ಒಂದು ಫೋನ್ ಕರೆಯಿಂದ ಕೋಟ್ಯಾಂತರ ರೂ ಹಣ ಕಳೆದುಕೊಂಡ ದಂಪತಿ: ಲಂಡನ್​ನಲ್ಲಿ ಕುಳಿತು ಕೃತ್ಯ

ಹಣ ಡಬ್ಲಿಂಗ್​ ಹೆಸರಿನಲ್ಲಿ ಬೆಂಗಳೂರಿನ ಟೆಕ್ಕಿ ದಂಪತಿಗೆ 2,66,75,791 ರೂಪಾಯಿ ವಂಚನೆ ಮಾಡಿರುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಹೂಡಿಕೆ ಮಾಡಿದರೆ ಡಬಲ್ ಹಣ ನೀಡುವುದಾಗಿ ದಂಪತಿಗೆ ಆಮಿಷವೊಡ್ಡಿ ಕೋಟ್ಯಾಂತರ ರೂ ವಂಚನೆ ಮಾಡಲಾಗಿದೆ. ಸದ್ಯ ಈ ಬಗ್ಗೆ ಬೆಂಗಳೂರು ಪೂರ್ವ ವಿಭಾಗದ CEN ಠಾಣೆಗೆ ದೂರು ನೀಡಲಾಗಿದೆ.

ಒಂದು ಫೋನ್ ಕರೆಯಿಂದ ಕೋಟ್ಯಾಂತರ ರೂ ಹಣ ಕಳೆದುಕೊಂಡ ದಂಪತಿ: ಲಂಡನ್​ನಲ್ಲಿ ಕುಳಿತು ಕೃತ್ಯ
ಒಂದು ಫೋನ್ ಕರೆಯಿಂದ ಕೋಟ್ಯಾಂತರ ರೂ ಹಣ ಕಳೆದುಕೊಂಡ ದಂಪತಿ: ಲಂಡನ್​ನಲ್ಲಿ ಕುಳಿತು ಕೃತ್ಯ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Aug 10, 2024 | 9:54 PM

ಬೆಂಗಳೂರು, ಆಗಸ್ಟ್​ 10: 1 ಫೋನ್ ಕರೆಯಿಂದ ಬೆಂಗಳೂರಿನ ಟೆಕ್ಕಿ ದಂಪತಿ (couple) 2,66,75,791 ರೂ. ಹಣ (money) ಕಳೆದುಕೊಂಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಬಳಿಕ ಪೂರ್ವ ವಿಭಾಗ ಸಿ.ಇ.ಎನ್​ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೇಸ್ ದಾಖಲಿಸಿ ತನಿಖೆ ಮಾಡಿದಾಗ ಹಣದ ವರ್ಗಾವಣೆ ಜಾಲ ಪತ್ತೆ ಆಗಿದೆ. ಸುಮಾರು ಐವತ್ತು ಅಕೌಂಟ್​ಗಳಿಗೆ ಹಣ ಹೋಗಿರುವುದು ಪತ್ತೆಯಾಗಿದ್ದು, ಹಂತ ಹಂತವಾಗಿ ಒಟ್ಟು ಒಂದು ಕೋಟಿ ಐದು ಲಕ್ಷ ರೂ. ಪೊಲೀಸರು ಫ್ರೀಜ್ ಮಾಡಿದ್ದು, ನಂತರ ನ್ಯಾಯಾಲಯದ ಅನುಮತಿ ಪಡೆದು ವಾಪಸ್ಸು ನೀಡಿದ್ದಾರೆ.

