ಸಿಎಂ, ಪಿಎಂ ಆಪ್ತನೆಂದು ನಂಬಿಸಿ ಹೂಡಿಕೆದಾರರನ್ನು ವಂಚಿಸುತ್ತಿದ್ದ ವಂಚಕ ಅರೆಸ್ಟ್
ನನಗೆ ರಾಜ್ಯ ಹಾಗೂ ಕೇಂದ್ರ ಸಚಿವರು ಗೊತ್ತು ಎಂದು ಬಿಸಿನೆಸ್ ಮ್ಯಾನ್ಗಳಿಗೆ ನಂಬಿಸಿ ಹೂಡಿಕೆದಾರರನ್ನ ಪರಿಚಯ ಮಾಡಿಕೊಂಡು ಕೋಟಿ ಕೋಟಿ ಹಣ ಹೂಡಿಕೆ ಮಾಡಿಸಿ ಕಂಪನಿಯ ಹಣವನ್ನ ತನ್ನ ಅಕೌಂಟ್ ಗೆ ವರ್ಗಾಯಿಸಿಕೊಂಡು ವಂಚನೆ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು, ಡಿ.28: ಸಿಎಂ, ಪಿಎಂ, ಮಿನಿಸ್ಟರ್ ಆಪ್ತನಂತೆ ನಟಿಸಿ ಹಲವರಿಗೆ ವಂಚಿಸಿದ್ದ ವ್ಯಕ್ತಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಸಂತೋಷ್ ಬಂಧಿತ ಆರೋಪಿ. ಇಂಜಿನಿಯರಿಂಗ್ ಪದವೀಧರನಾಗಿದ್ದ ಸಂತೋಷ್, ಹೂಡಿಕೆದಾರರನ್ನ ಪರಿಚಯ ಮಾಡಿಕೊಂಡು ಕೋಟಿ ಕೋಟಿ ಹಣ ಹೂಡಿಕೆ (Invester) ಮಾಡಿಸಿ ಕಂಪನಿಯ ಹಣವನ್ನ ತನ್ನ ಅಕೌಂಟ್ ಗೆ ವರ್ಗಾಯಿಸಿಕೊಂಡು ವಂಚನೆ ಮಾಡುತ್ತಿದ್ದ. ಕುಂತಲ್ಲೇ ಹಣ ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು (Mahalakshmi Layout Police) ಬಂಧಿಸಿದ್ದಾರೆ.
ಆರೋಪಿ ಸಂತೋಷ್ ತನಗೆ ದೊಡ್ಡ ದೊಡ್ಡವರ ಪರಿಚಯವಿದೆ ಎಂದು ನಂಬಿಸಿ ಹಲವು ಹೂಡಿಕೆದಾರರೊಂದಿಗೆ ಸ್ನೇಹ ಬೆಳೆಸಿದ್ದನು. ನನಗೆ ರಾಜ್ಯ ಹಾಗೂ ಕೇಂದ್ರ ಸಚಿವರು ಗೊತ್ತು ಎಂದು ಬಿಸಿನೆಸ್ ಮ್ಯಾನ್ಗಳಿಗೆ ನಂಬಿಸುತ್ತಿದ್ದ. ಬಳಿಕ ಪಿಎಂ, ಸಿಎಂ ಕಛೇರಿಯಿಂದ ಉದ್ಯಮಿಗಳಿಗೆ ಫೇಕ್ ಕಾಲ್ ಮಾಡ್ತಿದ್ದ. ಈತನೇ ಕಾಲ್ ಮಾಡಿ ಪಿಎಂ ಕಛೇರಿಯಿಂದ ಮಾತನಾಡುತ್ತಿದ್ದೇವೆ ಎಂದು ನಂಬಿಸುತ್ತಿದ್ದ. ಇದನ್ನ ನಂಬಿ ಸಂತೋಷ್ ಹೇಳಿದಂತೆ ಉದ್ಯಮಿಗಳು ಕೇಳುತ್ತಿದ್ದರು. ಆತನ ಜೊತೆಗೂಡಿ ಕೋಟಿ ಕೋಟಿ ಹಣ ಹೂಡಿಕೆ ಮಾಡುತ್ತಿದ್ದರು. ಹಣ ಹೂಡಿಕೆ ಮಾಡುತ್ತಿದ್ದಂತೆ ಕಂಪನಿಯ ಹಣವನ್ನ ತನ್ನ ಅಕೌಂಟ್ ಗೆ ವರ್ಗಾಯಿಸಿಕೊಂಡು ಆರೋಪಿ ಸಂತೋಷ್ ವಂಚನೆ ಮಾಡುತ್ತಿದ್ದ.
