ಪ್ರಯಾಣಿಕರಿಗೆ ಗುಡ್ ನ್ಯೂಸ್​​ ನೀಡಿದ ನಮ್ಮ ಮೆಟ್ರೋ: ನೇರಳೆ ಮಾರ್ಗದಲ್ಲಿ ವಾರದ 5 ದಿನದಲ್ಲಿ ಹೆಚ್ಚುವರಿ ಟ್ರಿಪ್​ಗೆ ನಿರ್ಧಾರ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 30, 2023 | 7:13 PM

ಪೀಕ್​ ಅವರ್​ನಲ್ಲಿ ಹೆಚ್ಚುವರಿ ಸೇವೆ ಕೊಡಲು ಬಿಎಂಆರ್​ಸಿಎಲ್​​ ನಿರ್ಧರಿಸಿದ್ದು, ಸೆಪ್ಟೆಂಬರ್ 1 ರಿಂದ ಹೆಚ್ಚುವರಿ ಮೆಟ್ರೋ ಸೇವೆ ಆರಂಭಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್​​ ಪ್ರಕಟಣೆಯಲ್ಲಿ ತಿಳಿಸಿದೆ. ಆ ಮೂಲಕ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್​ ನೀಡಿದೆ.

ಪ್ರಯಾಣಿಕರಿಗೆ ಗುಡ್ ನ್ಯೂಸ್​​ ನೀಡಿದ ನಮ್ಮ ಮೆಟ್ರೋ: ನೇರಳೆ ಮಾರ್ಗದಲ್ಲಿ ವಾರದ 5 ದಿನದಲ್ಲಿ ಹೆಚ್ಚುವರಿ ಟ್ರಿಪ್​ಗೆ ನಿರ್ಧಾರ
ನಮ್ಮ ಮೆಟ್ರೋ (ಸಂಗ್ರಹ ಚಿತ್ರ)
Follow us on

ಬೆಂಗಳೂರು, ಆಗಸ್ಟ್​ 30: ಬೆಳಗಿನ ಜನದಟ್ಟಣೆಯ ಸಮಯದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಟ್ರಿಪ್​ ಸೇವೆ ನೀಡುವುದಾಗಿ ಬಿಎಂಆರ್​ಸಿಎಲ್​​ ನಿರ್ಧರಿಸಿದ್ದು, ಸೆಪ್ಟೆಂಬರ್ 1 ರಿಂದ ಹೆಚ್ಚುವರಿ ಟ್ರಿಪ್​ (Namma Metro) ಸೇವೆ ಆರಂಭಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ​​ ಪ್ರಕಟಣೆಯಲ್ಲಿ ತಿಳಿಸಿದೆ. ಆ ಮೂಲಕ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್​ ನೀಡಿದೆ. ನೇರಳೆ ಮಾರ್ಗದಲ್ಲಿ ವಾರದ 5 ದಿನಗಳಲ್ಲಿ ಹೆಚ್ಚುವರಿ ಟ್ರಿಪ್ ಮೆಟ್ರೋ ಸೇವೆ ಬಗ್ಗೆ ಬಿಎಂಆರ್​ಸಿಎಲ್​ ಮಾಹಿತಿ ನೀಡಿದೆ.

ಸೋಮವಾರದಿಂದ ಶುಕ್ರವಾರದವರೆಗೆ ಹೆಚ್ಚುವರಿ ಟ್ರಿಪ್ ನಡೆಸಲಿರುವ ನಮ್ಮ‌ ಮೆಟ್ರೋ, ಮೆಜೆಸ್ಟಿಕ್ ನಿಲ್ದಾಣದಿಂದ ಎಂ.ಜಿ ರೋಡ್​ವರೆಗೆ ಹೆಚ್ಚುವರಿ ಕಾರ್ಯಾಚರಣೆ ಮಾಡಲಾಗುತ್ತಿದ್ದು, ಬೈಯಪ್ಪನಹಳ್ಳಿಗೆ ತೆರಳುವವರು ಎಂ.ಜಿ ರೋಡ್ ನಿಲ್ದಾಣದಲ್ಲಿ ಇಳಿದು ಬಳಿಕ ಮತ್ತೊಂದು ರೈಲು ಹತ್ತಿ ತೆರಳಬಹುದಾಗಿದೆ.

