ಮೇಕೆದಾಟು ಯೋಜನೆ (Mekedatu Water Project) ಆಗ್ರಹಿಸಿ ಕರ್ನಾಟಕದ ಕಾಂಗ್ರೆಸ್ (Karnataka Congress) ನಾಯಕರು ಪಾದಯಾತ್ರೆ ನಡೆಸುತ್ತಿದ್ದಾರೆ. ಕೊರೊನಾದಿಂದ ಪಾದಯಾತ್ರೆ ಅರ್ಧಕ್ಕೆ ನಿಂತಿತ್ತು. ಫೆ.27ರಿಂದ ಮತ್ತೆ ಆರಂಭವಾಗಿದೆ. ಇಂದು ಬೆಂಗಳೂರಿನ ಬಿಟಿಎಂ ಲೇಔಟ್ನ ಜೆಡಿ ಗಾರ್ಡನ್ ಬಳಿಯಿಂದ ಪಾದಯಾತ್ರೆ ಆರಂಭವಾಗಿದೆ. ನಿನ್ನೆ ಜೆಡಿ ಗಾರ್ಡನ್ ಬಳಿ ಕಾಂಗ್ರೆಸ್ನ 3ನೇ ದಿನದ ಮೇಕೆದಾಟು ಪಾದಯಾತ್ರೆ ಅಂತ್ಯಗೊಂಡಿದೆ. ಬೆಳಿಗ್ಗೆ 11.15ಕ್ಕೆ ಪಾದಯಾತ್ರೆ ಆರಂಭವಾಗಿದೆ.
ಕಾಂಗ್ರೆಸ್ ನ ನಾಲ್ಕನೇ ದಿನದ ಪಾದಯಾತ್ರೆ ಅಂತ್ಯಗೊಂಡಿದೆ. ಅರಮನೆ ಮೈದಾನದಲ್ಲಿ ಇವತ್ತಿನ ಪಾದಯಾತ್ರೆ ಮುಕ್ತಾಯವಾಗಿದ್ದು ನಾಳೆ 9 ಗಂಟೆಗೆ ಇಲ್ಲಿಂದಲೇ ಪಾದಯಾತ್ರೆ ಆರಂಭವಾಗಲಿದೆ. ನಾಳೆ ಪಾದಯಾತ್ರೆಯ ಕೊನೆ ದಿನವಾಗಿದ್ದು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಂತಿನ ಸಮಾರಂಭ ನಡೆಯಲಿದೆ.
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆಯನ್ನು ನಾಳೆ ಬೆಳಗ್ಗೆ 9ಕ್ಕೆ ಅರಮನೆ ಮೈದಾನದಿಂದ ಪುನಾರಂಭ ಮಾಡಲು ನಿರ್ಧರಿಸಲಾಗಿದೆ. ಕಾವೇರಿ ಚಿತ್ರಮಂದಿರ, ಸ್ಯಾಂಕಿ ಟ್ಯಾಂಕ್, ಮಲ್ಲೇಶ್ವರಂ 18ನೇ ಕ್ರಾಸ್, ಮಾರ್ಗೋಸಾ ರಸ್ತೆ, ಕೆ.ಸಿ.ಜನರಲ್ ಆಸ್ಪತ್ರೆ, ಶೇಷಾದ್ರಿಪುರಂ ಲಿಂಕ್ ರಸ್ತೆ, ರಾಜೀವ್ ಗಾಂಧಿ ಪ್ರತಿಮೆ, ಪ್ಲಾಟ್ಫಾರಂ ರಸ್ತೆಯಿಂದ ರಾಯಣ್ಣ ಪ್ರತಿಮೆ, ಕಾಟನ್ಪೇಟೆ ಮುಖ್ಯರಸ್ತೆ, ಬ್ರಿಯಾಂಡ್ ಸರ್ಕಲ್, ರಾಯನ್ ಸರ್ಕಲ್, ಈದ್ಗಾ ಮೈದಾನದಿಂದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಾಳೆ ಸಮಾರೋಪ ಸಮಾರಂಭ ನಡೆಯಲಿದೆ.
ಪಾದಯಾತ್ರೆ ವೇಳೆ ಹಲಸೂರು ಲೇಕ್ ಬಳಿ ಹಣ್ಣು, ಜ್ಯೂಸ್, ಎಳೆನೀರಿಗಾಗಿ ಜನ ಮುಗಿಬಿದ್ದ ಘಟನೆ ನಡೆದಿದೆ.
