ರಾಜ್ಯಕ್ಕೆ ಬರುತ್ತಿರುವ ಪ್ರಧಾನಿ ಮೋದಿ ಡಜನ್ ಪ್ರಶ್ನೆಗಳಿಗೆ ಉತ್ತರಿಸಬೇಕು: ಪ್ರಧಾನಿ ಮೋದಿ ವಿರುದ್ಧ ರಾಮಲಿಂಗಾರೆಡ್ಡಿ ಕಿಡಿ

ನಾವು ಒಂದು ಸಾವಿರ ಜನ ಸೇರಿದ್ದಕ್ಕೆ ಕೋವಿಡ್ ಜಾಸ್ತಿ ಅಂತಾರೆ. ಕೋವಿಡ್ ಜಾಸ್ತಿ ಆದರೆ ಕೈ ಕಾರಣ ಅಂತ ಆರೋಗ್ಯ ಸಚಿವರು ಹೇಳುತ್ತಾರೆ. ಯಾಕೆ 50 ಸಾವಿರ ಜನ ಸೇರಿದರೆ ಕೋವಿಡ್ ಜಾಸ್ತಿ ಆಗಲ್ವಾ?

ರಾಜ್ಯಕ್ಕೆ ಬರುತ್ತಿರುವ ಪ್ರಧಾನಿ ಮೋದಿ ಡಜನ್ ಪ್ರಶ್ನೆಗಳಿಗೆ ಉತ್ತರಿಸಬೇಕು: ಪ್ರಧಾನಿ ಮೋದಿ ವಿರುದ್ಧ ರಾಮಲಿಂಗಾರೆಡ್ಡಿ ಕಿಡಿ
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jun 18, 2022 | 3:04 PM

ಬೆಂಗಳೂರು: ಜೂನ್ 21ರಂದು ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ (International Yoga Day) ಪ್ರಧಾನಿ ನರೇಂದ್ರ ಮೋದಿ (PM Narendra Modi) ಈ ಬಾರಿ ಮೈಸೂರಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ರಾಜ್ಯಕ್ಕೆ ಬರುತ್ತಿರುವ ಮೋದಿ ಡಜನ್ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ನಗರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದರು. 2018ರಲ್ಲಿ ನಾವು ಅಧಿಕಾರದಲ್ಲಿದ್ದಾಗ ಮೋದಿ ಭಾಷಣ ಮಾಡಿದ್ದರು. ಸಿದ್ದರಾಮಯ್ಯ ಸರ್ಕಾರ 10 ಪರ್ಸೆಂಟ್ ಸರ್ಕಾರವೆಂದು ಆರೋಪ ಮಾಡಿದ್ದರು. ನಿಮ್ಮ ಸರ್ಕಾರ 40 ಪರ್ಸೆಂಟ್ ಸರ್ಕಾರವೆಂದು ವಿಶ್ವವಿಖ್ಯಾತಿಯಾಗಿದೆ. 40 ಪರ್ಸೆಂಟ್ ಪಡೆವುದು ಅಮೋಘ ಸಾಧನೆ ಎಂದು ಭಾವಿಸಿದ್ದೀರಾ? ವಿಶ್ವವಿಖ್ಯಾತವಾಗಿರುವ ಕಮಿಷನ್ ವಿಚಾರಕ್ಕೆ ಮೋದಿ ಉತ್ತರಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗುಡುಗಿದರು.

ಇದನ್ನೂ ಓದಿ: ಅಗ್ನಿಪಥ್ ಯೋಜನೆ ಖಂಡಿಸಿ ಜೂನ್ 20ರಂದು ಬೆಳಗಾವಿ ಬಂದ್​ಗೆ ಕರೆ!

