ಸಿಲಿಕಾನ್ ಸಿಟಿಯಲ್ಲಿ ಕಿಡಿಗೇಡಿಗಳ ಅಟ್ಟಹಾಸ; ಬೈಕ್​ನಲ್ಲಿ ಬಂದವರಿಂದ ಮನೆ ಮುಂದೆ ನಿಲ್ಲಿಸಿದ್ದ 17 ಕಾರಿನ ಗಾಜುಗಳು ಪುಡಿ ಪುಡಿ

| Updated By: ಆಯೇಷಾ ಬಾನು

Updated on: Sep 24, 2021 | 12:30 PM

ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಮನೆ ಮುಂದೆ ನಿಂತಿದ್ದ ಕಾರ್ಗಳ ಗ್ಲಾಸ್ ಒಡೆದು ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ. ಬೈಕ್ ಮೇಲೆ ಬಂದ ಮೂವರು ಕಿಡಿಗೇಡಿಗಳು 17 ಕ್ಕೂ ಅಧಿಕ ಕಾರ್ಗಳ ಫ್ರೇಂಟ್ ಗ್ಲಾಸ್ ಹಾಗೂ ಸೈಡ್ ಗ್ಲಾಸ್‌ ಒಡೆದು ಪುಡಿ ಪುಡಿ ಮಾಡಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಕಿಡಿಗೇಡಿಗಳ ಅಟ್ಟಹಾಸ; ಬೈಕ್​ನಲ್ಲಿ ಬಂದವರಿಂದ ಮನೆ ಮುಂದೆ ನಿಲ್ಲಿಸಿದ್ದ 17 ಕಾರಿನ ಗಾಜುಗಳು ಪುಡಿ ಪುಡಿ
ಕಾರ್​ ಗ್ಲಾಸ್​ ಪುಡಿ ಮಾಡಿದ ವಿದ್ಯಾರ್ಥಿಗಳ ಬಂಧನ
Follow us on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ. ಬೆಂಗಳೂರಿನ R.R.ನಗರದ ಕೃಷ್ಣಾ ಗಾರ್ಡನ್‌ನಲ್ಲಿ ಮನೆ ಮುಂದೆ ನಿಲ್ಲಿಸಿದ್ದ 17 ಕಾರಿನ ಗಾಜುಗಳನ್ನು ಒಡೆದು ಪುಡಿ ಪುಡಿ ಮಾಡಿದ್ದಾರೆ.

ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಮನೆ ಮುಂದೆ ನಿಂತಿದ್ದ ಕಾರ್ಗಳ ಗ್ಲಾಸ್ ಒಡೆದು ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ. ಬೈಕ್ ಮೇಲೆ ಬಂದ ಮೂವರು ಕಿಡಿಗೇಡಿಗಳು 17 ಕ್ಕೂ ಅಧಿಕ ಕಾರ್ಗಳ ಫ್ರೇಂಟ್ ಗ್ಲಾಸ್ ಹಾಗೂ ಸೈಡ್ ಗ್ಲಾಸ್‌ ಒಡೆದು ಪುಡಿ ಪುಡಿ ಮಾಡಿದ್ದಾರೆ. ಕಿಡಿಗೇಡಿಗಳ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೇರೆಯಾಗಿದೆ.

ಇನ್ನು ಜುಲೈ ತಿಂಗಳಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿತ್ತು. ಬೆಂಗಳೂರಿನ ಮಹಾಲಕ್ಷ್ಮಿಲೇಔಟ್ ನಿವಾಸಿ ಸತೀಶ್ (26) ಎಂಬಾತ ಕುಡಿದ ಮತ್ತಿನಲ್ಲಿ ಕಂಡ ಕಂಡ ಕಾರ್​ಗಳ ಗಾಜು ಹೊಡೆದು ಪುಂಡಾಟ ಮೆರೆದಿದ್ದ. ಕುಡಿದ ಮತ್ತಿನಲ್ಲಿ ಮಹಾಲಕ್ಷ್ಮೀ ಲೇಔಟ್ನಲ್ಲಿ ಮತ್ತು ಬಸವೇಶ್ವರನಗರದಲ್ಲಿ 5 ಕಾರುಗಳನ್ನು ಜಖಂಗೊಳಿಸಿದ್ದ. ಕುಡಿದ ಮತ್ತಿನಲ್ಲಿ ಬೈಕ್ನಲ್ಲಿ ಬಂದು ಕೃತ್ಯ ಎಸಗಿದ್ದ.

ಮನೆಗಳ ಮುಂದೆ ರಸ್ತೆ ಬದಿ ನಿಲ್ಲಿಸಿದ್ದ ಕಾರುಗಳ ಗಾಜನ್ನು ದೊಣ್ಣೆಯಿಂದ ಹೊಡೆದು ಭೀಕರವಾಗಿ ವರ್ತಿಸಿದ್ದ. ಘಟನೆ ಬಳಿಕ ತಲಾಶ್ ಶುರು ಮಾಡಿದ್ದ ಬಸವೇಶ್ವರನಗರ ಪೊಲೀಸರು ಆರೋಪಿ ಸತೀಶ್ನನ್ನು ಬಂಧಿಸಿದ್ದರು.

ಇದನ್ನೂ ಓದಿ: ಮೈಸೂರಿನಲ್ಲಿ ಕುಡಿಯುವ ನೀರಿಗೆ ಕ್ರಿಮಿನಾಶಕ ಬೆರೆಸಿದ ಕಿಡಿಗೇಡಿಗಳು; ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

ದೇವಸ್ಥಾನದಲ್ಲೇ ಮಹಿಳೆ ಜೊತೆ ಅಸಭ್ಯ ವರ್ತನೆ, ಪ್ರಶ್ನಿಸಿದಕ್ಕೆ ಪತಿ ಕೈ ಬೆರಳು ಮುರಿದು ಹಲ್ಲೆ.. ಕಿಡಿಗೇಡಿಗಳ ಕೃತ್ಯ ಕಂಡೂ ಕಾಣದಂತೆ ನಿಂತ ಭಕ್ತರು

Published On - 12:29 pm, Fri, 24 September 21