ಜೂನ್ 21 ರಿಂದ ಆಗಸ್ಟ್ 14 ರವರೆಗೆ ಯೋಗಥಾನ್; ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಸಮಿತಿ ರಚನೆ ಸರ್ಕಾರ ಆದೇಶ
ಜೂನ್ 21 ರಿಂದ ಆಗಸ್ಟ್ 14 ರವರೆಗೆ 60 ದಿನಗಳ ಯೋಗಥಾನ್ -2022 ಆಯೋಜಿಸುವ ಹಿನ್ನೆಲೆ ರಾಜ್ಯಮಟ್ಟದಲ್ಲಿ ಮತ್ತು ಜಿಲ್ಲಾಮಟ್ಟಗಳಲ್ಲಿ ಸಮಿತಿ ರಚಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು: ಜೂನ್ 21 ರಿಂದ ಆಗಸ್ಟ್ 14 ರವರೆಗೆ 60 ದಿನಗಳ ಯೋಗಥಾನ್ -2022 (Yoghanathn) ಆಯೋಜಿಸುವ ಹಿನ್ನೆಲೆ ರಾಜ್ಯಮಟ್ಟದಲ್ಲಿ ಮತ್ತು ಜಿಲ್ಲಾಮಟ್ಟಗಳಲ್ಲಿ ಸಮಿತಿ ರಚಿಸಿ ರಾಜ್ಯ ಸರ್ಕಾರ (State Government) ಆದೇಶ ಹೊರಡಿಸಿದೆ. ರಾಜ್ಯಮಟ್ಟದಲ್ಲಿ ಕ್ರೀಡಾ ಇಲಾಖೆ ಎಸಿಎಸ್ ಅಧ್ಯಕ್ಷತೆಯಲ್ಲಿ ಮತ್ತು ಜಿಲ್ಲಾಮಟ್ಟಗಳಲ್ಲಿ ಆಯಾಯ ಡಿಸಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ ಸರ್ಕಾರ ಆದೇಶ ನೀಡಿದೆ. ಆರೋಗ್ಯಕರ ಜೀವನ ವಿಧಾನದ ಭಾಗವಾಗಿ ಯೋಗ ಅಳವಡಿಸಿಕೊಳ್ಳುವುದರ ಪ್ರಯೋಜನಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಆಯುಷ್ ಇಲಾಖೆಯು ಯೋಗಥಾನ್ ಪ್ರಾರಂಭಿಸಿದೆ.
ಮೈಸೂರಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಮೋದಿ ಭಾಗಿ
ಜೂನ್ 21ರಂದು ಮೈಸೂರಿನಲ್ಲಿ ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಆಯುಷ್ ಸಚಿವಾಲಯವು ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ನಗರದ ರೇಸ್ ಕೋರ್ಸ್ ಆವರಣದಲ್ಲಿ ಭರ್ಜರಿ ಸಿದ್ಧತೆ ಮಾಡುತ್ತಿದೆ.
ಇದನ್ನು ಓದಿ: ‘ಬಿಜೆಪಿ ಜನಪ್ರತಿನಿಧಿಗಳ’ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದೇನು?
