ಇ-ಖಾತಾ ಮಾಡಿಕೊಡಲು ಹಣ ಕೇಳ್ತಿದ್ದಾರೆಂದು ವ್ಯಕ್ತಿ ದೂರು: ಅಧಿಕಾರಿಗಳ ಸಸ್ಪೆಂಡ್​ಗೆ ಡಿಕೆ ಶಿವಕುಮಾರ್​ ಸೂಚನೆ

ಬೆಂಗಳೂರು ಕೆ.ಆರ್.ಪುರಂ ವ್ಯಾಪ್ತಿಯ ಟಿ.ಸಿ.ಪಾಳ್ಯದ ವೆಂಗಯ್ಯ ಇಕೋ ಪಾರ್ಕ್​ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್​​ ನಡಿಗೆ ಕಾರ್ಯಕ್ರಮ ಮಾಡಿದರು. ಬಳಿಕ​ ಸಾರ್ವಜನಿಕರ ಸಮಸ್ಯೆ ಆಲಿಸಿದರು. ಈ ವೇಳೆ ಸಾಕಷ್ಟು ಸಾರ್ವಜನಿಕರು ತಮ್ಮ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದು, ಓರ್ವ ವ್ಯಕ್ತಿ ಇ-ಖಾತಾ ಮಾಡಿಕೊಡಲು ಅಧಿಕಾರಿಗಳು ಹಣ ಕೇಳುತ್ತಿರುವ ಬಗ್ಗೆ ದೂರು ನೀಡಿದರು.

ಇ-ಖಾತಾ ಮಾಡಿಕೊಡಲು ಹಣ ಕೇಳ್ತಿದ್ದಾರೆಂದು ವ್ಯಕ್ತಿ ದೂರು: ಅಧಿಕಾರಿಗಳ ಸಸ್ಪೆಂಡ್​ಗೆ ಡಿಕೆ ಶಿವಕುಮಾರ್​ ಸೂಚನೆ
ಸಾರ್ವಜನಿಕರ ಸಮಸ್ಯೆ ಆಲಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​
Updated By: ಗಂಗಾಧರ​ ಬ. ಸಾಬೋಜಿ

Updated on: Oct 18, 2025 | 11:55 AM

ಬೆಂಗಳೂರು, ಅಕ್ಟೋಬರ್​ 18: ರಾಜ್ಯ ಸರ್ಕಾರ ಆಸ್ತಿ ಖರೀದಿ ಮತ್ತು ಮಾರಾಟದಲ್ಲಿ ಪಾರದರ್ಶಕತೆ ತರುವ ಸಲುವಾಗಿ ಮತ್ತು ಮೋಸವನ್ನು ತಡೆಗಟ್ಟುವ ನಿಟ್ಟಿನಲ್ಲಿ ಇ-ಖಾತಾ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿದೆ. ಆದರೆ, ಇದೀಗ ಇದೇ ಇ-ಖಾತಾ (e khata) ಮಾಡಿಕೊಡಲು ಅಧಿಕಾರಿಗಳು ಹಣ ಕೇಳುತ್ತಿದ್ದಾರೆಂದು ಸಾರ್ವಜನಿಕರು ಡಿಸಿಎಂ ಡಿಕೆ ಶಿವಕುಮಾರ್​​ಗೆ (DK Shivakumar) ದೂರು ನೀಡಿದ್ದಾರೆ.

ನಗರದ ಕೆ.ಆರ್.ಪುರಂ ವ್ಯಾಪ್ತಿಯ ಟಿ.ಸಿ.ಪಾಳ್ಯದ ವೆಂಗಯ್ಯ ಇಕೋ ಪಾರ್ಕ್​ನಲ್ಲಿ ನಡಿಗೆ ಕಾರ್ಯಕ್ರಮ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್​​ ಸಾರ್ವಜನಿಕರ ಸಮಸ್ಯೆ ಆಲಿಸಿದರು. ಈ ವೇಳೆ ಓರ್ವ ವ್ಯಕ್ತಿ ಇ-ಖಾತಾ ಮಾಡಿಕೊಡಲು ಅಧಿಕಾರಿಗಳು 15 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಜೆಪಿ ಪಾರ್ಕ್​ನಲ್ಲಿ ಹೈಡ್ರಾಮಾ; ಆರ್​ಎಸ್​ಎಸ್​ ಉಡುಗೆಯಲ್ಲೇ ಡಿಕೆ ಶಿವಕುಮಾರ್ ಮುಂದೆ ಮುನಿರತ್ನ ಪ್ರತಿಭಟನೆ

