ಗುಜರಿ ಸೇರಬೇಕಾದ 3,768 ಕೆಎಸ್ಆರ್​ಟಿಸಿ ಬಸ್​ಗಳನ್ನು ರಸ್ತೆಗಿಳಿಸಿ ಕೇರ್ಲೆಸ್; ಆರ್ಥಿಕ ಕಾರಣ ಎಂದು ನಿಗಮದ ದುಸ್ಥಿತಿ ಒಪ್ಪಿಕೊಂಡ ಅಧ್ಯಕ್ಷ

| Updated By: ಆಯೇಷಾ ಬಾನು

Updated on: Jul 04, 2022 | 6:41 AM

ಕೆಎಸ್ಆರ್ಟಿಸಿ ನಿಗಮದಲ್ಲಿ 8,199 ಬಸ್ಗಳಿದ್ದು, ಇವುಗಳ ಪೈಕಿ 3,768 ಬಸ್ಗಳು 9 ಲಕ್ಷ ಕಿಲೋಮೀಟರ್ ಮೀರಿದ ಬಸ್ಗಳಾಗಿವೆ. ನಿಗಮದ ದುಸ್ಥಿತಿಯನ್ನ ಆಡಳಿತ ವರ್ಗವೂ ಒಪ್ಪಿಕೊಂಡಿದೆ. ಕೊವಿಡ್ ಕಾರಣದಿಂದ ನಿಗಮ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಹೀಗಾಗಿ ಹೊಸ ಬಸ್ ಖರೀದಿ ಸಾಧ್ಯವಾಗಿಲ್ಲ.

ಗುಜರಿ ಸೇರಬೇಕಾದ 3,768 ಕೆಎಸ್ಆರ್​ಟಿಸಿ ಬಸ್​ಗಳನ್ನು ರಸ್ತೆಗಿಳಿಸಿ ಕೇರ್ಲೆಸ್; ಆರ್ಥಿಕ ಕಾರಣ ಎಂದು ನಿಗಮದ ದುಸ್ಥಿತಿ ಒಪ್ಪಿಕೊಂಡ ಅಧ್ಯಕ್ಷ
ಕೆಎಸ್ಆರ್​ಟಿಸಿ
Follow us on

ಬೆಂಗಳೂರು: ಕೆಎಸ್ಆರ್ಟಿಸಿ(KSRTC). ರಾಜ್ಯದ ಹೆಮ್ಮೆಯ ಸಾರಿಗೆ. ವರ್ಷಕ್ಕೆರಡು ರಾಷ್ಟ್ರಮಟ್ಟದ ಪ್ರಶಸ್ತಿ, ಬೆಸ್ಟ್ ಸಾರ್ವಜನಿಕ ಸಾರಿಗೆ ಅನ್ನೋ ಗರಿ. ಹೀಗಿದ್ದ ಕೆಎಸ್ಆರ್ಟಿಸಿ ಈಗ ದಾರಿ ತಪ್ಪುತ್ತಿದೆ. ಅಂದ್ರೆ ಸದ್ಯ ರಸ್ತೆಗಿಳಿಯುತ್ತಿರೋ ಅರ್ಧಕ್ಕರ್ಧ ಬಸ್ಗಳು ಗುಜರಿ ಸೇರ್ಬೇಕಾದ ಬಸ್ಗಳು ಅನ್ನೋದನ್ನ ಟಿವಿ9 ದಾಖಲೆ ಸಹಿತ ಬಯಲಿಗೆಳೆದಿದೆ. ನಿಯಮದಂತೆ 9 ಲಕ್ಷ ಕಿಲೋಮೀಟರ್ ಓಡ್ತಿದ್ದಂತೆ ಬಸ್ಗಳನ್ನ ಗುಜರಿಗೆ ಹಾಕ್ಬೇಕು ಅನ್ನೋ ನಿಯಮವಿದೆ‌. ಯಾಕಂದ್ರೆ ಬಸ್ಗಳು ಫಿಟ್ ಇರೋದಿಲ್ಲ. ಅಪಘಾತವಾಗೋ ಸಾಧ್ಯತೆ ಹೆಚ್ಚಾಗಿರುತ್ತೆ. ಇಂಧನ ಕ್ಷಮತೆಯೂ ಇರೋದಿಲ್ಲ. ಮೆಂಟೇನೆನ್ಸ್ ಜಾಸ್ತಿ ಅಂತಾ ಇಂಥಾ ಬಸ್ಗಳನ್ನ ಸ್ಕ್ರ್ಯಾಪ್ ಮಾಡೋ ಪಾಲಿಸಿ ನಿಗಮದಲ್ಲಿದೆ. ಸದ್ಯ ಕೆಎಸ್ಆರ್ಟಿಸಿಯಲ್ಲಿ 45.95 ರಷ್ಟು ಬಸ್ಗಳು 9 ಲಕ್ಷ ಕಿಲೋಮೀಟರ್ ದಾಟಿವೆ. ಆದ್ರೂ ಆರ್ಥಿಕ ಕಾರಣ ನೀಡಿ ಹಳೆಯ ಬಸ್ಗಳನ್ನ ರಸ್ತೆಗೆ ಇಳಿಸ್ತಿದ್ದು, ಅಪಾಯದ ಸಾಧ್ಯತೆಗಳು ಹೆಚ್ಚಿವೆ.

