ಚುನಾವಣಾ ಪ್ರಚಾರದ ವೇಳೆ ಸಚಿವ ಜಮೀರ್ ಹೇಳಿಕೆ; ಸದನ, ಸಭಾಧ್ಯಕ್ಷರ ಗೌರವ ಉಳಿಯಬೇಕಿದ್ರೆ ಕ್ಷಮೆ ಕೇಳಲಿ; ಹೆಚ್​​ಡಿಕೆ

ಸಚಿವ ಜಮೀರ್ ಅಹಮ್ಮದ್​ ಖಾನ್ (Zameer Ahmad Khan)​ ಹೇಳಿಕೆಗೆ ‘ ಸದನ ಹಾಗೂ ಸಭಾಧ್ಯಕ್ಷರ ಗೌರವ ಉಳಿಯಬೇಕಿದ್ರೆ ಕ್ಷಮೆ ಕೇಳಲಿ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ(HD Kumaraswamy) ಅವರು ವಾಗ್ದಾಳಿ ನಡೆಸಿದ್ದು, ಇಂತಹ ಚೈಲ್ಡಿಷ್​ಗಳನ್ನು ಇಟ್ಟುಕೊಂಡು ಸದನದ ಗೌರವ ಉಳಿಸಲು ಆಗುತ್ತಾ ಎಂದು ಕಿಡಿಕಾರಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಸಚಿವ ಜಮೀರ್ ಹೇಳಿಕೆ; ಸದನ, ಸಭಾಧ್ಯಕ್ಷರ ಗೌರವ ಉಳಿಯಬೇಕಿದ್ರೆ ಕ್ಷಮೆ ಕೇಳಲಿ; ಹೆಚ್​​ಡಿಕೆ
ಸಚಿವ ಜಮೀರ್​ ಅಹಮ್ಮದ್​ ಹೇಳಿಕೆಗೆ ಹೆಚ್​ಡಿ ಕುಮಾರಸ್ವಾಮಿ ಗರಂ
Edited By: ಕಿರಣ್ ಹನುಮಂತ್​ ಮಾದಾರ್

Updated on: Nov 17, 2023 | 4:00 PM

ಬೆಂಗಳೂರು, ನ.17: ತೆಲಂಗಾಣ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಕರ್ನಾಟಕದ ವಸತಿ ಸಚಿವ ಜಮೀರ್ ಅಹಮ್ಮದ್​ ಖಾನ್ (Zameer Ahmad Khan)​ ಹೇಳಿಕೆಗೆ ‘ ಸದನ ಹಾಗೂ ಸಭಾಧ್ಯಕ್ಷರ ಗೌರವ ಉಳಿಯಬೇಕಿದ್ರೆ ಕ್ಷಮೆ ಕೇಳಲಿ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ(HD Kumaraswamy) ಅವರು ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿ(Bengaluru)ನಲ್ಲಿ ಮಾತನಾಡಿದ ಅವರು ‘ ಖಾದರ್​ ಕಾಂಗ್ರೆಸ್ ಸ್ಪೀಕರ್ ಅಲ್ಲ, 224 ಶಾಸಕರಿಗೆ ರಕ್ಷಣೆ ಕೊಡುವವರು. ಅವರನ್ನು ಒಂದು ಧರ್ಮದ ಸೋಂಕಿಗೆ ಒಳಪಡಿಸುವುದು ಸರಿಯಲ್ಲ. ನಾಳೆ ನಿಮ್ಮ ಸಚಿವರು ಹೀಗೆ ಹೇಳಿದ್ದಾರೆ ಎಂದು ಬಿಜೆಪಿಯ 66 ಜನ ಸ್ಪೀಕರ್​ಗೆ ನಾವು ಗೌರವ ಕೊಡೊಲ್ಲ ಅಂದರೆ ಏನು ಮಾಡ್ತೀರಾ?, ಇಂತಹ ಚೈಲ್ಡಿಷ್​ಗಳನ್ನು ಇಟ್ಟುಕೊಂಡು ಸದನದ ಗೌರವ ಉಳಿಸಲು ಆಗುತ್ತಾ ಎಂದು ಕಿಡಿಕಾರಿದ್ದಾರೆ.

