ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮೋದಿ ಕುಟುಂಬ ರಾಜಕಾರಣ ಬಗ್ಗೆ ಪ್ರಸ್ತಾಪಿಸಿದ್ದಾರೆ; ಇನ್ಮುಂದೆ ನನ್ನ ಮಗನಿಗೆ MLA, MLC, MP ಟಿಕೆಟ್ ಬೇಕು ಅನ್ನಂಗಿಲ್ಲ -ಯತ್ನಾಳ್

ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಕುಟುಂಬ ರಾಜಕಾರಣ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇನ್ಮುಂದೆ ನನ್ನ ಮಗನಿಗೆ MLA, MLC, MP ಟಿಕೆಟ್ ಬೇಕು ಅನ್ನಂಗಿಲ್ಲ. ಚುನಾವಣಾ ಸಮಿತಿಯಲ್ಲಿರುವವರಿಗೆ ಕೆಲವೊಮ್ಮೆ ಟಿಕೆಟ್ ಸಿಗುವುದಿಲ್ಲ. ನಾನೇ ಸಮಿತಿಯಲ್ಲಿದ್ದರೂ ಒಮ್ಮೊಮ್ಮೆ ಟಿಕೆಟ್ ಪಡೆಯಲಾಗುವುದಿಲ್ಲ.

ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮೋದಿ ಕುಟುಂಬ ರಾಜಕಾರಣ ಬಗ್ಗೆ ಪ್ರಸ್ತಾಪಿಸಿದ್ದಾರೆ; ಇನ್ಮುಂದೆ ನನ್ನ ಮಗನಿಗೆ MLA, MLC, MP ಟಿಕೆಟ್ ಬೇಕು ಅನ್ನಂಗಿಲ್ಲ -ಯತ್ನಾಳ್
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ
TV9kannada Web Team

| Edited By: Ayesha Banu

Aug 17, 2022 | 5:41 PM

ಬೆಂಗಳೂರು: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ(Azadi Ka Amrit Mahotsav) ಕುಟುಂಬ ರಾಜಕಾರಣದ ಅಂತ್ಯದ ಬಗ್ಗೆ ಪ್ರಧಾನಿ ಮೋದಿ(Narendra Modi) ಹೇಳಿದ್ದಾರೆ. ಆ ಅಂತ್ಯದ ಕಾಲ ಅಮೃತ ಮಹೋತ್ಸವದಿಂದ ಪ್ರಾರಂಭವಾಗುತ್ತದೆ. ಇನ್ಮೇಲೆ ನನ್ನ ಮಗನಿಗೆ ಎಂಎಲ್ಎ ಬೇಕು, ಎಂಎಲ್ಸಿ‌ ಬೇಕು, ಎಂಪಿ ಬೇಕು ಅನ್ನೋದು ನಡೆಯುವುದಿಲ್ಲ. ಕೆಲವೊಮ್ಮೆ ಚುನಾವಣಾ ಸಮಿತಿಯಲ್ಲಿರುವವರಿಗೆ ಟಿಕೆಟ್ ಸಿಗೋದಿಲ್ಲ ಎಂದು ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್(Basanagouda Patil Yatnal) ಹೇಳಿಕೆ ನೀಡಿದ್ದಾರೆ.

ಬಿಜೆಪಿ ಸಂಸದೀಯ ಮಂಡಳಿ, ಚುನಾವಣಾ ಸಮಿತಿಯಲ್ಲಿ ಬಿಎಸ್ ಯಡಿಯೂರಪ್ಪಗೆ ಸ್ಥಾನ ಸಿಕ್ಕಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಯತ್ನಾಳ್, ಪಕ್ಷದ ಮುಂದಿನ ಭವಿಷ್ಯದ ಆಧಾರದಲ್ಲಿ ಈ ನಿರ್ಣಯ ಮಾಡಿದೆ ಎಂದರು. ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಕುಟುಂಬ ರಾಜಕಾರಣ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇನ್ಮುಂದೆ ನನ್ನ ಮಗನಿಗೆ MLA, MLC, MP ಟಿಕೆಟ್ ಬೇಕು ಅನ್ನಂಗಿಲ್ಲ. ಚುನಾವಣಾ ಸಮಿತಿಯಲ್ಲಿರುವವರಿಗೆ ಕೆಲವೊಮ್ಮೆ ಟಿಕೆಟ್ ಸಿಗುವುದಿಲ್ಲ. ನಾನೇ ಸಮಿತಿಯಲ್ಲಿದ್ದರೂ ಒಮ್ಮೊಮ್ಮೆ ಟಿಕೆಟ್ ಪಡೆಯಲಾಗುವುದಿಲ್ಲ. ಪ್ರಧಾನಿ ಮೋದಿ ನೇತೃತ್ವದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದರು.

