ಬೆಂಗಳೂರು – ಹುಬ್ಬಳ್ಳಿ ಮಾರ್ಗದ ರೈಲು ಸಂಚಾರ ವ್ಯತ್ಯಯ, ಹಲವು ರೈಲು ರದ್ದು, ಕೆಲವರ ಮಾರ್ಗ ಬದಲಾವಣೆ; ಇಲ್ಲಿದೆ ವಿವರ
ಹುಬ್ಬಳ್ಳಿ - ಚಿಕ್ಕಜಾಜೂರು ಭಾಗದ ರೈಲು ಹಳಿಯ ಜೋಡಿ ಮಾರ್ಗ ಎರಡನೇ ಹಂತದ ಕಾಮಗಾರಿ ಹಿನ್ನೆಲೆಯಲ್ಲಿ ರೈಲು ಸಂಚಾರದಲ್ಲಿ ಮುಂದಿನ ಕೆಲವು ದಿನಗಳವರೆಗೆ ವ್ಯತ್ಯಯವಾಗಲಿದೆ. ರೈಲು ರದ್ದು, ಮಾರ್ಗ ಬದಲಾವಣೆ ಹಾಗೂ ಭಾಗಶಃ ರದ್ದತಿಯ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಬೆಂಗಳೂರು: ಹುಬ್ಬಳ್ಳಿ – ಚಿಕ್ಕಜಾಜೂರು ಭಾಗದ (Chikjajur-Hubballi section) ರೈಲು ಹಳಿಯ ಜೋಡಿ ಮಾರ್ಗ ಎರಡನೇ ಹಂತದ ಕಾಮಗಾರಿ ಹಿನ್ನೆಲೆಯಲ್ಲಿ ರೈಲು ಸಂಚಾರದಲ್ಲಿ (Train Service) ಮುಂದಿನ ಕೆಲವು ದಿನಗಳವರೆಗೆ ವ್ಯತ್ಯಯವಾಗಲಿದೆ. ಕೆಲವು ರೈಲುಗಳ ಸಂಚಾರ ರದ್ದಾಗಿದ್ದರೆ, ಇನ್ನು ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಹಿಗಾಗಿ ಬೆಂಗಳೂರು – ಹುಬ್ಬಳ್ಳಿ ಮಾರ್ಗದಲ್ಲಿ ರೈಲು ಪ್ರಯಾಣ ಮಾಡುವವರು ಮೊದಲೇ ರದ್ದಾಗಿರುವ, ಮಾರ್ಗ ಬದಲಾವಣೆಯಾಗಿರುವ ರೈಲುಗಳ ವಿವರ ತಿಳಿದುಕೊಂಡು ಯೋಜನೆ ರೂಪಿಸಿಕೊಳ್ಳುವುದು ಉತ್ತಮ. ರೈಲು ರದ್ದು, ಮಾರ್ಗ ಬದಲಾವಣೆ ಹಾಗೂ ಭಾಗಶಃ ರದ್ದತಿಯ ವಿವರಗಳನ್ನು ಇಲ್ಲಿ ನೀಡಲಾಗಿದೆ.
- ರೈಲು ಸಂಖ್ಯೆ 16214 ಎಸ್ಎಸ್ಎಸ್ ಹುಬ್ಬಳ್ಳಿ ಅರಸೀಕೆರೆ ಡೈಲಿ ಎಕ್ಸ್ಪ್ರೆಸ್ ಸಂಚಾರ ಮಾರ್ಚ್ 4ರ ವರೆಗೆ ರದ್ದಾಗಿದೆ.
- ರೈಲು ಸಂಖ್ಯೆ 16213 ಅರಸೀಕೆರೆ ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ಪ್ರೆಸ್ ಸಂಚಾರ ಮಾರ್ಚ್ 1ರಿಂದ ರದ್ದಾಗಿದೆ.
- ರೈಲು ಸಂಖ್ಯೆ 17347/48 ಎಸ್ಎಸ್ಎಸ್ ಹುಬ್ಬಳ್ಳಿ – ಚಿತ್ರದುರ್ಗ ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ಪ್ರೆಸ್ ಸಂಚಾರ ಮಾರ್ಚ್ 4ರ ವರೆಗೆ ರದ್ದಾಗಿದೆ.
- ರೈಲು ಸಂಖ್ಯೆ 12079 ಕೆಎಸ್ಆರ್ ಬೆಂಗಳೂರು – ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಜನಶತಾಬ್ಧಿ ಎಕ್ಸ್ಪ್ರೆಸ್ ಸಂಚಾರ ಮಾರ್ಚ್ 1ರಿಂದ 4ರ ವರೆಗೆ ಹರಿಹರ – ಹುಬ್ಬಳ್ಳಿ ಮಧ್ಯೆ ಭಾಗಶಃ ರದ್ದಾಗಿರುತ್ತದೆ.
- ರೈಲು ಸಂಖ್ಯೆ 12080 ಎಸ್ಎಸ್ಎಸ್ ಹುಬ್ಬಳ್ಳಿ – ಕೆಎಸ್ಆರ್ ಬೆಂಗಳೂರು ಜನಶತಾಬ್ಧಿ ಎಕ್ಸ್ಪ್ರೆಸ್ ಸಂಚಾರ ಭಾಗಶಃ ರದ್ದಾಗಿದೆ.
- ರೈಲು ಸಂಖ್ಯೆ 11021 ದಾದರ್ ತಿರುನ್ವೇಲಿ ಟ್ರಿ-ವೀಕ್ಲಿ ಎಕ್ಸ್ಪ್ರೆಸ್ ಮಾರ್ಚ್ 1ರಿಂದ ಎಸ್ಎಸ್ಎಸ್ ಹುಬ್ಬಳ್ಳಿ, ಹೊಸಪೇಟೆ ಬೈಪಾಸ್, ಕೊತ್ತನೂರು, ಅಮರಾವತಿ ಕಾಲೊನಿ, ದಾವಣಗೆರೆ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ಹಾವೇರಿ, ರಾಣೆಬೆನ್ನೂರು ಹಾಗೂ ಹರಿಹರ ಮೂಲಕ ತೆರಳುವುದಿಲ್ಲ.
- ರೈಲು ಸಂಖ್ಯೆ 11035 ದಾದರ್ – ಮೈಸೂರು ಶರಾವತಿ ವಾರದ ಎಕ್ಸ್ಪ್ರೆಸ್ ಮಾರ್ಚ್ 2ರಿಂದ ಎಸ್ಎಸ್ಎಸ್ ಹುಬ್ಬಳ್ಳಿ, ಹೊಸಪೇಟೆ ಬೈಪಾಸ್, ಕೊತ್ತನೂರು, ಅಮರಾವತಿ ಕಾಲೊನಿ, ದಾವಣಗೆರೆ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ಹಾವೇರಿ, ರಾಣೆಬೆನ್ನೂರು ಹಾಗೂ ಹರಿಹರ ಮೂಲಕ ತೆರಳುವುದಿಲ್ಲ.
- ರೈಲು ಸಂಖ್ಯೆ 16507 ಜೋಧಪುರ – ಕೆಎಸ್ಆರ್ ಬೆಂಗಳೂರು ಬೈ ವೀಕ್ಲಿ ಎಕ್ಸ್ಪ್ರೆಸ್ ಮಾರ್ಚ್ 2ರಿಂದ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊಸಪೇಟೆ ಬೈಪಾಸ್, ಕೊತ್ತನೂರು, ಅಮರಾವತಿ ಕಾಲೊನಿ, ದಾವಣಗೆರೆ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ಹಾವೇರಿ, ರಾಣೆಬೆನ್ನೂರು ಹಾಗೂ ಹರಿಹರ ಮೂಲಕ ತೆರಳುವುದಿಲ್ಲ.
- ರೈಲು ಸಂಖ್ಯೆ 16209 ಅಜ್ಮೇರ್ – ಮೈಸೂರು ಬೈ ವೀಕ್ಲಿ ಎಕ್ಸ್ಪ್ರೆಸ್ ಕೂಡ ಮಾರ್ಚ್ 3ರಿಂದ ಎಸ್ಎಸ್ಎಸ್ ಹುಬ್ಬಳ್ಳಿ, ಹೊಸಪೇಟೆ ಬೈಪಾಸ್, ಕೊತ್ತನೂರು, ಅಮರಾವತಿ ಕಾಲೊನಿ, ದಾವಣಗೆರೆ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ಹಾವೇರಿ, ರಾಣೆಬೆನ್ನೂರು ಹಾಗೂ ಹರಿಹರ ಮೂಲಕ ತೆರಳುವುದಿಲ್ಲ.
- ರೈಲು ಸಂಖ್ಯೆ 11005 ದಾದರ್ – ಪುದುಚೇರಿ ಟ್ರಿ ವೀಕ್ಲಿ ಎಕ್ಸ್ಪ್ರೆಸ್, ರೈಲು ಸಂಖ್ಯೆ 20656 ಎಸ್ಎಸ್ಎಸ್ ಹುಬ್ಬಳ್ಳಿ – ಯಶವಂತಪುರ ವೀಕ್ಲಿ ಎಕ್ಸ್ಪ್ರೆಸ್ ಮಾರ್ಚ್ 4ರಿಂದ ಎಸ್ಎಸ್ಎಸ್ ಹುಬ್ಬಳ್ಳಿ, ಹೊಸಪೇಟೆ ಬೈಪಾಸ್, ಕೊತ್ತನೂರು, ಅಮರಾವತಿ ಕಾಲೊನಿ, ದಾವಣಗೆರೆ ಮಾರ್ಗವಾಗಿ ಸಂಚರಿಸಲಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