ಕೆಲಸದ ಒತ್ತಡದಿಂದಾಗಿ ಮೆಂಟಲ್ ಹೆಲ್ತ್ ಸಮಸ್ಯೆ; ಸಾವಿನ ಸಂಖ್ಯೆಯಲ್ಲೂ ಹೆಚ್ಚಳ
ದಿನದಿಂದ ದಿನಕ್ಕೆ ಬದಲಾಗುತ್ತಿರುವ ಜೀವನ ಶೈಲಿ. ಶೈಲಿಗೆ ತಕ್ಕಂತೆ ಬದಲಾಗುತ್ತಿರುವ ಒತ್ತಡದಿಂದ ಹೊರ ಬರಲಾಗದೇ ಮೆಂಟಲ್ ಹೆಲ್ತ್ ಸಮಸ್ಯೆಗಳಿಂದ ಬಳಲುವವರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಡೆತ್ ಪ್ರಕರಣಗಳು ಕೂಡ ಜಾಸ್ತಿಯಾಗಿವೆ.ಆ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ಓದಿ
ಬೆಂಗಳೂರು,ಮೇ.15: ಮಹಾಮಾರಿ ಕೊರೊನಾದಿಂದ (Coronavirus) ಆದಂತಹ ಸಮಸ್ಯೆಗಳು ಒಂದಾ ಎರಡಾ. ಒಮ್ಮೆ ನೆನೆಸಿಕೊಂಡ್ರೆ ಸಾಕು ಎಂಥವರು ಬೆಚ್ಚಿ ಬೀಳ್ತಾರೆ. ಈ ಸೋಂಕು ಬಂದು ಹೋಗಿ ಎರಡು ವರ್ಷಗಳು ಕಳೆಯುವುದಕ್ಕೆ ಬಂದ್ರೂ ಆದರಿಂದ ಆಗುತ್ತಿರುವ ಸೈಡ್ ಎಫೆಕ್ಟ್ ಮಾತ್ರ ಕಡಿಮೆಯಾಗುವ ಹಾಗೇ ಕಾಣುಸ್ತಾ ಇಲ್ಲ. ಯಾಕಂದ್ರೆ ಕೋವಿಡ್ ಸಮಯದಲ್ಲಿ ಸಾಕಷ್ಟು ಕಂಪನಿಗಳು ನಷ್ಟ ಅನುಭವಿಸುತ್ತಿವೆ. ಎಷ್ಟೋ ಜನರು ಆರ್ಥಿಕ ಸಮಸ್ಯೆಯಿಂದಾಗಿ ಇವತ್ತಿಗೂ ನೆರಳುತ್ತಿದ್ದಾರೆ. ಇದರ ಪರಿಣಾಮ ಜನರ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತಿದ್ದು, ಅದರಲ್ಲಿ ಮೆಂಟಲ್ ಹೆಲ್ತ್ ಸಮಸ್ಯೆಗಳು ಹೆಚ್ಚಾಗುತ್ತಿವೆ.
ದಿನದಿಂದ ದಿನಕ್ಕೆ ಕೆಲಸದ ಒತ್ತಡಗಳು ಹೆಚ್ಚಾಗುತ್ತಿದ್ದು, ಇದರ ಪರಿಣಾಮ ಆರೋಗ್ಯದ ಮೇಲೆ ಬೀರುತ್ತಿದೆ. ಹೀಗಾಗಿ ಮೆಂಟಲ್ ಹೆಲ್ತ್ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ನಗರದ ನಿಮ್ಯಾನ್ಸ್ ಆಸ್ಪತ್ರೆಯಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ, ಈ ವರ್ಷವು ಮೆಂಟಲ್ ಹೆಲ್ತ್ ಸಮಸ್ಯೆ ಹೆಚ್ಚಾಗಿದೆ. ಆರೋಗ್ಯದ ಮೇಲೆ ಹೆಚ್ಚು ನಿಗಾ ಇಡೀ ಅಂತ ವೈಧ್ಯರು ಸಲಹೆ ನೀಡ್ತಿದ್ದಾರೆ. ಈ ಆತಂಕ, ಅನಾವಶ್ಯಕ ಕೋಪ, ನಿದ್ರಾ ಹೀನಾತೆ, ಟೆಕ್ಷನ್, ಜಿಗುಪ್ಸೆ, ಕುಟುಂಬ ಕಲಹ, ಲವ್ ಬ್ರೇಕಪ್ಸ್, ಮಾನಸಿಕ ಸಮಸ್ಯೆ ಹಾಗೂ ಖಿನ್ನತೆಯಂತಹ ಸಮಸ್ಯೆಗಳು ನಮ್ಮ ಮನೆಯವರಲ್ಲಿ ಅಥವ ಸ್ನೇಹಿತರಲ್ಲಿ ಕಂಡುಬರುತ್ತಿದ್ರೆ ಅವರನ್ನ ಒಮ್ಮೆ ವೈಧ್ಯರಿಗೆ ತೋರಿಸುವುದು ಒಳಿತು ಅಂತ ವೈಧ್ಯರು ಸಲಹೆ ನೀಡುತ್ತಿದ್ದಾರೆ.
