LPG ಸಿಲಿಂಡರ್​ ಬೆಲೆ ಏರಿಕೆಗೆ ಹೋಟೆಲ್ ಮಾಲೀಕರಿಂದ ವಿರೋಧ: ಸದ್ಯಕ್ಕಿಲ್ಲ ಹೋಟೆಲ್​ ತಿಂಡಿ ಬೆಲೆ ಹೆಚ್ಚಳ

| Updated By: Ganapathi Sharma

Updated on: Mar 01, 2023 | 6:05 PM

ಎಲ್​.ಪಿ.ಜಿ ಸಿಲಿಂಡರ್​​ ಬೆಲೆ ಪದೇ  ಪದೇ ಏರಿಕೆ ಆಗುತ್ತಿರುವ ಹಿನ್ನೆಲೆ ಹೋಟೆಲ್ ಮಾಲೀಕ ಅಸೋಸಿಯೇಷನ್​ ವಿರೋಧ ವ್ಯಕ್ತಪಡಿಸುವುದರೊಂದಿಗೆ ಸದ್ಯಕ್ಕೆ ಹೋಟೆಲ್ ಫುಡ್​ಗಳ ಬೆಲೆ ಜಾಸ್ತಿಯಾಗೋದಿಲ್ಲ ಎಂದು ಸ್ಪಷ್ಟನೆ ನೀಡಿದೆ.

LPG ಸಿಲಿಂಡರ್​ ಬೆಲೆ ಏರಿಕೆಗೆ ಹೋಟೆಲ್ ಮಾಲೀಕರಿಂದ ವಿರೋಧ: ಸದ್ಯಕ್ಕಿಲ್ಲ ಹೋಟೆಲ್​ ತಿಂಡಿ ಬೆಲೆ ಹೆಚ್ಚಳ
ಪ್ರಾತಿನಿಧಿಕ ಚಿತ್ರ
Image Credit source: india.com
Follow us on

ಬೆಂಗಳೂರು: ಎಲ್​.ಪಿ.ಜಿ ಸಿಲಿಂಡರ್ (LPG Cylinder)​ ಬೆಲೆ ಪದೇ  ಪದೇ ಏರಿಕೆ ಆಗುತ್ತಿರುವ ಹಿನ್ನೆಲೆ ಹೋಟೆಲ್ ಮಾಲೀಕ ಅಸೋಸಿಯೇಷನ್​ ವಿರೋಧ ವ್ಯಕ್ತಪಡಿಸುವುದರೊಂದಿಗೆ ಸದ್ಯಕ್ಕೆ ಹೋಟೆಲ್ ಫುಡ್​ಗಳ ಬೆಲೆ ಜಾಸ್ತಿಯಾಗೋದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಈ ಕುರಿತಾಗಿ ಟಿವಿ 9ಗೆ ಹೋಟೆಲ್ ಮಾಲೀಕರ ಅಸೋಸಿಯೇಷನ್ ಅಧ್ಯಕ್ಷ ಪಿ.ಸಿ ರಾವ್ ಪ್ರತಿಕ್ರಿಯೆ ನೀಡಿದ್ದು, ಜನ ಸಾಮಾನ್ಯರಿಗೆ ಹಾಗೂ ಹೋಟೆಲ್ ಮಾಲೀಕರಿಗೂ ಈಗೀನದರ ಸಿಕ್ಕಾಪಟ್ಟೆ ಹೊರೆಯಾಗಲಿದೆ. ಈ ಕುರಿತಾಗಿ ಇದೇ 16ಕ್ಕೆ ಕೇಂದ್ರ ಸಚಿವರನ್ನ ಭೇಟಿ ಮಾಡುತ್ತೇವೆ. ಜಿಎಸ್​ಟಿ ರೇಟ್ ನಮಗೆ ತುಂಬ ಜಾಸ್ತಿ ಇದೆ. ಡೊಮೆಸ್ಟಿಕ್ ರೇಟ್​ನಲ್ಲಿ 5% ಜಿಎಸ್​ಟಿ ಇದೆ. ಆದರೆ ನಮಗೆ ಕಮರ್ಷಿಯಲ್ ರೇಟ್​ನಲ್ಲಿ ಜಿಎಸ್​​ಟಿ 18% ಇದೆ. ಈ ವಿಚಾರವಾಗಿ ನಾವು ಈ ಹಿಂದೆ ಮನವಿ ಮಾಡಿದ್ದೇವು. ಈಗ ಮತ್ತೆ ಒತ್ತಾಯ ಮಾಡುತ್ತೇವೆ. ಜೊತೆಗೆ ನಮಗೆ ರಿಯಾಯಿತಿ ದರವು ಜಾಸ್ತಿ ಮಾಡಿದ್ದಾರೆ. ಕೇಂದ್ರ ಸಚಿವರ ಜೊತೆ ಮಾತಾನಾಡಿದ ಬಳಿಕ ಬೆಲೆ ಏರಿಕೆಯ ಕುರಿತು ನಿರ್ಧಾರ ಮಾಡುತ್ತೇವೆ.

