ಈ ಮೊದಲು ದೆಹಲಿಯಿಂದ ಬಂದ ಹಣ ಬೆಂಗಳೂರಿನಲ್ಲಿ ನಿಲ್ಲುತ್ತಿತ್ತು. ಈಗ ನೇರವಾಗಿ ದೆಹಲಿಯಿಂದ ಪಂಚಾಯ್ತಿಗಳಿಗೆ ಹಣ ಬರ್ತಿದೆ. ಹಳ್ಳಿಯ ವ್ಯಕ್ತಿ ಈ ಮೊದಲು ಆಸ್ತಿ ಅಡ ಇಡದೇ ಬ್ಯಾಂಕ್ನಿಂದ ಸಾಲ ಪಡೆಯಲು ಆಗ್ತಿರಲಿಲ್ಲ. ಈಗ ಸ್ವಾಮಿತ್ವ ಯೋಜನೆಯಡಿ ಜಮೀನುಗಳನ್ನು ಡ್ರೋನ್ ಮೂಲಕ ಸರ್ವೆ ಮಾಡಿ, ಜಮೀನುಗಳ ಪ್ರಾಪರ್ಟಿ ಕಾರ್ಡ್ ರೈತರಿಗೆ ನೀಡಲಾಗಿದೆ ಎಂದು ಜೆಪಿ ನಡ್ಡಾ ತಿಳಿಸಿದರು.
ಬೊಮ್ಮಾಯಿಗೆ ಅಭಿನಂದನೆ:
ಸಿಎಂ ಬಸವರಾಜ ಬೊಮ್ಮಾಯಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾತನಾಡಿದ ನಡ್ಡಾ, ಬಯಲು ಶೌಚಮುಕ್ತ ಸ್ಥಾನದಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. ಕರ್ನಾಟಕ ಉಜ್ವಲ, ಆಯುಷ್ಮಾನ್, ಗರೀಬ್ ಕಲ್ಯಾಣ, ಕಿಸಾನ್ ಸಮ್ಮಾನ್ ಯೋಜನೆಗಳನ್ನು ಉತ್ತಮವಾಗಿ ಜಾರಿ ಮಾಡಿದೆ. ಗ್ರಾ.ಪಂ. ಸದಸ್ಯರು, ಬಿಜೆಪಿ ಕಾರ್ಯಕರ್ತರು ಜಾಗೃತಿ ಮೂಡಿಸಿ ಕೇಂದ್ರ ಸರ್ಕಾರ ಯೋಜನೆಗಳನ್ನು ಜನರಿಗೆ ತಲುಪಿಸಬೇಕು. ಸ್ವರಾಜ್ ಅಭಿಯಾನದ ಮೂಲಕ ಗ್ರಾಮದ ಅಭಿವೃದ್ಧಿಯ ಪ್ಲ್ಯಾನ್ ಜನರೇ ಮಾಡುತ್ತಿದ್ದಾರೆ. 8 ಲಕ್ಷ ಗ್ರಾಮಗಳಿಗೆ ಆಪ್ಟಿಕಲ್ ಫೈಬರ್ ಮೂಲಕ ಸಂಪರ್ಕ ನೀಡಲಾಗಿದೆ ಎಂದು ತಿಳಿಸಿದರು.
ಮುಂದುವರಿದು ಮಾತನಾಡಿದ ಅವರು, ದೇಶದಲ್ಲಿ ಸಾಮಾಜಿಕ ಭದ್ರತೆಯ ಕೆಲಸ ಮಾಡಬೇಕಾಗಿದೆ. ಅಟಲ್ ಸುರಕ್ಷಾ ಯೋಜನಾ, ಆಯುಷ್ಮಾನ್ ಭಾರತ್, ಗರೀಬ್ ಕಲ್ಯಾಣ ಸೇರಿ ವಿವಿಧ ಯೋಜನೆ ಸಾಕಾರಗೊಳಿಸಬೇಕು. ಎಫ್ಡಿಐನಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ಪಡಿತರ ಕಾರ್ಡ್ ಹೆಚ್ಚಳಗೊಳಿಸುವ ಕೆಲಸ ಬೊಮ್ಮಾಯಿ ಸರ್ಕಾರ ಮಾಡಿದೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಈಗ ರೈತರ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿದೆ. ದೇಶದ ರಕ್ಷಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ದೇಶದ ಗಡಿ ತಲುಪಲು 24 ಗಂಟೆ ಸಾಕು ಎಂಬ ಸ್ಥಿತಿ ಈಗಿದೆ. ಯಾವುದೇ ಸಂದರ್ಭದಲ್ಲಿ ಸೇನೆ ಯುದ್ಧಕ್ಕೆ ಸನ್ನದ್ಧವಾಗಿರುತ್ತದೆ. ನಾವು ಯಾವುದೇ ದೇಶದ ಭೂಮಿ ಒತ್ತುವರಿ ಮಾಡಲ್ಲ. ನಮ್ಮ ತಂಟೆಗೆ ಬಂದರೆ ನಾವು ಸುಮ್ಮನೆ ಕೂರಲ್ಲ ಎಂದು ಸಂದೇಶ್ ಸಾರಿದರು.
ಮೋದಿ ಮೇಲೆ ನಂಬಿಕೆ ಇಡಬೇಕು:
ದೇಶದ ಜನರು ಪ್ರಧಾನಿ ಮೋದಿ ಮೇಲೆ ನಂಬಿಕೆ ಇಡಬೇಕು ಎಂದು ಚಿತ್ರದುರ್ಗದ ಮುರುಘಾಮಠದಲ್ಲಿ ಜೆಪಿ ನಡ್ಡಾ ಹೇಳಿಕೆ ನೀಡಿದರು. ಅಗ್ನಿವೀರ್ ಸೇವೆ ಸಲ್ಲಿಸಿ ಬಂದವರಿಗೆ ವಿಫುಲ ಅವಕಾಶ ಸಿಗಲಿದೆ. ಪ್ರತಿಭಟನೆ ದಾರಿಯಲ್ಲಿರುವ ಯುವಕರು ಅರ್ಥ ಮಾಡಿಕೊಳ್ಳಲಿ. 17ನೇ ವರ್ಷದಲ್ಲಿ ತರಬೇತಿಯ ಅವಕಾಶ ಸಿಗುತ್ತದೆ. ಹೊಸ ಬದುಕು ಕಟ್ಟಿಕೊಳ್ಳಲು ಅವಕಾಶ ಸಿಗಲಿದೆ. ಅಗ್ನಿಪಥ ಯೋಜನೆ ಲಾಭವನ್ನು ಪಡೆಯುವ ಕೆಲಸ ಆಗಬೇಕು ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ತಾಜಾ ಸುದ್ದಿಗಳನ್ನ ಓದಲು ಇಲ್ಲಿ ಕ್ಲಿಕ್ ಮಾಡಿ