ದಾವಣಗೆರೆ: ಎಟಿಎಂಗೆ ಬರುವ ವೃದ್ಧರನ್ನೇ ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಕಿಲಾಡಿ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ. ಯೋಗಾನಂದ ಬಣಕಾರ (47) ಬಂಧಿತ ಆರೋಪಿ. ಬಂಧಿತ ಆರೋಪಿಯಿಂದ 8.58 ಲಕ್ಷ ರೂಪಾಯಿ ನಗದು ಹಾಗೂ 78 ಎಟಿಎಂ ಕಾರ್ಡ್ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಯೋಗಾನಂದ ಇಂಗ್ಲೀಷ್ ವಿಷಯದಲ್ಲಿ ಎಂಎ ಪಿಹೆಚ್ಡಿ ಮಾಡಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದ ಚಿತ್ರಮಂದಿರದ ಮಾಲೀಕನಾಗಿರುವ ಯೋಗಾನಂದ ದಾವಣಗೆರೆ ನಗರದ ಬಸವನಗರ ಠಾಣೆ ಪೊಲೀಸರ ಕಾರ್ಯಾಚರಣೆ ವೇಳೆ ವಂಚನೆ ಆರೋಪದಲ್ಲಿ ಅರೆಸ್ಟ್ ಮಾಡಲಾಗಿದೆ. ಎಟಿಎಂಗೆ ಬರುವ ವೃದ್ಧರನ್ನು ಟಾರ್ಗೆಟ್ ಮಾಡಿ ಅವರಿಗೆ ದುಡ್ಡು ತೆಗೆದು ಕೊಡುವ ನೆಪದಲ್ಲಿ ಎಟಿಎಂ ಹಾಗೂ ಪಿನ್ ಕೋಡ್ ಪಡೆದುಕೊಳ್ಳುತ್ತಿದ್ದ ಆರೋಪಿ, ವೃದ್ಧರ ಬಳಿ ನಿಮ್ಮ ಹಣ ಬರುತ್ತಿಲ್ಲ ಎಂದು ಅದೇ ರೀತಿಯ ತನ್ನ ಬಳಿ ಇರುವ ಮತ್ತೊಂದು ಎಟಿಎಂ ಕೊಟ್ಟು ಕಳುಹಿಸುತ್ತಿದ್ದ. ಬಳಿಕ ವೃದ್ಧರು ಹೋದ ಮೇಲೆ ಹಣ ಡ್ರಾ ಮಾಡುತ್ತಿದ್ದ. ಕಳೆದ ನವೆಂಬರ್ 30 ರಂದು ದಾವಣಗೆರೆ ನಗರದ ನಿವಾಸಿ 75 ವರ್ಷದ ಪಾಪಣ್ಣ ಎಂಬುವರಿಗೆ ವಂಚಿಸಿ ಆರೋಪಿ ಯೋಗಾನಂದ ಸಿಕ್ಕು ಬಿದ್ದಿದ್ದ. ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ವಿಜಯನಗರ ಸೇರಿ 18 ಜನಕ್ಕೆ ವಂಚನೆ ಮಾಡಿದ್ದ ಬಗ್ಗೆ ಪೊಲೀಸ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ. ಸದ್ಯ ಪೊಲೀಸರು ಹಣ ಕಳೆದುಕೊಂಡ 18 ಜನ ವೃದ್ಧರಿಗೆ ಸಂಪೂರ್ಣ ಹಣ ವಾಪಸ್ಸು ಕೊಡಿಸಿದ್ದಾರೆ. ದಾವಣಗೆರೆ ನಗರದ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
70 ವರ್ಷದ ಮುದುಕನಿಗೆ ಹೆಣ್ಣು ಮಕ್ಕಳ ಚಟ
ಬೆಂಗಳೂರು: ಹೆಣ್ಣುಮಕ್ಕಳ ಚಟಕ್ಕೆ ಬಿದ್ದು ಕಳ್ಳತನ ಮಾಡುತ್ತಿದ್ದ ವೃದ್ಧ ರಮೇಶ್(70)ನನ್ನು ಸುದ್ದುಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ತನ್ನ ಚಟಕ್ಕೆ ಮನೆಯಲ್ಲಿ ಹಣ ಕೊಡಲಿಲ್ಲ ಎಂದು ಚಿಕ್ಕಮಗಳೂರಿನ ವೃದ್ಧ ರಮೇಶ್ ಕಳ್ಳತನ ಮಾಡುತ್ತಿದ್ದರು. ಮನೆಗಳ್ಳತನ ಪ್ರಕರಣಗಳ ಸಂಬಂಧ ತನಿಖೆ ವೇಳೆ ರಮೇಶ್ ಕಳ್ಳಾಟ ಬಯಲಾಗಿದೆ. ಸಿಸಿಟಿವಿ ಆಧರಿಸಿ ಪೊಲೀಸರು ರಮೇಶ್ನನ್ನು ಬಂಧಿಸಿದ್ದಾರೆ.