ಯೋಗಾಭ್ಯಾಸದಲ್ಲಿ 15,000 ಜನ ಭಾಗಿಯಾಗುವ ನಿರೀಕ್ಷೆ ಇದೆ. ಈ ಸಂಬಂಧ ಸಿದ್ದತಾ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾಡಳಿತಕ್ಕೆ ಈಗಾಗಲೆ ಕೆಲ ಸೂಚನೆ ನೀಡಿದ್ದಾರೆ. ಜೂ.13ರೊಳಗೆ ಯೋಗಪಟುಗಳ ಆಯ್ಕೆ ಪೂರ್ಣಗೊಳಿಸಿ, ಎಲ್ಲ ವರ್ಗಗಳ ಜನರನ್ನೂ ಸೇರ್ಪಡೆಗೊಳಿಸುವಂತೆ ಮಾಡಿ. ಯೋಗಪಟುಗಳಿಗೆ ಸಾರಿಗೆ ಸೌಲಭ್ಯ, ಲಘು ಉಪಾಹಾರ ವ್ಯವಸ್ಥೆ ಮಾಡಿ. ಕುಡಿಯುವ ನೀರು ಸೇರಿ ಎಲ್ಲ ವ್ಯವಸ್ಥೆ ಮಾಡಿ. ಕಾರ್ಯಕ್ರಮದ ಯಶಸ್ಸಿಗೆ ಒಟ್ಟು 14 ಸಮಿತಿಗಳ ರಚನೆ ಮಾಡಿ ಎಂದು ಸೂಚನೆ ನೀಡಿದ್ದಾರೆ. ಹಾಗೇ ಪ್ರಧಾನಿಯವರ ಭೇಟಿ ಸಂದರ್ಭದಲ್ಲಿ ಭದ್ರತಾ ವ್ಯವಸ್ಥೆಯಲ್ಲಿ ಲೋಪವಾಗದಂತೆ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮೋದಿ ಜೊತೆ ವೇದಿಕೆ ಹಂಚಿಕೊಳ್ಳುತ್ತಾರೆ ಯದುವೀರ್ ಒಡೆಯರ್:
ಮೋದಿ ಅವರ ಜೊತೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಪ್ರಮೋದದೇವಿ ಒಡೆಯರ್ ವೇದಿಕೆ ಹಂಚಿಕೊಳ್ಳುತ್ತಾರೆ. ಈ ವೇಳೆ ಸಿಎಂ, ರಾಜ್ಯಪಾಲರು, ಜಿಲ್ಲಾ ಉಸ್ತುವಾರಿ ಹಾಗೂ ಕೇಂದ್ರ ಆಯುಷ್ ಮಂತ್ರಿಗಳು ವೇದಿಕೆಯಲ್ಲಿ ಭಾಗಿಯಾಗಲಿದ್ದಾರೆ. ಯೋಗದ ನಂತರ ಮೈಸೂರು ಅರಮನೆಯಲ್ಲಿ ಮೋದಿ ಹಾಗೂ ಗಣ್ಯರಿಗೆ ಉಪಹಾರಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.
ಇದನ್ನು ಓದಿ: ಅಡಕೆ ಬೆಳೆಗೆ ನಿಗದಿ ಪಡಿಸಿದ ಅಂದಾಜು ವೆಚ್ಚ ಹೆಚ್ಚಳಕ್ಕೆ, ರಾಜ್ಯ ಅಡಕೆ ಟಾಸ್ಕ್ ಫೋರ್ಸ್ ದೆಹಲಿಗೆ ನಿಯೋಗ: ಆರಗ ಜ್ಞಾನೇಂದ್ರ
ಮೋದಿಗೆ ಮೈಸೂರು ಪಾಕ್ ತಯಾರಿ:
ಮೈಸೂರಿನ ಕಲೆ, ಸಂಸ್ಕೃತಿ ತಿಳಿಸಲು ಮೈಸೂರು ಜನರು ಮುಂದಾಗಿದ್ದಾರೆ. ಗುರು ಸ್ವೀಟ್ ಮಾಲೀಕರು ಮೋದಿಗೆಂದು ಮೈಸೂರು ಪಾಕ್ ತಯಾರಿಸುತ್ತಿದ್ದಾರೆ. ಮೈಸೂರಿನಲ್ಲಿ ಮೈಸೂರು ಪಾಕ್ ವಿಶೇಷವಾದ ಸಿಹಿ ತಿಂಡಿ. ರಾಜರ ಕಾಲದಲ್ಲಿ ಮೈಸೂರು ಪಾಕ್ ತಯಾರಾಗುತ್ತಿತ್ತು. ಕಾಕಾಸುರ ಮಾದಪ್ಪ ಎಂಬುವವರು ಪಾಕದಿಂದ ಸಿಹಿ ತಿನಿಸು ಮಾಡಿದ್ದರು. ಅದಕ್ಕೆ ಮೈಸೂರು ಪಾಕ್ ಅಂತಾ ಕೃಷ್ಣರಾಜ ಒಡೆಯರ್ ಹೆಸರು ನೀಡಿದ್ದರು. ಇಂದಿಗೂ ಕಾಕಾಸುರ ಮಾದಪ್ಪ ಕುಟುಂಬ ಮೈಸೂರು ಪಾಕ್ ತಯಾರಿಸುತ್ತಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:06 pm, Sat, 18 June 22