ವಿಧಾನಸೌಧದ ಎಸಿ ರೂಮ್ನಲ್ಲಿ ನಾವು ಚರ್ಚೆ ಮಾಡಬಹುದು. ಆದರೆ ಎಲ್ಲಾ ಸಮಸ್ಯೆಗಳನ್ನು ಸ್ಥಳೀಯ ಸಂಸ್ಥೆಗಳು ಬಗೆಹರಿಸಬೇಕು ಎಂದು ಮಾತನಾಡಿದ ಬೊಮ್ಮಾಯಿ, ಹಾಗಾಗಿ ಸ್ಥಳೀಯ ಸಂಸ್ಥೆಗಳಿಗೆ ಅನುದಾನ, ಅಧಿಕಾರ ನೀಡಿದ್ದೇವೆ. ಗ್ರಾಮ ಒನ್ ಸ್ಥಾಪಿಸಿ ಎಲ್ಲಾ ದಾಖಲೆ ಸಿಗುವಂತೆ ಮಾಡಿದ್ದೇವೆ. ಡಿಸಿ ಕಚೇರಿ, ತಾಲೂಕು ಕಚೇರಿಗೆ ಅಲೆಯುವುದನ್ನು ತಪ್ಪಿಸಿದ್ದೇವೆ. ನಮ್ಮ ಸರ್ಕಾರ ಅಧಿಕಾರ ವಿಕೇಂದ್ರೀಕರಣಕ್ಕೆ ಮುನ್ನುಡಿ ಬರೆದಿದೆ ಎಂದರು.
ನಮ್ಮ ಸರ್ಕಾರ ಯೋಜನೆ ಜನರಿಗೆ ಮುಟ್ಟಿಸುವಂತೆ ಮಾಡಬೇಕಿದೆ. ಪ್ರಧಾನಿ ಮೋದಿ ಕಿಸಾನ್ ಸಮ್ಮಾನ್ ಯೋಜನೆ ಜಾರಿಮಾಡಿದ್ದರು. ರೈತರ ಖಾತೆಗೆ ನೇರವಾಗಿ 6 ಸಾವಿರ ರೂಪಾಯಿ ಜಮೆ ಆಗುತ್ತಿದೆ. ಮೋದಿಯವರು ಸ್ವಚ್ಛ, ದಕ್ಷ, ಪಾರದರ್ಶಕ ಆಡಳಿತ ನೀಡ್ತಿದ್ದಾರೆ. ಕರ್ನಾಟಕದ ಜನತೆಗೆ ಸೂರು ಕಲ್ಪಿಸಲು ಯೋಜನೆ ರೂಪಿಸಿದ್ದೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಬೃಹತ್ ಸಮಾವೇಶಕ್ಕೆ ಆಗಮಿಸಿದ ಜೆಪಿ ನಡ್ಡಾಗೆ ಮೈಸೂರು ಪೇಟ ತೊಡಿಸಿ ಬೆಳ್ಳಿ ಗದೆ ನೀಡಿ ಸನ್ಮಾನ ಮಾಡಲಾಯಿತು. ಈ ವೇಳೆ ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು, ಸಚಿವರು, ಶಾಸಕರು, ಸಂಸದರು, ಬಿಜೆಪಿ ನಾಯಕರು ಉಪಸ್ಥಿತಿತರಿದ್ದರು.
ಭಾರತಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಸಮಾವೇಶಕ್ಕೆ ಚಾಲನೆ ನೀಡಿದರು. ನಂತರ ಭಾರತೀಯ ಜನಸಂಘದ ಕಾರ್ಯದರ್ಶಿಯಾಗಿದ್ದ ವಾಸುದೇವ ರೆಡ್ಡಿ, ಆನಂದಮ್ಮ ದಂಪತಿಗೆ ಸನ್ಮಾನ ಜೆಪಿ ನಡ್ಡಾ ಸನ್ಮಾನಿಸಿದರು. ಒನಕೆ ಓಬವ್ವನ ವಿಗ್ರಹವನ್ನು ನೀಡಿ ಬಿಜೆಪಿ ನಾಯಕರು ಗೌರವಿಸಿದರು.
ಬಿಸಿ ಪಾಟೀಲ್, ಜೇಷ್ಠ ನಡುವೆ ವಾಗ್ವಾದ:
ಮುರುಘಾಮಠಕ್ಕೆ ಜೆಪಿ ನಡ್ಡಾ ಭೇಟಿ ನೀಡಿದ ವೇಳೆ ಬಿಸಿ ಪಾಟೀಲ್, ಜೇಷ್ಠ ನಡುವೆ ವಾಗ್ವಾದ ನಡೆಯಿತು. ನಡ್ಡಾ, ಸಿಎಂ ಮಠದಲ್ಲೇ ಇರುವಾಗ ಪ್ರತ್ಯೇಕವಾಗಿ ಹೊರಬಂದಿದ್ದೇಕೆಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಬಿಸಿ ಪಾಟೀಲ್‌ಗೆ ಬಿಜೆಪಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಜೇಷ್ಠ ಪ್ರಶ್ನಿಸಿದರು. ಎಲ್ಲಾ ನೀವು ಹೇಳಿದಂತೆ ಕೇಳಬೇಕಾ ಎಂದು ಸಚಿವ ಬಿಸಿ ಪಾಟೀಲ್ ಹೇಳಿದರು. ನಾವು ಸಹ ಬೆಳಗ್ಗೆಯಿಂದಲೂ ಕಾದಿದ್ದೇವೆ ಎಂದು ಜೇಷ್ಠ ಉತ್ತರ ನೀಡಿದರು. ನಮ್ಮ ವಯಸ್ಸೇನು, ನಿಮ್ಮ ವಯಸ್ಸೇನು ಎಂದು ಬಿಸಿಪಾಟೀಲ್ ಹೇಳಿದರು. ನೀವು ಹೇಳಿದಂತೆ ಕೇಳಲಾಗದು, ಇದೊಂದು ವ್ಯವಸ್ಥೆ ಅಂತ ಜೇಷ್ಠ ಹೇಳಿದರು.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ತಾಜಾ ಸುದ್ದಿಗಳನ್ನ ಓದಲು ಇಲ್ಲಿ ಕ್ಲಿಕ್ ಮಾಡಿ