ಇ.ಡಿ ದಾಳಿಯ ಬೆನ್ನಲ್ಲೇ ದೇವರ ಮೊರೆ ಹೋದ ಶಾಸಕ ಜಮೀರ್ ಅಹ್ಮದ್, ಅಜ್ಮೇರ್ ಯಾತ್ರೆ ಮುಗಿಸಿ ವಾಪಾಸ್

| Updated By: ಆಯೇಷಾ ಬಾನು

Updated on: Aug 08, 2021 | 8:38 AM

ಬಂದ ಸಂಕಷ್ಟ ಪರಿಹರಿಸುವಂತೆ ಜಮೀರ್ ದೇವರ ಮೊರೆ ಹೋಗಿದ್ದು ಜಮೀರ್, ಅವರ ಪುತ್ರ, ಇಬ್ಬರು ಸಹೋದರರು ಮತ್ತು ತಾಯಿ ಅಜ್ಮೇರ್ ದರ್ಗಾ ದರ್ಶನ ಪಡೆದಿದ್ದಾರೆ. ಜಮೀರ್ ಕುಟುಂಬ ಇ.ಡಿ ಸಂಕಷ್ಟದಿಂದ ಪಾರಾಗಲು ವಿಶೇಷ ಪ್ರಾರ್ಥನೆ ಸಲ್ಲಿಸಿದೆ.

ಇ.ಡಿ ದಾಳಿಯ ಬೆನ್ನಲ್ಲೇ ದೇವರ ಮೊರೆ ಹೋದ ಶಾಸಕ ಜಮೀರ್ ಅಹ್ಮದ್, ಅಜ್ಮೇರ್ ಯಾತ್ರೆ ಮುಗಿಸಿ ವಾಪಾಸ್
ಇ.ಡಿ ದಾಳಿಯ ಬೆನ್ನಲ್ಲೇ ದೇವರ ಮೊರೆ ಹೋದ ಶಾಸಕ ಜಮೀರ್ ಅಹ್ಮದ್, ಅಜ್ಮೇರ್ ಯಾತ್ರೆ ಮುಗಿಸಿ ವಾಪಾಸ್
Follow us on

ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಆಸ್ತಿಪಾಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸಿ ವಿಚಾರಣೆ ನಡೆಸಿದೆ. ಸತತ 23 ಗಂಟೆಗಳ ಕಾಲ ಮನೆ, ಆಫಿಸ್ ಎನ್ನದೆ ಹಲವು ಕಡೆ ಜಾಲಾಡಿದೆ. ಈ ಬೆನ್ನಲ್ಲೇ ಶಾಸಕ ಜಮೀರ್ ಅಹ್ಮದ್ ಅಜ್ಮೇರ್ ದರ್ಗಾಕ್ಕೆ ತೆರಳಿದ್ದು ಅಜ್ಮೇರ್ ಯಾತ್ರೆ ಮುಗಿಸಿ ನಿನ್ನೆ ರಾತ್ರಿ ವಿಶೇಷ ವಿಮಾನದಲ್ಲಿ ವಾಪಸ್ ಆಗಿದ್ದಾರೆ.

ಬಂದ ಸಂಕಷ್ಟ ಪರಿಹರಿಸುವಂತೆ ಜಮೀರ್ ದೇವರ ಮೊರೆ ಹೋಗಿದ್ದು ಜಮೀರ್, ಅವರ ಪುತ್ರ, ಇಬ್ಬರು ಸಹೋದರರು ಮತ್ತು ತಾಯಿ ಅಜ್ಮೇರ್ ದರ್ಗಾ ದರ್ಶನ ಪಡೆದಿದ್ದಾರೆ. ಜಮೀರ್ ಕುಟುಂಬ ಇ.ಡಿ ಸಂಕಷ್ಟದಿಂದ ಪಾರಾಗಲು ವಿಶೇಷ ಪ್ರಾರ್ಥನೆ ಸಲ್ಲಿಸಿದೆ. ಇನ್ನು ಅಜ್ಮೇರ್ ಯಾತ್ರೆ ಬಳಿಕ ನೇರವಾಗಿ ಬೆಂಗಳೂರಿಗೆ ವಾಪಸ್ಸಾಗಿರುವ ಜಮೀರ್ ಸಂಪ್ರದಾಯದಂತೆ ಆಹಾರ ವಿತರಣೆ ಮಾಡಿದ್ದಾರೆ.

ಮತ್ತಷ್ಟು ದಾಖಲೆ ಕೇಳಿರುವ ಇ.ಡಿ
ಜಮೀರ್ ಅಹ್ಮದ್ ಆಸ್ತಿಪಾಸ್ತಿ ಸಂಬಂಧಿಸಿ ಇ.ಡಿ ಅಧಿಕಾರಿಗಳು ಮತ್ತಷ್ಟು ದಾಖಲೆ ಕೇಳಿದ್ದಾರೆ. ಹತ್ತು ದಿನಗಳ ಒಳಗೆ ಮತ್ತಷ್ಟು ಸೂಕ್ತ ದಾಖಲೆಗಳನ್ನು ಒದಗಿಸುವಂತೆ ತಿಳಿಸಿದ್ದಾರೆ. ದಾಖಲೆ ಒದಗಿಸದಿದ್ದರೆ ಇ.ಡಿಯಿಂದ ಜಮೀರ್ಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಇದೆಲ್ಲ ಒತ್ತಡದ ಮಧ್ಯೆ ನಾಳೆ ಕ್ಷೇತ್ರದ ಕಚೇರಿಗೆ ಜಮೀರ್ ಅಹ್ಮದ್ ಭೇಟಿ ನೀಡಲಿದ್ದಾರೆ.

ಇದನ್ನೂ ಓದಿ: ಡಿಲೀಟ್ ಆಗಿದ್ದ ಡಾಟಾ ರಿಕವರಿಯೇ ಶಾಸಕ ಜಮೀರ್ ಅಹ್ಮದ್ ಆಸ್ತಿ ಮೇಲೆ ದಾಳಿಗೆ ಕಾರಣವಾಯ್ತು!