ಯಡಿಯೂರಪ್ಪ ದೆಹಲಿಗೆ 6 ಬ್ಯಾಗ್​ ತೆಗೆದುಕೊಂಡು ಹೋಗಿದ್ದಾರೆ; ಒಳಗೆ ಏನೇನಿದೆ ಎಂದು ಅವರೇ ಹೇಳಲಿ: ಹೆಚ್​.ಡಿ.ಕುಮಾರಸ್ವಾಮಿ

ಮುಖ್ಯಮಂತ್ರಿ ನಿನ್ನೆ ದೆಹಲಿಗೆ ಹೋಗುವಾಗ ವಿಮಾನದಲ್ಲಿ 6 ಬ್ಯಾಗ್ ತೆಗೆದುಕೊಂಡು ಹೋಗಿದ್ದಾರೆ. ಅವುಗಳಲ್ಲಿ ಉಡುಗೊರೆ ಇದೆಯೋ, ಬೇರೆ ಏನಾದರೂ ಇದೆಯೋ ಎನ್ನುವುದನ್ನು ಅವರೇ ಹೇಳಬೇಕು: ಹೆಚ್​.ಡಿ.ಕುಮಾರಸ್ವಾಮಿ

ಯಡಿಯೂರಪ್ಪ ದೆಹಲಿಗೆ 6 ಬ್ಯಾಗ್​ ತೆಗೆದುಕೊಂಡು ಹೋಗಿದ್ದಾರೆ; ಒಳಗೆ ಏನೇನಿದೆ ಎಂದು ಅವರೇ ಹೇಳಲಿ: ಹೆಚ್​.ಡಿ.ಕುಮಾರಸ್ವಾಮಿ
ಎಚ್​.ಡಿ.ಕುಮಾರಸ್ವಾಮಿ, ಬಿ.ಎಸ್​.ಯಡಿಯೂರಪ್ಪ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (CM B.S Yediyurappa) ಹಾಗೂ ಬಿ.ವೈ ವಿಜಯೇಂದ್ರ (B.Y Vijayendra) ದೆಹಲಿಗೆ ಹೋಗಿರುವ ಬಗ್ಗೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D Kumaraswamy) ಗಂಭೀರ ಆರೋಪವೊಂದನ್ನು ಸಿಎಂ ಹೆಗಲಿಗೆ ಹೊರಿಸಿದ್ದಾರೆ. ಮುಖ್ಯಮಂತ್ರಿ ನಿನ್ನೆ ದೆಹಲಿಗೆ (Delhi) ಹೋಗುವಾಗ ವಿಮಾನದಲ್ಲಿ 6 ಬ್ಯಾಗ್ ತೆಗೆದುಕೊಂಡು ಹೋಗಿದ್ದಾರೆ. ಅವುಗಳಲ್ಲಿ ಉಡುಗೊರೆ ಇದೆಯೋ, ಬೇರೆ ಏನಾದರೂ ಇದೆಯೋ ಎನ್ನುವುದನ್ನು ಅವರೇ ಹೇಳಬೇಕು. ಆದರೆ, ಅವರು ಬ್ಯಾಗ್​ ತೆಗೆದುಕೊಂಡು ಹೋಗಿರುವ ಮಾಹಿತಿ ನನಗೆ ಬಂದಿರುವುದಂತೂ ಹೌದು ಎಂದು ಹೇಳಿದ್ದಾರೆ.

ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ದೆಹಲಿ ಪ್ರವಾಸ ಕೈಗೊಂಡಿರುವ ಬಗ್ಗೆ ಮಾತನಾಡಿದ ಹೆಚ್​.ಡಿ.ಕುಮಾರಸ್ವಾಮಿ, ಸಿಎಂ ಬ್ಯಾಗ್​ ತೆಗೆದುಕೊಂಡು ಹೋದ ವಿಷಯ ಕೆಲ ಮಾಧ್ಯಮಗಳಲ್ಲೂ ಬಂದಿದೆ. ನಾಯಕರಿಗೆ ಕೊಡಲು ದೊಡ್ಡ ದೊಡ್ಡ ಉಡುಗೊರೆಗಳನ್ನ ತೆಗೆದುಕೊಂಡು ಹೋಗಿದ್ದಾರೆ ಅಂತಾ ಕೆಲ ಮಾಧ್ಯಮಗಳಲ್ಲಿ ಬರುತ್ತಿದೆ. ಆ ಬ್ಯಾಗ್​ಗಳಲ್ಲಿ ನಿಜವಾಗಿಯೂ ಏನಿದೆ ಎನ್ನುವುದನ್ನು ಮುಖ್ಯಮಂತ್ರಿಗಳೇ ಹೇಳಬೇಕು ಎಂದಿದ್ದಾರೆ.

