ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲಕ್ಷ್ಮಣ ರೇಖೆ ದಾಟುವುದು ಅಪಾಯಕಾರಿ: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೆಬಿ ಪರ್ದಿವಾಲಾ
ಪ್ರಬುದ್ಧ ಮತ್ತು ತಿಳುವಳಿಕೆಯುಳ್ಳ ಪ್ರಜಾಪ್ರಭುತ್ವ ಎಂದು ವರ್ಗೀಕರಿಸಲಾಗದ ಭಾರತದಲ್ಲಿ ಸಂಪೂರ್ಣವಾಗಿ ಕಾನೂನು ಮತ್ತು ಸಾಂವಿಧಾನಿಕ ವಿಷಯಗಳನ್ನು ರಾಜಕೀಯಗೊಳಿಸಲು ಸಾಮಾಜಿಕ ಮತ್ತು ಡಿಜಿಟಲ್ ಮಾಧ್ಯಮಗಳನ್ನು ಆಗಾಗ್ಗೆ ಬಳಸಿಕೊಳ್ಳಲಾಗುತ್ತದೆ...
ಸಂವಿಧಾನದ ಅಡಿಯಲ್ಲಿ ಕಾನೂನಿನ ಆಳ್ವಿಕೆಯನ್ನು ಕಾಪಾಡಲು ಭಾರತದಲ್ಲಿ ಸಾಮಾಜಿಕ ಮತ್ತು ಡಿಜಿಟಲ್ ಮಾಧ್ಯಮಗಳನ್ನು ಕಡ್ಡಾಯವಾಗಿ ನಿಯಂತ್ರಿಸುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ (Supreme Court) ನ್ಯಾಯಮೂರ್ತಿ ಜಮ್ಶೆಡ್ ಬುರ್ಜೋರ್ ಪರ್ದಿವಾಲಾ (Jamshed Burjor Pardiwala) ಹೇಳಿದ್ದಾರೆ. ಪ್ರವಾದಿ ಮೊಹಮ್ಮದ್ ಅವರ ಹೇಳಿಕೆಗಾಗಿ ಆಕೆಯ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ಒಗ್ಗೂಡಿಸಬೇಕು ಎಂದು ಬಿಜೆಪಿಯ (BJP) ಮಾಜಿ ವಕ್ತಾರೆ ನೂಪುರ್ ಶರ್ಮಾ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಪೀಠ ವಜಾಗೊಳಿಸಿದ ನಂತರ ಪರ್ದಿವಾಲಾ ಸುದ್ದಿಯಲ್ಲಿದ್ದಾರೆ. ಶರ್ಮಾ ಅವರಿಂದ ಕ್ಷಮೆಯಾಚಿಸುವಂತೆ ಮಾಡಿದ ಸುಪ್ರೀಂಕೋರ್ಟ್‌ನ ರಜಾಕಾಲದ ಪೀಠದ ಕಟುವಾದ ಅವಲೋಕನಗಳು, ನೂಪುರ್ ಶರ್ಮಾ “ನಾಲಿಗೆ ಇಡೀ ದೇಶಕ್ಕೆ ಬೆಂಕಿ ಹಚ್ಚಿದೆ” ಎಂಬ ಹೇಳಿಕೆಗೆ ಮಾಜಿ ಬಿಜೆಪಿ ವಕ್ತಾರರನ್ನು ಬೆಂಬಲಿಸುವ ಬಣ ಆಕ್ರೋಶ ವ್ಯಕ್ತ ಪಡಿಸಿದೆ. “ವೈಯಕ್ತಿಕ, ಅಜೆಂಡಾ ಹೊಂದಿರುವ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ‘ಲಕ್ಷ್ಮಣ ರೇಖಾ’ (ಗಡಿ) ದಾಟುವುದು “ಅಪಾಯಕಾರಿ” ಎಂದು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಹೇಳಿದ್ದಾರೆ.
ಸುಪ್ರೀಂಕೋರ್ಟ್‌ನ ಅವಲೋಕನಗಳು ಚರ್ಚೆಯನ್ನು ಹುಟ್ಟುಹಾಕಿವೆ, ಜೊತೆಗೆ ನ್ಯಾಯಾಧೀಶರ ವಿರುದ್ಧ ಆಕ್ರೋಶದ ಕಾಮೆಂಟ್ಗಳಿಗೆ ಕಾರಣವಾಗಿದೆ. ಪ್ರಬುದ್ಧ ಮತ್ತು ತಿಳುವಳಿಕೆಯುಳ್ಳ ಪ್ರಜಾಪ್ರಭುತ್ವ ಎಂದು ವರ್ಗೀಕರಿಸಲಾಗದ ಭಾರತದಲ್ಲಿ ಸಂಪೂರ್ಣವಾಗಿ ಕಾನೂನು ಮತ್ತು ಸಾಂವಿಧಾನಿಕ ವಿಷಯಗಳನ್ನು ರಾಜಕೀಯಗೊಳಿಸಲು ಸಾಮಾಜಿಕ ಮತ್ತು ಡಿಜಿಟಲ್ ಮಾಧ್ಯಮಗಳನ್ನು ಆಗಾಗ್ಗೆ ಬಳಸಿಕೊಳ್ಳಲಾಗುತ್ತದೆ ಎಂದು ನ್ಯಾಯಮೂರ್ತಿ ಪರ್ದಿವಾಲಾ ಹೇಳಿದ್ದು ಅಯೋಧ್ಯೆ ಭೂ ವಿವಾದ ಪ್ರಕರಣದ ವಿವರಣೆಯನ್ನು ನೀಡಿದರು.
