AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿರಾ ಕ್ಯಾಂಟೀನ್‌ಗಳಿಗೆ ಡಿಜಿಟಲ್ ಟಚ್; ಹೋಟೆಲ್, ರೆಸ್ಟೋರೆಂಟ್ ರೀತಿ ಆರ್ಡರ್ ಮಾಡುವ ವ್ಯವಸ್ಥೆ

ಬಡವರು, ಮಧ್ಯಮ ವರ್ಗದ ಜನರ ಅಕ್ಷಯ ಪಾತ್ರೆಯಂತಿರೋ ಇಂದಿರಾ ಕ್ಯಾಂಟೀನ್​ಗಳಿಗೆ ಹೈಟೆಕ್ ಟಚ್ ನೀಡೋಕೆ ಪಾಲಿಕೆ ಸಜ್ಜಾಗಿದೆ. ಬೆಂಗಳೂರಿನ ಇಂದಿರಾ ಕ್ಯಾಂಟೀನ್​ಗಳಿಗೆ ರೆಸ್ಟೋರೆಂಟ್ ಸ್ಟೈಲ್​ನಲ್ಲಿ ಡಿಜಿಟಲ್ ಟಚ್ ನೀಡಲು ಬಿಬಿಎಂಪಿ ತಯಾರಿ ನಡೆಸುತ್ತಿದೆ. ಈ ಮೂಲಕ ಇಂದಿರಾ ಕ್ಯಾಂಟೀನ್ ಗುಣಮಟ್ಟವನ್ನ ಮತ್ತಷ್ಟು ಸುಧಾರಿಸಲು ಮುಂದಾಗಿದೆ.

ಇಂದಿರಾ ಕ್ಯಾಂಟೀನ್‌ಗಳಿಗೆ ಡಿಜಿಟಲ್ ಟಚ್; ಹೋಟೆಲ್, ರೆಸ್ಟೋರೆಂಟ್ ರೀತಿ ಆರ್ಡರ್ ಮಾಡುವ ವ್ಯವಸ್ಥೆ
ಇಂದಿರಾ ಕ್ಯಾಂಟೀನ್
ಶಾಂತಮೂರ್ತಿ
| Updated By: ಆಯೇಷಾ ಬಾನು|

Updated on: Aug 09, 2024 | 7:20 AM

Share

ಬೆಂಗಳೂರು, ಆಗಸ್ಟ್​.09: ಕಡಿಮೆ ಬೆಲೆಗೆ ತಿಂಡಿ-ಊಟ ಪೂರೈಸುವ ಕನಸಿನೊಂದಿಗೆ ಸರ್ಕಾರ ಆರಂಭಿಸಿರುವ ಇಂದಿರಾ ಕ್ಯಾಂಟೀನ್​ಗೆ (Indira Canteen) ಇದೀಗ ಡಿಜಿಟಲ್ ಟಚ್ ನೀಡಲು ಪಾಲಿಕೆ ಸಜ್ಜಾಗಿದೆ. ಇಂದಿರಾ ಕ್ಯಾಂಟೀನ್​ಗಳಲ್ಲಿ ಹೋಟೆಲ್, ರೆಸ್ಟೋರೆಂಟ್​ಗಳ ರೀತಿ ಡಿಜಿಟಲ್​ನಲ್ಲಿ ಆರ್ಡರ್ ಪಡೆಯೋ ವ್ಯವಸ್ಥೆ ಜಾರಿಗೆ ತರಲು ಬಿಬಿಎಂಪಿ (BBMP) ಪ್ಲಾನ್ ಮಾಡುತ್ತಿದೆ. ಆಹಾರದ ಗುಣಮಟ್ಟ, ಗ್ರಾಹಕರ ಬೇಡಿಕೆ, ಕುಂದು ಕೊರತೆಗಳನ್ನ ಡಿಜಿಟಲ್ ವ್ಯವಸ್ಥೆಯ ಮೂಲಕ ಕಲೆ ಹಾಕೋಕೆ ಚಿಂತನೆ ನಡೆಸಿದೆ.

