ಅಭಿವೃದ್ಧಿ ಮಾಡಿದ ಸ್ಥಳದಲ್ಲೇ ಮತ್ತೊಮ್ಮೆ ಕಾಮಗಾರಿ; ಅಮೃತ್ ನಗರೋತ್ಥಾನ ಯೋಜನೆಯಡಿ 10 ಕೋಟಿ ಅನುದಾನಕ್ಕೆ ಕನ್ನ
ಸರ್ಕಾರ, ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಯೋಜನೆಯಡಿ ಪಟ್ಟಣದ ಅಭಿವೃದ್ದಿಗೆ ಬರೊಬ್ಬರಿ 10 ಕೋಟಿ ಅನುದಾನ ನೀಡಿದೆ. ಆದ್ರೆ, ಪಟ್ಟಣ ಪಂಚಾಯಿತಿ ಕಿರಿಯ ಅಭಿಯಂತ ಹಾಗೂ ಅಧಿಕಾರಿಗಳು ಮಾತ್ರ ಸರ್ಕಾರದ ಕೋಟಿ ಕೋಟಿ ಲೂಟಿ ಮಾಡಲು ಮಾಸ್ಟರ್ ಪ್ಲಾನ್ ಮಾಡಿದ್ದು, ಈಗ ಬಯಲಿಗೆ ಬಂದಿದೆ.
ಗದಗ: ಸರ್ಕಾರದ ಅನುದಾನ ಲೂಟಿ ಮಾಡಲು ಸಕ್ಕತ್ ಪ್ಲಾನ್ ಮಾಡಿದ್ದಾರೆ. ಅಧಿಕಾರಿಗಳ ಕೈಚಳಕದಿಂದ ನಗರೋತ್ಥಾನ ಯೋಜನೆಯ ಕೋಟ್ಯಾಂತರ ರೂಪಾಯಿ ಹಣ ನುಂಗಿ ನೀರು ಕುಡಿಯಲು ಸಿದ್ದತೆ ನಡೆದಿದೆ. ಅಭಿವೃದ್ಧಿ ಮಾಡಿದ ಸ್ಥಳದಲ್ಲೇ ಮತ್ತೊಮ್ಮೆ ಕಾಮಗಾರಿಗೆ ಕ್ರಿಯಾಯೋಜನೆ ಮಾಡಿದ್ದಾರೆ. ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯುವ ಮೂಲಕ ಉಸ್ತುವಾರಿ ಸಚಿವರು, ಶಾಸಕ ಹಾಗೂ ಡಿಸಿ ಅವ್ರಿಗೆ ಮಂಕುಬೂದಿ ಎರಚಿದ್ದಾರೆ. ಸರ್ಕಾರಕ್ಕೆ ವಂಚನೆ ಮಾಡೋ ಅಭಿಯಂತರ ಮೋಸ ಗೊತ್ತಾಗುತ್ತಿದ್ದಂತೆ ಕಾಂಗ್ರೆಸ್, ಬಿಜೆಪಿ ಸದಸ್ಯರು ಕೋಟಿ ನುಂಗಣ್ಣ ಅಧಿಕಾರಿಗಳ ಬಣ್ಣ ಬಯಲು ಮಾಡಿದ್ದಾರೆ.
