ಬೆಂಗಳೂರು: ಕಾಫಿ ಕೆಫೆಯ ಮಹಿಳೆಯರ ಶೌಚಾಲಯದಲ್ಲಿ ​ಮೊಬೈಲ್ ಇಟ್ಟಿದ್ದ ಆರೋಪಿ ಅರೆಸ್ಟ್​​

|

Updated on: Aug 11, 2024 | 1:04 PM

ಬೆಂಗಳೂರಿನ ಬಿಇಎಲ್​ ರಸ್ತೆಯಲ್ಲಿರುವ ಥರ್ಡ್ ವೇವ್ ಕೆಫೆಯ ಮಹಿಳೆಯರ ಶೌಚಾಲಯದ ಕಸದ ಬುಟ್ಟಿಯಲ್ಲಿ ಮೊಬೈಲ್​ ಇರಿಸಲಾಗಿತ್ತು. ಇದನ್ನು ಕಂಡ ಮಹಿಳೆಯೊಬ್ಬರು ಪರಿಶೀಲನೆ ನಡೆಸಿದಾಗ, ಮೊಬೈಲ್​ನಲ್ಲಿ ವಿಡಿಯೋ ರೆಕಾರ್ಡರ್​​ ಆನ್​ ಆಗಿತ್ತು. ಇದರಿಂದ ಗಾಬರಿಗೊಂಡ ಮಹಿಳೆ ಮುಂದೆ ಮಾಡಿದ್ದೇನು? ಈ ಸುದ್ದಿ ಓದಿ.

ಬೆಂಗಳೂರು: ಕಾಫಿ ಕೆಫೆಯ ಮಹಿಳೆಯರ ಶೌಚಾಲಯದಲ್ಲಿ ​ಮೊಬೈಲ್ ಇಟ್ಟಿದ್ದ ಆರೋಪಿ ಅರೆಸ್ಟ್​​
ಆರೋಪಿ ಮನೋಜ್
Follow us on

ಬೆಂಗಳೂರು, ಆಗಸ್ಟ್​ 11: ನಗರದ ಬಿಇಎಲ್​ ರಸ್ತೆಯಲ್ಲಿರುವ ಥರ್ಡ್ ವೇವ್ ಕೆಫೆಯ (Third Wave Coffee) ಮಹಿಳೆಯರ ಶೌಚಾಲಯದಲ್ಲಿ (Woman Toilet) ವಿಡಿಯೋ ಚಿತ್ರಕರಣಕ್ಕೆ​​ ಮೊಬೈಲ್ (Mobile) ಇಟ್ಟಿದ್ದ ಆರೋಪಿಯನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಮೂಲದ 23 ವರ್ಷದ ಮನೋಜ್ ಬಂಧಿತ ಆರೋಪಿ. ಆರೋಪಿ ಮನೋಜ್ ಇದೇ ಕಾಫಿ ಶಾಪ್​ನಲ್ಲಿ ಕಾಫಿ ಮೇಕರ್ ಆಗಿ ಕೆಲಸ ಮಾಡುತ್ತಿದ್ದನು. ಆರೋಪಿ ಮನೋಜ್​ ಶನಿವಾರ (ಆ.10) ಬೆಳಗ್ಗೆ ಮಹಿಳೆಯರ ಶೌಚಾಲಯಕ್ಕೆ ಹೋಗಿದ್ದಾನೆ.

ಅಲ್ಲಿ ಕಸದ ಬುಟ್ಟಿಗೆ ಹೋಲ್​ ಮಾಡಿದ್ದಾನೆ. ನಂತರ ಮೊಬೈಲ್​​ ಅನ್ನು ಫ್ಲೈಟ್​ ಮೂಡ್​​ಗೆ ಹಾಕಿ ವಿಡಿಯೋ ಚಿತ್ರಕರಣಕ್ಕೆ ಇರಿಸಿ, ಹೊರ ಬಂದು ಯಥಾಪ್ರಕಾರ ತನ್ನ ಕೆಲಸದಲ್ಲಿ ತೊಡಗಿಕೊಂಡಿದ್ದಾನೆ. ನಂತರ ಶೌಚಾಲಯಕ್ಕೆ ಹೋದ ಮಹಿಳೆಯೊಬ್ಬರು ಮೊಬೈಲ್​ ಇರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಕೂಡಲೆ ಸ್ಥಳಕ್ಕೆ ಬಂದ ಸದಾಶಿವನಗರ ಪೊಲೀಸರು ಪರಿಶೀಲನೆ ನಡೆಸಿ, ಆರೋಪಿ ಮನೋಜ್​ನನ್ನು ಬಂಧಿಸಿದ್ದಾರೆ.

ಈ ಬಗ್ಗೆ ಸಿದ್ದಾರ್ಥ ಎಂಬುವರು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ, “ಬೆಂಗಳೂರಿನ ಥರ್ಡ್ ವೇವ್ ಕಾಫಿ ಔಟ್‌ಲೆಟ್‌ನ ವಾಶ್‌ರೂಮ್‌ನಲ್ಲಿ ಹಿಡನ್ ಕ್ಯಾಮೆರಾ ಪತ್ತೆಯಾಗಿದೆ ಎಂದು ನಂಬಲಾಗುತ್ತಿಲ್ಲ. ಅಂತಹ ಜನಪ್ರಿಯ ಸ್ಥಳದಲ್ಲಿ ಇದು ಸಂಭವಿಸಬಹುದು ಎಂಬುದು ಹುಚ್ಚುತನದ ಸಂಗತಿ ಎಂದುಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಯುವತಿಯ ಎದೆ ಭಾಗ ಮುಟ್ಟಿ ಪರಾರಿಯಾಗಿದ್ದ ಆರೋಪಿ ಬಂಧನ

ಇದಕ್ಕೆ ಥರ್ಡ್ ವೇವ್ ಕೆಫೆ ಇಂಡಿಯಾ ಪ್ರತಿಕ್ರಿಯಿಸಿದ್ದು, ನಮ್ಮ ಬೆಂಗಳೂರಿನ ಬಿಇಎಲ್ ರಸ್ತೆಯ ಶಾಖೆಯಲ್ಲಿ ನಡೆದ ಅಹಿತಕರ ಘಟನೆಗೆ ನಾವು ವಿಷಾದಿಸುತ್ತೇವೆ. ಮತ್ತು ಥರ್ಡ್ ವೇವ್ ಕಾಫಿಯಲ್ಲಿ ಅಂತಹ ಕ್ರಮಗಳು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಸಿಬ್ಬಂದಿಯನ್ನು ತಕ್ಷಣವೇ ವಜಾಗೊಳಿಸಿದ್ದೇವೆ. ನಮ್ಮ ಗ್ರಾಹಕರ ಸುರಕ್ಷತೆ ನಮಗೆ ಬಹಳ ಮುಖ್ಯ. ಈ ಪರಿಸ್ಥಿತಿಯನ್ನು ನಾವು ತ್ವರಿತವಾಗಿ ಪರಿಹರಿಸಿದ್ದೇವೆ ಎಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:56 pm, Sun, 11 August 24