ಪಾದಯಾತ್ರೆ ವೇಳೆ ಟೀ ಕುಡಿದು ಹೆಜ್ಜೆ ಹಾಕಿದ ಡಿಕೆ ಶಿವಕುಮಾರ್. ಹಾಗೂ ಮತ್ತೊಂದೆಡೆ ಪಾದಯಾತ್ರೆ ವೇಳೆ ತಿರುವಳ್ಳುವರ್ ಪ್ರತಿಮೆಗೆ ಸಿದ್ದರಾಮಯ್ಯ ಹೂ ಮಾಲೆ ಹಾಗೂ ಶ್ರೀಗಂಧದ ಹಾರ ಹಾಕಿದ್ರು.
ಕಾಂಗ್ರೆಸ್ ಪಾದಯಾತ್ರೆ ಶಿವಾಜಿನಗರ ವಿಧಾನಸಭಾ ಕ್ಷೇತ್ರಕ್ಕೆ ಎಂಟ್ರಿಯಾಗಿದೆ. ನೂರಾರು ಕಾರ್ಯಕರ್ತೆಯರು ಹಿಜಾಬ್ ಧರಿಸಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ.
ಕಾರ್ಯಕರ್ತರು ಟ್ರಿನಿಟಿ ಸರ್ಕಲ್ ಬಳಿ ಸಿದ್ದರಾಮಯ್ಯನವರಿಗೆ ಖಾಲಿ ಬಿಂದಿಗೆಗಳ ಹಾರ ಹಾಕಿ ಸ್ವಾಗತ ಮಾಡಿದರು. ಈಗ ಪಾದಯಾತ್ರೆ ಟ್ರಿನಿಟಿ ಸರ್ಕಲ್ಗೆ ತಲುಪಿದೆ.
ಪಾದಯಾತ್ರೆ ಮಧ್ಯೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಂಡ್ಯ ಡಿಸಿ ಹಾಗೂ ಎಸ್ಪಿಗೆ ಕರೆ ಮಾಡಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಹರ್ಕರೆ ಗ್ರಾಮದಲ್ಲಿ ರಸ್ತೆಗೆ ಅಧಿಕಾರಿಗಳಿಂದ ತಡೆಗೋಡೆ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿ ಕರೆ ಮಾಡಿದ ಸಿದ್ದರಾಮಯ್ಯ ಆ ಪ್ರಕರಣ ಕೋರ್ಟ್ ನಲ್ಲಿದೆ. ವಿವಾದ ಇತ್ಯರ್ಥ ಆಗುವವರೆಗೂ ಕಾನೂನಿನ ಪ್ರಕಾರ ನಡೆದುಕೊಳ್ಳಿ. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಕೊಡಬೇಡಿ ಅಂತಾ ಕರೆ ಮಾಡಿ ಬುದ್ದಿ ಮಾತು ಹೇಳಿದ್ದಾರೆ.
ವಿವೇಕನಗರದಿಂದ ಮತ್ತೆ ಪಾದಯಾತ್ರೆ ಆರಂಭವಾಗಿದೆ. ವಿವೇಕನಗರ ಸರ್ಕಲ್ ನಲ್ಲಿ ಸಿದ್ದರಾಮಯ್ಯಗೆ ಬೃಹತ್ ಹೂವಿನ ಮಾಲೆ ಹಾಕಿ ಸ್ವಾಗತ ಮಾಡಲಾಗಿದೆ. ಪಾದಯಾತ್ರೆ ಹಿನ್ನಲೆ ವಿವೇಕನಗರ ಸುತ್ತಮುತ್ತ ಫುಲ್ ಟ್ರಾಫಿಕ್ ಜಾಮ್
ಕಾಂಗ್ರೆಸ್ ಪಾದಯಾತ್ರೆ ಬೆಂಗಳೂರಿನ ವಿವೇಕನಗರ ತಲುಪಿದೆ. ಜಸ್ಮಾದೇವಿ ಭವನದ ಬಳಿ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಮತ್ತೆ 4:30 ಕ್ಕೆ ಪಾದಯಾತ್ರೆ ಶುರುವಾಗಲಿದೆ. ನಾಲ್ಕನೇ ದಿನದ ಪಾದಯಾತ್ರೆ ರಾತ್ರಿ ಅರಮನೆ ಮೈದಾನ ತಲುಪಲಿದೆ.
