ಕಾರಿನಲ್ಲಿ ಹಿಂಬಾಲಿಸಿ ಯುವತಿ ಜತೆ ಅಸಭ್ಯವಾಗಿ ವರ್ತಿಸಿದ್ದ ಎಂಎಸ್ ವಿದ್ಯಾರ್ಥಿ ಅರೆಸ್ಟ್
ಬಿಹಾರ ಮೂಲದ ವಿಜಯ್ ಭಾರದ್ವಾಜ್, ಬೆಂಗಳೂರಲ್ಲಿ ಎಂಬಿಬಿಎಸ್ ಮುಗಿಸಿ ಕಿಮ್ಸ್ ಕಾಲೇಜಿನಲ್ಲಿ ಎಂಎಸ್ ಓದುತ್ತಿದ್ದಾನೆ. ಆರೋಪಿ ಡಿಸೆಂಬಬರ್ 11 ರ ಬೆಳಗಿನ ಜಾವ 2 ರಿಂದ 4 ಗಂಟೆ ಸುಮಾರಿಗೆ ಕಾರಲ್ಲಿ ಹಿಂಬಾಲಿಸಿ ಯುವತಿ ಜೊತೆಗೆ ಅಸಭ್ಯವರ್ತನೆ ತೋರಿದ್ದ,
ಬೆಂಗಳೂರು: ಕಾರಿನಲ್ಲಿ ಹಿಂಬಾಲಿಸಿ ಯುವತಿ ಜತೆ ಅಸಭ್ಯವಾಗಿ ವರ್ತಿಸಿದ್ದ ವ್ಯಕ್ತಿಯನ್ನು ಅಮೃತಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ ಘಟನೆ ನಡೆದಿದೆ. ವಿಜಯ್ ಭಾರದ್ವಾಜ್ ಬಂಧಿತ ಆರೋಪಿ.
ಬಿಹಾರ ಮೂಲದ ವಿಜಯ್ ಭಾರದ್ವಾಜ್, ಬೆಂಗಳೂರಲ್ಲಿ ಎಂಬಿಬಿಎಸ್ ಮುಗಿಸಿ ಕಿಮ್ಸ್ ಕಾಲೇಜಿನಲ್ಲಿ ಎಂಎಸ್ ಓದುತ್ತಿದ್ದಾನೆ. ಆರೋಪಿ ಡಿಸೆಂಬಬರ್ 11 ರ ಬೆಳಗಿನ ಜಾವ 2 ರಿಂದ 4 ಗಂಟೆ ಸುಮಾರಿಗೆ ಕಾರಲ್ಲಿ ಹಿಂಬಾಲಿಸಿ ಯುವತಿ ಜೊತೆಗೆ ಅಸಭ್ಯವರ್ತನೆ ತೋರಿದ್ದ, ಸದ್ಯ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದು ಕುಡಿದ ಮತ್ತಲ್ಲಿ ಅಸಭ್ಯವಾಗಿ ನಡೆದಿರೋದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ದೀಪಾ ಶ್ರೀಕುಮಾರ್ ರವರ 21 ವರ್ಷದ ಮಗಳ ಜೊತೆ ವಿಜಯ್ ಭಾರದ್ವಾಜ್ ಅಸಭ್ಯವಾಗಿ ವರ್ತಿಸಿದ್ದ. ಸದ್ಯ ಈಗ ಈತನ ಕಾಟಕ್ಕೆ ಹೈರಾಣಾಗಿದ್ದ ದೀಪಾ ಶ್ರೀಕುಮಾರ್ ಕುಟುಂಬ ನಿಟ್ಟುಸಿರು ಬಿಟ್ಟಿದೆ. ಕಾರಿನಲ್ಲಿ ಎಷ್ಟೇ ದೂರ ಹೀಗಿದ್ರು ವಿಜಯ್ ಭಾರದ್ವಾಜ್ ಫಾಲೊ ಮಾಡಿ ಹಿಂಸೆ ಕೊಟ್ಟಿದ್ದ. ಘಟನೆ ಸಂಬಂಧ ದೀಪಾ ಶ್ರೀಕುಮಾರ್ ಕುಟುಂಬ ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ: Virat Kohli: ಏಕದಿನ ಸರಣಿಯಿಂದ ಕೊಹ್ಲಿ ಹೊರಗುಳಿಯಲು ಕಾರಣ ಇದಂತೆ: ಅಂತೆ-ಕಂತೆಗಳಿಗೆ ಬಿಸಿಸಿಐ ಖಡಕ್ ಉತ್ತರ