ಮುಂಗಾರು ಅಧಿವೇಶನ ಕಲಾಪ; ಯುಟಿ ಖಾದರ್ ನಡೆಗೆ ಪತ್ರದ ಮೂಲಕ ಅಸಮಾಧಾನ ಹೊರ ಹಾಕಿದ ಶಾಸಕರು

ಕಲಾಪದ ವೇಳೆ ವಿಪಕ್ಷಗಳಿಗೆ ಚರ್ಚೆ ನಡೆಸಲು ಅವಕಾಶ ನೀಡದೆ ಸ್ವ ಪಕ್ಷಕ್ಕೆ ಹೆಚ್ಚಿನ ಆಧ್ಯತೆ ನೀಡಿದ್ದಾರೆ ಎಂದು ಆರೋಪಿಸಿ ಕೆಲ ಶಾಸಕರು ಯುಟಿ ಖಾದರ್ ಅವರಿಗೆ ಪತ್ರ ಬರೆದು ಅಸಮಾಧಾನ ಹೊರ ಹಾಕಿದ್ದಾರೆ. ಏಕಪಕ್ಷೀಯವಾಗಿ ಕಲಾಪ ನಿರ್ವಹಣೆ ಮಾಡಿದ್ದು ರಾಜ್ಯ ವಿಧಾನಸಭೆಯ ಇತಿಹಾಸದಲ್ಲೇ ದುರ್ದಿನ ಎಂದು ಕಿಡಿಕಾರಿದ್ದಾರೆ.

ಮುಂಗಾರು ಅಧಿವೇಶನ ಕಲಾಪ; ಯುಟಿ ಖಾದರ್ ನಡೆಗೆ ಪತ್ರದ ಮೂಲಕ ಅಸಮಾಧಾನ ಹೊರ ಹಾಕಿದ ಶಾಸಕರು
ಯು.ಟಿ. ಖಾದರ್Image Credit source: ವಾರ್ತಾ ಇಲಾಖೆ
Follow us
ಆಯೇಷಾ ಬಾನು
|

Updated on:Jul 22, 2024 | 2:19 PM

ಬೆಂಗಳೂರು, ಜುಲೈ.22: ಮುಂಗಾರು ಅಧಿವೇಶನಲ್ಲಿ ಕಲಾಪ ನಡೆಸಿದ ವೈಖರಿ ಚ್ಯುತಿ ತರುವಂತಿದೆ. ವಿಪಕ್ಷಗಳಿಗೆ ಚರ್ಚೆಗೆ ಸಮಯ ನೀಡುತ್ತಿಲ್ಲ. ಸ್ಪೀಕರ್ ಏಕಪಕ್ಷಿಯವಾಗಿದ್ದಾರೆ ಎಂದು ಆರೋಪಿ ಕೆಲ ಶಾಸಕರು ಸ್ಪೀಕರ್ ಯು.ಟಿ. ಖಾದರ್ (UT Khader) ಅವರಿಗೆ ಪತ್ರ ಬರೆದು ಅಸಮಾಧಾನ ಹೊರ ಹಾಕಿದ್ದಾರೆ. ಕಲಾಪದ ಮೇಲೆ ವಿರೋಧ ಪಕ್ಷಗಳಿಗೆ ಚರ್ಚೆ ಮಾಡಲು ಬಿಡದೆ ಸ್ವ ಪಕ್ಷ ಕಾಂಗ್ರೆಸ್​​ಗೆ ಹೆಚ್ಚಿನ ಆಧ್ಯತೆ ನೀಡಿದ್ದಾರೆ. ವಿಪಕ್ಷಗಳಿಗೆ ಅವಕಾಶವನ್ನೇ ನೀಡದಿರುವುದು ಪ್ರಜಾತ೦ತ್ರ ವ್ಯವಸ್ಥೆ ಅಪಾಯಕ್ಕೆ ಜಾರುತ್ತಿದೆಯೇನೋ ಎ೦ಬ ಅನುಮಾನ ಬರುವುದಕ್ಕೆ ಕಾರಣವಾಗಿದೆ ಎಂದು ಶಾಸಕರು ಪತ್ರ ಬರೆದು ಯುಟಿ ಖಾದರ್ ನಡೆಗೆ ಕಿಡಿಕಾರಿದ್ದಾರೆ.

ಪತ್ರದಲ್ಲಿ ಏನಿದೆ?

