ಮಾದಕ ವಸ್ತು ಕಳ್ಳ ಸಾಗಣೆ ಮಾಡುತ್ತಿದ್ದ ವಿದೇಶಿ ವ್ಯಕ್ತಿಯೊಬ್ಬನನ್ನು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಬಂಧಿತನನ್ನು ಆಫ್ರಿಕಾ ಮೂಲದ ಪ್ರಜೆ ಎಂದು ಗುರುತಿಸಲಾಗಿದ್ದು, ಈತ ಸುಮಾರು 1.3 ಕೆ.ಜಿ ಕೊಕೇನ್ ಮಾತ್ರೆಗಳನ್ನು ಸಾಗಟ ಮಾಡಲು ಯತ್ನಿಸಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಬೆಂಗಳೂರು ಕಂದಾಯ ಗುಪ್ತಚರ ನಿರ್ದೇಶನಾಲಯ ( ಡಿಆರ್‌ಐ ) ತಂಡವು ಮಾದಕ ವಸ್ತು ಕಳ್ಳ ಸಾಗಣೆದಾರನಿಗಾಗಿ ಬಲೆ ಬೀಸಿದ್ದರು. ಅದರಂತೆ ಸುಮಾರು 11 ಕೋಟಿ ರೂ. ಮೌಲ್ಯದ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ವಿದೇಶದಿಂದ ಕೊಕೇನ್ ಸಾಗಾಟ ಮಾಡುತ್ತಿರುವ ಸುಳಿವೊಂದು ಡಿಆರ್ಐಗೆ ಲಭಿಸಿತ್ತು. ಹೀಗಾಗಿ ಪಶ್ಚಿಮ ಏಷ್ಯಾದಿಂದ ಬಂದ ವಿಮಾನದಲ್ಲಿ ಪ್ರಯಾಣಿಕರ ವಿವರಗಳನ್ನು ಪಡೆದು ಪರಿಶೀಲಿಸಲಾಗಿತ್ತು. ಇದೇ ವೇಳೆ ಮೂತ್ರಪಿಂಡದ ಚಿಕಿತ್ಸೆಗಾಗಿ ಬೆಂಗಳೂರಿಗೆ ಬಂದಿರುವುದಾಗಿ 30 ವರ್ಷದ ವ್ಯಕ್ತಿಯೊಬ್ಬ ವೈದ್ಯಕೀಯ ಉದ್ದೇಶಗಳಿಗಾಗಿ ವೀಸಾ ಪಡೆದಿದ್ದನು. ಆತನನ್ನು ತಡೆದು ವಿಚಾರಣೆ ನಡೆಸಲಾಯಿತು. ಈ ವೇಳೆ ಆತನ ನಡುವಳಿಕೆ ಸಂಶಯಕ್ಕೆ ಕಾರಣವಾಗಿತ್ತು. ಆದರೆ ಯಾವುದೇ ರೀತಿಯಲ್ಲೂ ಪರಿಶೀಲಿಸಿದರೂ ಆತನ ಬಳಿ ಮಾದಕ ವಸ್ತುಗಳು ಕಂಡು ಬಂದಿರಲಿಲ್ಲ. ಇದಾಗ್ಯೂ ಸಂಶಯದ ಆಧಾರದ ಮೇಲೆ ಆತನನ್ನು ವೈದ್ಯಕೀಯ ಸ್ಕ್ಯಾನ್‌ಗಾಗಿ ಕರೆದೊಯ್ದಿದ್ದಾರೆ. ಈ ವೇಳೆ ಆತನ ಹೊಟ್ಟೆಯಲ್ಲಿ ಕೊಕೇನ್ ಮಾತ್ರೆಗಳಿರುವುದು ಕಂಡು ಬಂದಿದೆ ಎಂದು ಡಿಆರ್‌ಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳನ್ನು ಮಾತ್ರೆಗಳ ರೂಪದಲ್ಲಿ ಸಾಗಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ಈತ ಕೂಡ ಕೊಕೋನ್ ಅನ್ನು ಮಾತ್ರೆಗಳ ರೂಪಕ್ಕೆ ಪರಿವರ್ತಿಸಿ ನುಂಗಿದ್ದಾನೆ. ಇದರಿಂದ ಅನುಮಾನಗೊಂಡರೂ ಈತನನ್ನು ಪರಿಶೀಲಿಸಿದಾಗ ಯಾವುದೇ ಡ್ರಗ್ಸ್ ಪತ್ತೆಯಾಗಿರಲಿಲ್ಲ. ಇದಾಗ್ಯೂ ಸ್ಕ್ಯಾನ್ ಮಾಡಿದಾಗ ಹೊಟ್ಟೆಯಲ್ಲಿ ಕೊಕೇನ್ ಮಾತ್ರೆಗಳು ಇರುವುದು ಕಂಡು ಬಂದಿದೆ. ಇದೀಗ ಆಸ್ಪತ್ರೆಯಲ್ಲೇ ಕೊಕೇನ್ ಮಾತ್ರೆಗಳನ್ನು ಹೊರ ತೆಗೆಯಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಹಿಂದೆ ಕೂಡ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಗುಪ್ತಾಂಗದಲ್ಲಿ ಸುಮಾರು 8 ಕೋಟಿ ಮೌಲ್ಯದ ಕೊಕೇನ್ ಸಾಗಣೆ ಮಾಡುತ್ತಿದ್ದ ಗ್ವಾಟೆಮಾಲಾ ವಿದೇಶಿ ಮಹಿಳೆಯನ್ನು ಬಂಧಿಸಲಾಗಿತ್ತು. ಇದೀಗ ಮತ್ತೋರ್ವ ಆರೋಪಿ ಕೂಡ ಸಿಕ್ಕಿ ಬಿದ್ದಿದ್ದು, ಈ ತಂಡಗಳ ಜಾಲವನ್ನು ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: 17 ವರ್ಷದ ಹುಡುಗಿಗೆ 35 ವರ್ಷದವನ ಜೊತೆ ಲವ್ವಿ-ಡವ್ವಿ: ಲಾಡ್ಜ್ನಲ್ಲಿ ಇಬ್ಬರನ್ನು ನೋಡಿ ಬೆಚ್ಚಿಬಿದ್ದ ಸಿಬ್ಬಂದಿ
ಇದನ್ನೂ ಓದಿ:Mohammed Siraj: ಸಿ-ರಾಜ…ಗೆಟೌಟ್ ಅಂದವರೇ ಕಟೌಟ್ ನಿಲ್ಲಿಸಿದ್ರು
ಇದನ್ನೂ ಓದಿ: Afghanistan Crisis: ತಾಲಿಬಾನ್ ಗ್ಯಾಂಗ್ ಜೊತೆ ಕಾಣಿಸಿಕೊಂಡ ಅಫ್ಘಾನಿಸ್ತಾನ್ ಕ್ರಿಕೆಟಿಗ
ಇದನ್ನೂ ಓದಿ: ಲಕ್ಷ್ಮಣ್ ಅವರಿಂದ ಆಟೋಗ್ರಾಫ್ ಪಡೆಯುತ್ತಿರುವ ಟೀಮ್ ಇಂಡಿಯಾದ ಈ ಆಟಗಾರ ಯಾರೆಂದು ಗುರುತಿಸಬಲ್ಲಿರಾ?