ಸರ್ಕಾರ, ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಯೋಜನೆಯಡಿ ಪಟ್ಟಣದ ಅಭಿವೃದ್ದಿಗೆ ಬರೊಬ್ಬರಿ 10 ಕೋಟಿ ಅನುದಾನ ನೀಡಿದೆ. ಆದ್ರೆ, ಪಟ್ಟಣ ಪಂಚಾಯಿತಿ ಕಿರಿಯ ಅಭಿಯಂತ ಹಾಗೂ ಅಧಿಕಾರಿಗಳು ಮಾತ್ರ ಸರ್ಕಾರದ ಕೋಟಿ ಕೋಟಿ ಲೂಟಿ ಮಾಡಲು ಮಾಸ್ಟರ್ ಪ್ಲಾನ್ ಮಾಡಿದ್ದು, ಈಗ ಬಯಲಿಗೆ ಬಂದಿದೆ. ಅಧಿಕಾರಿಗಳು ಮನಸ್ಸು ಮಾಡಿದ್ರೆ ಸರ್ಕಾರದ ಹಣ ಹೇಗೆ ಲೂಟಿ ಮಾಡಬೇಕು ಎನ್ನುವುದು ಈ ಅಧಿಕಾರಿಗಳನ್ನು ನೋಡಿ ಕಲಿಯಬೇಕು. ಗದಗ ಜಿಲ್ಲೆ ಮುಂಡರಗಿ ಪುರಸಭೆಯಲ್ಲಿ ಸರ್ಕಾರ ನಗರೋತ್ಥಾನ ಯೋಜನೆಯಡಿ 10 ಕೋಟಿ ಅನುದಾನ ಹಳ್ಳ ಹಿಡಿಸಲು ಮೆಗಾ ಪ್ಲಾನ್ ಮಾಡಿದ್ದಾರೆ. ಅಂದಹಾಗೇ ಮುಂಡರಗಿ ಪುರಸಭೆಯ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ಮಾಡಲು ಕ್ರಿಯಾಯೋಜನೆ ಮಾಡಲಾಗಿದೆ. ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಯೋಜನೆ ಅಡಿಯಲ್ಲಿ 10 ಕೋಟಿ ರೂಪಾಯಿ ಕ್ರಿಯಾಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲಕ್ಷ್ಮಣ ರೇಖೆ ದಾಟುವುದು ಅಪಾಯಕಾರಿ: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೆಬಿ ಪರ್ದಿವಾಲಾ
ಆದ್ರೆ ಯೋಜನೆ ಗೈಡ್ ಲೈನ್ ಎಲ್ಲ ಗಾಳಿಗೆ ತೂರಿ ಗಟ್ಟಿಮಟ್ಟಾದ ಲೋಕೋಪಯೋಗಿ ಇಲಾಖೆ ರಸ್ತೆಗೆ 60 ಲಕ್ಷ, ಪಟ್ಟಣದ ವಿವಿಧ ಬಡಾವಣೆಯ ಕಾಂಕ್ರೀಟ್ ರಸ್ತೆಗಳಲ್ಲಿ ಡಾಂಬರೀಕರಣ ಅಂತ ಮತ್ತೊಮ್ಮೆ ಲಕ್ಷ ಲಕ್ಷ ರೂಪಾಯಿ ಕ್ರಿಯಾ ಯೋಜನೆ ಅನುಮೋದನೆ ಪಡೆದಿದ್ದಾರೆ. ಅಭಿವೃದ್ಧಿ ರಸ್ತೆಗಳಲ್ಲೇ ಮತ್ತೆ ಕ್ರಿಯಾ ಯೋಜನೆ ಮಾಡಿ ಹಣ ಲೂಟಿ ಅಧಿಕಾರಿಗಳು ಪ್ಲಾನ್ ಮಾಡಿದ್ದಾರೆ ಅಂತ ಕಾಂಗ್ರೆಸ್ ಪುರಸಭೆ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಬಿಜೆಪಿ ಸದಸ್ಯರು ಜೈ ಜೈ ಎಂದಿದ್ದಾರೆ. ಕಾಂಗ್ರೆಸ್ ಸದಸ್ಯರ ಆರೋಪ ಸತ್ಯವಿದೆ ಅಂತ ಬಿಜೆಪಿ ಸದಸ್ಯ ಪ್ರಲ್ಹಾದ ಹೇಳಿದ್ದಾರೆ. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ಹಾಗೂ ಕಿರಿಯ ಅಭಿಯಂತರು ವೀರೇಂದ್ರಸಿಂಗ್ ಕಾಟೇವಾಲ್ ಸೇರಿ ಹಲವು ಅಧಿಕಾರಿಗಳು ಸರ್ಕಾರದ ಹಣ ಲೂಟಿಗೆ ಪ್ಲಾನ್ ಮಾಡಿದ್ದಾರೆ ಅಂತ ಕಾಂಗ್ರೆಸ್ ಸದಸ್ಯ ನಾಗರಾಜ್ ಆರೋಪಿಸಿದ್ದಾರೆ.
ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಯೋಜನೆ ಕ್ಷೇತ್ರದ ಶಾಸಕರು, ಅಧ್ಯಕ್ಷರು ಹಾಗೂ ಅಭಿಯಂತರರು, ಅಧಿಕಾರಿಗಳು ಫೈನಲ್ ಮಾಡಿ ಜಿಲ್ಲಾಡಳಿತಕ್ಕೆ ಅನುಮೋದನೆ ಕಳಿಸಬೇಕು. ಆದ್ರೆ, ನಗರೋತ್ಥಾನ ಗೈಡ್ ಲೈನ್ ಪ್ರಕಾರ ಕಾಮಗಾರಿ ಆಯ್ಕೆ ಮಾಡಬೇಕು. ಇದಕ್ಕೆ ಜವಾಬ್ದಾರಿ ಕಿರಿಯ ಅಭಿಯಂತರು ವೀರೇಂದ್ರಸಿಂಗ್ ಕಾಟೇವಾಲ್. ಪುರಸಭೆ ಕ್ರಿಯಾ ಯೋಜನೆ ಕಳಿಸಿದ ಬಳಿಕ ಗದಗ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಅಭಿಯಂತರು ಶಾಮಲಾ ಸ್ಥಳ ಪರಿಶೀಲನೆ ಮಾಡಿ ಜಿಲ್ಲಾ ನಗರೋತ್ಥಾನ ಸಮಿತಿಗೆ ಕಳಿಸಬೇಕು. ಅಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಅಂತಿಮ ಮುದ್ರೆ ಹಾಕಿದ್ರೆ ಮುಗಿತು. ಆದ್ರೆ, ಅಧಿಕಾರಿಗಳು ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳಿಗೆ ಮಂಕುಬೂದಿ ಎರಚಿ ಲೂಟಿ ಕ್ರಿಯಾ ಯೋಜನೆಗೆ ಅನುಮೋದನೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾದ ISWA ಅನಿವಾಸಿ ಭಾರತೀಯರನ್ನು ಭೇಟಿಯಾದ ಸಚಿವ ಪ್ರಲ್ಹಾದ್ ಜೋಶಿ ನಿಯೋಗ
ಈಗ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಅಧಿಕಾರಿಗಳ ಲೂಟಿ ಪ್ಲಾನ್ ಬಯಲಿಗೆ ಎಳೆದಿದ್ದಾರೆ. ಹೀಗಾಗಿ ನಗರೋತ್ಥಾನ ಯೋಜನೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು, 10 ಕೋಟಿ ರೂಪಾಯಿ ಕ್ರೀಯಾಯೋಜನೆಗೆ ಅನುಮೋದನೆ ನೀಡಿದ್ದು ರದ್ದು ಮಾಡಬೇಕು ಅಂತ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳು ಮನವಿ ಸ್ವೀಕಾರ ಮಾಡಿ, ಅಧಿಕಾರಿಗಳ ತಂಡವನ್ನು ಮಾಡಿ, ಪರಿಶೀಲನೆಗೆ ಆದೇಶ ಮಾಡಲಾಗಿದೆ ಅಂತ ಗದಗ ಜಿಲ್ಲಾಧಿಕಾರಿ ಎಂ ಸುಂದರೇಶ ಬಾಬು ಹೇಳಿದ್ದಾರೆ.
ಇನ್ನೂ ಸರ್ಕಾರದ ಕೋಟ್ಯಾಂತರ ರೂಪಾಯಿ ಲೂಟಿ ಮಾಡಲು ಪ್ಲಾನ್ ಮಾಡಲಾಗಿದ್ದು, ಈವಾಗ ಅದು ಬಹಿರಂಗವಾಗಿದೆ. ಕ್ರೀಯಾಯೋಜನೆ ತಡೆ ಹಿಡಿಯಬೇಕು ಎಂದು ಪುರಸಭೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಒತ್ತಾಯ ಮಾಡಿದ್ದಾರೆ. ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಲು ಸೂಚನೆ ನೀಡಿದ್ದು, ವರದಿ ನಂತರವೇ, ಅಧಿಕಾರಿಗಳ ಬಣ್ಣ ಬಯಲಾಗಲಿದೆ.
ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ
Published On - 11:01 pm, Sun, 3 July 22