ಇದನ್ನೂ ಓದಿ: LPG Cylinder Price Hike: ಬೆಲೆ ಏರಿಕೆ ಶಾಕ್! ಗೃಹ ಬಳಕೆಯ LPG ಸಿಲಿಂಡರ್ ದರ ಹೆಚ್ಚಳ

ಗೃಹ ಬಳಕೆಯ LPG ಸಿಲಿಂಡರ್ ಬೆಲೆಯಲ್ಲಿ 50 ರೂಪಾಯಿ ಏರಿಕೆ ಮಾಡಲಾಗಿದೆ. ಅದರಂತೆ 14.2 ಕೆಜಿಯ LPG ಸಿಲಿಂಡರ್ ಬೆಲೆ ದೆಹಲಿಯಲ್ಲಿ 949.50 ರೂ. ಆಗಿದೆ. ಪಂಚರಾಜ್ಯಗಳ ಚುನಾವಣೆ ಬಳಿಕ ಬೆಲೆ ಏರಿಕೆ ಆಗಲಿದೆ ಎಂದು ಹೇಳಲಾಗಿತ್ತು. ಇದೀಗ ಪೆಟ್ರೋಲ್, ಡೀಸೆಲ್ ಬೆಲೆಯ ಜೊತೆಗೆ ಮನೆ ಬಳಕೆಯ ಅಡುಗೆ ಅನಿಲ ದರ ಕೂಡ ಹೆಚ್ಚಳ ಮಾಡಲಾಗಿದೆ.

ಇದನ್ನೂ ಓದಿ: LPG Cylinder Price Hike: ಅಡುಗೆ ಸಿಲಿಂಡರ್ ಬೆಲೆ ಏರಿಕೆ, ನಿಮ್ಮ ಜೇಬಿಗೆ ಇನ್ನೊಂದು ಹೊರೆ

ಬೆಂಗಳೂರಿನಲ್ಲಿ ಗೃಹ ಬಳಕೆಯ ಎಲ್.ಪಿ.ಜಿ. ಸಿಲಿಂಡರ್ ಬೆಲೆ 952.50 ರೂಪಾಯಿಗೆ ಏರಿಕೆ ಆಗಿದೆ. 14.2 ಕೆಜಿ ಗೃಹ ಬಳಕೆಯ ಎಲ್.ಪಿ.ಜಿ ಸಿಲಿಂಡರ್ ಬೆಲೆ 50 ರೂಪಾಯಿ ಏರಿಕೆ ಮಾಡಲಾಗಿದೆ. ಆದರೆ 19 ಕೆಜಿ ವಾಣಿಜ್ಯ ಬಳಕೆಯ ಎಲ್.ಪಿ.ಜಿ. ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ 8 ರೂಪಾಯಿ ಇಳಿಕೆ ಮಾಡಲಾಗಿದೆ. ಮಾರ್ಚ್ 1 ರಂದು 2,075 ರೂಪಾಯಿ ಇದ್ದ ಸಿಲಿಂಡರ್ ಬೆಲೆ 2,067 ರೂಪಾಯಿಗೆ ಇಳಿಕೆ ಆಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:53 pm, Wed, 1 March 23