ಉಡುಪಿ: ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ಕೇವಲ ರಾಜಕೀಯ ಪಾದಯಾತ್ರೆ ಎಂದು ಉಡುಪಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಲೇವಡಿ ಮಾಡಿದ್ದಾರೆ. 2013ರಲ್ಲಿ ಕಾಂಗ್ರೆಸ್ ನಮ್ಮ ನಡಿಗೆ ಕೃಷ್ಣೆಯೆಡೆಗೆ ಎಂಬ ಪಾದಯಾತ್ರೆಯನ್ನು ಕೈಗೊಂಡಿತ್ತು. ನಾವು ಅಧಿಕಾರಕ್ಕೆ ಬಂದರೆ ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಪ್ರತಿ ವರ್ಷ ಬಜೆಟ್ ನಲ್ಲಿ 10 ಸಾವಿರ ಕೊಟಿ ಮೀಸಲಿಡುತ್ತೇವೆ ಎಂದಿತ್ತು. ಆದರೆ ಅಧಿಕಾರಕ್ಕೆ ಬಂದ ಮೇಲೆ ಯೋಜನೆಯನ್ನು ಪೂರ್ಣ ಮಾಡಲೇ ಇಲ್ಲ. ಮೇಕೆದಾಟು ಪಾದಯಾತ್ರೆಯ ಮೊದಲ ಹಂತದಲ್ಲಿ ಕಾಂಗ್ರೆಸ್ ಕೊರೊನಾ ಹಬ್ಬಿಸುವಲ್ಲಿ ಯಶಸ್ವಿಯಾಗಿದೆ. ಎರಡನೇ ಹಂತದಲ್ಲಿ ಇದೀಗ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಗೆ ಪಾದಯಾತ್ರೆ ಕಾರಣವಾಗಿದೆ. ಮೇಕೆದಾಟು ವಿಚಾರ ಸುಪ್ರಿಂ ಕೋರ್ಟ್ ನಲ್ಲಿ ಇದೆ. ಕಾಂಗ್ರೆಸ್ ಸದನಕ್ಕೆ ಬಂದು ಈ ಯೋಜನೆಯ ಕುರಿತಾಗಿ ಚರ್ಚೆ ನಡೆಸಲಿ. ಸದನವನ್ನು ಬಹಿಷ್ಕರಿಸಿ ಕಾಂಗ್ರೆಸ್ ಏನನ್ನೂ ಸಾಧಿಸಿಲ್ಲ ಎಂದು ಉಡುಪಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಟೀಕೆ ಮಾಡಿದ್ದಾರೆ.
ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆಯನ್ನು ರಾಜ್ಯ ಬಿಜೆಪಿ ಟ್ವೀಟ್ ಮೂಲಕ ಲೇವಡಿ ಮಾಡಿದೆ. ‘ಮಾನ್ಯ ಡಿ.ಕೆ.ಶಿವಕುಮಾರ್ ಅವರೇ 6 ದಶಕಗಳ ಕಾಲ ಕಾಂಗ್ರೆಸ್ ಪಕ್ಷವನ್ನು ಸಹಿಸಿಕೊಂಡಿದ್ದಕ್ಕೆ ದೇಶ ಇನ್ನೂ ತೊಂದರೆ ಅನುಭವಿಸುತ್ತಿದೆ. ನಿಮ್ಮ ರಾಜಕೀಯ ಲಾಭಕ್ಕೆ ಬೆಂಗಳೂರಿನ ಜನತೆಯನ್ನು ಕಷ್ಟಕ್ಕೆ ದೂಡಿ ಮೂರು ದಿನ ತಡೆದುಕೊಳ್ಳಿ ಎಂದು ಬಿಟ್ಟಿ ಸಲಹೆ ನೀಡುತ್ತಿದ್ದೀರಿ. ಜನತೆ ನಿಮ್ಮನ್ನು ಕ್ಷಮಿಸುವರೇ ಎಂದು ಪ್ರಸ್ನಿಸಿದೆ. ಸರಣಿ ಟ್ವೀಟ್ಗಳನ್ನು ಮಾಡಿ ಬೆಂಗಳೂರು ಜನತೆಯ ಕಷ್ಟ ಪ್ರಸ್ತಾಪಿಸಿ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದೆ.