ಇದನ್ನೂ ಓದಿ: ಮೆಟ್ರೋ ಕಾಮಗಾರಿಯಲ್ಲಿ ಮತ್ತೊಂದು ಮೈಲುಗಲ್ಲು: 721 ಮೀಟರ್ ಸುರಂಗ ಕೊರೆದು ಯಶಸ್ವಿಯಾಗಿ ಹೊರಬಂದ ವಮಿಕ ಯಂತ್ರ

ನಮ್ಮ ಮೆಟ್ರೋ ಕಾಮಗಾರಿ ಮತ್ತೊಂದು ಮೈಲುಗಲ್ಲು ತಲುಪಿದೆ. ಬೆಂಗಳೂರಿನ ಲ್ಯಾಂಗ್​ಫೋರ್ಡ್​ ಟೌನ್​ ನಿಲ್ದಾಣದಲ್ಲಿ 721 ಮೀಟರ್ ಮೆಟ್ರೋ ಸುರಂಗ ಕೊರೆದು ವಮಿಕ ಯಂತ್ರ ಹೊರಬಂದಿದೆ ಎಂದು  ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್​ನಿಂದ ಪ್ರಕಟಣೆಯಲ್ಲಿ ತಿಳಿಸಿದೆ.

ಏಪ್ರಿಲ್ 21ರಂದು ಲಕ್ಕಸಂದ್ರ ಮೆಟ್ರೋ ನಿಲ್ದಾಣದಿಂದ ಸುರಂಗ ಕೊರೆಯಲು ವಮಿಕ ಯಂತ್ರ ಆರಂಭಿಸಿತ್ತು. ಈ ಹಿಂದೆ ಸೌತ್ ರಾಂಪ್, ಡೈರಿ ವೃತ್ತದ ನಡುವೆ ಸುರಂಗ ಕೊರೆಯಲಾಗಿದೆ.

ಇದನ್ನೂ ಓದಿ: ಸೇವೆಗೆ ಸಜ್ಜಾದ ಬೈಯಪ್ಪನಹಳ್ಳಿ-KR ಪುರಂ, ಕೆಂಗೇರಿ-ಚಲ್ಲಘಟ್ಟ ಮೆಟ್ರೋ; ಸೆ.7ಕ್ಕೆ CMRS ಪರಿಶೀಲನೆ

ಸೌತ್ ರಾಂಪ್, ಡೈರಿ ವೃತ್ತದ ನಡುವೆ 613.2 ಮೀಟರ್ ಸುರಂಗ ಕೊರೆದಿತ್ತು. ಡೈರಿ ಸರ್ಕಲ್-ಲಕ್ಕಸಂದ್ರ ನಿಲ್ದಾಣದ ನಡುವೆ 743.4ಮೀ. ಸುರಂಗ ಕೊರೆದಿತ್ತು. ರೀಚ್-6ರ 20.991 ಕಿ.ಮೀ. ಪೈಕಿ 17.62 ಕಿ.ಮೀ. ಸುರಂಗ ಮಾರ್ಗ ಕಾಮಗಾರಿ ಪೂರ್ಣಗೊಂಡಿರುತ್ತದೆ. ರೀಚ್-6ರ ಸುರಂಗ ಮಾರ್ಗದಲ್ಲಿ 9 ಟಿಬಿಎಂಗಳ ಪೈಕಿ 6 ಟಿಬಿಎಂಗಳು ಸುರಂಗ ಕಾಮಗಾರಿ ಪೂರ್ಣಗೊಳಿಸಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:43 pm, Wed, 30 August 23