Basavaraj Bommai Cabinet: ಮಂತ್ರಿಗಿರಿ, ಡಿಸಿಎಂ ಸ್ಥಾನಕ್ಕೆ ಭಾರಿ ಪೈಪೋಟಿ! ಯಾರಿಗೆ ಸಿಗಲಿದೆ ಅಧಿಕಾರ?

Basavaraj Bommai Cabinet: ಮಂತ್ರಿಗಿರಿ, ಡಿಸಿಎಂ ಸ್ಥಾನಕ್ಕೆ ಭಾರಿ ಪೈಪೋಟಿ! ಯಾರಿಗೆ ಸಿಗಲಿದೆ ಅಧಿಕಾರ?
ಬಸವರಾಜ ಬೊಮ್ಮಾಯಿ

ಒಂದ್ಕಡೆ ಹೇಗಾದ್ರೂ ಸರಿ ಸಚಿವ ಸ್ಥಾನ ಪಡದೇ ಪಡೀಬೇಕು ಅಂತಾ ಶಾಸಕರ ಲಾಬಿ ಜೋರಾಗಿದ್ರೆ, ಇದರ ಜೊತೆಗೆ ಡಿಸಿಎಂ ಪಟ್ಟಕ್ಕೂ ಪೈಪೋಟಿ ನಡೀತಿದೆ. ಆದ್ರೆ, ಹೈಕಮಾಂಡ್ ತಮ್ಮದೇ ಆದ ಸೂತ್ರದಡಿ ಡಿಸಿಎಂ ಪಟ್ಟಕಟ್ಟೋಕೆ ಪ್ಲ್ಯಾನ್ ಮಾಡ್ತಿದೆ.

TV9kannada Web Team

| Edited By: Ayesha Banu

Aug 02, 2021 | 7:51 AM

ಎಷ್ಟೇ ಪ್ರಭಾವಿ ಆಗಿರಲಿ.. ರಾಜಕೀಯದಲ್ಲಿ ಎಷ್ಟೇ ಹಿರಿಯರಾಗಿರಲಿ ಕೈಯಲ್ಲಿ ಅಧಿಕಾರ ಇರ್ಬೇಕು ಅಂತಾ ಶಾಸಕರು ಮಂತ್ರಿಗಿರಿ ಹಿಂದೆ ಬಿದ್ದಿದ್ದಾರೆ. ನಾನಾ ರಣತಂತ್ರ ಹೆಣೆದು, ನಾಯಕರ ಸುತ್ತಲೂ ಸುತ್ತಿ ಸಚಿವ ಸ್ಥಾನಕ್ಕೇರಲು ಸರ್ಕಸ್ ಮಾಡ್ತಿದ್ದಾರೆ. ಈ ನಡುವೆ ಘಟಾನುಘಟಿಗಳು ಡಿಸಿಎಂ ಸೀಟ್ನಲ್ಲಿ ಕೂರಲು ಭಾರಿ ಕಸರತ್ತು ಮಾಡ್ತಿದ್ದಾರೆ.

ಬೆಳಗಾವಿಯಲ್ಲಿ ಹದಿಮೂರು ಜನರಿಂದ ಮಂತ್ರಿಗಿರಿಗೆ ಲಾಬಿ ಬೆಳಗಾವಿ ಜಿಲ್ಲೆಯ ಹದಿಮೂರು ಜನ ಮಂತ್ರಿಗಿರಿಗಾಗಿ ದೊಡ್ಡಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ. ಒಬ್ಬೊಬ್ಬ ನಾಯಕರು ತಮ್ಮದೇ ಆದ ಲೆಕ್ಕಾಚಾರದಲ್ಲಿ ಲಾಬಿಗೆ ಮುಂದಾಗಿದ್ದಾರೆ. ಉಮೇಶ್ ಕತ್ತಿ, ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ, ಶ್ರೀಮಂತ್ ಪಾಟೀಲ್ ಈಗಾಗಲೇ ಸಚಿವರಾಗಿ ಕೆಲಸ ಮಾಡಿದ್ದೇವೆ ಅದನ್ನೇ ಮುಂದುವರೆಸುವಂತೆ ಒತ್ತಡ ಹಾಕಲಿದ್ದಾರೆ. ಆರ್‌ಎಸ್‌ಎಸ್ ನಾಯಕರ ಮೂಲಕ ಶಾಸಕ ಅಭಯ್ ಪಾಟೀಲ್ ಒತ್ತಡ ಹಾಕುತ್ತಿದ್ದಾರೆ. ಹಿರಿಯ ಶಾಸಕ ನಿದ್ದೇನೆ ನನಗೂ ಸ್ಥಾನ ನೀಡಿ ಎಂದು ಆನಂದ ಮಾಮನಿ ಡಿಮ್ಯಾಂಡ್ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ‌ ಬದಲಿಗೆ ಸ್ಥಾನ ಕೊಡಿ ಅಂತಾ ಬಾಲಚಂದ್ರ ಜಾರಕಿಹೊಳಿ‌ ಪಟ್ಟು ಹಿಡಿದಿದ್ದಾರೆ. ಮಾದಿಗ ಸಮುದಾಯದವರು ನಮಗೂ ಸ್ಥಾನ ಕೊಡಿ ಅಂತಾ ದುರ್ಯೋಧನ ಐಹೊಳೆ ಕೂಡ ಒತ್ತಡ ಹಾಕುತ್ತಿದ್ದಾರೆ.