ಅಡಿಗಡಿಗೊಂದು ತಂಪಾದ ಜ್ಯೂಸ್, ಐಸ್ ಕ್ರೀಮ್, ಎಳನೀರು, ಹಣ್ಣುಗಳು, ಬಾದಾಮಿ ಹಾಲು, ಮಜ್ಜಿಗೆ, ಇದು ಜಾತ್ರೆಯಲ್ಲ, ಇದು ಮೇಕೆದಾಟು ಪಾದಯಾತ್ರೆ!#ಸುಳ್ಳಿನಜಾತ್ರೆ ಗೆ ಬಂದವರಿಗೆಲ್ಲ ಹಣದ ಆಮಿಷ, ಇದು ಬಂಡೆ & ಮಂಡೆ ಒಡೆದ ಹಣವಲ್ಲದೆ ಮತ್ತೇನು?
ವಿಶೇಷವಾಗಿ, ಮೇಕೆದಾಟು – ಎಣ್ಣೆ ಘಾಟು!!!#ಜನವಿರೋಧಿಕಾಂಗ್ರೆಸ್
— BJP Karnataka (@BJP4Karnataka) March 2, 2022
ಉಕ್ರೇನ್, ರಷ್ಯಾ ನಡುವೆ ಯುದ್ಧ ಆಗುತ್ತದೆ ಎಂದು ಗೊತ್ತಿದ್ದರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ಹಾವೇರಿಯ ನವೀನ್ ಸಾವಿಗೆ ಕೇಂದ್ರ ಸರ್ಕಾರವೇ ಕಅರಣ. ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ವಿದ್ಯಾರ್ಥಿಗಳ ಏರ್ಲಿಫ್ಟ್ಗೆ ಮೊದಲೇ ವ್ಯವಸ್ಥೆ ಮಾಡಿದ್ದರೆ ಈ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ ಎಂದು ಅವರು ಹೇಳಿದರು.
ಪಾದಯಾತ್ರೆ ಮಡಿವಾಳ ಮೂಲಕ ಹೊಸುರು ರಸ್ತೆ ತಲುಪಿದೆ. ಫೊರಂ ಮಾಲ್ ಮೂಲಕ ವಿವೇಕನಗರದತ್ತ ಪಾದಯಾತ್ರೆ ಸಾಗುತ್ತಿದೆ.
ಕಾಂಗ್ರೆಸ್ ಮೂರನೇ ದಿನದ ಪಾದಯಾತ್ರೆ ಆರಂಭವಾಗಿದೆ. ಬಿಟಿಎಂ ಲೇಔಟ್ ನಿಂದ ಪಾದಯಾತ್ರೆ ಆರಂಭವಾಗಿದೆ. ಇಂದು ಗಾಯತ್ರಿ ವಿಹಾರಕ್ಕೆ ಪಾದಯಾತ್ರೆ ತಲುಪುತ್ತದೆ. ಆಸ್ಟಿನ್ ಟೌನ್ ವಿವೇಕ ನಗರ, ಟಿವಿ ಟವರ ರೋಡ್ ಮೂಲಕ ಅರಮನೆ ಮೈದಾನಕ್ಕೆ ತಲುಪಲಿದೆ.
ಜನ ಸೇರಿಸೊದು ಕಷ್ಟ ಅಲ್ಲ. ಆದರೆ ಗ್ರಾಮ ಪಂಚಾಯತಿ ಸದಸ್ಯರಿಂದ ಹಿಡಿದು ಎಲ್ಲರಿಗೂ ಈ ಹೋರಾಟ ಅನುಭವ. ಇದು ಪಕ್ಷಾತೀತ ಹೋರಾಟ. ಹೀಗಾಗಿ ನಾನು ರೈತ ಸಂಘಟನೆ ಕಲಾ ಸಂಘಟನೆ, ಸಾಮಾಜಿಕ ಸಂಘಟನೆ ಎಲ್ಲರಿಗೂ ಆಹ್ವಾನ ನೀಡುತ್ತೀನಿ. ಇದನ್ನ ನೋಡಲು ಅನೇಕರು ಬರುತ್ತಿದ್ದಾರೆ. ರಾಜ್ಯದ ಎಲ್ಲಾ ಕಾರ್ಯಕರ್ತರಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಬನ್ನಿ ಎಂದು ಮನವಿ ಮಾಡುತ್ತೇನೆ ಅಂತ ಡಿಕೆ ಶಿವಕುಮಾರ್ ಹೇಳಿದರು.
