ಬೆಂಗಳೂರಿಗೆ ಆಗಮಿಸಿದ ಮಧ್ಯಪ್ರದೇಶ ಸಿಎಂ, ರಾಜ್ಯಪಾಲರನ್ನ ಭೇಟಿಯಾಗಿ ಕುಶಲೋಪರಿ ವಿಚಾರಿಸಿದ ಮೋಹನ್ ಯಾದವ್

| Updated By: ರಮೇಶ್ ಬಿ. ಜವಳಗೇರಾ

Updated on: Aug 07, 2024 | 9:33 PM

ಮಧ್ಯಪ್ರದೇಶ ಮುಖ್ಯಂತ್ರಿ ಡಾ. ಮೋಹನ್ ಯಾದವ್ ಇಂದು (ಆಗಸ್ಟ್​ 07) ಬೆಂಗಳೂರಿಗೆ ಆಗಮಿಸಿದ್ದು, ನೇರವಾಗಿ ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ್ದಾರೆ. ಪ್ರಸಕ್ತ ರಾಜ್ಯ ರಾಜಕಾರಣದ ನಡೆಯುತ್ತಿರುವ ವಿದ್ಯಮಾನಗಳ ಮಧ್ಯ ಈ ಭೇಟಿ ಕುತೂಹಲ ಮೂಡಿಸಿದೆ.

ಬೆಂಗಳೂರಿಗೆ ಆಗಮಿಸಿದ ಮಧ್ಯಪ್ರದೇಶ ಸಿಎಂ, ರಾಜ್ಯಪಾಲರನ್ನ ಭೇಟಿಯಾಗಿ ಕುಶಲೋಪರಿ ವಿಚಾರಿಸಿದ ಮೋಹನ್ ಯಾದವ್
Follow us on

ಬೆಂಗಳೂರು, (ಆಗಸ್ಟ್ 07): ಮಧ್ಯಪ್ರದೇಶದಲ್ಲಿ ಹೂಡಿಕೆಗೆ ಸಂಬಂಧಿಸಿದಂತೆ ನಾಳೆ (ಆಗಸ್ಟ್​ 08) ಬೆಂಗಳೂರಿನಲ್ಲಿ ಮೂರನೇ ಸಂವಾದಾತ್ಮಕ ಸಭೆ ನಡೆಯಲಿದೆ. ಹೀಗಾಗಿ ಮಧ್ಯಪ್ರದೇಶ ಸಿಎಂ ಡಾ. ಮೋಹನ್ ಯಾದವ್ ಅವರು ಇಂದು (ಆಗಸ್ಟ್ 07) ಬೆಂಗಳೂರಿಗೆ ಆಗಮಿಸಿದ್ದು, ಮಧ್ಯಪ್ರದೇಶದಲ್ಲಿ ಹೂಡಿಕೆ, ನಾವೀನ್ಯತೆ ಮತ್ತು ಸುಸ್ಥಿರ ಅಭಿವೃದ್ಧಿ ಉತ್ತೇಜಿಸಲು ನಾಳೆ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಸರ್ಕಾರದ ದೃಷ್ಟಿಕೋನ ಮತ್ತು ನಾವೀನ್ಯತೆಗಳನ್ನು ಎತ್ತಿ ತೋರಿಸುವ ಕೈಗಾರಿಕೋದ್ಯಮಿಗಳನ್ನು ಭೇಟಿ ಮಾಡಿ ಚರ್ಚೆ ಮಾಡಲಿದ್ದಾರೆ.

ನಾಳಿನ ಸಭೆಯಲ್ಲಿ ಸರ್ಕಾರದ ದೃಷ್ಟಿಕೋನ ಮತ್ತು ನಾವೀನ್ಯತೆಗಳನ್ನು ಎತ್ತಿ ತೋರಿಸುವ ಕೈಗಾರಿಕೋದ್ಯಮಿಗಳನ್ನು ಮಧ್ಯಪ್ರದೇಶ ಸಿಎಂ ಡಾ. ಮೋಹನ್ ಯಾದವ್ ಭೇಟಿ ಮಾಡಿ ಹೂಡಿಕೆ ಸಂಬಂಧ ಮಹತ್ವದ ಚರ್ಚೆ ಮಾಡಲಿದ್ದಾರೆ. ಇನ್ನು ಇದೇ ಸಭೆಯಲ್ಲಿ ಮಧ್ಯಪ್ರದೇಶದಲ್ಲಿ ಹೂಡಿಕೆ ಮಾಡಲು ಇಚ್ಛಿಸುವ ಕೈಗಾರಿಕೋದ್ಯಮಿಗಳೊಂದಿಗೆ ಮೋಹನ್ ಯಾದವ್ ಅವರು ಮಾತುಕತೆ ನಡೆಸಿ ವಿವಿಧ ವಲಯಗಳಲ್ಲಿ ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ.

ಇದನ್ನೂ ಓದಿ: ಮುಡಾ ಹಗರಣ: ರಾಜ್ಯಪಾಲರ ಶೋಕಾಸ್ ನೋಟಿಸ್​ಗೆ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ

ಇನ್ನು ಮಧ್ಯಪ್ರದೇಶದಲ್ಲಿ ಹೂಡಿಕೆಗೆ ಸಂಬಂಧಿಸಿದಂತೆ ನಾಳೆ (ಆಗಸ್ಟ್​ 08) ಮೂರನೇ ಸಂವಾದಾತ್ಮಕ ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿರುವ ಮಧ್ಯಪ್ರದೇಶ ಸಿಎಂ ಡಾ.ಮೋಹನ್ ಯಾದವ್, ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ್ದಾರೆ. ಇಂದು(ಬುಧವಾರ) ಸಂಜೆ ರಾಜಭವನದಲ್ಲಿ ಸೌಹಾರ್ದಯುತವಾಗಿ ಗವರ್ನರ್ ಥಾವರ್ ಚೆಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿದರು.

ಇನ್ನು ಈ ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶೋಕಾಸ್ ನೋಟಿಸ್ ನೀಡಿರುವ ವಿಚಾರವಾಗಿ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಇದರ ಮಧ್ಯ ಮಧ್ಯಪ್ರದೇಶ ಸಿಎಂ ಯಾದವ್ ಅವರು ರಾಜ್ಯಪಾಲ ಗೆಹ್ಲೋಟ್ ಅವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

Published On - 9:31 pm, Wed, 7 August 24