ಸಂಸದೀಯ ವ್ಯವಹಾರ ಹಾಗೂ ಗುಣಮಟ್ಟದ ಕಲಾಪ ನಿರ್ವಹಣೆಯ ಕಾರಣಕ್ಕಾಗಿ ಕರ್ನಾಟಕ ವಿಧಾನಸಭೆ ಇಡೀ ದೇಶಕ್ಕೆ ಮಾದರಿಯಾಗಿದೆ. ಅತಿ ಹೆಚ್ಚು ಬಾರಿ ಗೆದ್ದ ಶಾಸಕರ ಪೈಕಿ ಒಬ್ಬರಾಗಿರುವ ನಿಮಗೆ ಇದು ತಿಳಿಯದ ಸ೦ಗತಿಯೇನು ಅಲ್ಲ. ಶ್ರೀ ವೈಕುಂಠ ಬಾಳಿಗರಿ೦ದ ಮೊದಲ್ಕೊಂಡು ಇಲ್ಲಿವರೆಗೆ ಸಭಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ ಪ್ರತಿಯೊಬ್ಬ ಸ್ಪೀಕರ್‌ ತಮ್ಮದೇ ಆದ ಶೈಲಿಯಲ್ಲಿ ಕರ್ತವ್ಯ ನಿರ್ವಹಿಸಿದರೂ ಅವರ ಉದ್ದೇಶ ಮಾತ್ರ ಗುಣಮಟ್ಟದ ಕಲಾಪದ ಜೊತೆಗೆ ಶಾಸನ ಸಭೆ ಜನಹಿತದ ಚರ್ಚೆಗೆ ಧ್ವನಿಯಾಗಬೇಕು ಎ೦ಬುದೇ ಆಗಿತ್ತು. ಕಾಂಗ್ರೆಸ್‌ ಪಕ್ಷದವರೇ ಆಗಿದ್ದರೂ ಸ್ಪೀಕರ್‌ ಸ್ಥಾನದಲ್ಲಿ ಕುಳಿತ ಹಿರಿಯರಾದ ಕಾಗೋಡು ತಿಮ್ಮಪ್ಪ, ರಮೇಶ್ ಕುಮಾರ್‌ ಈ ವಿಚಾರದಲ್ಲಿ ಇಡಿ ದೇಶಕ್ಕೆ ಮಾದರಿಯಾಗಿ ಸಭಾಧ್ಯಕ್ಷ ಸ್ಥಾನದ ಘನತೆಯನ್ನು ಎತ್ತಿ ಹಿಡಿದಿದ್ದರು.

ಇದನ್ನೂ ಓದಿ: ಡಿಸಿಎಂ ಡಿಕೆ ಶಿವಕುಮಾರ್​​ರಿಂದಲೇ ಡ್ಯಾಂಗಳು ತುಂಬಿ ತುಳುಕುತ್ತಿವೆ: ಕುಮಾರಸ್ವಾಮಿ ವ್ಯಂಗ್ಯ

