ಮೇ 23ರಿಂದ ಮೆಟ್ರೋ ಪ್ರಯಾಣಿಕರಿಗೆ ಹೊಸ ಪಾಸ್; 5 ದಿನದ ಪಾಸ್​ಗೆ 550 ರೂ

| Updated By: ಆಯೇಷಾ ಬಾನು

Updated on: May 20, 2022 | 8:12 PM

ಮೇ 23ರಿಂದ ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ 5 ದಿನದ ಹೊಸ ಪಾಸ್ ಲಭ್ಯವಾಗಲಿದೆ. 5 ದಿನದ ಪಾಸ್ಗೆ 550 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ.

ಮೇ 23ರಿಂದ ಮೆಟ್ರೋ ಪ್ರಯಾಣಿಕರಿಗೆ ಹೊಸ ಪಾಸ್; 5 ದಿನದ ಪಾಸ್​ಗೆ 550 ರೂ
ಬೆಂಗಳೂರು ಮೆಟ್ರೋ
Follow us on

ಬೆಂಗಳೂರು: ಕೆಲ ದಿನಗಳ ಹಿಂದೆಯಷ್ಟೇ ಒಂದು ಹಾಗೂ ಮೂರು ದಿನದ ಪಾಸುಗಳನ್ನು ಪರಿಚಯಿಸಿದ್ದ ನಮ್ಮ ಮೆಟ್ರೋ ಇದೀಗ ಐದು ದಿನದ ಪಾಸುಗಳನ್ನು ಪರಿಚಯಿಸಲು ಮುಂದಾಗಿದೆ. ಮೇ 23ರಿಂದ ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ 5 ದಿನದ ಹೊಸ ಪಾಸ್ ಲಭ್ಯವಾಗಲಿದೆ. 5 ದಿನದ ಪಾಸ್ಗೆ 550 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ.

5 ದಿನದ ಪಾಸ್ ಬಗ್ಗೆ ಬಿಎಂಆರ್ಸಿಎಲ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಮರು ಪಾವತಿಸಬಹುದಾದ ಸ್ಮಾರ್ಟ್ ಕಾರ್ಡ್ ಭದ್ರತಾ ಠೇವಣಿ 50 ರೂ ಇರಲಿದೆ ಎಂದು ತಿಳಿಸಿದೆ. ಇನ್ನು ಈ ಸ್ಮಾರ್ಟ್ ಕಾರ್ಡನ್ನು ಯಾವುದೇ ಮೆಟ್ರೋ ನಿಲ್ದಾಣದಲ್ಲಿ ಖರೀದಿಸಬಹುದು. ಇದನ್ನೂ ಓದಿ: ಸಿಲಿಂಡರ್ ಸ್ಫೋಟದಿಂದ ಬಾಗೇಪಲ್ಲಿಯ ಕುಟುಂಬವೊಂದರ ಸ್ಥಿತಿ ಅಕ್ಷರಶಃ ಮೂರಾಬಟ್ಟೆಯಾಗಿದೆ