ಸಚಿವ ಜಮೀರ್ ಅಹಮ್ಮದ್​ ಖಾನ್ ಹೇಳಿದ್ದೇನು?

ತೆಲಂಗಾಣ ಚುನಾವಣಾ ಅಖಾಡಕ್ಕೆ ಸಚಿವ ಜಮೀರ್ ಅಹಮ್ಮದ್ ಖಾನ್ ತೆರಳಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿ ಕ್ಯಾಂಪೇನ್​ನಲ್ಲಿ ತೊಡಗಿರುವ ಅವರು ‘ಇಂದು ಹೈದರಾಬಾದ್​​ನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ರಾಜ್ಯ ಕಾಂಗ್ರೆಸ್​​ನಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಿರುವ ಸ್ಥಾನಮಾನಗಳನ್ನು ಒತ್ತಿ ಒತ್ತಿ ಹೇಳಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್​ನಿಂದ ಬರೊಬ್ಬರಿ 9 ಮುಸ್ಲಿಮರು ಗೆದ್ದಿದ್ದಾರೆ ಎಂದರು.

ಇದನ್ನೂ ಓದಿ: ಬಿಜೆಪಿ ಶಾಸಕರು ಕೂಡ ನಮಸ್ಕಾರ ಸ್ಪೀಕರ್ ಸಾಬ್ ಎನ್ನುತ್ತಾರೆ: ತೆಲಂಗಾಣದಲ್ಲಿ ಜಮೀರ್ ಅಬ್ಬರದ ಭಾಷಣ

ಅಷ್ಟೇ ಅಲ್ಲ, ಗೆದ್ದಿರುವ 9 ಮುಸ್ಲಿಂ ಶಾಸಕರ ಪೈಕಿ 5 ಶಾಸಕರಿಗೆ ಅಧಿಕಾರ ನೀಡಿದೆ. ನನ್ನನ್ನು ಸಚಿವನಾಗಿ ಕೂಡ ಮಾಡಿದೆ. ಅಲ್ಲದೇ ರಹೀಂ ಖಾನ್​​ ಸಹ ಮಂತ್ರಿ ಆಗಿದ್ದಾರೆ. ಸಲೀಂ ಅಹಮದ್​​​ ಅವರನ್ನು​​​ ಮುಖ್ಯ ಸಚೇತಕರಾಗಿ ಮಾಡಲಾಗಿದೆ. ನಜೀರ್ ಅಹಮದ್​​​​​​​​​ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದಾರೆ. ಇನ್ನು ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಯಾವ ಮುಸ್ಲಿಂ ಸ್ಪೀಕರ್ ಆಗಿರಲಿಲ್ಲ. ಮೊದಲ ಬಾರಿಗೆ ಯು.ಟಿ ಖಾದರ್​ ಅವರನ್ನು ವಿಧಾನಸಭಾ ಸ್ಪೀಕರ್​​ ಆಗಿ ನೇಮಿಸಲಾಗಿದೆ. ಈಗ ಬಿಜೆಪಿ ಶಾಸಕರು ಕೂಡ ನಮಸ್ಕಾರ ಸ್ಪೀಕರ್ ಸಾಬ್ ಎನ್ನುತ್ತಾರೆ ಎಂದು ತೆಲಂಗಾಣ ಚುನಾವಣಾ ಪ್ರಚಾರದಲ್ಲಿ ಜಮೀರ್ ಅಹಮ್ಮದ್​ ಖಾನ್​ ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:00 pm, Fri, 17 November 23

Prasanna Gaonkar

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Follow Us