ನಾಳೆ ಪಾದಯಾತ್ರೆ ಅಂತಿಮವಾಗಲಿದೆ. 3ಕ್ಕೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮುಗಿಯಲಿದೆ. ಸರ್ವ ಧರ್ಮ, ಸರ್ವರಿಗೂ ಹೋರಾಟಕ್ಕೆ ಅವಕಾಶವಿದೆ. ಪಾದಯಾತ್ರೆಯಲ್ಲಿ ಎಲ್ಲರೂ ಸೇರಿದ್ದಾರೆ. ನಾಳೆಯ ಹೋರಾಟ ಇತಿಹಾಸ ಸೇರಲಿದೆ ಅಂತ ಕೆಪಿಸಿಸಿ ಅಧ್ಯಕ್ಷಯ ಡಿಕೆ ಶಿವಕುಮಾರ್ ಹೇಳಿದರು.
ಉಕ್ರೇನ್‌ನಲ್ಲಿ ಕನ್ನಡಿಗನ ಸಾವಿಗೆ ಕೇಂದ್ರ ಸರ್ಕಾರ ಹೊಣೆ ಅಂತ ಬೆಂಗಳೂರಿನಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಆರೋಪ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸುಮ್ನೆ ಪ್ರಚಾರವನ್ನು ಬಿಡಬೇಕು. ಅವರು ಈಗಲಾದರೂ ಎಚ್ಚೆತ್ತುಕೊಂಡು ಕೆಲಸ ಮಾಡಬೇಕು ಅಂತ ಹೇಳಿದರು.
ಪ್ರಧಾನಿ ಮೋದಿಯವರು ಪ್ರಚಾರ ಪ್ರಿಯರು ಅಂತ ರಾಮಲಿಂಗಾರೆಡ್ಡಿ ಹೇಳಿದರು. ನಮ್ಮ ಭಾರತೀಯರು ಉಕ್ರೇನ್ ಸಮಸ್ಯೆ ಅನುಭವಿಸುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೆ ನಮ್ಮ ವಿದ್ಯಾರ್ಥಿಗಳ ಸಮಸ್ಯೆ ಗೊತ್ತಾಗುತ್ತಿಲ್ಲ. ಇದುವರೆಗೂ 500 ವಿದ್ಯಾರ್ಥಿಗಳು ಮಾತ್ರ ಕರೆದು ತಂದಿದ್ದಾರೆ. ಎಲ್ಲ ವಿದ್ಯಾರ್ಥಿಗಳನ್ನ ಏರ್ ಲಿಫ್ಟ್ ಮಾಡುತ್ತೇವೆ ಎಂದು ಹೇಳಿ ಸುಮ್ಮನೆ ಆಗಿದ್ದಾರೆ. ನವೀನ್ ಸಾವಿಗೆ ಕಾರಣ ಯಾರು? 4,000 ಸಾವಿರ ವಿದ್ಯಾರ್ಥಿಗಳು ಉಕ್ರೇನ್ನಲ್ಲಿದ್ದಾರೆ. ಆದರೂ ವಿದ್ಯಾರ್ಥಿಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಳಜಿ ಇಲ್ಲ. ಕರ್ನಾಟಕ ವಿದ್ಯಾರ್ಥಿಗಳನ್ನ ಕರೆತರುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಆಸಕ್ತಿ ಇಲ್ಲದಂತೆ ಕಾಣಿಸುತ್ತಿದೆ. ಕೇಂದ್ರ ಸರ್ಕಾರ ಕಣ್ಮುಂಚಿ ಕುಳಿತಿದೆ. ಉತ್ತರ ಪ್ರದೇಶದ ಚುನಾವಣೆಯಲ್ಲಿ ಎಲ್ಲರೂ ಬಿಜಿಯಾಗಿದ್ದಾರೆ. ಈ ಬಗ್ಗೆ ಮೊದಲೇ ಗುಪ್ತಚರ ಇಲಾಖೆಗೆ ಮಾಹಿತಿ ಇರಲಿಲ್ವಾ? ಅಂತ ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.