ಬಂಜಾರಾ ಕೊಟಾದಲ್ಲಿ ಸಚಿವ ಸ್ಥಾನಕ್ಕಾಗಿ ಪಿ.ರಾಜೀವ್, ಮರಾಠ ಕೋಟಾದಲ್ಲಿ ಸಚಿವ ಸ್ಥಾನ ಕೊಡಿ ಅಂತಾ ಅನಿಲ್ ಬೆನಕೆ ಲಾಬಿ ನಡೆಸುತ್ತಿದ್ದಾರೆ. ಇನ್ನು ಸಚಿವಸ್ಥಾನದ ನಿರೀಕ್ಷೆಯಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದಾರೆ. ಮೈಸೂರಿಗೆ ಮೂವರು ಶಾಸಕರಿಂದ ಮಂತ್ರಿಪಟ್ಟಕ್ಕೆ ಲಾಬಿ ನಡೆಯುತ್ತಿದೆ. ಕೆ. ಆರ್. ಕ್ಷೇತ್ರದ ಶಾಸಕ ಎಸ್ ಎಸ ರಾಮದಾಸ್, ಚಾಮರಾಜ ಕ್ಷೇತ್ರದ ಶಾಸಕ ಎಲ್ ನಾಗೇಂದ್ರ, ನಂಜನಗೂಡು ಶಾಸಕ ಬಿ ಹರ್ಷವರ್ಧನ್ ಲಾಬಿ ನಡೆಸುತ್ತಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿ ಆಗಿರುವ ಶಾಸಕ ರೇಣುಕಾಚಾರ್ಯ ಸಿಎಂ ಕಚೇರಿಯಿಂದ ಕರೆ ಬರುವ ನಿರೀಕ್ಷೆಯಲ್ಲಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಐವರು ಬಿಜೆಪಿ ಶಾಸಕರಿದ್ದು ದತ್ತಾತ್ರೇಯ ಪಾಟೀಲ್, ರಾಜಕುಮಾರ ಪಾಟೀಲ್, ಬಸವರಾಜ್ ಮತ್ತಿಮೂಡ್, ಸುಭಾಷ್ ಗುತ್ತೇದಾರ್ ಲಾಬಿ ನಡೆಸಿದ್ದು ಕಳೆದ ಒಂದುವಾರದಿಂದ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಕೊಪ್ಪಳದಿಂದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಕನಕಗಿರಿ ಶಾಸಕ ಬಸವರಾಜ್ ದಡೇಸಗೂರು ಲಾಬಿ ನಡೆಸುತ್ತಿದ್ದಾರೆ. ಸಚಿವ ಸ್ಥಾನಕ್ಕಾಗಿ ಚಿತ್ರದುರ್ಗ ಶಾಸಕರಿಂದಲೂ ತೀವ್ರ ಪೈಪೋಟಿ ನಡೆಯುತ್ತಿದೆ. ಜಿ.ಹೆಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಪೂರ್ಣಿಮಾ ಶ್ರೀನಿವಾಸ್, ಶಾಸಕ ಗೂಳಿಹಟ್ಟಿ ಶೇಖರ್‌ ಸಚಿವ ಸ್ಥಾನಕ್ಕಾಗಿ ಯತ್ನಿಸುತ್ತಿದ್ದಾರೆ.