ನಮ್ಮ ಸಂವಿಧಾನದ ಅಡಿಯಲ್ಲಿ ಕಾನೂನಿನ ಆಳ್ವಿಕೆಯನ್ನು ಕಾಪಾಡಲು ದೇಶದಲ್ಲಿ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಕಡ್ಡಾಯವಾಗಿ ನಿಯಂತ್ರಿಸುವ ಅಗತ್ಯವಿದೆ. ತೀರ್ಪುಗಳಿಗಾಗಿ ನಮ್ಮ ನ್ಯಾಯಾಧೀಶರ ಮೇಲೆ ದಾಳಿಗಳು ಅಪಾಯಕಾರಿ ಸನ್ನಿವೇಶಕ್ಕೆ ಕಾರಣವಾಗುತ್ತವೆ. ಅಲ್ಲಿ ನ್ಯಾಯಾಧೀಶರು ಕಾನೂನು ನಿಜವಾಗಿ ಏನು ಆದೇಶಿಸುತ್ತದೆ ಎನ್ನುವುದಕ್ಕಿಂತ ಮಾಧ್ಯಮಗಳು ಏನು ಯೋಚಿಸುತ್ತವೆ ಎಂಬುದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಡಾ. ರಾಮ್ ಮನೋಹರ್ ಲೋಹಿಯಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ, ಲಕ್ನೋ ಮತ್ತು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ, ಒಡಿಶಾ ಮತ್ತು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಿಗೆ ಹಳೆಯ ವಿದ್ಯಾರ್ಥಿಗಳ ಒಕ್ಕೂಟ (CAN ಫೌಂಡೇಶನ್) ಆಯೋಜಿಸಿದ್ದ ಎರಡನೇ ನ್ಯಾಯಮೂರ್ತಿ ಎಚ್‌ಆರ್ ಖನ್ನಾ ಸ್ಮಾರಕ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾರ್ದಿವಾಲಾ ಈ ಮಾತುಗಳನ್ನಾಡಿದ್ದಾರೆ.
ಡಿಜಿಟಲ್ ಮಾಧ್ಯಮದ ಪ್ರಯೋಗಗಳು ನ್ಯಾಯ ವಿತರಣಾ ವ್ಯವಸ್ಥೆಯಲ್ಲಿ ಅನಗತ್ಯ ಹಸ್ತಕ್ಷೇಪವಾಗಿದೆ ಎಂದು ಅವರು ಹೇಳಿದರು. “ಅರ್ಧ-ಸತ್ಯ ಜ್ಞಾನವುಳ್ಳ” ಸಮಾಜದ ವಿಭಾಗವು “ಕಾನೂನಿನ ಆಳ್ವಿಕೆಯ ಮೂಲಕ ನ್ಯಾಯದ ಮುಂದಿನ ನಿಜವಾದ ಸವಾಲು” ಎಂದು ಪಾರ್ದಿವಾಲಾ ಹೇಳಿದರು.
“ಸಾಮಾಜಿಕ ಮತ್ತು ಡಿಜಿಟಲ್ ಮಾಧ್ಯಮಗಳು ಇಂದಿನ ದಿನಗಳಲ್ಲಿ ಪ್ರಾಥಮಿಕವಾಗಿ ನ್ಯಾಯಾಧೀಶರ ವಿರುದ್ಧ ತಮ್ಮ ತೀರ್ಪುಗಳ ರಚನಾತ್ಮಕ ವಿಮರ್ಶಾತ್ಮಕ ಮೌಲ್ಯಮಾಪನಕ್ಕಿಂತ ಹೆಚ್ಚಾಗಿ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಆಶ್ರಯಿಸುತ್ತವೆ. ಇದರಿಂದ ನ್ಯಾಯಾಂಗ ಸಂಸ್ಥೆಗಳಿಗೆ ಧಕ್ಕೆಯಾಗುತ್ತಿದೆ ಮತ್ತು ಈ ಘನತೆ ಕಡಿಮೆಯಾಗುತ್ತಿದೆ” ಎಂದು ಅವರು ಹೇಳಿದರು.