ಕೋಟ್ಯಾಂತರ ರೂ ಕಳೆದುಕೊಂಡ ದಂಪತಿಗೆ ಮೊದಲಿಗೆ ಕರೆ ಮಾಡಿ ಯುಟ್ಯೂಬ್​ನಲ್ಲಿ ವಿಡಿಯೋ ನೋಡಿ ಸಬ್​ಸ್ಕ್ರೈಬ್​ ಮಾಡಿದರೆ 50 ರೂ. ನೀಡುವುದಾಗಿ ಹೇಳಿದ್ದರು. ವಿಡಿಯೋ ಸಬ್​ಸ್ಕ್ರೈಬ್ ಮಾಡಿದ್ದ ಟೆಕ್ಕಿ ದಂಪತಿಗೆ ಹಣ ನೀಡಿದ್ದರು. ನಂತರ ಟೆಲಿಗ್ರಾಂ ಗ್ರೂಪ್​ಗೆ ಆ್ಯಡ್ ಮಾಡಿ ಹೂಡಿಕೆ ಮಾಡಿದರೆ ಡಬಲ್ ಹಣ ನೀಡುವುದಾಗಿ ದಂಪತಿಗೆ ಆಮಿಷ ಒಡಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಕಟ್ಟಡ ನಿರ್ಮಾಣ ವೇಳೆ ಸೆಂಟ್ರಿಂಗ್​ ಕುಸಿತ: ಮೂವರ ಪೈಕಿ ಇಬ್ಬರು ಕಾರ್ಮಿಕರು ಸಾವು

ಮೊದಲಿಗೆ 2-3 ಲಕ್ಷ ರೂ. ಹೂಡಿಕೆ ಮಾಡಿದ್ದವರಿಗೆ ಲಾಭಾಂಶ ನೀಡಿದ್ರು. ನಂತರ ಹಂತಹಂತವಾಗಿ 2,66,75,791 ರೂ ದಂಪತಿ ಹೂಡಿಕೆ ಮಾಡಿದ್ದಾರೆ. ಹಣ ವಾಪಸ್ಸು ಪಡೆಯಲು ಮುಂದಾದಾಗ ಬಂದಿಲ್ಲ. ಪ್ರಶ್ನೆ ಮಾಡಿದಾಗ ಮತ್ತೆ ಐವತ್ತು ಲಕ್ಷ ರೂ. ಹೂಡಿಕೆ ಮಾಡಲು ಸೂಚಿಸಲಾಗಿದೆ. ಹೀಗಾಗಿ ಹೆದರಿ ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಲಂಡನ್​​ನಲ್ಲಿ ಕುಳಿತು ಕೃತ್ಯ

ಆರೋಪಿ ಲಂಡನ್​​ನಲ್ಲಿ ಕುಳಿತು ಕೃತ್ಯ ಎಸಗಿರುವ ಬಗ್ಗೆ ಮಾಹಿತಿ ಇದ್ದು, ಉತ್ತರ ಭಾರತದ ಹಲವಾರು ಅಕೌಂಟ್​ಗಳನ್ನು ಬಳಕೆ ಮಾಡಿದ್ದಾರೆ. ಶೇರ್ ಮಾರ್ಕೆಟ್ ಬ್ರೋಕರೇಜ್ ರೀತಿಯ ನಕಲಿ ವೆಬ್​ಸೈಟ್ ರಚನೆ ಮಾಡಿದ್ದಾರೆ. ವೆಬ್​ಸೈಟ್​ನಲ್ಲಿ ನಕಲಿಯಾಗಿ ಹಣ ಹೆಚ್ಚಾಗಿರುವಂತೆ ಬಿಂಬಿಸಿದ್ದಾರೆ. ಹೀಗೆ ವಿವಿಧ ಮಾದರಿಯಲ್ಲಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದ್ದು ಸದ್ಯ ಆರೋಪಿ ಯಾರು ಎಂಬುದರ ಸ್ಪಷ್ಟತೆ ಇಲ್ಲಾ. ಆದರೆ ಕಳೆದುಕೊಂಡ ಹಣವನ್ನು ಪೊಲೀಸರು ವಾಪಸ್ಸು ಕೊಡಿಸುತ್ತಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.