ಮಂತ್ರಿಗಿರಿ ಜೊತೆಗೆ ಡಿಸಿಎಂ ಸ್ಥಾನಕ್ಕೂ ಭಾರಿ ಪೈಪೋಟಿ! ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ಹೋಗುತ್ತಿದ್ದಂತೆ ಕ್ಯಾಬಿನೆಟ್ ರಚನೆಗೆ ಕೌಂಟ್ಡೌನ್ ಶುರುವಾಗಿದೆ. ಹೀಗಾಗಿ ಮಂತ್ರಿಸ್ಥಾನ ಪಡೆದೇ ಪಡೀಬೇಕು ಅಂತಾ ಹಲವರು ಜಿದ್ದಿಗೆ ಬಿದ್ದಿದ್ದಾರೆ.. ಮತ್ತೊಂದ್ಕಡೆ ಡಿಸಿಎಂ ಪಟ್ಟ ಗಿಟ್ಟಿಸಿಕೊಳ್ಳಲು ಪೈಪೋಟಿ ಜೋರಾಗಿ ನಡೀತಿದೆ. ಆದ್ರೆ, ಯಾರ್ ಏನೇ ಪೈಪೋಟಿ ನಡೆಸಿದ್ರು, ಏನೇ ತಂತ್ರ ಮಾಡಿದ್ರೂ, ಹೈಕಮಾಂಡ್ ಬೇರೆಯೇ ಫಾರ್ಮುಲಾ ರೆಡಿ ಮಾಡಿದೆ. ಆ ಫಾರ್ಮುಲಾ ಏನು.. ಅನ್ನೋದನ್ನ ಹೇಳ್ತೀವಿ ಅದಕ್ಕೂ ಮುನ್ನ ಯಾಱರು ಡಿಸಿಎಂ ಪೈಪೋಟಿಯಲ್ಲಿದ್ದಾರೆ ಅನ್ನೋದನ್ನ ನೋಡೋದಾದ್ರೆ,

ಡಿಸಿಎಂ ಪಟ್ಟಕ್ಕೆ ಪೈಪೋಟಿ ಡಿಸಿಎಂ ಪಟ್ಟಕ್ಕೆ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಡಿಸಿಎಂ ರೇಸ್‌ನಲ್ಲಿ ಶ್ರೀರಾಮುಲು, ಈಶ್ವರಪ್ಪ, ಆರ್‌.ಅಶೋಕ್, ಡಾ.ಅಶ್ವತ್ಥ್ ನಾರಾಯಣ, ಸಿ.ಟಿ.ರವಿ, ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ ಇದ್ದಾರೆ. ಆದ್ರೆ, ಎಷ್ಟು ಡಿಸಿಎಂ ಸ್ಥಾನ? ಯಾರಿಗೆ ಅನ್ನೋದು ಫೈನಲ್ ಆಗಿಲ್ಲ. ಕೊನೇ ಕ್ಷಣದಲ್ಲಿ ‘ಡಿಸಿಎಂ’ ಲಿಸ್ಟ್ ಬದಲಾಗುವ ಸಾಧ್ಯತೆ ಇದ್ದು, ವಾಲ್ಮೀಕಿ, ಒಕ್ಕಲಿಗ, ದಲಿತ, ಒಬಿಸಿ ಫಾರ್ಮುಲಾದಡಿ ಡಿಸಿಎಂ ಸ್ಥಾನದ ಲೆಕ್ಕಚಾರ ನಡೀತಿದೆ ಅಂತಾ ಹೇಳಲಾಗ್ತಿದೆ.