ಸ್ಪೀಕರ್‌ ದೃಷ್ಟಿ, ಕಿವಿ ಹಾಗೂ ಹೃದಯ ಸದಾ ವಿಪಕ್ಷಗಳ ಪರವಾಗಿರಬೇಕು. ತನ್ಮೂಲಕ ಪ್ರಜಾ ಧ್ವನಿಗೆ ಅವರು ಉತ್ತರದಾಯಿಯಾಗಿರಬೇಕು. ಎ೦ಬ ಆಶಯವನ್ನು ಕರ್ನಾಟಕ ವಿಧಾನಸಭೆಯ ಸ್ಪೀಕರ್‌ ಪೀಠದಲ್ಲಿ ಆಸೀನರಾದ ಪ್ರತಿಯೊಬ್ಬರು ವ್ರತದಂತೆ ನಡೆಸಿಕೊಂಡು ಬ೦ದಿರುವುದು ತಮಗೂ ತಿಳಿದಿರುವ ಸತ್ಯ. ಆದರೆ ಮುಂಗಾರು ಅಧಿವೇಶನ ಸ೦ದರ್ಭದಲ್ಲಿ ತಾವು ಕಲಾಪ ನಡೆಸಿದ ವೈಖರಿ ಕರ್ನಾಟಕ ವಿಧಾನಸಭೆಯ ಈ ಉದಾತ್ತ ಪರಂಪರೆಗೆ ಚ್ಯುತಿ ತರುವ ಹಾದಿಯಲ್ಲಿದೆಯೇನೋ ಎ೦ಬ ಅನುಮಾನಕ್ಕೆ ಕಾರಣವಾಗಿದೆ. ವಿಪಕ್ಷಗಳು ಧರಣಿ ನಡೆಸುತ್ತಿರುವ ಸಂದರ್ಭದಲ್ಲಿ ವಿಧೇಯಕಗಳ ಮಂಡನೆ ಹೊಸತಲ್ಲ. ಆದರೆ ಆಡಳಿತ ಪಕ್ಷದ ಶಾಸಕರು ನೀಡಿದ ಸೂಚನಾ ಪತ್ರದ ಆಧಾರದ ಮೇಲೆ ತಾವು ನಿಯಮ 69ರ ಅನ್ವಯ ಚರ್ಚೆಗೂ ಅವಕಾಶ ಮಾಡಿಕೊಟ್ಟಿರಿ. ಈ ಪರಂಪರೆ ಸರಿಯಲ್ಲ ಎಂದು ವಿಪಕ್ಷ ಶಾಸಕರು ಪದೇ ಪದೇ ಹೇಳಿದರೂ ಅತ್ತ ಲಕ್ಷ ನೀಡದೇ, ಅವರ ಧ್ವನಿಯನ್ನೂ ಕೇಳಿಸಿಕೊಳ್ಳದೇ ಏಕಪಕ್ಷೀಯವಾಗಿ ಕಲಾಪ ನಿರ್ವಹಣೆ ಮಾಡಿದ್ದು ರಾಜ್ಯ ವಿಧಾನಸಭೆಯ ಇತಿಹಾಸದಲ್ಲೇ ದುರ್ದಿನ ಎಂದು ಭಾವಿಸಬೇಕಾಗುತ್ತದೆ.

ಈ ರೀತಿ ವಿಪಕ್ಷಗಳ ಧ್ವವಿಯನ್ನು ಹತ್ತಿಕ್ಕುವುದು ನಿಮ್ಮ ಕಾರ್ಯ ಶೈಲಿಯ ಭಾಗವೇನೋ ಎ೦ಬ ಅನುಮಾನ ನಮ್ಮೆಲ್ಲರನ್ನೂ ಬಲವಾಗಿ ಕಾಡುವುದಕ್ಕೆ ನಿಮ್ಮ ಹಲವು ವರ್ತನೆಗಳೇ ಸಾಕ್ಷಿಯಾಗಿವೆ. ಮೊದಲ ಕಲಾಪದಲ್ಲಿಯೇ ವಿಪಕ್ಷದ ಸದಸ್ಯರನ್ನು ಅಮಾನತು ಮಾಡಿದ ಕೀರ್ತಿಯೂ ನಿಮ್ಮದಾಗಿದೆ. ಈ ಕಲಾಪದಲ್ಲಿ ಸರ್ಕಾರ ಮಾಡಿದ ಹಲವು ತಪ್ಪುಗಳನ್ನು ಸದನದಲ್ಲಿ ಅನಾವರಣಗೊಳಿಸಬೇಕೆ೦ಬ ವಿಪಕ್ಷದ ಪ್ರಯತ್ನ ಜನರ ಬೇಡಿಕೆಯಾಗಿತ್ತು. ಆದರೆ ತಾವು ಅದಕ್ಕೆ ಅವಕಾಶವನ್ನೇ ನೀಡದಿರುವುದು ಪ್ರಜಾತ೦ತ್ರ ವ್ಯವಸ್ಥೆ ಅಪಾಯಕ್ಕೆ ಜಾರುತ್ತಿದೆಯೇನೋ ಎ೦ಬ ಅನುಮಾನ ಬರುವುದಕ್ಕೆ ಕಾರಣವಾಗಿದೆ. ಹೀಗಾಗಿ ಕಲಾಪದ ಮುಂದಿನ ಅವಧಿಯಲ್ಲಿ ನೀವು ತ್ರಿಕರ್ಣ ಪೂರ್ವಕವಾಗಿ ವಿಪಕ್ಷಗಳ ಪರ ನಿಲುವು ತಾಳುತ್ತೀರೆ೦ಬ ನಂಬಿಕೆಯಲ್ಲಿ ನಾವೆಲ್ಲರೂ ಇದ್ದೇವೆ ಎಂದು ಪತ್ರ ಬರೆದು ಕೆಲ ಶಾಸಕರು ರುಜು ಮಾಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:12 pm, Mon, 22 July 24

New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