ದೀಪಾವಳಿಗೆ ಸಾಲುಸಾಲು ರಜೆ: ಬೆಂಗಳೂರು ವಿಮಾನ ನಿಲ್ದಾಣದಿಂದ ಒಂದೇ ದಿನ 75 ಸಾವಿರಕ್ಕೂ ಹೆಚ್ಚು ಜನರ ಪ್ರಯಾಣ

Bengaluru Airport: ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರ ರಾಜ್ಯಗಳತ್ತ ಪ್ರಯಾಣಿಕರು ಪ್ರಯಾಣ ಬೆಳೆಸುತ್ತಿದ್ದು ಬೆಳಗಿನಿಂದಲೆ ಏರ್ಪೋಟ್ ನಲ್ಲಿ ಹೆಚ್ಚಿನ ಜನಸಂದಣಿ ಕಂಡು ಬರ್ತಿದೆ.

ದೀಪಾವಳಿಗೆ ಸಾಲುಸಾಲು ರಜೆ: ಬೆಂಗಳೂರು ವಿಮಾನ ನಿಲ್ದಾಣದಿಂದ ಒಂದೇ ದಿನ 75 ಸಾವಿರಕ್ಕೂ ಹೆಚ್ಚು ಜನರ ಪ್ರಯಾಣ
ಬೆಂಗಳೂರು ವಿಮಾನ ನಿಲ್ದಾಣ
Updated By: ಆಯೇಷಾ ಬಾನು

Updated on: Oct 23, 2022 | 1:43 PM

ದೇವನಹಳ್ಳಿ: ಬೆಳಕಿನ ಹಬ್ಬ ದೀಪಾವಳಿ(Deepavali) ಪ್ರಯುಕ್ತ ಸಾಲು ಸಾಲು ರಜೆಗಳು ಬಂದಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದ ಸಾಕಷ್ಟು ಜನರು ಕುಟುಂಬಸ್ಥರ ಜೊತೆ ಹಬ್ಬ ಆಚರಣೆ ಮಾಡಲು ಹೊರ ರಾಜ್ಯಗಳತ್ತ ಹೊರಟಿದ್ದಾರೆ. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ(Kempegowda International Airport Bengaluru)  ಹೊರ ರಾಜ್ಯಗಳತ್ತ ಪ್ರಯಾಣಿಕರು ಪ್ರಯಾಣ ಬೆಳೆಸುತ್ತಿದ್ದು ಬೆಳಗಿನಿಂದಲೆ ಏರ್ಪೋಟ್ ನಲ್ಲಿ ಹೆಚ್ಚಿನ ಜನಸಂದಣಿ ಕಂಡು ಬರ್ತಿದೆ. ಅಲ್ಲದೆ ಇಂದು ಬಂದೇ ದಿನ ದಾಖಲೆ ರೀತಿಯಲ್ಲಿ ಕೆಐಎಬಿಯಿಂದ 75 ಸಾವಿರ ಪ್ರಯಾಣಿಕರು ಪ್ರಯಾಣಿಸಿದ್ದಾರೆ.

ಇಂದು ಒಂದು ದಿನ ಮಾತ್ರವೆ ಏರ್ಪೋಟ್ ನಿಂದ 550 ಕ್ಕೂ ಅಧಿಕ ವಿಮಾನಗಳಲ್ಲಿ 75 ಸಾವಿರಕ್ಕೂ ಅಧಿಕ ಜನ ಏರ್ಪೋಟ್ ನಿಂದ ನಿರ್ಗಮನ ಮತ್ತು ಆಗಮನ ಮಾಡ್ತಿದ್ದು ಕೊರೊನಾ ನಂತರ ಅತಿ ಹೆಚ್ಚು ಪ್ರಯಾಣಿಕರು ಹಬ್ಬ ಹಿನ್ನೆಲೆಯಲ್ಲಿ ವಿವಿದೆಡೆಗೆ ತೆರಳುತ್ತಿದ್ದಾರೆ.
ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಜನಸಾಗರ: ದೇಗುಲದಲ್ಲಿ ವಿಐಪಿ ದರ್ಬಾರ್ ಖಂಡಿಸಿ ಧಿಕ್ಕಾರ ಕೂಗಿದ ಭಕ್ತರು

ದೇಶದ ವಿವಿಧ ರಾಜ್ಯಗಳಿಗೆ ತೆರಳಲು 287 ವಿಮಾನಗಳಲ್ಲಿ 40722 ಜನರು ಟಿಕೆಟ್ ಬುಕ್ಕಿಂಗ್ ಮಾಡಿದ್ದಾರೆ. ವಿದೇಶಕ್ಕೆ ತೆರಳಲು 22 ಅಂತರಾಷ್ಟ್ರೀಯ ವಿಮಾನಗಳಲ್ಲಿ 4040 ಪ್ರಯಾಣಿಕರು ಟಿಕೆಟ್ ಬುಕ್ ಮಾಡಿದ್ದಾರೆ. ಹಾಗೂ ಇತರೆ ರಾಜ್ಯಗಳಿಂದ 295 ವಿಮಾನಗಳಲ್ಲಿ 30129 ಜನ ಬೆಂಗಳೂರಿಗೆ ಬರಲು ಟಿಕೆಟ್ ಬುಕ್ ಮಾಡಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಬರ್ತಿರೂ ಹಿನ್ನೆಲೆ ಏರ್ಪೋಟ್ ನಲ್ಲಿ ಜನಸಂದಣಿ ಹೆಚ್ಚಾಗಿದೆ. ಬೆಳಗಿನಿಂದಲೆ ಏರ್ಪೋಟ್ ನಲ್ಲಿ ಜನ ತುಂಬಿ ತುಳುಕುತ್ತಿದ್ದಾರೆ.

ಕೆಐಎಬಿಯಿಂದ ಮುಂಬೈಗೆ ತೆರಳಿದ ಅಭಿಷೇಕ್ ಬಚ್ಚನ್

ಕಬ್ಬಡಿ ಪಂದ್ಯಾವಳಿ ಹಿನ್ನೆಲೆ ಬೆಂಗಳೂರಿಗೆ ಬಂದಿದ್ದ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಕೂಡ ಕೆಐಎಬಿಯಿಂದ ಮುಂಬೈಗೆ ತೆರಳಿದ್ದಾರೆ.

Published On - 1:37 pm, Sun, 23 October 22