ಹೈಕಮಾಂಡ್ 3+1 ಸೂತ್ರ.. ಡಿಸಿಎಂ ಪಟ್ಟಕ್ಕೇರಲು ತಂತ್ರ! ಘಟಾನುಘಟಿಗಳು ಡಿಸಿಎಂ ಸ್ಥಾನ ಪಡೆಯಲು ಬೇಜಾನ್ ಸರ್ಕಸ್ ಮಾಡ್ತಿದ್ದಾರೆ. ಆದ್ರೆ, ಹೈಕಮಾಂಡ್ ಮಾತ್ರ ತಮ್ಮದೇ ಆದ ಲೆಕ್ಕಾಚಾರದಲ್ಲಿದೆ ಅಂದ್ರೆ, 3+1 ಫಾರ್ಮೂಲಾ ರೆಡಿ ಮಾಡಿಕೊಂಡು ಹೈಕಮಾಂಡ್ ಕೂತಿದ್ರೆ, ರೇಸ್‌ನಲ್ಲಿ ಇರೋರ ಸಂಖ್ಯೆ ಡಬಲ್ ಇದೆ. ಏನೇ ಆದ್ರೂ, ಹೈಕಮಾಂಡ್ ಸೂತ್ರದಂತೆಯೇ ಎಲ್ಲವೂ ನಡೆಯುತ್ತೆ.

3+1ಸೂತ್ರ.. ಯಾರಿಗೆ ಪಟ್ಟ? ಹೈಕಮಾಂಡ್ 3+1 ಸೂತ್ರದಂತೆ ನಾಲ್ವರಿಗೆ ಡಿಸಿಎಂ ಸ್ಥಾನ ನೀಡಲು ಬಿಜೆಪಿ ಹೈಕಮಾಂಡ್ ಚಿಂತನೆ ಮಾಡ್ತಿದೆ. ಲಿಂಗಾಯತ ಸಮುದಾಯದ ಬೊಮ್ಮಾಯಿ ಅವರಿಗೆ ಸಿಎಂ ಪಟ್ಟ ಸಿಕ್ಕಿದ್ದು, ಇತರ ಸಮುದಾಯಗಳಿಗೆ 4 ಡಿಸಿಎಂ ಪಟ್ಟ ಸಾಧ್ಯತೆ ಇದೆ. ಇದರಲ್ಲಿ OBC, ಒಕ್ಕಲಿಗ, ವಾಲ್ಮೀಕಿ, ದಲಿತ ಸಮುದಾಯಕ್ಕೆ ಡಿಸಿಎಂ ಪಟ್ಟ ಒಲಿಯಬಹುದು. ವಾಲ್ಮೀಕಿ ಸಮುದಾಯದ ಶ್ರೀರಾಮುಲು, ಒಬಿಸಿ ಕ್ಯಾಟಗರಿಯಲ್ಲಿ ಕೆ.ಎಸ್‌ ಈಶ್ವರಪ್ಪ, ದಲಿತ ಸಮುದಾಯದ ಗೋವಿಂದ ಕಾರಜೋಳರಿಗೆ ಉಪಮುಖ್ಯಮಂತ್ರಿಯಾಗುವ ಲಕ್ ಖುಲಾಯಿಸಬಹುದು. ಇನ್ನೂ ಒಕ್ಕಲಿಗ ಸಮುದಾಯದಲ್ಲಿ ಪೈಪೋಟಿ ಇದ್ದು, ಆರ್‌.ಅಶೋಕ್, ಸಿ.ಟಿ ರವಿ, ಅಶ್ವತ್ಥ್ ನಾರಾಯಣ್‌ರಲ್ಲಿ ಯಾರಿಗೆ ಡಿಸಿಎಂ ಕೊಡ್ಬೇಕು ಅನ್ನೋ ಚರ್ಚೆ ನಡೀತಿದೆಯಂತೆ. ಆದ್ರೆ, ಇದೇ ಸೂತ್ರವನ್ನು ಈವರೆಗೂ ಅಂತಿಮಗೊಳಿಸದ ಹೈಕಮಾಂಡ್, ಮಂತ್ರಿ ಸ್ಥಾನದ ಜೊತೆಗೆ ಇವತ್ತೇ ಡಿಸಿಎಂ ಪಟ್ಟಿಯನ್ನು ಫೈನಲ್ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಸಂಪುಟ ರಚನೆಗೆ ಸಿಕ್ತಾ ಗ್ರೀನ್ ಸಿಗ್ನಲ್? ದೆಹಲಿಯಿಂದ ಸಿಎಂ ಹೊತ್ತು ತರುವ ಹೊಸ ಸಚಿವರ ಲಿಸ್ಟ್​ನಲ್ಲಿ ಯಾರಿದ್ದಾರೆ ?

Follow us on

Related Stories

Most Read Stories

Click on your DTH Provider to Add TV9 Kannada