ಬಳಿಕ ವಿಚಾರಣೆ ವೇಳೆ ಆರೋಪಿಗೆ ಹೆಣ್ಣು ಮಕ್ಕಳ ಚಟ ಇರುವುದು ಬಯಲಾಗಿದೆ. ಎರಡು ಮದುವೆ, ಮೂರು ಮಕ್ಕಳಾದರೂ ಹೆಣ್ಣು ಮಕ್ಕಳ ಮೇಲಿನ ವ್ಯಾಮೋಹ ಕಡಿಮೆ ಆಗಿಲ್ಲ. ತನ್ನ ಚಟಕ್ಕೆ ಮನೆಯಲ್ಲಿ ಹಣ ಕೊಡಲಿಲ್ಲ ಎಂದು ಕಳ್ಳತನ ಮಾಡುತ್ತಿರುವುದಾಗಿ ಆರೋಪು ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿ ಕಳೆದ 12 ವರ್ಷಗಳ ಹಿಂದೆ ಮನೆಯ ತೊರೆದು ತಮಿಳುನಾಡಿಗೆ ತೆರಳಿದ್ದು ಸಣ್ಣಪುಟ್ಟ ಕಳ್ಳತನ ಮಾಡಿಕೊಂಡು ಬಂದ ಹಣದಲ್ಲಿ ವ್ಯಾಮೊಹ ತೀರಿಸಿಕೊಳ್ಳುತಿದ್ದರು. ಆದ್ರೆ ಯಾವಾಗ ತಮಿಳುನಾಡು ಪೊಲೀಸರು ಬಂಧಿಸಿದ್ರೊ ಬಿಡುಗಡೆ ಬಳಿಕ ಬೆಂಗಳೂರಿಗೆ ಶಿಫ್ಟ್ ಆಗಿದ್ದರು. ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಮನೆಗಳ್ಳತನ ಮಾಡಿದ್ದಾರೆ. ಸುದ್ದುಗುಂಟೆ ಪಾಳ್ಯ ಹಾಗೂ ಮೈಕೊಲೇಔಟ್ ಠಾಣೆಗಳಲ್ಲಿ ಪ್ರತ್ಯೇಕ ಕೃತ್ಯ ಎಸಗಿದ್ದಾರೆ. ಸಿಸಿಟಿವಿ ಆಧರಿಸಿ ಸುದ್ದುಗುಂಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 170 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: Qatar Mail: ‘ನ್ಯಾಷನಲ್ ಜಿಯಾಗ್ರಫಿಕ್’ ರೇಂಜ್ನಲ್ಲಿರುವ ನಿನ್ನ ಫೋಟೋಗಳಿಗೆ ನಾವು ಸಲಹೆ ಕೊಡಲಾಗುವುದಿಲ್ಲ