ಬೆಂಗಳೂರು, ಜನವರಿ 20: ನಮ್ಮ ಮೆಟ್ರೋ (Namma Metro) ಹಳಿಗೆ ಜಿಗಿದು ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ (Bengaluru) ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಅನಿಲ್ ಕುಮಾರ್ ಪಾಂಡೆ (49) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಮೆಟ್ರೋ ಬರುತ್ತಿದ್ದಂತೆ ಫ್ಲಾಟ್ಫಾರಂಗೆ ಜಿಗಿದ ಅನಿಲ್ ಎರಡು ಹಳಿಗಳ ಮಧ್ಯೆ ಮಲಗಿದ್ದಾನೆ. ಕೂಡಲೇ, ಲೋಕೋ ಪೈಲಟ್ ಮೆಟ್ರೋ ನಿಲ್ಲಿಸಿದ್ದರಿಂದ ಅನಿಲ್ ಬಚಾವ್ ಆಗಿದ್ದಾನೆ. ಬಳಿಕ ಫ್ಲಾಟ್ಫಾರಂನಲ್ಲಿದ್ದ ಸಿಬ್ಬಂದಿ ಅನಿಲ್ ಕುಮಾರ್ ಪಾಂಡೆಯನ್ನು ರಕ್ಷಿಸಿದ್ದಾರೆ. ಬಿಎಂಆರ್ಸಿಎಲ್ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಉತ್ತರ ಪ್ರದೇಶ ಕಾನ್ಪುರ ಮೂಲದ ಅನಿಲ್ ಕುಮಾರ್ ಪಾಂಡೆ, ಜಾಲಹಳ್ಳಿಯಲ್ಲಿ ಸ್ವಂತ ಫ್ಲ್ಯಾಟ್ನಲ್ಲಿ ವಾಸವಾಗಿದ್ದಾರೆ. ಸದ್ಯ ಎಂದಿನಂತೆ ಮೆಟ್ರೋ ರೈಲುಗಳ ಸಂಚಾರ ಆರಂಭವಾಗಿದೆ.
ಇದನ್ನೂ ಓದಿ: ನಮ್ಮ ಮೆಟ್ರೋದ ಲಕ್ಷಾಂತರ ರೂ. ಮೌಲ್ಯದ ವಿದ್ಯುತ್ ಕೇಬಲ್ ಕಳವು!
2024ರಲ್ಲಿ ಇದೇ ರೀತಿಯಾಗಿ ಎರಡು ಘಟನೆಗಳು ಸಂಭವಿಸಿದ್ದವು. ನೇರಳೆ ಮಾರ್ಗದ ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ಟ್ರ್ಯಾಕ್ಗೆ ಹಾರಿ ಬಿಹಾರ ಮೂಲದ ಸಿದ್ದಾರ್ಥ್ (30) ಎಂಬಾತ ಆತ್ಮಹತ್ಯೆಗೆ ಯತ್ನಿಸಿದ್ದನು. ಕೂಡಲೇ ಲೋಕೋ ಪೈಲಟ್ ಮೆಟ್ರೋ ರೈಲು ನಿಲ್ಲಿಸಿದ್ದರಿಂದ ಸಿದ್ದಾರ್ಥ್ ಬಚಾವ್ ಆಗಿದ್ದನು.
ವೈಟ್ಫೀಲ್ಡ್ ಕಡೆಯಿಂದ ಕೆಂಗೇರಿ ಕಡೆಗೆ ಮೆಟ್ರೋ ರೈಲು ತೆರಳುತ್ತಿತ್ತು. ಈ ವೇಳೆ ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ಸಿದ್ದಾಥ್ ಆತ್ಮಹತ್ಯೆಗೆ ಯತ್ನಿಸಿದ್ದಾನು. ಮೆಟ್ರೋ ನಡುವೆ ಸಿಲುಕಿದ ಕಾರಣ ಜೀವಕ್ಕೆ ತೊಂದರೆಯಾಗಿರಲಿಲ್ಲ.
ಇನ್ನು, ದೊಡ್ಡಕಲ್ಲಸಂದ್ರದಲ್ಲೂ ಕೂಡ ಇದೇ ರೀತಿ ಘಟನೆ ನಡೆದಿತ್ತು. ದೊಡ್ಡಕಲ್ಲಸಂದ್ರ ನಿಲ್ದಾಣದಲ್ಲಿ ಮೆಟ್ರೋ ಹಳಿಗೆ ಹಾರಿ 35 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತ ನವೀನ್ ಅರೋರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿತ್ತು. ನವೀನ್ ಅರೋರಗೆ ಪುತ್ರ, ಪುತ್ರಿ ಹಾಗೂ ಪತ್ನಿ ಇದ್ದರು. ಪುತ್ರ ಸ್ವಂತ ಬಟ್ಟೆ ಅಂಗಡಿ ಹೊಂದಿದ್ದನು. ಪುತ್ರಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಕುಟುಂಬಸ್ಥರು ಬಿಳೆಕಹಳ್ಳಿ ದಿವ್ಯಾ ಪಂಚಮಿ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದರು.
Published On - 11:12 am, Mon, 20 January 25