ಪ್ರಯಾಣಿಕರು ಖರೀದಿಸಿದ ದಿನಾಂಕದಿಂದ 5 ದಿನದವರೆಗೆ ಯಾವುದೇ ನಿಲ್ದಾಣದಿಂದ ಯಾವುದೇ ನಿಲ್ದಾಣಕ್ಕೆ ಅನಿಯಮಿತವಾಗಿ ಪ್ರಯಾಣಿಸಬಹುದು. ಪಾಸ್ನ ಮಾನ್ಯತೆಯ ಅವಧಿಯೊಳಗೆ ಸ್ಮಾರ್ಟ್ ಕಾರ್ಡನ್ನು ಉತ್ತಮ ಸ್ಥಿತಿಯಲ್ಲಿ ಯಾವುದೇ ಮೆಟ್ರೋ ನಿಲ್ದಾಣದ ಗ್ರಾಹಕ ಸೇವಾ ಕೇಂದ್ರದಲ್ಲಿ ಸಲ್ಲಿಸುವ ಮೂಲಕ 50 ರೂ ಮರು ಪಾವತಿಸಬಹುದಾದ ಭದ್ರತಾ ಠೇವಣಿಯನ್ನು ಹಿಂಪಡೆಯಬಹುದು ಎಂದು ಬಿಎಂಆರ್ಸಿಎಲ್ ಮಾಹಿತಿ ನೀಡಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಹೈದರಾಬಾದಿನಲ್ಲಿ ಮೆಟ್ರೋ ರೈಲು 6 ನಿಮಿಷ ಹೆಚ್ಚು ವೇಗವಾಗಿ ಚಲಿಸಲಿದೆ! ‘ನಮ್ಮ ಮೆಟ್ರೋ’?
ನೆರೆಯ ಹೈದರಾಬಾದಿನಲ್ಲಿ ನಗರ ಸಂಚಾರಿ ಮೆಟ್ರೋ ರೈಲು ಇನ್ನುಮುಂದೆ 6 ನಿಮಿಷ ವೇಗವಾಗಿ ಚಲಿಸಲಿದೆ! ಇದರೊಂದಿಗೆ ಹೈದರಾಬಾದ್​ ಮೆಟ್ರೋ ರೈಲು ಇನ್ನು ಗರಿಷ್ಠ ಸಾಮರ್ಥ್ಯದೊಂದಿಗೆ ಗರಿಷ್ಠ ವೇಗದಲ್ಲಿ ಸಂಚರಿಸಲಿದೆ. ಅಂದರೆ ಪ್ರಸ್ತುತ ಗಂಟೆಗೆ 70 ಕಿಮೀ ವೇಗದಲ್ಲಿ ಸಂಚರಿಸುತ್ತಿದ್ದು, ಮುಂದೆ 80 KMPH ನಲ್ಲಿ ಓಡಲಿದೆ. ಇದಕ್ಕೆ ಅಗತ್ಯವಿರುವ ಸುರಕ್ಷಾ ಪ್ರಮಾಣ ಪತ್ರವನ್ನು ಮೆಟ್ರೋ ಸುರಕ್ಷಾ ನಿಗಮ (Commissioner for Metro Rail Safety -CMRS) ನೀಡಿದೆ. ಅಂದಹಾಗೆ ಹೈದರಾಬಾದಿನಲ್ಲಿ ನಗರ ಸಂಚಾರಿ ಮೆಟ್ರೋ ರೈಲು ಉಸ್ತುವಾರಿಯನ್ನು L&T Metro Rail Hyderabad Limited (L&TMRHL) ನಿಭಾಯಿಸುತ್ತಿದೆ (Hyderabad Metro Rail Full Speed). ಇದನ್ನೂ ಓದಿ: RR vs CSK Live Score, IPL 2022: ಚೆನ್ನೈ 2ನೇ ವಿಕೆಟ್ ಪತನ; ಅಲಿ 19 ಎಸೆತದಲ್ಲಿ ಅರ್ಧಶತಕ

ಈ ಸಂಬಂಧ ಎಲ್​ ಅಂಡ್​ ಟಿ ಸಂಸ್ಥೆಯು ತನ್ನ Metro Rail system ನಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿಕೊಂಡಿದ್ದು, ತನ್ನ ಸಾಮರ್ಥ್ಯವನ್ನು ಮತ್ತಷ್ಟು ಮೊನಚುಗೊಳಿಸಿದೆ. ರೈಲ್ವೆ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಮಾಡಿಕೊಂಡಿದ್ದು, ಸಂಚಾರ ವೇಗಕ್ಕೆ ಒತ್ತು ಕೊಟ್ಟಿದೆ. ಕಂಪ್ಯೂಟರ್​ ಸಾಫ್ಟ್​ವೇರ್​ನಲ್ಲಿ ​​ಆಧುನಿಕತೆ ಅಳವಡಿಸಿಕೊಂಡಿದೆ ಎಲ್​ ಅಂಡ್​ ಟಿ ಸಂಸ್ಥೆ. ಕಳೆದ ತಿಂಗಳು ಪ್ರಾಯೋಗಿಕ ಸಂಚಾರದ ನಂತರ ಹೈದರಾಬಾದ್ ಮೆಟ್ರೋ ರೈಲು ಪೂರ್ಣ ವೇಗಕ್ಕೆ ಅನುಮೋದನೆ ನೀಡಲಾಗಿದೆ.

Published On - 8:08 pm, Fri, 20 May 22