ನನ್ನನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದರೆ ಪಕ್ಷ ಗೆಲ್ಲಿಸುತ್ತೇನೆ

ಇನ್ನು ಇದೇ ವೇಳೆ, ನನ್ನನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದರೆ ಪಕ್ಷ ಗೆಲ್ಲಿಸುತ್ತೇನೆ. ರಾಜ್ಯದಲ್ಲಿ 150 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಯತ್ನಾಳ್ ಹೇಳಿದ್ರು. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ. ನನಗೆ ಸಿಎಂ ಆಗುವ ಎಲ್ಲಾ ಅರ್ಹತೆಗಳು ಇದೆ. ಬಿಎಸ್ವೈಗೆ ಪಕ್ಷದಲ್ಲಿ ಉನ್ನತ ಸ್ಥಾನಮಾನ ಸಿಕ್ಕಿದ್ದಕ್ಕೆ ಅಭಿನಂದಿಸುವೆ. ಮುಂದೆ ಯತ್ನಾಳ್ ಸೇರಿದಂತೆ ಎಲ್ಲರಿಗೂ ಬಿಎಸ್ವೈ ಟಿಕೆಟ್ ನೀಡಲಿ ಎಂದರು.

ಬಿಜೆಪಿ ಮುಳುಗುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಯತ್ನಾಳ್, 75 ವರ್ಷಗಳ ಹಿಂದೆ ಮಹಾತ್ಮ ಗಾಂಧಿ ಕಾಂಗ್ರೆಸ್ ವಿಸರ್ಜನೆಗೆ ಸೂಚಿಸಿದ್ರು. ಕರ್ನಾಟಕದಲ್ಲಿ ಅವರದ್ದೇ ತೂತುಗಳೇ ಹೆಚ್ಚು ಇದೆ. ಅವರು ಅದನ್ನು ನೋಡಿಕೊಳ್ಳಲಿ ಎಂದರು. ಹಾಗೂ ಮಾಧುಸ್ವಾಮಿ ಮತ್ತು ಶ್ರೀರಾಮುಲು ಹೇಳಿಕೆಗಳ ವಿಚಾರವಾಗಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಮಾಡುವ ಅವಶ್ಯಕತೆ ನಮಗಿಲ್ಲ. ಶ್ರೀರಾಮುಲು ಮುಖ್ಯಮಂತ್ರಿ ಆಗಲು ಬೇಕಾದ್ರೆ ಬರಲಿ. ಮಾಧುಸ್ವಾಮಿ ಸಹಜವಾಗಿ ಮಾತನಾಡಿದ್ದಾರೆ. ಅದನ್ನು ದೊಡ್ಡದು ಮಾಡುವ ಅವಶ್ಯಕತೆ ಇಲ್ಲ. ಮಾಧುಸ್ವಾಮಿ ವಿಧಾನಸಭೆ ಅಧ್ಯಕ್ಷರು ತಪ್ಪು ಮಾಡಿದಾಗ ತಿದ್ದುತ್ತಿದ್ದರು. ನಮ್ಮ ಪಕ್ಷ ಅಧಿಕಾರಕ್ಕೆ ಬರಲು ಅವರು ಅನೇಕ ಕೊಡುಗೆ ನೀಡಿದ್ದಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada