ಬಿಬಿಎಂಪಿ ಪಾರ್ಕ್‌ನಲ್ಲಿ ಜೀವ ಬಲಿಗಾಗಿ ಕಾದು ಕುಳಿತ ಒಣಗಿದ ಮರಗಳು! ತೆರವಿಗೆ ಸಾರ್ವಜನಿಕರ ಮನವಿ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗಳಲ್ಲಿ ಗುಂಡಿ ಸಮಸ್ಯೆ ಒಂದಡೆಯಾದರೆ ಮತ್ತೊಂದೆಡೆಗೆ ರಸ್ತೆ ಪಕ್ಕದಲ್ಲಿರೋ ಒಣಗಿದ ಮರಗಳು ಸಾರ್ವಜನಿಕರ ಬಲಿಗಾಗಿ ಕಾದು ಕುಳಿತರೆ ಅತ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಾರ್ಕ್‌ಗಳಲ್ಲಿ ಕೂಡ ಒಣಗಿದ ಮರಗಳು ಬಲಿಗಾಗಿ ಕಾದು ಕುಳಿತಿವೆ. ಹೀಗಾಗಿ ಒಣಗಿದ ಮರ ತೆರವಿಗೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಬೆಂಗಳೂರು, ಆಗಸ್ಟ್ 10: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಗಾಗ ಬಂದು ಹೋಗೊ ಮಳೆ ಹಿನ್ನಲೆ ಸಾಕಷ್ಟು ಅವಾಂತರ ಸೃಷ್ಟಿಯಾಗುತ್ತಿವೆ. ರಸ್ತೆ ಗುಂಡಿಗಳ ಸಮಸ್ಯೆ ಜೊತೆಗೆ ಯಾವಾಗ ಯಾವ ಮರ ಬೀಳುತ್ತೋ ಅಂತ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುತ್ತಿದ್ದಾರೆ. ಹೀಗಿರುವಾಗ ಗಾಳಿ ಮಳೆಯಿಂದಾಗಿ ನಗರದಲ್ಲಿ ನೂರಾರು ಮರಗಳು ಧರೆಗುರುವೆ, ಮತ್ತೊಂದೆಡೆ ನಗರದ ಪ್ರಮುಖ ಬೀದಿಗಳಲ್ಲಿ ಒಣಗಿದ ಮರಗಳು (Dry trees) ಜನರ ಬಲಿಗಾಗಿ ಕಾದು ನಿಂತಿದ್ರೆ, ಜಯನಗರ 4 ನೇ ಬ್ಲಾಕ್‌ನ ಬಿಬಿಎಂಪಿ (BBMP) ಸಾರ್ವಜನಿಕ ಪಾರ್ಕ್‌ನಲ್ಲಿ15 ಕ್ಕೂ ಅಧಿಕ ಮರಗಳು ಒಣಗಿ ಹೋಗಿದ್ದು ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿದ್ದು, ಬೆಳಿಗ್ಗೆ ಸಾಯಂಕಾಲ ವಾಕಿಂಗ್‌ಗೆ ಬರೋ ಜನರು ವಾಕಿಂಗ್ ಮಾಡಲು ಭಯ ಪಡುವಂತಾಗಿದ್ದು, ವಾಕಿಂಗ್ ಮಾರೋರು ಜೀವಕಳೆದುಕೊಳ್ಳೊಕೆ ಬರ್ತಾರಾ ಹೀಗಾಗಿ ಒಣಗಿದ ಮರಗಳನ್ನ ತೆರವುಗೊಳಿಸುವಂತೆ ಆಗ್ರಹಿಸುತ್ತಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿರುವ ಯಾವುದೇ ಮರಗಳನ್ನ ಪಾಲಿಕೆ ಅನುಮತಿ ಇಲ್ಲದೇ ತೆರವಿಗೊಳಿಸುವಂತಿಲ್ಲ. ಇನ್ನೂ ಈ ಪಾರ್ಕ್‌ನ್ನ ತುಂಬಾ ಚೆನ್ನಾಗಿ ನಿರ್ವಹಣೆ ಮಾಡಲಾಗುತ್ತಿದೆಯಾದರೆ ಅವರು ಮರಗಳನ್ನ ತೆರವುಗೊಳಿಸುವಂತಿಲ್ಲ. ಇಲ್ಲಿರುವಂತಹ ಮರಗಳ ಒಣಗಿದ ರೆಂಬೆಕೊಂಬೆ ಹಾಗೂ ಸಂಪೂರ್ಣವಾಗಿ ಒಣಗಿದ ಮರಗಳನ್ನ ಪಾಲಿಕೆಯ ಅರಣ್ಯ ವಿಭಾಗದ ಅಧಿಕಾರಿಗಳು ತೆರವುಗೊಳಿಸಬೇಕು. ಆದರೆ ಪಾಲಿಕೆ ಅಧಿಕಾರಿಗಳು ಮಾತ್ರ ಈ ಬಗ್ಗೆ ತಲೆ ಕೆಡಸಿಕೊಳ್ಳದೇ ನಿರ್ಲಕ್ಷ ವಹಿಸುತ್ತಿದ್ದಾರೆ.
ಇದನ್ನೂ ಓದಿ: ಬಿಲ್ ಬಾಕಿ ವಸೂಲಿಗೆ ಜಲಮಂಡಳಿಯ ನಯಾ ಪ್ಲ್ಯಾನ್: ನೀರಿನ ಬಿಲ್ ಬಾಕಿದಾರರಿಗೆ ಸಿಗುತ್ತಾ 50-50 ಆಫರ್?
ಪರಿಣಾಮ ಪಾರ್ಕ್‌ನಲ್ಲಿ ಕುಳಿತುಕೊಳ್ಳಲು ಓಡಾಡಲು ಭಯ ಪಡುತ್ತಿರೋ ಜನರು ಮತ್ತೊಂದೆಡೆಗೆ ಒಣಗಿದ ಮರಗಳಿಂದ ಪಾರ್ಕ್ ಪಕ್ಕದಲ್ಲಿ ವಾಹನಗಳನ್ನ ನಿಲ್ಲಿಸಲು ಕೂಡ ಜನರು ಭಯ ಪಡುವಂತಾಗಿದೆ. ಮಳೆ ಬಂದು ಮರ ಬಿದ್ದಾಗ ತೆರವುಗೊಳಿಸುವ ಬದಲು ಇದೀಗ ಒಣಗಿದ ಮರಗಳನ್ನ ತೆರವುಗೊಳಿಸುವ ಮೂಲಕ ಸಾರ್ವಜನಿಕರ ಓಡಾಟಕ್ಕೆ ಅನಕೂಲ ಮಾಡಿಕೊಡಿ ಎನ್ನುತ್ತಾರೆ ವಾಯುವಿಹಾರಿಗಳು.
ಇದನ್ನೂ ಓದಿ: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಬಿಬಿಎಂಪಿಯಿಂದ ಗುಡ್ನ್ಯೂಸ್: ಒಟಿಎಸ್ ಕಾಲಾವಕಾಶ 2 ತಿಂಗಳು ವಿಸ್ತರಣೆ
ಈ ಒಣಗಿದ ಮರಗಳಿಂದ ಏನಾದ್ರು ಅವಘಡಗಳು ಸಂಭವಿಸುವ ಮುನ್ನ ಪಾಲಿಕೆಯ ಅರಣ್ಯ ವಿಭಾಗ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಒಣಗಿದ ಮರಗಳ ತೆರವಿಗೆ ಮುಂದಾಗುತ್ತಾರಾ ಇಲ್ವಾ ಕಾದು ನೋಡಬೇಕು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:04 pm, Sat, 10 August 24