ಮುನಿರತ್ನ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ: ಪರಪ್ಪನ ಅಗ್ರಹಾರಕ್ಕೆ ಶಿಫ್ಟ್​​

|

Updated on: Sep 17, 2024 | 5:30 PM

ಮುನಿರತ್ನ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಜಾತಿವ್ಯೂಹ ಹೆಣೆದು ಲಾಕ್ ಮಾಡಿರುವ ಕೈಪಡೆ, ಬಿಜೆಪಿ ಶಾಸಕನ ವಿರುದ್ದ ಸಮರ ಸಾರಿದೆ. ಬೆಂಗಳೂರು, ಮೈಸೂರು, ಕೋಲಾರದಲ್ಲಿ ಪ್ರತಿಭಟನೆ ನಡೆಸಿ ಮುನಿರತ್ನ ವಿರುದ್ಧ ಹೋರಾಟ ತೀವ್ರಗೊಳಿಸಿದೆ. ಕಾಂಗ್ರೆಸ್‌ನ ಈ ಅಸ್ತ್ರಕ್ಕೆ ಸಿಡಿಮಿಡಿಗೊಂಡು, ಇದೆಲ್ಲಾ ಷಡ್ಯಂತ್ರ ಅಂತಿರುವ ಮುನಿರತ್ನ ಇದೀಗ ಜೈಲುಪಾಲಾಗಿದ್ದಾರೆ. 

ಮುನಿರತ್ನ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ: ಪರಪ್ಪನ ಅಗ್ರಹಾರಕ್ಕೆ ಶಿಫ್ಟ್​​
ಮುನಿರತ್ನ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ
Follow us on

ಬೆಂಗಳೂರು, ಸೆ.17:ನಿರ್ಮಾಪಕ ಹಾಗೂ ಆರ್​ ಆರ್​ ನಗರ ಶಾಸಕ ಮುನಿರತ್ನ(Munirathna), ಗುತ್ತಿಗೆದಾರನಿಗೆ ಜೀವ ಬೆದರಿಕೆ ಮತ್ತು ಜಾತಿನಿಂದನೆ ಮಾಡಿದ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ. ಎರಡು ದಿನ ಪೊಲೀಸ್ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಮುನಿರತ್ನರನ್ನ ಇವತ್ತು(ಮಂಗಳವಾರ) ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಶಾಸಕ ಮುನಿರತ್ನ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ನಾಳೆವರೆಗೂ ಮುನಿರತ್ನರನ್ನ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಮುನಿರತ್ನ ಪರ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, ‘ಇದೊಂದು ರಾಜಕೀಯ ಪ್ರೇರಿತ ಪ್ರಕರಣ. ತಿರುಪತಿಗೆ ಹೋಗುವಾಗ ಮುನಿರತ್ನರನ್ನ ಬಂಧಿಸಲಾಗಿದೆ. ಸುಪ್ರೀಂಕೋರ್ಟ್‌ನ ತೀರ್ಪು ಉಲ್ಲಂಘನೆಯಾಗಿದೆ ಎಂದು ವಾದಿಸಿದರು. ಇದೇ ವೇಳೆ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಅಭಿಯೋಜಕರು ಎರಡು ದಿನ ಸಮಯ ಕೇಳಿದರು. ನಾಳೆ ಆಕ್ಷೇಪಣೆ ಸಲ್ಲಿಸಿ ಎಂದು ಸೂಚಿಸಿದ ಕೋರ್ಟ್, ಒಂದು ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಇದನ್ನೂ ಓದಿ:ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು: ಐಸಿಯುನಲ್ಲಿ ಚಿಕಿತ್ಸೆ

ಇನ್ನು ಒಕ್ಕಲಿಗ ಸಚಿವರು ನಿನ್ನೆ ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿ, ಮುನಿರತ್ನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಬಳಿಕ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ‘ಒಕ್ಕಲಿಗ ಮಹಿಳೆಯರ ಬಗ್ಗೆ ಮುನಿರತ್ನ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಆದರೂ ಅಶೋಕ್, ಸಿ.ಟಿ ರವಿ, ಕುಮಾರಸ್ವಾಮಿ ಮೌನವಾಗಿದ್ದಾರೆ ಎಂದು ಕುಟುಕಿದ್ದರು. ಇದಕ್ಕೆ ಟಾಂಗ್ ಕೊಟ್ಟಿರೋ ಅಶೋಕ್, ದೇವೇಗೌಡರನ್ನೇ ಮುಗಿಸಲು ಹೊರಟವರು ನೀವು, ಒಕ್ಕಲಿಗರ ಮೇಲೆ ಅಷ್ಟು ಪ್ರೀತಿ ಇದ್ದರೆ ಸಿದ್ದರಾಮಯ್ಯರನ್ನ ಇಳಿಸಿ, ಒಕ್ಕಲಿಗರನ್ನ ಸಿಎಂ ಮಾಡಿ ಎಂದು ಕಾಲೆಳೆದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:20 pm, Tue, 17 September 24