ಇಷ್ಟೇ ಅಲ್ಲದೆ ಮಠ, ಪ್ರಸಿದ್ಧ ದೇವಸ್ಥಾಗಳಲ್ಲೂ ಇದೇ ರೀತಿ ಹೇಳಿಕೊಂಡು ವಂಚನೆ ಮಾಡಿದ್ದಾನೆ. ಸುಳ್ಳನ್ನೇ ಬಂಡವಾಳ ಮಾಡಿಕೊಂಡು ವೇದಿಕೆಗಳಲ್ಲಿ ಸನ್ಮಾನ ಮಾಡಿಸಿಕೊಂಡು ಕೋಟ್ಯಾಧಿಪತಿಯಾಗಿದ್ದ ಸಂತೋಷ್ ಸದ್ಯ ಅರೆಸ್ಟ್ ಆಗಿದ್ದಾರೆ. ಗಣ್ಯರ ಜೊತೆಗಿನ ಫೋಟೋಗಳನ್ನ ನೋಡಿ ನಂಬಿ ಸ್ಟಾರ್ಟ್ ಅಪ್ ಕಂಪನಿಗೆ ಹಣ ಹೂಡುತ್ತಿದ್ದ ಹೂಡಿಕೆದಾರರಿಗೆ ಸಂತೋಷ್ನ ಅಸಲಿ ಮುಖದ ಪರಿಚಯವಾಗಿದೆ. ಆರೋಪಿಯನ್ನ ಬಂಧಿಸಿ ಮಹಾಲಕ್ಷ್ಮಿ ಲೇಔಟ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಹೊಸಕೋಟೆಯಲ್ಲಿ ಓರ್ವ ಮಹಿಳೆ ಸಾವು, 271 ಜನ ಅಸ್ವಸ್ಥ: ಬಯಲಾಯ್ತು ವಿಷ ಪ್ರಸಾದ ಹಿಂದಿನ ಸತ್ಯ
ಕಳ್ಳತನಕ್ಕೆ ಯತ್ನಿಸುತ್ತಿದ್ದಾಗಲೇ ಪೊಲೀಸರಿಗೆ ಕಕ್ರಾಲ್ ಗ್ಯಾಂಗ್ ಲಾಕ್
ತುಮಕೂರು ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ.ರಾಜ್ಯದಲ್ಲಿ ಆಕ್ಟೀವ್ ಆಗಿದ್ದ ಉತ್ತರ ಪ್ರದೇಶದ ದರೋಡೆ ಗ್ಯಾಂಗ್‌ನ್ನ ಬಂಧಿಸಿದ್ದಾರೆ. 8 ಕೆಜಿ ಬೆಳ್ಳಿ ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಗ್ಯಾಸ್ ಕಟರ್ ಬಳಸಿ ಜ್ಯುವೆಲರಿ ಶಾಪ್‌ಗಳನ್ನ ಟಾರ್ಗೆಟ್ ಮಾಡ್ತಿದ್ರು. ಈ ಗ್ಯಾಂಗ್‌ನ ಈ ಆರೋಪಿಗಳೆಲ್ಲ ಉತ್ತರ ಪ್ರದೇಶದ ಕಕ್ರಾಲ್ ಗ್ರಾಮದವರು. ಸ್ಕಾರ್ಪಿಯೋ ಕಾರಿನಲ್ಲಿ ಬರ್ತಿದ್ದ ಈ ಗ್ಯಾಂಗ್ ಪೊಲೀಸರಿಗೆ ಚೆಳ್ಳೆ ಹಣ್ಣು ತಿನ್ನಿಸಿ ಚಿನ್ನಾಭರಣ ಲೂಟಿ ಮಾಡ್ತಿತ್ತು. ಗುಬ್ಬಿ ತಾಲೂಕಿನಲ್ಲಿ ಭವಾನಿ ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿ ಕಳ್ಳತನ ಮಾಡಿದ್ದ ಗ್ಯಾಂಗ್ ಮರುದಿನ ಲಕ್ಷ್ಮೀ ಜುವೆಲ್ಲರಿಗೆ ನುಗ್ಗಿತ್ತು. ಈ ವೇಳೆ ಸ್ಥಳೀಯರು ಕಳ್ಳರನ್ನ ಅಟ್ಟಾಡಿಸಿದ್ರು. ಇದಾದ ಬಳಿಕ ಮೊಬೈಲ್ ಟ್ರೇಸ್ ಮಾಡಿದ ಪೊಲೀಸರು ಕಾರಾವಾರದಲ್ಲಿ ಈ ಗ್ಯಾಂಗ್‌ನ್ನ ಪತ್ತೆ ಹಚ್ಚಿ ಎಡೆಮುರಿ ಕಟ್ಟಿದ್ದಾರೆ. 9 ಬಂಧಿತ ಆರೋಪಿಗಳಿಂದ 8 ಕೆಜಿ ಬೆಳ್ಳಿ ಜಪ್ತಿ ಮಾಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