ಸಂತೋಷ್ ಆತ್ಮಹತ್ಯೆ ಮೋದಿಯವರ ಗಮನಕ್ಕೆ ಹೋಗಿದೆ. ಈ ವಿಚಾರದಲ್ಲಿ ಮೋದಿ ಮೌನಿಬಾಬಾ ಆಗಿದ್ದು, ಇದಕ್ಕೆ ಉತ್ತರ ಕೊಡಬೇಕು. ಪಿಎಸ್ಐ ನೇಮಕಾತಿ, ಪ್ರೊಫೆಸರ್ ನೇಮಕಾತಿ, ಆರೋಗ್ಯ ಇಲಾಖೆ ನೇಮಕಾತಿ ಅಕ್ರಮಗಳಾಗಿದೆ. ಅಕ್ರಮ ಆಗಿದ್ದು ಗೊತ್ತಿದ್ದರೂ ಯಾವುದೇ ಇಡಿ ಐಟಿ ತನಿಖೆ ಮಾಡುತ್ತಿಲ್ಲ. ಅವರದೇ ಸಚಿವರು ಭ್ರಷ್ಟಾಚಾರ ನಡೆಸುತ್ತಿರುವುದು ಮೋದಿಗೆ ಕಾಣಿಸ್ತಿಲ್ವಾ? ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಅಂದ್ದರು ಎಲ್ಲಿ ದುಪ್ಪಟ್ಟಾಯ್ತು? ಯಂತ್ರೋಪಕರಣ ರಸಗೊಬ್ಬರ ಎಲ್ಲದರ ದರ ಜಾಸ್ತಿ ಆಗಿದೆ. ಆಜಾನ್ ಹಿಜಾಬು ಹಲಾಲು ಜಟ್ಕಾ ನಡೆಯುತ್ತಿದ್ದರೂ ಮೋದಿ ನಿಲುವು ಹೇಳಬೇಕು. ಸಂಘ ಪರಿವಾರ ಮಾಡುತ್ತಿರುವ ಅವಾಂತರಗಳು ಮೋದಿ ಕಣ್ಣಿಗೆ ಕಾಣುತ್ತಿಲ್ವಾ? ಈ ಸರ್ಕಾರ ಬಂದ ಮೇಲೆ ಮಾಡಿದ ಐದು ಸಾಧನೆ ಹೇಳಿಬಿಡಲಿ ನೊಡೋಣ ಎಂದು ಕಿಡಿಕಾರಿದರು.

