AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಟ್ರೋ ಕಾಮಗಾರಿಯಲ್ಲಿ ಮತ್ತೊಂದು ಮೈಲುಗಲ್ಲು: 721 ಮೀಟರ್ ಸುರಂಗ ಕೊರೆದು ಯಶಸ್ವಿಯಾಗಿ ಹೊರಬಂದ ವಮಿಕ ಯಂತ್ರ

Namma Metro ವಮಿಕ(ಸುರಂಗ ಕೊರೆಯುವ ಯಂತ್ರ ) ಯಂತ್ರ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಬೆಂಗಳೂರಿನಲ್ಲಿ ಬರೋಬ್ಬರಿ 721 ಮೀಟರ್ ನಮ್ಮ ಮೆಟ್ರೋ ಸುರಂಗ ಕೊರೆದು ಯಶಸ್ವಿಯಾಗಿ ಹೊರ ಬಂದಿದೆ. ಏಪ್ರಿಲ್ 21ರಂದು ಲಕ್ಕಸಂದ್ರ ಮೆಟ್ರೋ ನಿಲ್ದಾಣದಿಂದ ಒಳನುಗಿದ್ದ ವಮಿಕ ಬರೋಬ್ಬರಿ ನಾಲ್ಕು ತಿಂಗಳು ಅಂದರೆ 132 ದಿನದ ಬಳಿಕ ಆಚೆ ಬಂದಿದೆ.

ಮೆಟ್ರೋ ಕಾಮಗಾರಿಯಲ್ಲಿ ಮತ್ತೊಂದು ಮೈಲುಗಲ್ಲು: 721 ಮೀಟರ್ ಸುರಂಗ ಕೊರೆದು ಯಶಸ್ವಿಯಾಗಿ ಹೊರಬಂದ ವಮಿಕ ಯಂತ್ರ
ಸುರಂಗ ಕೊರೆಯುವ ಯಂತ್ರ (ವಮಿಕ)
Kiran Surya
| Updated By: ರಮೇಶ್ ಬಿ. ಜವಳಗೇರಾ|

Updated on:Aug 30, 2023 | 5:16 PM

Share

ಬೆಂಗಳೂರಿ, (ಆಗಸ್ಟ್ 30): ಬೆಂಗಳೂರಿನಲ್ಲಿ ನಮ್ಮ ಮೆಟ್ರೋ (Namma Metro) ಕಾಮಗಾರಿ ಮತ್ತೊಂದು ಮೈಲುಗಲ್ಲು ತಲುಪಿದೆ. ವಮಿಕ ಯಂತ್ರ (tunneling machine vamika )ಬರೋಬ್ಬರಿ 721 ಮೀಟರ್ ಮೆಟ್ರೋ ಸುರಂಗ ಕೊರೆದು ವಮಿಕ ಬರೋಬ್ಬರಿ ನಾಲ್ಕು ತಿಂಗಳು ಅಂದರೆ 132 ದಿನದ ಬಳಿಕ ಯಶಸ್ವಿಯಾಗಿ ಹೊರ ಬಂದಿದೆ. ಏಪ್ರಿಲ್ 21ರಂದು ಲಕ್ಕಸಂದ್ರ ಮೆಟ್ರೋ ನಿಲ್ದಾಣದಿಂದ ಸುರಂಗ ಕೊರೆಯಲು ಆರಂಭಿಸಿದ್ದ ವಮಿಕ, ಇಂದು(ಆಗಸ್ಟ್ 30) ಬೆಂಗಳೂರಿನ ಲ್ಯಾಂಗ್​ಫೋರ್ಡ್​ ಟೌನ್​ ನಿಲ್ದಾಣದಲ್ಲಿ ಹೊರಬಂದಿದೆ. ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್​ ಮಾಹಿತಿ ನೀಡಿದೆ.

ಈ ಹಿಂದೆ ವಮಿಕ ಟಿಬಿಎಂ ಮೆಷಿನ್ ಸೌತ್ ರಾಂಪ್ ಮತ್ತು ಡೈರಿ ಸರ್ಕಲ್‌ ಸುರಂಗ ನಿಲ್ದಾಣಗಳ ನಡುವೆ 613.2 ಮೀ ಹಾಗೂ ಡೈರಿ ಸರ್ಕಲ್‌ ನಿಲ್ದಾಣದಿಂದ ಲಕ್ಕಸಂದ್ರ ನಿಲ್ದಾಣದ ನಡುವೆ 743.4 ಮೀ ಸುರಂಗ ಕಾಮಗಾರಿ ಪೂರ್ಣಗೊಳಿಸಿತ್ತು. ಇದೀಗ ಲಕ್ಕಸಂದ್ರ ಮೆಟ್ರೋ ನಿಲ್ದಾಣದಿಂದ ಲ್ಯಾಂಗ್​ಫೋರ್ಡ್​ ಟೌನ್​ ನಿಲ್ದಾಣದಲ್ಲಿ 721 ಮೀಟರ್ ಸುರಂಗ ಕೊರೆದಿದೆ. ಇದರೊಂದಿಗೆ ಹಂತ-2, ರೀಚ್-6ರ 20.991 ಕಿ.ಮೀ ಸುರಂಗ ಮಾರ್ಗದಲ್ಲಿ ಒಟ್ಟು 17,62ಕಿ.ಮೀ ಕಾಮಗಾರಿ ಪೂರ್ಣಗೊಂಡಂತಾಗಿದೆ ಎಂದು ಬಿಎಂಆರ್​ಸಿಎಲ್​ ಪ್ರಕಟಣೆ ಮೂಲಕ ಮಾಹಿತಿ ತಿಳಿಸಿದೆ

ರೀಚ್-6ರ 20.991 ಕಿ.ಮೀ. ಪೈಕಿ 17.62 ಕಿ.ಮೀ. ಸುರಂಗ ಮಾರ್ಗ ಪೂರ್ಣಗೊಂಡಿದೆ. ಇದರೊಂದಿಗೆ ರೀಚ್-6ರ ಸುರಂಗ ಮಾರ್ಗದಲ್ಲಿ 9 ಟಿಬಿಎಂಗಳ ಕಾರ್ಯಾಚರಣೆ ನಡೆದಿದ್ದು, ಈ ಪೈಕಿ 6 ಟಿಬಿಎಂಗಳು ಸುರಂಗ ಕಾಮಗಾರಿ ಪೂರ್ಣಗೊಳಿಸಿವೆ ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್​ ಹೇಳಿದೆ.

ಇನ್ನಷ್ಟು ಬೆಂಗಳೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 5:07 pm, Wed, 30 August 23

ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