ಈ ವೇಳೆ ಡಿಕೆ ಶಿವಕುಮಾರ್​​ ಯಾರು ಯಾರು ಅಧಿಕಾರಿಗಳಿದ್ದಾರೆ ಹೆಸರು ಹೇಳಿ ಎಂದರು. ARO ಬಸವರಾಜ ಮತ್ತು ಆಐ ವಿಜನಪುರ ಎಂದು ವ್ಯಕ್ತಿ ಹೇಳಿದ್ದಾರೆ. ಹಣಕ್ಕೆ ಬೇಡಿಕೆ ಇಟ್ಟ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲು ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.

ಇನ್ನು ಈ ವೇಳೆ ಪಾರ್ಕ್​ನಲ್ಲಿ ನಡೆಯುತ್ತಿರುವ ಅಸಭ್ಯ ವರ್ತನೆ ಬಗ್ಗೆ ಮಹಿಳೆಯೊಬ್ಬರು ದೂರು ನೀಡಿದರು. ಶರ್ಟ್ ಬಿಚ್ಚಿಕೊಂಡು ಮಲಗಿರುತ್ತಾರೆ. ಹೀಗಾಗಿ ಸಂಜೆ ವೇಳೆ ಪಾರ್ಕ್​ನಲ್ಲಿ ಹೆಣ್ಮಕ್ಕಳು ಓಡಾಡೋದು, ವಾಕಿಂಗ್​ ಮಾಡುವುದು ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.

ಈ ವೇಳೆ ಹಣ ಕಟ್ಟಿದರೂ ನೀರು ಬರುತ್ತಿಲ್ಲ ಅಂತಾ ಮತ್ತೊಬ್ಬರು ದೂರು ನೀಡಿದ್ದಾರೆ. BWSSB ಅಧಿಕಾರಿ ಯಾರಿದ್ದೀರಯ್ಯ ಎಂದ ಡಿಸಿಎಂ, ಅವರು ಕಂಪ್ಲೇಂಟ್ ಮಾಡುತ್ತಿದ್ದಾರೆ ಬರಕೊಳ್ಳಿ ಎಂದರು. ಸ್ಥಳೀಯ ನಿವಾಸಿ ರಮೇಶ್ ಬಾಬು ರೆಡ್ಡಿ ಎಂಬುವವರು ರಸ್ತೆಗಳು ಕಿತ್ತು ಹಾಳಾಗಿ ಹೋಗಿದೆ. ರಸ್ತೆಯಿಲ್ಲ, ಡ್ರೈನೇಜ್ ಇಲ್ಲ. ಮುಖ್ಯ ರಸ್ತೆಗೆ ಕಾಮಗಾರಿ ಮಾಡಲು ಮನವಿ ಮಾಡಿದರು.

ಇದನ್ನೂ ಓದಿ: ವೇದಿಕೆ ಮೇಲಿದ್ದ ಡಿಕೆ ಶಿವಕುಮಾರ್ ಕೈಯಿಂದ ಮೈಕ್ ಕಿತ್ತುಕೊಂಡು ಮುನಿರತ್ನ ಅನೌನ್ಸ್ ಮಾಡಿದ್ದೇನು?

ಈ ಕೆಆರ್​ ಪುರಂ ಸುತ್ತಮುತ್ತ ದೇಹ ದಹನಕ್ಕೆ ವ್ಯವಸ್ಥೆ ಇಲ್ಲ. ಹೃದಯದ ಸಮಸ್ಯೆ ಆದಾಗ ಜಯದೇವ ಆಸ್ಪತ್ರೆ ಹೋಗಲು ಟ್ರಾಫಿಕ್ ಜಾಮ್ ಆಗುತ್ತೆ. KR ಪುರ ಭಾಗದಲ್ಲಿ ಒಂದು ಜಯದೇವ ಆಸ್ಪತ್ರೆ ನಿರ್ಮಾಣಕ್ಕೆ ಕೆಲ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:53 am, Sat, 18 October 25