ಸದ್ಯ ಕೆಎಸ್ಆರ್ಟಿಸಿ ನಿಗಮದಲ್ಲಿ 8,199 ಬಸ್ಗಳಿದ್ದು, ಇವುಗಳ ಪೈಕಿ 3,768 ಬಸ್ಗಳು 9 ಲಕ್ಷ ಕಿಲೋಮೀಟರ್ ಮೀರಿದ ಬಸ್ಗಳಾಗಿವೆ. ನಿಗಮದ ದುಸ್ಥಿತಿಯನ್ನ ಆಡಳಿತ ವರ್ಗವೂ ಒಪ್ಪಿಕೊಂಡಿದೆ. ಕೊವಿಡ್ ಕಾರಣದಿಂದ ನಿಗಮ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಹೀಗಾಗಿ ಹೊಸ ಬಸ್ ಖರೀದಿ ಸಾಧ್ಯವಾಗಿಲ್ಲ. ಸದ್ಯ 1,500 ಹೊಸ ಬಸ್ ಖರೀದಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಅಂತಿದ್ದಾರೆ. ಇದನ್ನೂ ಓದಿ: ಅಭಿವೃದ್ಧಿ ಮಾಡಿದ ಸ್ಥಳದಲ್ಲೇ ಮತ್ತೊಮ್ಮೆ ಕಾಮಗಾರಿ; ಅಮೃತ್ ನಗರೋತ್ಥಾನ ಯೋಜನೆಯಡಿ 10 ಕೋಟಿ ಅನುದಾನಕ್ಕೆ ಕನ್ನ

ಕೆಎಸ್ಆರ್ಟಿಸಿ ಅಂದ್ರೆ ದೇಶದಲ್ಲೇ ಬೆಸ್ಟ್ ಸಾರಿಗೆ ಅನ್ನೋ ಹೆಮ್ಮೆ ಇದೆ. ಆದ್ರೆ ಈಗ ಬಸ್ಗಳ ಕಂಡೀಷನ್ ಕೆಟ್ಟಿದ್ದು, ನಿಗಮ ಈಗಲೇ ಎಚ್ಚೆತ್ತುಕೊಳ್ಳಬೇಕಿದೆ. ಇಲ್ದಿದ್ರೆ ಸಾಲು ಸಾಲು ಅನಾಹುತಗಳು ಸಂಭವಿಸೋದ್ರ ಜೊತೆಗೆ ಕರುನಾಡ ಸಾರಿಗೆಗಿರೋ ಹೆಸರೂ ಕೂಡ ಹಾಳಾಗುತ್ತೆ.

ವರದಿ: ಕಿರಣ್ ಸೂರ್ಯ, ಟಿವಿ9, ಬೆಂಗಳೂರು

Published On - 6:41 am, Mon, 4 July 22