ಬಹುಶಃ ಆರು ಬ್ಯಾಗ್​ಗಳಲ್ಲಿ ರಾಜ್ಯದ ಸಮಸ್ಯೆಗಳನ್ನು ತೆಗೆದುಕೊಂಡು ಹೋಗಿದ್ದಾರೋ ಅಥವಾ ಬೇರೆ ಏನಾದರೂ ತೆಗೆದುಕೊಂಡು ಹೈಕಮಾಂಡ್​ಗೆ ಕೊಡಲು ಹೋಗಿದ್ದಾರೋ ಎನ್ನುವುದನ್ನು ಅವರೇ ಹೇಳಬೇಕು. ಅಂತೆಯೇ, ಮೋದಿಯನ್ನ ಯಡಿಯೂರಪ್ಪ ಒಬ್ಬರೇ ಹೋಗಿ ಭೇಟಿ ಮಾಡಿದರೋ ಅಥವಾ ಆರು ಬ್ಯಾಗ್​ಗಳೊಂದಿಗೆ ಭೇಟಿ ಮಾಡಿದರೋ ಎನ್ನುವುದನ್ನೂ ಹೇಳಬೇಕು ಎನ್ನುವ ಮೂಲಕ ಹೆಚ್​.ಡಿ.ಕುಮಾರಸ್ವಾಮಿ ಸಿಎಂಗೆ ತಿರುಗೇಟು ನೀಡಿದ್ದಾರೆ.

ರಾಜೀನಾಮೆ ಕೇಳಿಲ್ಲ, ಕೊಟ್ಟಿಲ್ಲ ಅದು ಶುದ್ಧ ಸುಳ್ಳು: ಯಡಿಯೂರಪ್ಪ
ಏತನ್ಮಧ್ಯೆ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡಲಾರಂಭಿಸಿದ್ದು, ಅದಕ್ಕೆ ದೆಹಲಿಯಿಂದಲೇ ಸಂದೇಶ ರವಾನಿಸಿರುವ ಅವರು, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಶುದ್ಧ ಸುಳ್ಳು ಎಂದು ಘಂಟಾಘೋಷವಾಗಿ ಹೇಳಿದ್ದಾರೆ. ಮತ್ತೆ ಆಗಸ್ಟ್ ಮೊದಲ ವಾರದಲ್ಲಿ ದೆಹಲಿಗೆ ಬರುತ್ತೇನೆ. ರಾಜೀನಾಮೆ ನೀಡುವ ವಿಚಾರ ಸುಳ್ಳು. ರಾಜೀನಾಮೆ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಯಡಿಯೂರಪ್ಪ ದೆಹಲಿಯಲ್ಲಿ ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ದೆಹಲಿ ಮೋತಿಲಾಲ್​ ನೆಹರು ರಸ್ತೆಯಲ್ಲಿರುವ ನಿವಾಸದಲ್ಲಿ ಬಿಎಸ್​​ವೈ ಭೇಟಿಯಾದರು. ಸಿಎಂ ಯಡಿಯೂರಪ್ಪಗೆ ಪುತ್ರ ವಿಜಯೇಂದ್ರ ಸಾಥ್ ನೀಡಿದರು. ರಾಜ್ಯ ರಾಜಕೀಯ ಬಗ್ಗೆ ಜೆ.ಪಿ. ನಡ್ಡಾ ಜತೆ ಚರ್ಚೆ ನಡೆಯಿತು. ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ನಡ್ಡಾ ಸೂಚನೆ ನೀಡಿದ್ದಾರೆ. ರಾಜೀನಾಮೆ ಕೇಳಿದ್ದರೆ/ ಕೊಟ್ಟಿದ್ದರೆ ಮುಚ್ಚಿಡುವಂತಹ ಪ್ರಶ್ನೆ ಇಲ್ಲ ಎಂದು ಯಡಿಯೂರಪ್ಪ ಈ ಸಂದರ್ಭದಲ್ಲಿ ಹೇಳಿದರು.

ಇದನ್ನೂ ಓದಿ:
ನರೇಂದ್ರ ಮೋದಿ, ಬಿ ಎಸ್ ಯಡಿಯೂರಪ್ಪ ಭೇಟಿಯನ್ನು ಹಾಲು ಜೇನಿನ ಸಂಗಮ ಎಂದು ವರ್ಣಿಸಿದ ಬಿ ವೈ ವಿಜಯೇಂದ್ರ

ರಾಜೀನಾಮೆ ನೀಡುವ ಪ್ರಶ್ನೆ ಇಲ್ಲ; ಮತ್ತೆ ಆಗಸ್ಟ್ ಮೊದಲ ವಾರದಲ್ಲಿ ದೆಹಲಿಗೆ ಬರುತ್ತೇನೆ ; ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ

Click on your DTH Provider to Add TV9 Kannada