ಬೆಂಗಳೂರಿನ 169 ಇಂದಿರಾ ಕ್ಯಾಂಟೀನ್​ಗಳಲ್ಲಿ ಡಿಜಿಟಲ್ ವ್ಯವಸ್ಥೆ ಅಳವಡಿಕೆಗೆ ಸಜ್ಜಾಗಿರೋ ಪಾಲಿಕೆ, ಇದೀಗ ಆರ್.ಆರ್.ನಗರ ವ್ಯಾಪ್ತಿಯಲ್ಲಿ ಟ್ರಯಲ್ ನಡೆಸಿ ಸಾಧಕ-ಬಾಧಕಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. ಬೆಂಗಳೂರಿನ ಇಂದಿರಾ ಕ್ಯಾಂಟೀನ್ ಗಳಲ್ಲಿ ಡಿಜಿಟಲ್ ವ್ಯವಸ್ಥೆ ಅಳವಡಿಕೆಗೆ ಶೀಘ್ರದಲ್ಲೇ ಟೆಂಡರ್ ಕರೆಯೋಕೆ ಸಜ್ಜಾಗಿದೆ. ಸದ್ಯ ಇರುವ ಇಂದಿರಾ ಕ್ಯಾಂಟೀನ್​ಗಳಲ್ಲಿ ಆಹಾರದ ಗುಣಮಟ್ಟ, ಗುತ್ತಿಗೆದಾರರ ಸಮಸ್ಯೆಗಳು, ಶುಚಿತ್ವ, ಬೇಡಿಕೆ ಕುರಿತು ದೂರುಗಳು ಬಂದ ಬೆನ್ನಲ್ಲೆ ಡಿಜಿಟಲ್ ತಂತ್ರಜ್ಞಾನದ ಮೊರೆ ಹೋಗಲು ಪಾಲಿಕೆ ಪ್ಲಾನ್ ಮಾಡಿದೆ.

ಇದನ್ನೂ ಓದಿ: ಬಿಲ್ ಬಾಕಿ ವಸೂಲಿಗೆ ಜಲಮಂಡಳಿಯ ನಯಾ ಪ್ಲ್ಯಾನ್​: ನೀರಿನ ಬಿಲ್ ಬಾಕಿದಾರರಿಗೆ ಸಿಗುತ್ತಾ 50-50 ಆಫರ್?

ಡಿಜಿಟಲ್ ಟಚ್ ಪ್ರಯೋಜನಗಳೇನು?

  • ಇಂದಿರಾ ಕ್ಯಾಂಟೀನ್​ಗಳ ಕಾರ್ಯನಿರ್ವಹಣೆ ಮಾಹಿತಿ ಸಂಗ್ರಹ
  • ಗ್ರಾಹಕರು ಆರ್ಡರ್ ಮಾಡಿದ್ರೆ ಪ್ರಧಾನ ಕಚೇರಿಗೂ ಆರ್ಡರ್ ಮಾಹಿತಿ ರವಾನೆ
  • ಡಿಜಿಟಲ್ ಟೆಕ್ನಾಲಜಿ ಮೂಲಕ ಆರ್ಡರ್ ಗೆ ಅವಕಾಶ
  • ಆಹಾರದ ಬೇಡಿಕೆ, ಗುಣಮಟ್ಟ, ಗ್ರಾಹಕರ ಅನಿಸಿಕೆ ಸಂಗ್ರಹಕ್ಕೆ ಸಹಾಯ
  • ಕುಂದು-ಕೊರತೆಗಳ ಬಗ್ಗೆ ಮಾಹಿತಿ ಕಲೆಗೆ ಸಹಾಯ

ಒಟ್ಟಿನಲ್ಲಿ ರಾಜಧಾನಿಯ ಇಂದಿರಾ ಕ್ಯಾಂಟೀನ್​ಗಳ ಬಗ್ಗೆ ಅಲ್ಲಲ್ಲಿ ಅಪಸ್ವರ ಕೇಳಿಬರ್ತಿದ್ದು, ಸದ್ಯ ಈ ಸಮಸ್ಯೆಗಳನ್ನ ಬಗೆಹರಿಸೋಕೆ ಪಾಲಿಕೆ ಡಿಜಿಟಲ್ ತಂತ್ರಜ್ಞಾನ ಅಳವಡಿಕೆಗೆ ಸಜ್ಜಾಗ್ತಿದೆ. ಸದ್ಯ ಇರೋ ಕ್ಯಾಂಟೀನ್ ಗಳ ನಿರ್ವಹಣೆ ವಿಚಾರದಲ್ಲೇ ಹಲವು ಆರೋಪ ಎದುರಿಸ್ತಿರೋ ಪಾಲಿಕೆ, ಡಿಜಿಟಲ್ ತಂತ್ರಜ್ಞಾನದ ಅಳವಡಿಕೆಯಿಂದ ಇಂದಿರಾ ಕ್ಯಾಂಟೀನ್ ಗಳ ಗುಣಮಟ್ಟವನ್ನ ಎಷ್ಟರಮಟ್ಟಿಗೆ ಸುಧಾರಿಸುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