AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಾಕ್ಸಿನ್ ಗಲಾಟೆ; ಗುಂಪಿನಿಂದ ಬಿಬಿಎಂಪಿ ಆಸ್ಪತ್ರೆಯ ವೈದ್ಯೆ, ಸಿಬ್ಬಂದಿ‌ ಮೇಲೆ ಹಲ್ಲೆ

ಕೊರೊನಾ ವ್ಯಾಕ್ಸಿನ್ ವಿಚಾರವಾಗಿ ಅಸಮಾಧಾನಗೊಂಡಿದ್ದ ಸ್ಥಳೀಯರ ಗುಂಪೊಂದು ಏಕಾಏಕಿ ಆಸ್ಪತ್ರೆಗೆ ನುಗ್ಗಿ ನಿನ್ನೆ ಬೆಳಗ್ಗೆ ಕರ್ತವ್ಯಕ್ಕೆ ಬಂದಿದ್ದ ವೈದ್ಯೆ ಸುನೀತಾ ಹಾಗೂ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದೆ. ವ್ಯಾಕ್ಸಿನ್ ಯಾಕ್ ಕೊಡಲ್ಲ ಎಂದು ಸುಳ್ಳು ಆರೋಪ ಮಾಡಿ ಗುಂಪು ಹಲ್ಲೆಗೆ ಮುಂದಾಗಿದೆ.

ವ್ಯಾಕ್ಸಿನ್ ಗಲಾಟೆ; ಗುಂಪಿನಿಂದ ಬಿಬಿಎಂಪಿ ಆಸ್ಪತ್ರೆಯ ವೈದ್ಯೆ, ಸಿಬ್ಬಂದಿ‌ ಮೇಲೆ ಹಲ್ಲೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Sep 24, 2021 | 11:10 AM

Share

ಬೆಂಗಳೂರು: ಬಿಬಿಎಂಪಿ ಆಸ್ಪತ್ರೆಯ ವೈದ್ಯೆ, ಸಿಬ್ಬಂದಿ‌ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಯಶವಂತಪುರದ ಬಿಬಿಎಂಪಿ ಆಸ್ಪತ್ರೆಗೆ ನುಗ್ಗಿದ ಸ್ಥಳೀಯರ ಗುಂಪೊಂದು ಡಾ.ಸುನೀತಾ, ಸಿಬ್ಬಂದಿ ಎಳೆದಾಡಿ ಹಲ್ಲೆಗೆ ಯತ್ನಿಸಿದೆ.

ಕೊರೊನಾ ವ್ಯಾಕ್ಸಿನ್ ವಿಚಾರವಾಗಿ ಅಸಮಾಧಾನಗೊಂಡಿದ್ದ ಸ್ಥಳೀಯರ ಗುಂಪೊಂದು ಏಕಾಏಕಿ ಆಸ್ಪತ್ರೆಗೆ ನುಗ್ಗಿ ನಿನ್ನೆ ಬೆಳಗ್ಗೆ ಕರ್ತವ್ಯಕ್ಕೆ ಬಂದಿದ್ದ ವೈದ್ಯೆ ಸುನೀತಾ ಹಾಗೂ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದೆ. ವ್ಯಾಕ್ಸಿನ್ ಯಾಕ್ ಕೊಡಲ್ಲ ಎಂದು ಸುಳ್ಳು ಆರೋಪ ಮಾಡಿ ಗುಂಪು ಹಲ್ಲೆಗೆ ಮುಂದಾಗಿದೆ. ಘಟನೆಗೆ ಸ್ಥಳೀಯ ಮಾಜಿ ಕಾರ್ಪೊರೇಟರ್ ಹಾಗೂ ಅದೇ ಆಸ್ಪತ್ರೆಯ ಮತ್ತೊಬ್ಬ ವೈದ್ಯನ ಕುಮ್ಮಕ್ಕು ಇದೆ ಎನ್ನಲಾಗ್ತಿದೆ. ಘಟನೆ ಬಳಿಕ ಡಾ.ಸುನೀತಾ ಯಶವಂತಪುರ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ.

ರಿಮ್ಸ್ ವೈದ್ಯರ ಮೇಲೆ ಹಲ್ಲೆ ಖಂಡಿಸಿ ಧರಣಿ ಇನ್ನು ಈ ವರ್ಷದ ಜುಲೈ ತಿಂಗಳಲ್ಲಿ ರಿಮ್ಸ್ ವೈದ್ಯರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ರಿಮ್ಸ್ ಆಸ್ಪತ್ರೆಯ ವೈದ್ಯರು ಧರಣಿ ನಡೆಸಿದ್ದರು. ಕಪ್ಪು ಪಟ್ಟಿ ಧರಿಸಿ ವೈದ್ಯರು ಪ್ರತಿಭಟನೆ ನಡೆಸಿದ್ದರು. ರೋಗಿಯೊಬ್ಬ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಈ ಕಾರಣ ರೋಗಿ ಸಂಬಂಧಿಕರು ರಿಮ್ಸ್ ಆಸ್ಪತ್ರೆಯ ಇಬ್ಬರು ವೈದ್ಯರನ್ನ ಅಟ್ಟಾಡಿಸಿ ಹಲ್ಲೆಗೈದಿದ್ದರು. ಹಲ್ಲೆ ನಡೆಸಿದವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆಗ್ರಹಿಸಿ ವೈದ್ಯರು ಧರಣಿಗೆ ಮುಂದಾಗಿದ್ದರು.

ರೋಗಿಯ ಸಾವಿನ ನಂತರ ರೊಚ್ಚಿಗೆದ್ದ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು. ಆಸ್ಪತ್ರೆಯಲ್ಲಿ ವೈದ್ಯರಿಗೆ ರಕ್ಷಣೆ ಇಲ್ಲ ಅಂತ ಆರೋಪಿಸುತ್ತಿರುವ ನೂರಾರು ವೈದ್ಯರು ಹಲ್ಲೆ ನಡೆಸಿದವರ ವಿರುದ್ಧ ದಾಖಲಿಸಬೇಕೆಂದು ಒತ್ತಾಯಿಸಿದ್ದರು. ಅಲ್ಲದೇ ಹಲ್ಲೆಕೋರರನ್ನು ಬಂಧಿಸುವವರೆಗೂ ಕೆಲಸಕ್ಕೆ ಬರಲ್ಲ ಅಂತ ಪಟ್ಟು ಹಿಡಿದಿದ್ದರು.

ಇದನ್ನೂ ಓದಿ: ವೈದ್ಯರ ಮೇಲೆ ಹಲ್ಲೆ ಪ್ರಕರಣ: ಕೊವಿಡ್​ನಿಂದ ಗುಣವಾಗಿ ಬಂದ ನಟ ಕೋಮಲ್​ ಹೇಳಿದ್ದೇನು?

ರಾಯಚೂರಿನ ರಿಮ್ಸ್ ವೈದ್ಯರ ಮೇಲೆ ಹಲ್ಲೆ ಖಂಡಿಸಿ ಧರಣಿ; ಚಿಕಿತ್ಸೆಗೆ ರೋಗಿಗಳ ಪರದಾಟ