ಕೇಸ್ ಹಾಕೋದಾದರೆ ಎಲ್ಲರ ಮೇಲೂ ಹಾಕಲಿ ಎಂದು ಮಾತನಾಡಿದ ರಾಮಲಿಂಗ ರೆಡ್ಡಿ, ಬಿಜೆಪಿಗೆ ವಿಶೇಷ ಕಾನೂನು ಇಲ್ಲ. ಜನರಲ್ಲಿ ಮನವಿ ಮಾಡ್ತೇನೆ. ಬೆಂಗಳೂರಿಗೆ ನೀರಿನ ಅವಶ್ಯಕತೆ ಇದೆ. ಎರಡು ದಿನ ಟ್ರಾಫಿಕ್ ಸಮಸ್ಯೆ ಆಗುತ್ತೆ. ನಮ್ಮ ಈ ಹೋರಾಟದಿಂದ ನಗರಕ್ಕೆ ನೀರು ಸಿಗುತ್ತೆ. ನಮ್ಮ ಈ ತಪ್ಪು ಅಂದರೆ ನಿಮಗಾಗಿ ಮಾಡುತ್ತಿರುವ ಈ ತಪ್ಪನ್ನ ಜನರು ಹೊಟ್ಟೆಗೆ ಹಾಕೋಬೇಕು ಎಂದರು.
ಬಿಜೆಪಿಗೆ ನಮ್ಮ ಪಾದಯಾತ್ರೆ ಸಹಿಸುತ್ತಾ ಇಲ್ಲ. ಇದು ಡಬಲ್ ಇಂಜಿನ್ ಸರ್ಕಾರ ಅಲ್ಲ ಡಬ್ಬಾ ಇಂಜಿನ್ ಸರ್ಕಾರ. ಎರಡು ಕೆಟ್ಟು ಹೋಗಿದೆ. ಬಿಜೆಪಿಯವರು ಉತ್ತರ ಕುಮಾರರು. ಇವರು ಪೇಪರ್ ಟೈಗರ್. 25 ಸಂಸದರ ದಂಡೇ ಇದೆ. ಅವರನ್ನ ಕರೆದುಕೊಂಡು ಕೇಂದ್ರಕ್ಕೆ ಹೋಗಿ ಮೇಕೆದಾಟು ಯೋಜನೆಗೆ ಪರಿಸರ ಇಲಾಖೆ ಎನ್ಓಸಿ ಕೊಡಿಸಲಿ. ಪಾದಯಾತ್ರೆ ತಡೆಯಲು ಭಾರಿ ಪ್ರಯತ್ನ ಮಾಡ್ತಾ ಇದಾರೆ. ಸಿಎಂ ಮೊನ್ನೆ ಬೊಮ್ಮನಹಳ್ಳಿಗೆ ಬಂದಿದ್ರು ಅಲ್ಲಿ ನೂರಾರು ಫ್ಲೆಕ್ಸ್ ಹಾಕಿದ್ರು. ಮುನಿರತ್ನ ವಿ ಸೋಮಣ್ಣ, ಗೋಪಾಲಯ್ಯ ಎಲ್ಲಾ ಫ್ಲೆಕ್ಸ್ ಹಾಕಿದ್ರು ಅವರವರ ಕಾರ್ಯಕ್ರಮಕ್ಕೆ ಮೊನ್ನೆ ಸಿಎಂ ಕಾರ್ಯಕ್ರಮಕ್ಕೆ ಸಾವಿರಾರು ಫ್ಲೆಕ್ಸ್ ಹಾಕಿದಾರಲ್ಲ. ನಾವೇನು ಫ್ಲೆಕ್ಸ್ ಹಾಕಿಲ್ಲ. ಸಂಘ ಸಂಸ್ಥೆ ಹಾಕಿದಾರೆ ಅಂತ ಹೇಳಿದರು.
ಬೆಳಿಗ್ಗೆ 9.30ಕ್ಕೆ ಮೇಕೆದಾಟು ಪಾದಯಾತ್ರೆ ಶುರುವಾಗಲಿದೆ.
ಕಾಂಗ್ರೆಸ್ ನಾಯಕರು ಪಾದಯಾತ್ರೆ ಇಂದು ಬಿಟಿಎಂ ಲೇಔಟ್ನಿಂದ ಆರಂಭಬಾಗಲಿದೆ.
Published On - 8:36 am, Wed, 2 March 22