AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೃದ್ಧರು ಹಾಗೂ ಅನಕ್ಷರಸ್ಥರನ್ನೇ ಟಾರ್ಗೆಟ್ ಮಾಡುತ್ತಿದ್ದ ಚಾಲಾಕಿ ಕ್ರಿಮಿನಲ್ ಅರೆಸ್ಟ್​

ವೃದ್ಧಾಪ್ಯ ವೇತನ, ರೇಷನ್ ಕಾರ್ಡ್, ವಿಧವಾ ವೇತನ, ಆಧಾರ್ ಕಾರ್ಡ್ ಮಾಡಿಸಿಕೊಡುವುದಾಗಿ ಹೇಳಿ, ಬಂದ ಜನರನ್ನು ನೀವು ಹಾಕಿಕೊಂಡಿರುವ ಚಿನ್ನಾಭರಣ ನೋಡಿದರೆ ಬಿಪಿಎಲ್ ಕಾರ್ಡ್ ಕೊಡಲ್ಲ ಎಂದು ನಂಬಿಸಿ ಅವರಿಂದ ಚಿನ್ನ ಪಡೆದು ಮೊಸ ಮಾಡುತ್ತಿದ್ದ ಆರೋಪಿ ಮಂಜೇಶ್ ಅಲಿಯಾಸ್ ಚೌಲ್ಟ್ರಿ ಮಂಜನನ್ನು ಸದ್ಯ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ವೃದ್ಧರು ಹಾಗೂ ಅನಕ್ಷರಸ್ಥರನ್ನೇ ಟಾರ್ಗೆಟ್ ಮಾಡುತ್ತಿದ್ದ ಚಾಲಾಕಿ ಕ್ರಿಮಿನಲ್ ಅರೆಸ್ಟ್​
ಪೊಲೀಸರೊಂದಿಗೆ ಬಂಧಿತ ಆರೋಪಿ
preethi shettigar
| Edited By: |

Updated on:Jan 07, 2021 | 2:33 PM

Share

ಬೆಂಗಳೂರು: ವೃದ್ಧರು, ಅನಕ್ಷರಸ್ಥರನ್ನು ನಂಬಿಸಿ ಕಳವು ಮಾಡುತ್ತಿದ್ದ ವ್ಯಕ್ತಿ ಸೆರೆಯಾದ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಬಳಿ ನಡೆದಿದೆ.

ವೃದ್ಧಾಪ್ಯ ವೇತನ, ರೇಷನ್ ಕಾರ್ಡ್, ವಿಧವಾ ವೇತನ, ಆಧಾರ್ ಕಾರ್ಡ್ ಮಾಡಿಸಿಕೊಡುವುದಾಗಿ ಹೇಳಿ ವಂಚಿಸಿರುವ ಪ್ರಕರಣ ನಡೆದಿದೆ. ಸೌಲಭ್ಯ ಕೋರಿ ಬಂದ ಜನರನ್ನು ನೀವು ಹಾಕಿಕೊಂಡಿರುವ ಚಿನ್ನಾಭರಣ ನೋಡಿದರೆ ಬಿಪಿಎಲ್ ಕಾರ್ಡ್ ಕೊಡಲ್ಲ ಎಂದು ನಂಬಿಸಿ ಅವರಿಂದ ಚಿನ್ನ ಪಡೆದು ಮೊಸ ಮಾಡುತ್ತಿದ್ದ ಆರೋಪಿ ಮಂಜೇಶ್ ಅಲಿಯಾಸ್ ಚೌಲ್ಟ್ರಿ ಮಂಜನನ್ನು ಸದ್ಯ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಮಂಜೇಶ್ ಅಲಿಯಾಸ್ ಚೌಲ್ಟ್ರಿ ಮಂಜ

ವೃದ್ಧರು ಹಾಗೂ ಅನಕ್ಷರಸ್ಥರನ್ನು ಗುರುತಿಸಿ, ಚಿನ್ನಾಭಾರಣ ಯಾಮಾರಿಸುತ್ತಿದ್ದ ಮಂಜೇಶ್, ಚೌಲ್ಟ್ರಿ ಮಂಜ, ಹೊಟ್ಟೆ ಮಂಜ, 420 ಮಂಜ ಎಂಬ ಬೇರೆ ಬೇರೆ ಹೆಸರುಗಳಿಂದ ಗುರುತಿಸಿಕೊಂಡಿದ್ದು, ಕಳ್ಳತನದ ಬಳಿಕ ಅಮಾಯಕನಂತೆ ಜನರ ಮಧ್ಯೆ ಓಡಾಡಿಕೊಂಡಿದ್ದ. ಬಂಧಿತ ಆರೋಪಿಯಿಂದ 8.5 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಜಪ್ತಿ ಮಾಡಿದ್ದು, ಬಂಧಿತ ಮಂಜೇಶ್ ವಿರುದ್ಧ ಹಾಸನ, ಮಂಗಳೂರು ಹಾಗೂ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

CBI ಕಸ್ಟಡಿಯಲ್ಲಿದ್ದ 1 ಕ್ವಿಂಟಾಲ್ ಚಿನ್ನ ಮಂಗಮಾಯ: ತನಿಖೆಗೆ ಮದ್ರಾಸ್ ಹೈಕೋರ್ಟ್ ಆದೇಶ

Published On - 2:33 pm, Thu, 7 January 21

ಆಭರಣದಂಗಡಿ ಮಾಲೀಕನಿಂದ 425 ಗ್ರಾಂ ಚಿನ್ನ ದೋಚಿದ ಕಳ್ಳರು
ಆಭರಣದಂಗಡಿ ಮಾಲೀಕನಿಂದ 425 ಗ್ರಾಂ ಚಿನ್ನ ದೋಚಿದ ಕಳ್ಳರು
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಸೋಮನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೌರ್ಯ ಯಾತ್ರೆ
ಸೋಮನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೌರ್ಯ ಯಾತ್ರೆ
ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್
ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್
ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್​​ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್​​ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
2 ಶತಕಗಳೊಂದಿಗೆ ಹೊಸ ಇತಿಹಾಸ ಬರೆದ ರಯಾನ್ ರಿಕೆಲ್ಟನ್
2 ಶತಕಗಳೊಂದಿಗೆ ಹೊಸ ಇತಿಹಾಸ ಬರೆದ ರಯಾನ್ ರಿಕೆಲ್ಟನ್
ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ
ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ
ಕಂಬಳ ಕೋಣಗಳ ಓಟಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಫಿದಾ
ಕಂಬಳ ಕೋಣಗಳ ಓಟಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಫಿದಾ
ಕೆಜಿಗಟ್ಟಲೆ ನಿಧಿಯನ್ನು ಸರ್ಕಾರಕ್ಕೊಪ್ಪಿಸಿದ 8ನೇ ತರಗತಿಯ ಬಾಲಕನಿಗೆ ಸನ್ಮಾನ
ಕೆಜಿಗಟ್ಟಲೆ ನಿಧಿಯನ್ನು ಸರ್ಕಾರಕ್ಕೊಪ್ಪಿಸಿದ 8ನೇ ತರಗತಿಯ ಬಾಲಕನಿಗೆ ಸನ್ಮಾನ