ಆಗಲಿದೆ. ಇದು ಟ್ಯಾಕ್ಸ್ ಟೆರರಿಸಂ ಅನ್ನ ಜನರ ಮೇಲೆ ಕೇಂದ್ರ ಸರ್ಕಾರ ಹಾಕುತ್ತಿದೆ. ಇದ್ರೀಂದ ಮತ್ತೆ ಜನರು ಬಡತನ ರೇಖೆಗಿಂತ ಕೆಳಗೆ ಹೋಗುತ್ತಾರೆ. ಇದು ಜನ ವಿರೋಧ ನೀತಿಯಾಗಿದೆ. ಜಿಎಸ್​ಟಿಯನ್ನ ಕೇಂದ್ರ ಸರ್ಕಾರ ಸರಿಯಾಗಿ ಜಾರಿ ಮಾಡಿಲ್ಲ ಎಂದು ಆರೋಪಿಸಿದರು.

ಇದು ಜನರಿಗೆ ಒಂದು ಶಾಪ: ದಿನೇಶ್ ಗುಂಡೂರಾವ್

ಬೆಲೆ ಏರಿಕೆ ವಿಚಾರವಾಗಿ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದು, ಸಾಮಾನ್ಯ ಜನರ ಮೇಲೆ ಕೇಂದ್ರ ತೆರಿಗೆ ಹಾಕುತ್ತಿದೆ. ಶ್ರೀಮಂತರ ಮೇಲೆ ಟ್ಯಾಕ್ಸ್ ಹಾಕೋದು ಕಡಿಮೆ ಮಾಡುತ್ತಿದೆ. ಇದು ಜನರಿಗೆ ಒಂದು ಶಾಪ. ಹೀಗೆ ಬೆಲೆ ಏರಿಕೆ ಆದ್ರೆ ಜನ ಸಾಮಾನ್ಯರ ಬದುಕು ಏನ್ ಆಗಬೇಕು. ಬಡವರ ಮೇಲೆ ಈ ಸರ್ಕಾರಕ್ಕೆ ಕಾಳಜಿ ಇಲ್ಲ. ಇದನ್ನ ನಾನು ಖಂಡಿಸುತ್ತೇನೆ ಎಂದು ಹೇಳಿದರು. ಅದೇ ರೀತಿಯಾಗಿ ವಿಧಾನಸೌಧದಲ್ಲಿ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ಇದು ಮೋದಿ ಸರ್ಕಾರದ ಅಚ್ಛೇ ದಿನ್ ಮುಂದುವರಿದ ಭಾಗ. ಪೆಟ್ರೋಲ್​, ಡೀಸೆಲ್​​, ಅಡುಗೆ ಎಣ್ಣೆ ಬೆಲೆ ಜಾಸ್ತಿ ಆಗಿದೆ. ಈಗ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರಿಗೆ ಸಂಕಷ್ಟವಾಗಿದೆ. ಕೇಂದ್ರಕ್ಕೆ ಬಡವರ ಮೇಲೆ ಎಷ್ಟು ಕಾಳಜಿ ಇದೆ ಎಂಬುದನ್ನು ತೋರಿಸುತ್ತೆ ಎಂದು ಹೇಳಿದರು.

Published On - 12:55 pm, Mon, 18 July 22