cylinder blast: ಯಾದಗಿರಿಯಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ಮೃತರ ಸಂಖ್ಯೆ 7ಕ್ಕೆ ಏರಿಕೆ
ಸೀಮಂತ ಕಾರ್ಯಕ್ರಮದಲ್ಲಿ ಸೂತಕದ ಛಾಯೆ. ಚಿಕಿತ್ಸೆ ಫಲಕಾರಿಯಾಗದೆ ಇಂದು ಇಬ್ಬರು ವ್ಯಕ್ತಿಗಳ ಸಾವು. ಒಟ್ಟು 7ಕ್ಕೇರಿದ ಮೃತರ ಸಂಖ್ಯೆ.
ಯಾದಗಿರಿ: ಅನಿಲ ಸೋರಿಕೆಯಿಂದ ಸಿಲಿಂಡರ್ ಸ್ಪೋಟಗೊಂಡು ಸೀಮಂತ ಕಾರ್ಯಕ್ರಮದಲ್ಲಿ ಸೂತಕದ ಛಾಯೆ ಆವರಿಸಿತ್ತು. ಕೆಲವು ದಿನಗಳ ಹಿಂದೆ ಶಹಾಪುರ ತಾಲೂಕಿನ ದೋರನಹಳ್ಳಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಸುಮಾರು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಇಂದು ಮೃತರ ಸಂಖ್ಯೆ 7ಕ್ಕೇ ಏರಿಕೆಯಾಗಿದೆ. ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಭೀಮರಾಯ (78) ಹಾಗೂ ವೀರಬಸಪ್ಪ (28) ಎನ್ನುವವರು ಸತತ ಐದು ದಿನಗಳ ಕಾಲ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇನ್ನು 17 ಜನ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದು, ಶಹಾಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಕ್ರೈಂ ಸ್ಕ್ವಾಡ್ ಎಂದು ಹೇಳಿ ಸ್ವಾಗೆ ನುಗ್ಗುತ್ತಿದ್ದವರು ಅರೆಸ್ಟ್
ಬೆಂಗಳೂರು: ಕ್ರೈಮ್ ಸ್ಕ್ವಾಡ್ನವರು ಎಂದು ಸ್ಪಾಗೆ ನುಗ್ಗಿ ಹಣ ವಸೂಲಿ ಮಾಡಿದ್ದವರನ್ನು ಅರೆಸ್ಟ್ ಮಾಡಲಾಗಿದೆ. ಕೆ.ಜಿ.ಹಳ್ಳಿ, ಹೆಣ್ಣೂರು, ಗೋವಿಂದಪುರ ಪೊಲೀಸ್ ಠಾಣೆ ಹೋಮ್ ಗಾರ್ಡ್‌ಗಳು ಸೇರಿ ಐವರು ಆರೋಪಿಗಳನ್ನು ಬಂಧನವಾಗಿದೆ. ಕಲೀಂ, ಸಂಪಂಗಿರಾಮ್, ಆನಂದ್‌ರಾಜ್, ವಿನಯ್‌ಕುಮಾರ್, ಆಸೀಫ್ ಖಾನ್ ಬಂಧಿತ ಆರೋಪಿಗಳಾಗಿದ್ದು, ನಾವು ಪೊಲೀಸರು, ಕ್ರೈಮ್ ಸ್ಕ್ವಾಡ್ ಎಂದು ಸ್ಪಾಗೆ ಹೋಗುತ್ತಿದ್ದರು. ನಂತರ ನಾವು ಸಿಬ್ಬಂದಿಗಳು ಕೆಳಗೆ ಆಫೀಸರ್ ನಿಂತಿದ್ದಾರೆ. ಕೇಸ್ ಮಾಡುತ್ತವೆ ಎಂದು ಹೆದರಿಸುತ್ತಿದ್ದರು. ಬಳಿಕ ಹಣಕ್ಕೆ ಡೆಮಾಡ್ ಮಾಡಿ ವಸೂಲಿ ಮಾಡುತ್ತಿದ್ದರು. ಸ್ಪಾ ಒಂದರಲ್ಲಿ ಒಂದು ಲಕ್ಷ ಅರವತ್ತು ಸಾವಿರ ಹಣ ವಸೂಲಿ ಮಾಡಿದ್ದು, ಹೆಚ್ಚಿನ ಹಣ ನೀಡುವಂತೆ ಬೇದರಿಕೆ ಹಾಕುತ್ತಿದ್ದರು. ಈ ವೇಳೆ ರಾಮಮೂರ್ತಿ ಎನ್ನುವವರು ನಗರ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಅನ್ವಯ ಅರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆಸ್ತಿ ವಿಚಾರಕ್ಕೆ ಶೂಟೌಟ್:
ಕೊಡಗು: ನಗರದಲ್ಲಿ ಶೂಟೌಟ್ಗೆ ವ್ಯಕ್ತಿವೊರ್ವ ಬಲಿಯಾಗಿರುವಂತಹ ಘಟನೆ ನಡೆದಿದೆ. ಸೋಮವಾರಪೇಟೆ ತಾಲೂಕಿನ ಅಂದಗೋವೆ ಗ್ರಾಮದಲ್ಲಿ ಆಸ್ತಿ ಕಲಹ ಹಿನ್ನೆಲೆ ವ್ಯಕ್ತಯನ್ನ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಧರ್ಮ (55) ಎನ್ನುವವರು ಬಲಿಯಾಗಿದ್ದು, ಶಿವಕುಮಾರ್ ಹತ್ಯೆ ಮಾಡಿದ್ದಾನೆ. ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ:
ದ್ವಿತೀಯ ಪಿಯು ಪರೀಕ್ಷೆ ವೇಳೆಯೇ JEE ಮುಖ್ಯ ಪರೀಕ್ಷೆ! ಸಂಕಷ್ಟಕ್ಕೆ ಸಿಲುಕಿದ ಕರ್ನಾಟಕ ವಿದ್ಯಾರ್ಥಿಗಳು
ರಷ್ಯಾ ಮುಂದಿನ ದಿನಗಳಲ್ಲಿ ಜಗತ್ತನ್ನೇ ಆಳಲಿದೆ: ರಷ್ಯಾ – ಉಕ್ರೇನ್ ಯುದ್ಧದ ಬಗ್ಗೆ ಬಾಬಾ ವಾಂಗಾ ಭವಿಷ್ಯ