ನಾವು ಒಂದು ಸಾವಿರ ಜನ ಸೇರಿದ್ದಕ್ಕೆ ಕೋವಿಡ್ ಜಾಸ್ತಿ ಅಂತಾರೆ

ಕೊಮ್ಮಘಟ್ಟದಲ್ಲಿ ಪ್ರಧಾನಿ ಕಾರ್ಯಕ್ರಮಕ್ಕೆ 50 ಸಾವಿರ ಜನ ಸೇರ್ತಿದ್ದಾರೆ. ನಾವು ಒಂದು ಸಾವಿರ ಜನ ಸೇರಿದ್ದಕ್ಕೆ ಕೋವಿಡ್ ಜಾಸ್ತಿ ಅಂತಾರೆ. ಕೋವಿಡ್ ಜಾಸ್ತಿ ಆದರೆ ಕೈ ಕಾರಣ ಅಂತ ಆರೋಗ್ಯ ಸಚಿವರು ಹೇಳುತ್ತಾರೆ. ಯಾಕೆ 50 ಸಾವಿರ ಜನ ಸೇರಿದರೆ ಕೋವಿಡ್ ಜಾಸ್ತಿ ಆಗಲ್ವಾ? ನಿನ್ನೆ ಮಳೆ ಬಿದ್ದು ರಸ್ತೆಗುಂಡಿಗಳು ಹೆಚ್ಚಾಗಿವೆ. ಅದಕ್ಕೆ ರಸ್ತೆ ಗುಂಡಿ ತೇಪೆ ಗೋತ್ತಾಗಬಾರದು ಅಂತ ರೋಡ್ ಶೋ ಕ್ಯಾನ್ಸಲ್ ಮಾಡಿದ್ದಾರೆ. ಬೆಂಗಳೂರಲ್ಲಿ‌ಲಕ್ಷ ಲಕ್ಷ ಪಾಟ್ ಹೋಲ್ ಆದಾಗ ಒಬ್ಬ ಸಚಿವರು ಮನೆಬಿಟ್ಟು ಹೊರಗೆ ಬರಲಿಲ್ಲ. ಈಗ ಪ್ರಧಾನಿ ಭೇಟಿ ಅಂದ್ರೆ ಸಚಿವರಿಂದ ಸಿದ್ದತೆ ಪರಿಶೀಲನೆ ಮಾಡಲಾಗುತ್ತಿದೆ. ಜನರ ಸಂಕಷ್ಟ ಬಂದಾಗ ಸಚಿವರಿಗೆ ಪರಿಶೀಲನೆ ಮಾಡೊ ಮನಸ್ಸಿಲ್ಲ. ಆದರೆ ಮೋದಿ ಬರ್ತಾರೆ ಅಂದಾಗ ಮಾತ್ರ ಭಾರೀ ಪರಿಶೀಲನೆ ಮಾಡಲಾಗುತ್ತಿದೆ. ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಎಲ್ಲ ಮಹನೀಯರಿಗೆ ಅವಮಾನ ಆಗಿದೆ. ಎಲ್ಲ ಪ್ಲ್ಯಾನ್ ಮಾಡಿಯೇ ಚಕ್ರತೀರ್ಥ ಅಧ್ಯಕ್ಷ ಮಾಡಿದ್ದು, ಇವತ್ತು ಪ್ರಧಾನಿ ಕೂಡ ಅವರ ನಿಲುವು ಹೇಳಬೇಕು. ಬಸವಣ್ಣ ಅಂಬೇಡ್ಕರ್ ಕುವೆಂಪು ನಾರಾಯಣಗುರು ಎಲ್ಲರ ಹೆಸರನ್ನೂ ಕೂಡ ಮೋದಿ ಬಳಸಿಕೊಂಡಿದ್ದಾರೆ. ಮೊನ್ನೆ ಕಬೀರದಾಸನ ವೇಷ ಹಾಕ್ಕಿಕೊಂಡಿದ್ದರಲ್ಲ, ಈಗ ಪುಸ್ತಕ ಪರಿಷ್ಕರಣೆ ಬಗ್ಗೆ ನಿಲುವು ಏನು ಮೋದಿ ಹೇಳಲಿ ಎಂದು ಪ್ರಶ್ನಿಸಿದರು.

ಬೆಂಗಳೂರು ಹಂಗೆ ಮಾಡ್ತೀವಿ ಹಿಂಗೆ ಮಾಡ್ತೀವಿ ಅಂತಾರೆ

ಬೆಂಗಳೂರು ಹಂಗೆ ಮಾಡುತ್ತೇವೆ ಹಿಂಗೆ ಮಾಡುತ್ತೇವೆ ಅಂತಾರೆ. ಬೆಂಗಳೂರು ಚುನಾವಣೆ ಬಂತಲ್ಲ ಅದಕ್ಕೆ ಸಿಎಂ ಅವರೇ ಖುದ್ದಾಗಿ ಪರಿಶೀಲನೆ ಮಾಡುತ್ತಿದ್ದಾರೆ. ಬೆಂಗಳೂರು ಅಭಿವೃದ್ಧಿ ಅಂದರೆ ಕೇವಲ ಬಿಜೆಪಿ ಶಾಸಕರ ಕ್ಷೇತ್ರದ ಅಭಿವೃದ್ಧಿನಾ? ಬಿಜೆಪಿ ಶಾಸಕರಿಗೆ 9890 ಕೋಟಿ ರೂ. ನೀಡಿದ್ದಾರೆ, ಆದರೆ ಕಾಂಗ್ರೆಸ್ ಶಾಸಕರಿಗೆ 2165 ಕೋಟಿ ನೀಡಿದ್ದಾರೆ. ಇದು ಬಿಜೆಪಿ ಶಾಸಕರ ಅಭಿವೃದ್ಧಿ ಮಾತ್ರನಾ? ಅಥವಾ ಕ್ಷೇತ್ರದ ಅಭಿವೃದ್ಧಿನಾ ನೀವೇ ಹೇಳಿ. ಪ್ರಧಾನಿ ಮೋದಿ ಒಂದು ಇಡಿ ಸಿಟಿ ರೌಂಡ್ಸ್ ಮಾಡಲಿ, ಆಗಲಾದರೂ ಎಲ್ಲ ರಸ್ತೆಗಳು ಸುಧಾರಣೆ ಆಗಬಹುದು ಎಂದು ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.