ಇದನ್ನೂ ಓದಿ: ಮಕ್ಕಳ ಶಾಲೆ ದಾಖಲಾತಿಗೆ ವಯೋಮಿತಿ ನಿಗದಿ; ಫೇಕ್ ಬರ್ಥ್ ಸರ್ಟಿಫಿಕೇಟ್ ಮೊರೆ ಹೋದ ಪೋಷಕರು
ಯಾಕಂದ್ರೆ ಮೆಂಟಲ್ ಹೆಲ್ತ್ ಸಮಸ್ಯೆಗಳು ಮಹಿಳೆಯರು, ಪುರುಷರು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಸಾಮಾಜಿಕವಾಗಿ, ಆರ್ಥಿವಾಗಿ ಸಮಸ್ಯೆಗಳನ್ನ ಬಗೆಹರಿಸುವಲ್ಲಿ ಜನರು ಗೊಂದಲಕ್ಕೆ ಇಡಾಗುತ್ತಿದ್ದಾರೆ. ಇದರಿಂದ ಒತ್ತಡಕ್ಕೆ ಒಳಗಾಗಿ ಮೆಂಟಲ್ ಹೆಲ್ತ್ ಸಮಸ್ಯೆಗಳು ಹೆಚ್ಚಾಗುತ್ತಿವೆ. ಹಾಗಾದ್ರೆ ಮೆಂಟಲ್ ಹೆಲ್ತ್ ಸಮಸ್ಯೆಗಳು ಬಂದಾಗ ಏನೆಲ್ಲ ಲಕ್ಷಣಗಳು ಕಂಡುಬರುತ್ತವೆ ಎಂಬುವುದನ್ನು ಇಲ್ಲಿ ತಿಳಿಯಿರಿ.
- ನಿದ್ರೆ ಮಾಡದೇ ಇರುವುದು
- ಊಟ ಮಾಡದೇ ಇರುವುದು
- ಅಥವ ಹೆಚ್ಚು ಊಟ ಮಾಡುವುದು
- ಮಹಿಳೆಯರಲ್ಲಿ ಹಾರ್ಮೋನ್ ಇನ್ ಬ್ಯಾಲೆನ್ಸ್ ಆಗುವುದು
- ಹವಾಮಾನ ವೈಪರಿತ್ಯದಿಂದ ಹೆಚ್ಚು ಕೋಪ ಬರುವುದು
- ಜನರೊಂದಿಗೆ ಹೆಚ್ಚು ಸೇರದೇ ಇರುವುದು
- ಹೆಚ್ಚು ಯೋಚನೆ ಮಾಡುವುದು
- ಸಾವಿನ ಬಗ್ಗೆ ಮಾತಾಡುವುದು
- ಇಂತಹ ಲಕ್ಷಣಗಳು ಕಂಡುಬಂದ್ರೆ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು ಅಂತ ಡಾಕ್ಟರ್ ಸಲಹೆ ನೀಡ್ತಿದ್ದಾರೆ.
ಇನ್ನು, ಇನ್ನು ಇಂತಹ ಮೆಂಟಲ್ ಹೆಲ್ತ್ ಸಮಸ್ಯೆಗಳಿಗೆ ಏನೆಲ್ಲ ಕ್ರಮ ತೆಗೆದುಕೊಳ್ಳಬಹುದು ಎಂದು ಇಲ್ಲಿ ತಿಳಿಯಿರಿ.
- ಯೋಗ ಮಾಡುವುದು
- ಕುಟುಂಬದೊಂದಿಗೆ ಹೆಚ್ಚು ಬೆರೆಯುವುದು
- ಆತ್ಮ ವಿಶ್ವಾಸ ಹೆಚ್ಚು ರೂಢಿಸಿಕೊಳ್ಳುವುದು
- ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡುವುದು
- ಲಕ್ಷಣಗಳಿದ್ರೆ ಆಗಾಗ ವೈದ್ಯರನ್ನ ಸಂಪರ್ಕಿಸುವುದು
- ಕ್ರೀಡೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದು
ಒಟ್ನಲ್ಲಿ, ನಗರದ ನಿಮಾನ್ಸ್ ಆಸ್ಪತ್ರೆಗೆ ಪ್ರತಿವರ್ಷ 6 ಲಕ್ಷಕ್ಕೂ ಹೆಚ್ಚು ರೋಗಿಗಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬಂದಿದ್ದಾರೆ. ಆದಷ್ಟು ಆರೋಗ್ಯದ ಕಡೆ ಗಮನ ಕೊಡಿ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