ರಾಯಚೂರಿನ ರಿಮ್ಸ್ ವೈದ್ಯರ ಮೇಲೆ ಹಲ್ಲೆ ಖಂಡಿಸಿ ಧರಣಿ; ಚಿಕಿತ್ಸೆಗೆ ರೋಗಿಗಳ ಪರದಾಟ
ರೋಗಿಯ ಸಾವಿನ ನಂತರ ರೊಚ್ಚಿಗೆದ್ದ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು. ಆಸ್ಪತ್ರೆಯಲ್ಲಿ ವೈದ್ಯರಿಗೆ ರಕ್ಷಣೆ ಇಲ್ಲ ಅಂತ ಆರೋಪಿಸುತ್ತಿರುವ ನೂರಾರು ವೈದ್ಯರು ಹಲ್ಲೆ ನಡೆಸಿದವರ ವಿರುದ್ಧ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ.
ರಾಯಚೂರು: ರಿಮ್ಸ್ ವೈದ್ಯರ ಮೇಲೆ ನಡೆಸ ಹಲ್ಲೆಯನ್ನು ಖಂಡಿಸಿ ರಿಮ್ಸ್ ಆಸ್ಪತ್ರೆಯ ವೈದ್ಯರು ಧರಣಿ ನಡೆಸುತ್ತಿದ್ದಾರೆ. ಕಪ್ಪು ಪಟ್ಟಿ ಧರಿಸಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ರಾತ್ರಿ ರೋಗಿಯೊಬ್ಬ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಈ ಕಾರಣ ರೋಗಿ ಸಂಬಂಧಿಕರು ರಿಮ್ಸ್ ಆಸ್ಪತ್ರೆಯ ಇಬ್ಬರು ವೈದ್ಯರನ್ನ ಅಟ್ಟಾಡಿಸಿ ಹಲ್ಲೆಗೈದಿದ್ದರು. ಹಲ್ಲೆ ನಡೆಸಿದವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆಗ್ರಹಿಸಿ ವೈದರು ಧರಣಿಗೆ ಮುಂದಾಗಿದ್ದಾರೆ.
ರೋಗಿಯ ಸಾವಿನ ನಂತರ ರೊಚ್ಚಿಗೆದ್ದ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು. ಆಸ್ಪತ್ರೆಯಲ್ಲಿ ವೈದ್ಯರಿಗೆ ರಕ್ಷಣೆ ಇಲ್ಲ ಅಂತ ಆರೋಪಿಸುತ್ತಿರುವ ನೂರಾರು ವೈದ್ಯರು ಹಲ್ಲೆ ನಡೆಸಿದವರ ವಿರುದ್ಧ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೇ ಹಲ್ಲೆಕೋರರನ್ನು ಬಂಧಿಸುವವರೆಗೂ ಕೆಲಸಕ್ಕೆ ಬರಲ್ಲ ಅಂತ ಪಟ್ಟು ಹಿಡಿದಿದ್ದಾರೆ. ಹಲ್ಲೆ ನಡೆಸುವವರ ವಿರುದ್ಧ ಎಫ್ಐಆರ್ ದಾಖಲಿಸುವುದುದಾಗಿ ಡೀನ್ ಬಸವರಾಜ ಪೀರಾಪುರ ಭರವಸೆ ನೀಡಿದ್ದಾರೆ.
ಡೀನ್ ಭರವಸೆಗೂ ಬಗ್ಗದ ರಿಮ್ಸ್ ಆಸ್ಪತ್ರೆಯ ವೈದ್ಯರು ಧರಣಿಯನ್ನು ಮುಂದುವರೆಸಿದ್ದಾರೆ. ಕೇಸ್ ದಾಖಲಿಸಿ ಬಂಧಿಸಲೆಬೇಕೆಂದು ಪಟ್ಟು ಹಿಡಿದಿದ್ದಾರೆ. ವೈದ್ಯರು ಕೆಲಸಕ್ಕೆ ಹಾಜರಾಗದೆ ಪ್ರತಿಭಟನೆಗೆ ಮುಂದಾಗಿದ್ದು, ರೋಗಿಗಳು ಚಿಕಿತ್ಸೆ ಪಡೆಯಲು ಪರದಾಡುತ್ತಿದ್ದಾರೆ.
ಇದನ್ನೂ ಓದಿ
(If the rims doctors in Raichur are protesting for condemn assault)